ರಷ್ಯಾದ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ನಿಂದ‌ ಭಾರತೀಯ ಫಿರಂಗಿಗಳ ಬಳಕೆ!

ರಷ್ಯಾ ವಿರೋಧದ ಬಳಿಕವೂ ಭಾರತ ಮಧ್ಯಪ್ರವೇಶಿಸಲಿಲ್ಲ !

ಕೀವ್ (ಉಕ್ರೇನ) – ಉಕ್ರೇನ್ ರಷ್ಯಾದ ವಿರುದ್ಧದ ಯುದ್ಧದಲ್ಲಿ ಭಾರತೀಯ ಫಿರಂಗಿಗಳನ್ನು ಬಳಸುತ್ತಿದೆ. ಭಾರತೀಯ ಶಸ್ತ್ರಾಸ್ತ್ರ ತಯಾರಕರಿಂದ ಅವುಗಳನ್ನು ಯುರೋಪಿಯನ್ ದೇಶಗಳಿಗೆ ಮಾರಾಟ ಮಾಡಲಾಯಿತು. ನಂತರ ಅದನ್ನು ಉಕ್ರೇನ್‌ಗೆ ಕಳುಹಿಸಲಾಯಿತು. ಸುದ್ದಿ ಸಂಸ್ಥೆ “ರಾಯಟರ್ಸ್” ಈ ಸುದ್ದಿ ಬಿತ್ತರಿಸಿದೆ. ರಷ್ಯಾದ ವಿರೋಧದ ನಡುವೆಯೂ ಈ ವ್ಯಾಪಾರವನ್ನು ತಡೆಯಲು ಭಾರತ ಮಧ್ಯಪ್ರವೇಶಿಸಲಿಲ್ಲ ಎಂದು ವರದಿ ಹೇಳಿದೆ. “ರಾಯಿಟರ್ಸ್” ವರದಿಯ ಪ್ರಕಾರ ಶಸ್ತ್ರಾಸ್ತ್ರಗಳ ವರ್ಗಾವಣೆಯು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿದೆ.

1. ಈ ಸುದ್ದಿಯಲ್ಲಿ 3 ಭಾರತೀಯ ಅಧಿಕಾರಿಗಳ ಸಂದರ್ಭವನ್ನು ನೀಡುತ್ತಾ ರಷ್ಯಾ ಕನಿಷ್ಠ ಎರಡು ಬಾರಿ ಈ ಅಂಶವನ್ನು ಪ್ರಸ್ತಾಪಿಸಿದೆ ಎಂದು ಉಲ್ಲೇಖಿಸಿದೆ. ಇದರಲ್ಲಿ ಜುಲೈನಲ್ಲಿ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತು ಡಾ. ಎಸ್. ಜೈಶಂಕರ್ ನಡುವಿನ ಸಭೆಯೂ ಸೇರಿದೆ. ರಷ್ಯಾ ಮತ್ತು ಭಾರತದ ರಕ್ಷಣಾ ಸಚಿವಾಲಯಗಳು ಈ ಬಗ್ಗೆ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಜನವರಿಯಲ್ಲಿ ಭಾರತವು ಉಕ್ರೇನ್‌ಗೆ ಫಿರಂಗಿಗಳನ್ನು ಮಾರಾಟ ಮಾಡಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು.

2. ಈ ವರದಿಯಲ್ಲಿ, ಯುದ್ಧದಲ್ಲಿ ಭಾರತೀಯ ಶಸ್ತ್ರಾಸ್ತ್ರಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದೆ. ಉಕ್ರೇನ್‌ ಆಮದು ಮಾಡಿಕೊಳ್ಳುವ ಎಲ್ಲಾ ಮದ್ದುಗುಂಡುಗಳಲ್ಲಿ ಈ ಮದ್ದುಗುಂಡುಗಳು ಶೇಕಡಾ ಒಂದಕ್ಕಿಂತ ಕಡಿಮೆಯಿವೆ. ಯುರೋಪಿಯನ್ ದೇಶಗಳು ಅದನ್ನು ಉಕ್ರೇನ್‌ಗೆ ದಾನ ಮಾಡಿವೆಯೇ ಅಥವಾ ಮಾರಾಟ ಮಾಡಿದ್ದಾರೆಯೇ ? ಎನ್ನುವುದು ತಿಳಿದು ಬಂದಿಲ್ಲ.

3. ಉಕ್ರೇನ್‌ಗೆ ಭಾರತೀಯ ಮಿಲಿಟರಿ ಉಪಕರಣಗಳನ್ನು ಕಳುಹಿಸುವ ಯುರೋಪಿಯನ್ ರಾಷ್ಟ್ರಗಳಲ್ಲಿ ಇಟಲಿ ಮತ್ತು ಜೆಕ್ ರಿಪಬ್ಲಿಕ್ ಸೇರಿವೆ. ‘ಯಂತ್ರ ಇಂಡಿಯಾ’ದ ಶಸ್ತ್ರಾಸ್ತ್ರಗಳನ್ನು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಬಳಸಲಾಗುತ್ತಿದೆ.