ಸಾಧಕರಿಗಾಗಿ ಮಹತ್ವದ ಸೂಚನೆ
ವಾಚಕರಿಗೆ ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮ ಈ ಕುರಿತು ಅಮೂಲ್ಯ ಜ್ಞಾನವನ್ನು ಸಹಜ ಸುಲಭ ಭಾಷೆಯಲ್ಲಿ ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಎಲ್ಲೆಡೆಯ ವಾಚನಾಲಯಗಳಲ್ಲಿ ಇಡಬಹುದು. ಇದಕ್ಕಾಗಿ ಎಲ್ಲೆಡೆಯಲ್ಲಿನ ಸಾಧಕರು ಮುಂದಿನಂತೆ ಪ್ರಯತ್ನಿಸಬೇಕು.
ವಾಚನಾಲಯದಲ್ಲಿನ ನಿರ್ದೇಶಕರು, ಹಾಗೆಯೇ ಮುಖ್ಯೋಪಾಧ್ಯಾಯರು ಮತ್ತು ಪ್ರಾಧ್ಯಾಪಕರನ್ನು ಸಂಪರ್ಕಿಸುವುದು
ಸಾಧಕರು ತಾಲೂಕು ಸ್ತರದಲ್ಲಿನ ವಾಚನಾಲಯದ ಮುಖ್ಯಸ್ಥರನ್ನು ಸಂಪರ್ಕಿಸಿದರೆ ಆ ತಾಲೂಕಿನಲ್ಲಿನ ಎಲ್ಲ ಮುಖ್ಯಸ್ಥರ ಹೆಸರು ಮತ್ತು ಸಂಪರ್ಕ ಕ್ರಮಾಂಕಗಳು ಸಿಗಬಹುದು. ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಿಗೆ, ಹಾಗೆಯೇ ವಾಚನಾಲಯಗಳ ಗ್ರಂಥಪಾಲಕರಿಗೆ (ಲೈಬ್ರರಿಯನ್) ಅವರಲ್ಲಿನ ಗ್ರಂಥಾಲಯಗಳಿಗಾಗಿ ಸನಾತನದ ಗ್ರಂಥಗಳನ್ನು ತೆಗೆದುಕೊಳ್ಳಲು ಪ್ರೇರಣೆ ನೀಡಬೇಕು. ಇದರಿಂದ ವಿದ್ಯಾರ್ಥಿಗಳು ಗ್ರಹಿಸುವ (ಕಲಿಯುವ) ವಯಸ್ಸಿನಲ್ಲಿ ‘ಬಾಲಸಂಸ್ಕಾರ’ ಲೇಖನಮಾಲೆಯಲ್ಲಿನ, ಹಾಗೆಯೇ ಇತರ ಗ್ರಂಥಗಳನ್ನು ಓದಿ ಅದರ ಲಾಭವನ್ನು ಪಡೆಯಬಹುದು.
ಅ. ವಾಚನಾಲಯದ ಮುಖ್ಯಸ್ಥರು, ಹಾಗೆಯೇ ಮುಖ್ಯೋಪಾಧ್ಯಾಯರು ಮತ್ತು ಪ್ರಾಧ್ಯಾಪಕರಿಗೆ ಸನಾತನ ಸಂಸ್ಥೆಯು ಪ್ರಕಟಿಸಿದ ಗ್ರಂಥಗಳ ಪಟ್ಟಿಯನ್ನು ತೋರಿಸಬೇಕು. ಆ ಪಟ್ಟಿಯನ್ನು ನೋಡಿ ಅವರಿಗೆ ‘ಸನಾತನದ ವಿವಿಧ ವಿಷಯಗಳ ಮೇಲಿನ ಗ್ರಂಥಗಳ ಮಾಹಿತಿ ಮತ್ತು ಅವು ಯಾವ ಭಾಷೆಯಲ್ಲಿ ಲಭ್ಯವಿದೆ ?’, ಎಂಬುದು ಒಂದೇ ಸಮಯದಲ್ಲಿ ತಿಳಿಯುತ್ತದೆ. ವಾಚನಾಲಯ, ಶಾಲೆ ಮತ್ತು ವಿಶ್ವವಿದ್ಯಾಲಯಗಳಿಗಾಗಿ ಸನಾತನದ ಗ್ರಂಥಗಳನ್ನು ತೆಗೆದುಕೊಳ್ಳಲು ಅವರನ್ನು ಪ್ರೇರೇಪಿಸಬೇಕು.
ಆ. ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಳ ವಾರ್ತೆಯನ್ನು ನೀಡುತ್ತಿರುವ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಮಹತ್ವವನ್ನು ಹೇಳಿ ಪತ್ರಿಕೆಗಳನ್ನು ಪ್ರಾರಂಭಿಸಲು ವಿನಂತಿಸಬೇಕು. ವಾಚನಾಲಯಗಳು, ಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೆಯನ್ನು ಪ್ರಾರಂಭಿಸಿದರೆ ಒಂದೇ ಸಮಯದಲ್ಲಿ ಅನೇಕ ಜನರು ಪತ್ರಿಕೆಯನ್ನು ಓದಿ ಅವರು ರಾಷ್ಟ್ರ ಮತ್ತು ಧರ್ಮ ಇವುಗಳ ಮೇಲಾಗುವ ಆಘಾತಗಳ ಬಗ್ಗೆ ತಿಳಿದುಕೊಳ್ಳುವರು.
ಇ. ವಾಚನಾಲಯಗಳು, ಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರ, ಧರ್ಮ ಅಥವಾ ಅಧ್ಯಾತ್ಮಗಳ ಕುರಿತು ಬೋಧಪ್ರದ ಮಾಹಿತಿಯನ್ನು ನೀಡುವ ಪ್ರವಚನಗಳನ್ನು ಆಯೋಜಿಸುವ ಬಗ್ಗೆಯೂ ವಿಚಾರಿಸಿಕೊಳ್ಳಬೇಕು.
ಗ್ರಂಥಾಲಯಗಳಿಗೆ ಅನುದಾನ ನೀಡುವ ಜನಪ್ರತಿನಿಧಿಗಳಿಗೆ ಸನಾತನದ ಗ್ರಂಥಗಳ ಮಹತ್ವವನ್ನು ಹೇಳುವುದು.
ಅನೇಕ ಶಾಸಕರು ಮತ್ತು ಸಂಸದರು ‘ಮತದಾರಸಂಘ ವಿಕಾಸ ನಿಧಿ’ಯಿಂದ ಗ್ರಂಥಾಲಯ, ವಾಚನಾಲಯಗಳಿಗೆ ಗ್ರಂಥಗಳನ್ನು ಮಾರಾಟಮಾಡಲು ಅನುದಾನವನ್ನು ನೀಡುತ್ತಾರೆ ಅಥವಾ ಕೆಲವು ಗ್ರಂಥಗಳನ್ನು ಖರೀದಿಸಿ ಕೊಡುತ್ತಾರೆ. ಸಾಧಕರು ಇಂತಹ ಜನಪ್ರತಿನಿಧಿಗಳನ್ನು ಸಂಪರ್ಕಿಸಬೇಕು ಮತ್ತು ಆ ಅನುದಾನದಿಂದ ಸನಾತನದ ಗ್ರಂಥಗಳನ್ನು ಖರೀದಿಸುವಂತೆ ಹೇಳಬೇಕು. ಇದುವರೆಗೆ ಈ ರೀತಿ ಅನೇಕ ಜನಪ್ರತಿನಿಧಿಗಳು ವಾಚನಾಲಯಗಳಿಗಾಗಿ ಸನಾತನದ ಗ್ರಂಥಗಳನ್ನು ಖರೀದಿಸಲು ಹಣವನ್ನು ದೊರಕಿಸಿಕೊಟ್ಟಿದ್ದಾರೆ.
ಸಾಧಕರೇ, ವಾಚನಾಲಯದ ನಿರ್ದೇಶಕರು, ಮುಖ್ಯಸ್ಥರು, ಹಾಗೆಯೇ ಮುಖ್ಯೋಪಾಧ್ಯಾಯರು ಮತ್ತು ಪ್ರಾಧ್ಯಾಪಕರನ್ನು ಸಂಪರ್ಕಿಸಿರಿ !
ಮೇಲಿನಂತೆ ಸಂಪರ್ಕ ಮಾಡುವ ಸಮಯದಲ್ಲಿ ವಾಚನಾಲಯದ ನಿರ್ದೇಶಕ, ಮುಖ್ಯಸ್ಥ, ಹಾಗೆಯೇ ಮುಖ್ಯೋಪಾಧ್ಯಾಯರು ಮತ್ತು ಪ್ರಾಧ್ಯಾಪಕರಿಗೆ ಸನಾತನದ ಗ್ರಂಥಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುವುದೊಂದಿಗೆ ಅವರ ಆಸಕ್ತಿಗನುಸಾರ ರಾಷ್ಟ್ರ, ಧರ್ಮ ಅಥವಾ ಅಧ್ಯಾತ್ಮ ಇವುಗಳ ಕಾರ್ಯದಲ್ಲಿ ಸಹಭಾಗಿಯನ್ನಾಗಿಸಿಕೊಳ್ಳುವುದು, ಹಾಗೆಯೇ ಅವರೊಂದಿಗೆ ಆತ್ಮೀಯತೆಯನ್ನು ಬೆಳೆಸುವುದು, ಈ ದೃಷ್ಟಿಯಿಂದಲೂ ಪ್ರಯತ್ನಿಸಬೇಕು. ಜಿಲ್ಲಾಸೇವಕರು ಮೇಲಿನ ಸಂಪರ್ಕವನ್ನು ಮಾಡಲು ಕೆಲವು ಸಾಧಕರ ಆಯೋಜನೆಯನ್ನು ಮಾಡಬೇಕು ಮತ್ತು ಈ ಸೇವೆಯು ಪ್ರಾಧಾನ್ಯತೆಯಿಂದ ಪೂರ್ಣಗೊಳಿಸಲು ಪ್ರಯತ್ನಿಸಬೇಕು.
ಸಾಧಕರೇ, ವಾಚಕರಿಗೆ ಎಲ್ಲ ರೀತಿಯ ಜ್ಞಾನಭಂಡಾರವನ್ನು ನೀಡುವ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಹೆಚ್ಚೆಚ್ಚು ವಾಚನಾಲಯಗಳವರೆಗೆ ತಲುಪಿಸಿ ಗುರುಕಾರ್ಯದ ಪ್ರಸಾರವನ್ನು ಮಾಡಿರಿ !