ಬಾರಾಬಂಕಿಯ (ಉತ್ತರಪ್ರದೇಶ) HDFC ಬ್ಯಾಂಕಿನಲ್ಲಿ ನಮಾಜ್ ಪಠಣ ಮತ್ತು ಇಫ್ತಾರ್ ಆಯೋಜನೆ

ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಿ ಇಲ್ಲವಾದರೆ ಬ್ಯಾಂಕಿನಲ್ಲಿ ಹನುಮಾನ ಚಾಲೀಸಾ ಪಠಿಸುವೇವು – ಬಜರಂಗದಳದಿಂದ ಪೊಲೀಸರಿಗೆ ಎಚ್ಚರಿಕೆ

ಬಾರಾಬಂಕಿ (ಉತ್ತರಪ್ರದೇಶ) : ಇಲ್ಲಿಯ ಪೈಸಾರ್ ಪ್ರದೇಶದಲ್ಲಿರುವ ಎಚ್ಡಿಎಫ್ಸಿ ಬ್ಯಾಂಕ್ ನಲ್ಲಿ ನಮಾಜ್ ಪಠಣ ಮತ್ತು ಇಫ್ತಾರ್ ಆಯೋಜಿಸಲಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈ ವಿಷಯವಾಗಿ ಬ್ಯಾಂಕ್ ಮತ್ತು ಪೊಲೀಸರು ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಈ ಪ್ರಕರಣದಲ್ಲಿ ಬಜರಂಗದಳವು ಪೊಲೀಸ್ ಅಧಿಕಾರಿಗಳಿಗೆ ಮನವಿ ನೀಡಿ ಕ್ರಮಕೈಗೊಳ್ಳಲು ಒತ್ತಾಯಿಸುತ್ತಿದ್ದಾರೆ.

ಹಾಗೇನಾದರೂ ಕ್ರಮಕೈಗೊಳ್ಳದಿದ್ದರೆ, ಬ್ಯಾಂಕಿನಲ್ಲಿ ಹನುಮಾನ ಚಾಲೀಸಾ ಪಠಿಸಲಾಗುವುದು, ಎಂಬ ಎಚ್ಚರಿಕೆ ನೀಡಲಾಗಿದೆ. ಬ್ಯಾಂಕಿನ ವ್ಯವಸ್ಥಾಪಕ ಜಹೀರ್ ಅಬ್ಬಾಸ್ ಇವರು ಬ್ಯಾಂಕಿನ ಕೆಲಸ ಕಾರ್ಯ ಮುಗಿದ ನಂತರ ಇಲ್ಲಿ ಇಫ್ತಾರ್ ಆಯೋಜಿಸಿದ್ದರು.