ಪರಾತ್ಪರ ಗುರು ಡಾ. ಆಠವಲೆಯವರ ಯಾವ ಬೋಧನೆಯಿಂದ ಆಧ್ಯಾತ್ಮಿಕ ಪ್ರಗತಿಯಾಯಿತು, ಈ ಬಗೆಗಿನ ಲೇಖನವನ್ನು ಕಳುಹಿಸಿ !

ಸಂತರು ಮತ್ತು ಶೇ. ೬೦ ಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಸಾಧಕರಿಗಾಗಿ ಸೂಚನೆ !

ಸನಾತನ ಸಂಸ್ಥೆಯಲ್ಲಿ ಕಲಿಸಲಾಗುವ ‘ಗುರುಕೃಪಾಯೋಗಾ’ನುಸಾರ ಸಾಧನೆಯಿಂದ ೧.೩.೨೦೨೨ ರ ವರೆಗೆ ೧೧೯ ಸಾಧಕರು ಸಂತರು (ಶೇ. ೭೦ ಕ್ಕಿಂತ ಹೆಚ್ಚು ಮಟ್ಟವಿರುವ) ಆಗಿದ್ದಾರೆ ಮತ್ತು ೧೧೧೫ ಸಾಧಕರು (ಶೇ. ೬೦ ಕ್ಕಿಂತಲೂ ಹೆಚ್ಚು ಮಟ್ಟವಿರುವ) ಜನ್ಮ-ಮೃತ್ಯುವಿನ ಚಕ್ರಗಳಿಂದ ಬಿಡುಗಡೆಯಾಗಿ ಸಂತತ್ವದ ಕಡೆಗೆ ಮಾರ್ಗಕ್ರಮಣ ಮಾಡುತ್ತಿದ್ದಾರೆ.

ಸಮಾಜದಲ್ಲಿ ‘ಸನಾತನದ ಸಾಧಕರ ಆಧ್ಯಾತ್ಮಿಕ ಪ್ರಗತಿ ಇಷ್ಟು ಶೀಘ್ರದಲ್ಲಿ ಹೇಗೆ ಆಗುತ್ತದೆ ?’ ಎಂಬ ಬಗ್ಗೆ ಯಾವಾಗಲೂ ಜಿಜ್ಞಾಸೆ ಇರುತ್ತದೆ. ಇದರ ಉತ್ತರ ‘ಪರಾತ್ಪರ ಗುರು ಡಾ. ಆಠವಲೆಯವರ ಬೋಧನೆ’, ಎಂದಾಗಿದೆ; ಆದರೆ ಸಮಾಜಕ್ಕೆ ಅದರ ವಿವೇಚನೆ ಅಂದರೆ ‘ಪರಾತ್ಪರ ಗುರು ಡಾ. ಆಠವಲೆಯವರು ನಿಖರವಾಗಿ ಏನು ಕಲಿಸಿದರು’, ಎಂದು ತಿಳಿದುಕೊಳ್ಳುವುದಿರುತ್ತದೆ. ಸನಾತನದ ಸಂತರು ಮತ್ತು ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟದ ಸಾಧಕರು ಈ ಬಗ್ಗೆ ಬಹಳ ಚೆನ್ನಾಗಿ ಹೇಳಬಹುದು. ಇದಕ್ಕಾಗಿ ‘ಪ.ಪೂ. ಡಾಕ್ಟರರ ಯಾವ ಬೋಧನೆಯಿಂದ ಅವರ ಪ್ರಗತಿಯಾಗಿದೆ’, ಎಂದು ಇಂದಿನವರೆಗೂ ಬರೆದು ಕಳಿಸದಿರುವ ಸಂತರು ಮತ್ತು ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡ ಸಾಧಕರು ಮುಂದಿನ ವಿಳಾಸಕ್ಕೆ ಆದಷ್ಟು ಬೇಗನೆ ಕಳುಹಿಸಬೇಕು. ಈ ಬಗೆಗಿನ ಲೇಖನವನ್ನು ಈ ಮೊದಲು ಕಳುಹಿಸಿದ್ದರೆ ಪುನಃ ಕಳುಹಿಸಬಾರದು.

ಮೇಲಿನ ವಿಷಯವನ್ನು ಬರೆದು ಕೊಡುವುದು, ಇದು ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ವ್ಯಷ್ಟಿ ಸ್ತರದ ಒಂದು ಮಾಧ್ಯಮವಾಗಿದೆ ಮತ್ತು ಸಮಷ್ಟಿ ಸ್ತರದಲ್ಲಿ ವಿಚಾರ ಮಾಡಿದರೆ ಅಧ್ಯಾತ್ಮದ ತಾತ್ತ್ವಿಕ ಜ್ಞಾನಕ್ಕೆ ತಮ್ಮ ಸಾಧನೆಯ ಮತ್ತು ಅನುಭೂತಿಗಳಿಗೆ ಸಂಬಂಧಿಸಿದ ಬರವಣಿಗೆಗೆ ಸಂತರು ಮತ್ತು ಸಾಧಕರು ಜೊತೆ ನೀಡಿದರೆ ಅದರಿಂದ ಮುಂದಿನ ಅನೇಕ ಪೀಳಿಗೆಗಳಿಗೆ ಸಾಧನೆಯು ಸಹಜವಾಗಿ ತಿಳಿದು ಅದನ್ನು ಮಾಡುವುದು ಸುಲಭವಾಗುತ್ತದೆ. ಈ ಎರಡೂ ಉದ್ದೇಶಗಳನ್ನು ಗಮನದಲ್ಲಿಟ್ಟು ಸಂತರು ಮತ್ತು ಸಾಧಕರು ತಮ್ಮ ಇಲ್ಲಿಯವರೆಗಿನ ಸಾಧನೆಯ ಮತ್ತು ಮುಂದಿನ ಪ್ರಗತಿಯ ಬರವಣಿಗೆಯನ್ನು ನಿಯಮಿತವಾಗಿ ಬರೆದು ಕಳುಹಿಸಬೇಕು.

ಅಂಚೆ ವಿಳಾಸ :  ಸೌ. ಭಾಗ್ಯಶ್ರೀ ಸಾವಂತ, c/o ‘ಸನಾತನ ಆಶ್ರಮ’, ೨೪/ಬಿ ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧

ವಿ-ಅಂಚೆ ವಿಳಾಸ : [email protected]