ಪರಾತ್ಪರ ಗುರು ಡಾ. ಆಠವಲೆ

ಸಾಧಕರನ್ನು ಮಾಯೆಯ ಪ್ರೀತಿಯಲ್ಲಿ ತೊಡಗಿಸಿಡುವ ಆಪ್ತರು !

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

‘ಸಾಧನೆ ಮಾಡುವ ಯುವಕನೊಬ್ಬ ತನ್ನ ಜೀವನದ ‘ಸಾಧನೆ ಮಾಡಬೇಕು’ ಎಂಬ ಗುರಿಯನ್ನು ಸಾಧಿಸಲು ಮಾಯೆಯಲ್ಲಿನ ಎಲ್ಲವನ್ನೂ ತ್ಯಜಿಸಲು ಪ್ರಯತ್ನಿಸುತ್ತಿರುತ್ತಾನೆ. ಆದರೆ ಜಗತ್ತಿನ ನಿಯಮವಿದೆ ನೀನು ಮದುವೆಯಾಗು ಎಂದು ಅವನ ಸಂಬಂಧಿಕರು ಅವನನ್ನು ಮದುವೆಯಾಗಲು ಆಗ್ರಹಿಸುತ್ತಾರೆ. ಅವನು ಮದುವೆಯಾದ ನಂತರ, ಅವನ ಸಂಬಂಧಿಕರು ಅವನ ಕಡೆಗೆ ಗಮನ ಹರಿಸುವುದಿಲ್ಲ. ಅವರು ಅವನಿಗೆ ಸಾಧನೆಗೆ ಅಥವಾ ಸಂಸಾರಕ್ಕೆ ಸಹಾಯ ಮಾಡುವುದಿಲ್ಲ. ಆದ್ದರಿಂದ ಯುವಕನು ಸಂಸಾರದ ಕಷ್ಟಗಳಿಂದ ಸಾಧನೆಯಿಂದ ದೂರವಾಗುತ್ತಾನೆ ಮತ್ತು ಪೂರ್ಣ ಮಾಯೆಯಲ್ಲಿ ಸಿಲುಕಿಕೊಳ್ಳುತ್ತಾನೆ.

– (ಪರಾತ್ಪರ ಗುರು) ಡಾ. ಆಠವಲೆ (೨೮.೯.೨೦೨೧)

ಭಕ್ತನಿಗೆ ಅಹಂಕಾರ ಇರುವುದಿಲ್ಲ

‘ನಾನು ಸಾಧನೆ ಮಾಡುತ್ತೇನೆ’ ಎಂಬ ಅಹಂಕಾರ ಭಕ್ತನಿಗೆ ಇರುವುದಿಲ್ಲ; ಏಕೆಂದರೆ ‘ಅವನಿಂದ ಎಲ್ಲವನ್ನೂ ಅಂದರೆ ಸಾಧನೆಯನ್ನು ದೇವರೇ  ಮಾಡಿಸಿಕೊಳ್ಳುತ್ತಾನೆ’ ಎಂದು ಅವನಿಗೆ ತಿಳಿದಿರುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ (೧೬.೧೧.೨೦೨೧)

‘ವೃದ್ಧಾಪ್ಯದಲ್ಲಿ ಮಗಳು-ಅಳಿಯ ಇವರು ಕಾಳಜಿ ತೆಗೆದುಕೊಳ್ಳುತ್ತಾರೆ; ಎಂದು ಅವರನ್ನು ಹೊಗಳುವ ವೃದ್ಧರು ತಮ್ಮ ಜೀವನದುದ್ದಕ್ಕೂ ಮತ್ತು ಸಾವಿನ ನಂತರವೂ ಅವರ ಕಾಳಜಿಯನ್ನು ವಹಿಸುವ ದೇವರನ್ನು ಮಾತ್ರ ಮರೆತು ಬಿಡುತ್ತಾರೆ !

– (ಪರಾತ್ಪರ ಗುರು) ಡಾ. ಆಠವಲೆ (೧೬.೧೧.೨೦೨೧)

ರಾಜಕಾರಣಿಗಳಂತೆ, ಸಂತರು ಎಂದಿಗೂ ಜಗಳವಾಡುವುದಿಲ್ಲ.

– (ಪರಾತ್ಪರ ಗುರು) ಡಾ. ಆಠವಲೆ (೧೮.೧೧.೨೦೨೧)

‘ಮನುಷ್ಯನು ಹೆಚ್ಚಿನ ಎಲ್ಲಾ ಕಾಯಿಲೆಗಳಿಂದ ಗುಣಮುಖ ಆಗುತ್ತಾನೆ; ಆದರೆ ‘ವೃದ್ಧಾಪ್ಯ’ ಈ ಕಾಯಿಲೆಯಿಂದ ಯಾರೂ ಗುಣಮುಖರಾಗುವುದಿಲ್ಲ !’

– (ಪರಾತ್ಪರ ಗುರು) ಡಾ. ಆಠವಲೆ (೩೧.೧.೨೦೨೨)