ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಯವರು ಭಾರತದ ಬಗ್ಗೆ ವಿಶ್ವಾಸ ವ್ಯಕ್ತ !
ಲಂಡನ (ಇಂಗ್ಲೆಂಡ) – ಕಳೆದ ಎರಡೂವರೆ ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಹಾಗೆ ನೋಡಿದರೆ, ಉಕ್ರೇನ್ ಹೆಗಲ ಮೇಲೆ `ನಾಟೋ’ ದೇಶಗಳು ಬಂದೂಕು ಇಟ್ಟು, ಅವರು ರಷ್ಯಾದ ಮೇಲೆ ಶಸ್ತ್ರವನ್ನು ಬಿಡುತ್ತಿದ್ದಾರೆ. ಇಂತಹದರಲ್ಲಿಯೇ `ನಾಟೋ’ ದ ಮಹತ್ವಪೂರ್ಣ ಸದಸ್ಯವಾಗಿರುವ ಇಟಲಿಯು ಈ ಸಂಘರ್ಷವನ್ನು ನಿಲ್ಲಿಸಲು ಭಾರತದ ಪಾತ್ರವನ್ನು ಒತ್ತಿ ಹೇಳಿದೆ. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಸೆಪ್ಟೆಂಬರ್ 7 ರಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿದ ಬಳಿಕ ರಷ್ಯಾ-ಉಕ್ರೇನ್ ಸಂಘರ್ಷವನ್ನು ಪರಿಹರಿಸುವಲ್ಲಿ ಭಾರತ ಮತ್ತು ಚೀನಾ ಪಾತ್ರ ವಹಿಸಬಹುದು ಎಂದು ಹೇಳಿದರು.