Narendra Modi BRICS Summit : ಭಾರತ ಶಾಂತಿಗಾಗಿ ಕೊಡುಗೆ ನೀಡಲು ಸದಾ ಸಿದ್ಧ ! – ಪ್ರಧಾನಿ ಮೋದಿ

ಬ್ರಿಕ್ಸ್ ಶೃಂಗಸಭೆಯಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಕುರಿತು ಪ್ರಧಾನಿ ಮೋದಿ ಹೇಳಿಕೆ

ಮಾಸ್ಕೋ (ರಷ್ಯಾ) – ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸಬೇಕು, ಎಂದು ನಾವು ಪದೇ ಪದೇ ಹೇಳಿದ್ದೇವೆ. ಯಾವುದೇ ಸಮಸ್ಯೆಗೆ ಯುದ್ಧ ಪರಿಹಾರವಲ್ಲ. ಎಲ್ಲಾ ಪ್ರಯತ್ನಗಳು ಮಾನವೀಯತೆಗೆ ಆದ್ಯತೆಯಾಗಿರಬೇಕು. ಶಾಂತಿಗಾಗಿ ಕೊಡುಗೆ ನೀಡಲು ಭಾರತ ಸದಾ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಷ್ಯಾದಲ್ಲಿನ ಕಜಾನ್ ನಲ್ಲಿ ಆಯೋಜಿಸಲಾಗಿದ್ದ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಪ್ರಧಾನಿ ಮೋದಿ ಅವರನ್ನು ಔಪಚಾರಿಕವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪುಟಿನ್ ಅವರು ಮಾತನಾಡುತ್ತಾ, ನಮ್ಮ ಸಂಬಂಧಗಳು ತುಂಬಾ ಹಳೆಯದಾಗಿದೆ, ಅವುಗಳನ್ನು ಸ್ಪಷ್ಟ ಪಡಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಏನಿದು ಬ್ರಿಕ್ಸ್ ಸಮೂಹ ?

‘ಬ್ರಿಕ್ಸ್’ ಎಂಬುದು ಪ್ರಾದೇಶಿಕ ಗುಂಪುಗಳ ಮೇಲೆ ಪ್ರಭಾವ ಬೀರುವ ಉದಯೋನ್ಮುಖ ಆರ್ಥಿಕ ವ್ಯವಸ್ಥೆಯ ಸಮೂಹವಿದೆ. ಇದರಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಈ ದೇಶಗಳ ಸಮಾವೇಶ ಇದೆ. ವಿಶ್ವ ಬ್ಯಾಂಕಿನ ಅಂಕಿಅಂಶಗಳ ಪ್ರಕಾರ ಪ್ರಕಾರ ಶೇ. 41 ರಷ್ಟು ಪ್ರತಿನಿಧಿಸುವ ಬ್ರಿಕ್ಸ್ ಗುಂಪು ವಿಶ್ವ ವ್ಯಾಪಾರದಲ್ಲಿ ಶೇ. 16 ರಷ್ಟು ಭಾಗದಷ್ಟು ಇದ್ದು ಜಾಗತಿಕ ಜಿ.ಡಿ.ಪಿ.ಯಲ್ಲಿ ಶೇ. 24 ರಷ್ಟು ಭಾಗವನ್ನು ಹೊಂದಿದೆ. ಈ ಸಮೂಹವು ಪ್ರಪಂಚದ ಒಟ್ಟು ಶೇ. 29.3 ರಷ್ಟು ಭೂಪ್ರದೇಶವನ್ನು ಒಳಗೊಂಡಿದೆ.