ಸಮಾಜಕ್ಕಾಗಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಮಾನಸಿಕವಲ್ಲ ಕೇವಲ ಶಾರೀರಿಕವಾಗಿ ಪ್ರೀತಿಸುವ ಇಂದಿನ ಗಂಡ-ಹೆಂಡತಿ !

ಪರಾತ್ಪರ ಗುರು ಡಾ. ಆಠವಲೆ

‘ಇತ್ತೀಚಿನ ದಿನಗಳಲ್ಲಿ ಸ್ತ್ರೀ-ಪುರುಷರ ನಡುವಿನ ಪ್ರೀತಿ ಹೆಚ್ಚಾಗಿ ಕೇವಲ ಶಾರೀರಿಕ ಪ್ರೀತಿ ಇರುತ್ತದೆ. ಹಾಗಾಗಿ ಅವರಿಗೆ ಮದುವೆಯಾಗುವುದು ಆವಶ್ಯಕವೆನಿಸುವುದಿಲ್ಲ ಮತ್ತು ಅವರು ಮದುವೆಯಾದರೆ ಅದು ಉಳಿಯುವುದಿಲ್ಲ. ಪರಸ್ಪರರಲ್ಲಿ ಹೊಂದಾಣಿಕೆಯಾಗದಿದ್ದರೆ ಮಾನಸಿಕ ಪ್ರೀತಿ ಇಲ್ಲದಿರುವುದರಿಂದ ಸಂಗಾತಿಯನ್ನು ಬದಲಾಯಿಸುತ್ತಲೇ ಇರುತ್ತಾರೆ. ಮದುವೆಯಾದರೆ ಬೇಗ ವಿಚ್ಛೇದನೆ ಪಡೆದು ಅವರು ಬೇರ್ಪಡುತ್ತಾರೆ.’

– (ಪರಾತ್ಪರ ಗುರು) ಡಾ. ಆಠವಲೆ (೮.೨.೨೦೨೨)

ಮುಂಬರುವ ಕಾಲಕ್ಕಾಗಿ ಮಾಲೀಶ, ಬಿಂದುಒತ್ತಡಗಳಂತಹ ಚಿಕಿತ್ಸಾವಿಧಾನಗಳನ್ನು ಪ್ರತಿಯೊಬ್ಬರು ಕಲಿಯುವುದು ಆವಶ್ಯಕ !

‘ಮುಂಬರುವ ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು ಮತ್ತು ಔಷಧಿ ಇತ್ಯಾದಿಗಳು ದೊರಕುವುದು ಕಠಿಣವಿದೆ. ಅಂತಹ ಸಮಯದಲ್ಲಿ ರೋಗಿಗೆ ಆರಾಮ ಸಿಗಲು ಬಿಂದುಒತ್ತಡ, ಮಾಲೀಶ ಇವುಗಳಂತಹ ಚಿಕಿತ್ಸಾಪದ್ಧತಿಗಳು ಉಪಯುಕ್ತವಾಗಲಿವೆ. ಈ ಪರಿಸ್ಥಿತಿ ಯಾರಿಗೂ ಎದುರಾಗಬಹುದು. ಆದುದರಿಂದ ಈಗ ಎಷ್ಟೇ ಇತರ ವ್ಯವಹಾರಿಕ ಜ್ಞಾನ ಉದಾ. ಗಣಕಯಂತ್ರವಿದ್ದರೂ, ಆ ಸಮಯದಲ್ಲಿ ತಮ್ಮ ಕುಟುಂಬಕ್ಕೆ ಚಿಕಿತ್ಸೆ ನೀಡಲು ಪ್ರತಿಯೊಬ್ಬರೂ ಇದನ್ನು ಈಗ ಕಲಿಯುವುದು ಅಗತ್ಯವಿದೆ.

– (ಪರಾತ್ಪರ ಗುರು) ಡಾ. ಆಠವಲೆ (೨೪.೧.೨೦೨೨)

‘ವೃದ್ಧಾಪ್ಯ ಬರುವ ಮೊದಲು ಕೆಲವು ದಿನಗಳು ಮಾತ್ರ ಅನಾರೋಗ್ಯದ ದಿನಗಳಿರುತ್ತವೆ, ಆದರೆ ವೃದ್ಧಾಪ್ಯದಲ್ಲಿ ಹೆಚ್ಚಿನ ದಿನಗಳು ಅನಾರೋಗ್ಯದ ದಿನಗಳಾಗಿರುತ್ತವೆ !

– (ಪರಾತ್ಪರ ಗುರು) ಡಾ. ಆಠವಲೆ (೨.೧.೨೦೨೨)

‘ಸಮಾಜದಲ್ಲಿ ಹೆಚ್ಚಿನ ಆಪ್ತರು ಅನಾರೋಗ್ಯದಿಂದಿರುವ ತಮ್ಮ ಆಪ್ತರ ಸೇವೆ ಮಾಡುವುದಿಲ್ಲ. ತದ್ವಿರುದ್ಧ ಯಾವುದೇ ರಾಜ್ಯದ ಸನಾತನದ ಸಾಧಕರು ಯಾವುದೇ ರಾಜ್ಯದ ಅನಾರೋಗ್ಯವಿರುವ ಸಾಧಕರ ಸೇವೆಯನ್ನು ತನ್ನದೇ ಕುಟುಂಬದವರಂತೆ ಮಾಡುತ್ತಾರೆ.

– (ಪರಾತ್ಪರ ಗುರು) ಡಾ. ಆಠವಲೆ (೩.೧.೨೦೨೨)