ಅಧ್ಯಾತ್ಮದ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಸಾಧನೆಯ ವಿಷಯದಲ್ಲಿ ಸ್ವಭಾವದೋಷ ನಿರ್ಮೂಲನೆಯ ಮಹತ್ವ !

ಪರಾತ್ಪರ ಗುರು ಡಾ. ಆಠವಲೆ

ಹಿಂದಿನ ಯುಗಗಳಲ್ಲಿ ವ್ಯಕ್ತಿಗಳಲ್ಲಿ ಸ್ವಭಾವದೋಷಗಳು ವಿಶೇಷವಾಗಿ ಇರಲಿಲ್ಲ, ಹಾಗಾಗಿ ಅವರಿಗೆ ಯಾವುದೇ ಯೋಗಮಾರ್ಗದಿಂದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತಿತ್ತು. ಕಲಿಯುಗದಲ್ಲಿ ವ್ಯಕ್ತಿಯಲ್ಲಿ ಅನೇಕ ಸ್ವಭಾವದೋಷಗಳು ಇರುವುದರಿಂದ ಅವುಗಳ ನಿರ್ಮೂಲನೆ ಮಾಡದೆ ಯಾರೂ ಯಾವುದೇ ಮಾರ್ಗದಲ್ಲಿ ಸಾಧನೆ ಮಾಡುವುದು ಕಠಿಣವಾಗುತ್ತದೆ. ಸ್ವಭಾವದೋಷ ಕಡಿಮೆ ಮಾಡಿಕೊಂಡವರು ಯಾವುದೇ ಮಾರ್ಗದಿಂದ ಬೇಕಾದರೂ ಸಾಧನೆ ಮಾಡಬಹುದು. ಸಮಷ್ಟಿ ಸಾಧನೆ ಮಾಡಿದರೆ ಅವರ ಶೀಘ್ರ ಪ್ರಗತಿಯೂ ಆಗುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ (೧೫.೯.೨೦೨೧)

ಮಾನವ ಜೀವನದಲ್ಲಿನ ಹಂತಗಳು

‘ಜೀವನದಲ್ಲಿನ ೧. ಜನನ, ೨. ಬಾಲ್ಯ, ೩. ಯೌವನ, ೪. ಗೃಹಸ್ಥಾಶ್ರಮ, ೫. ವೃದ್ಧಾಪ್ಯ ಮತ್ತು ೬. ಮೃತ್ಯು, ಈ ಪ್ರತಿ ಹಂತದಲ್ಲಿ ‘೪. ಗೃಹಸ್ಥಾಶ್ರಮ’ ಈ ಹಂತದವರೆಗೆ ಮುಂದಿನ ಹಂತದ ಬಗ್ಗೆ ನಿಶ್ಚಿತವಿರುತ್ತದೆ; ಆದರೆ ‘೫. ವೃದ್ಧಾಪ್ಯ’ ಈ ಹಂತದ ಮುಂದೆ ಯಾವುದೇ ಹಂತವಿಲ್ಲದಿರುವುದರಿಂದ, ಅಂದರೆ ‘ಮೃತ್ಯು’ ಇರುವುದರಿಂದ ಮುಂದಿನ ಹಂತದ ವಿಚಾರ ಮಾಡಲು ಆಗುವುದಿಲ್ಲ. ಇದಕ್ಕಾಗಿ ಜೀವನದುದ್ದಕ್ಕೂ ಸಾಧನೆ ಮಾಡದಿದ್ದಲ್ಲಿ, ನೀವು ಅದನ್ನು ವೃದ್ಧಾಪ್ಯದಲ್ಲಿಯಾದರೂ ಆರಂಭಿಸಬೇಕು, ಇದರಿಂದ ಮೃತ್ಯುನಂತರದ ಜೀವನಕ್ಕೆ ಸ್ವಲ್ಪ ಮಟ್ಟಿಗಾದರೂ ದಿಶೆ ಸಿಗಬಹುದು !

– (ಪರಾತ್ಪರ ಗುರು) ಡಾ. ಆಠವಲೆ (೧೫.೩.೨೦೨೨)

‘ದೈಹಿಕವಾಗಿ ವಿಚಾರ ಮಾಡಿದರೆ, ವಯಸ್ಸಾದಂತೆ ನನ್ನ ವಿಸ್ಮೃತಿಯ ಪ್ರಮಾಣವು ಹೆಚ್ಚಾಗುತ್ತಿದೆ; ಆದರೆ ಆಧ್ಯಾತ್ಮಿಕವಾಗಿ, ನಾನು ಯಾವಾಗಲೂ ವರ್ತಮಾನದಲ್ಲಿರುವುದರಿಂದ ನನಗೆ ಭೂತಕಾಲದ್ದು ಏನೂ ನೆನಪಿರುವುದಿಲ್ಲ ಮತ್ತು ಭವಿಷ್ಯದಲ್ಲಿ ಸ್ಥಾಪನೆಯಾಗಲಿರುವ ಹಿಂದೂ ರಾಷ್ಟ್ರದ ಬಗ್ಗೆ ನನ್ನ ಮನಸ್ಸಿನಲ್ಲಿ ವಿಚಾರವೂ ಬರುವುದಿಲ್ಲ’.

– (ಪರಾತ್ಪರ ಗುರು) ಡಾ. ಆಠವಲೆ (೨೫.೧೧.೨೦೨೧)

‘ಪೃಥ್ವಿಯಿಂದ ಸ್ವಲ್ಪ ಅಂತರಿಕ್ಷದ ವರೆಗೆ ತಲುಪಿದ್ದೇ ದೊಡ್ಡ ಸಾಧನೆ ಎಂದು ತಿಳಿಯುವ ವಿಜ್ಞಾನಕ್ಕೆ ಸಪ್ತಲೋಕ ಮತ್ತು ಸಪ್ತಪಾತಾಳ ಇವುಗಳ ಮೇಲೆ ಪರಿಣಾಮ ಬೀರುವ ಪೂಜೆ, ಯಜ್ಞಗಳಂತಹ ಧಾರ್ಮಿಕ ವಿಧಿಗಳ ಸೂಕ್ಷ್ಮ-ಶಾಸ್ತ್ರದ ಶೇ. ೧ ರಷ್ಟಾದರೂ ಜ್ಞಾನವಿದೆಯೇ ?’

– ಪರಾತ್ಪರ ಗುರು ಡಾ. ಆಠವಲೆ (೧.೨.೨೦೨೨)

‘ವಿಜ್ಞಾನವು ಮಾಯೆಯಲ್ಲಿನ ವಸ್ತುಗಳನ್ನು ಹೇಗೆ ಪಡೆಯುವುದು ಮತ್ತು ಅವುಗಳಿಂದ ತಾತ್ಕಾಲಿಕ ಸುಖವನ್ನು ಹೇಗೆ ಪಡೆಯುವುದು ? ಎಂಬುದನ್ನು ಕಲಿಸುತ್ತದೆ ಮತ್ತು ಅಧ್ಯಾತ್ಮವು ಸರ್ವಸ್ವದ ತ್ಯಾಗ ಮಾಡಿ ಚಿರಂತನ ಆನಂದವನ್ನು ಹೇಗೆ ಪಡೆಯುವುದು ?’ ಎಂಬುದನ್ನು ಕಲಿಸುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ (೨೦.೨.೨೦೨೨)