ಯಜ್ಞದ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ಪರಾತ್ಪರ ಗುರು ಡಾ. ಆಠವಲೆಯವರ ಮೇಲಿನ ಮಹಾಮೃತ್ಯುಯೋಗವು ದೂರವಾಗಬೇಕು ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಬರುವ ಅಡತಡೆಗಳು ದೂರವಾಗಬೇಕೆಂದು ಸಪ್ತರ್ಷಿಗಳ ಆಜ್ಞೆಯಿಂದ ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮದಲ್ಲಿ ‘ಶ್ರೀರಾಮಯಾಗ’ವನ್ನು ನೆರವೇರಿಸಲಾಯಿತು. ಶ್ರೀರಾಮಯಾಗದಲ್ಲಿ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸದ್ಗುರು ಡಾ. ಮುಕುಲ ಗಾಡಗೀಳ ಮತ್ತು ಪೂ. ನಿಲೇಶ ಸಿಂಗಬಾಳ ಇವರು ಅಮೃತಬಳ್ಳಿ, ಶುಂಠಿ, ಕಾಳು ಮೆಣಸು ಮತ್ತು ಒಣ ಹಿಪ್ಪಲಿ ಇತ್ಯಾದಿ ಹವನ-ದ್ರವ್ಯಗಳನ್ನು ಆಹುತಿ ನೀಡಿದರು. ‘ಪರಾತ್ಪರ ಗುರು ಡಾ. ಆಠವಲೆಯವರು ಆಹುತಿ ನೀಡಲಿರುವ ಹವನ-ದ್ರವ್ಯಗಳನ್ನು ಅವರ ಹಸ್ತದಿಂದ ಸ್ಪರ್ಶಿಸಿದುದರಿಂದ ಹವನ-ದ್ರವ್ಯಗಳ ಮೇಲೆ ಏನು ಪರಿಣಾಮವಾಗುತ್ತದೆ ?’, ಎಂಬುದನ್ನು ವಿಜ್ಞಾನದ ಮೂಲಕ ಅಭ್ಯಾಸ ಮಾಡಲು ಅವುಗಳನ್ನು ‘ಯು.ಎ.ಎಸ್.’ (ಯುನಿವರ್ಸಲ್ ಔರಾ ಸ್ಕ್ಯಾನರ್) ಉಪಕರಣದ ಮೂಲಕ ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.
೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯಲ್ಲಿ ಈ ಮುಂದಿನ ೨ ಪ್ರಯೋಗಗಳನ್ನು ಮಾಡಲಾಯಿತು.
೧ ಅ. ಪ್ರಯೋಗ ಕ್ರ. ೧ – ಯಜ್ಞ ಮುಗಿಯುವ ಹಿಂದಿನ ದಿನ ಪರಾತ್ಪರ ಗುರು ಡಾ. ಆಠವಲೆಯವರು ಆಹುತಿ ನೀಡಲಿಕ್ಕಿರುವ ಹವನ-ದ್ರವ್ಯಗಳನ್ನು ನೋಡುವ ಮೊದಲು, ನೋಡಿದ ನಂತರ ಮತ್ತು ಹವನ-ದ್ರವ್ಯಗಳನ್ನು ಹಸ್ತದಿಂದ ಸ್ಪರ್ಶಿಸಿದ ನಂತರ ಹವನ-ದ್ರವ್ಯಗಳ ನಿರೀಕ್ಷಣೆ ಮಾಡಲಾಯಿತು.
೧ ಆ. ಪ್ರಯೋಗ ಕ್ರ. ೨ – ಯಜ್ಞದ ಕೊನೆಯ ದಿನ ಪರಾತ್ಪರ ಗುರು ಡಾ. ಆಠವಲೆಯವರು ಆಹುತಿ ನೀಡಲಿಕ್ಕಿದ್ದ ಹವನ-ದ್ರವ್ಯಗಳನ್ನು ಹಸ್ತಸ್ಪರ್ಶ ಮಾಡುವ ಮೊದಲು, ‘ಶ್ರೀ ರಾಮಚಂದ್ರಾಯ ನಮಃ |’ ಈ ನಾಮಜಪವನ್ನು ಮಾಡುತ್ತಾ ಹಸ್ತಸ್ಪರ್ಶ ಮಾಡಿದ ನಂತರ ಹಾಗೂ ನಾಮಜಪ ಮಾಡದೇ ಹಸ್ತಸ್ಪರ್ಶ ಮಾಡಿದ ನಂತರ ಹವನ-ದ್ರವ್ಯಗಳನ್ನು ನಿರೀಕ್ಷಣೆ ಮಾಡಲಾಯಿತು.
೨. ನಕಾರಾತ್ಮಕ ಹಾಗೂ ಸಕಾರಾತ್ಮಕ ಊರ್ಜೆಗಳಿಗೆ ಸಂಬಂಧಿಸಿದ ನಿರೀಕ್ಷಣೆಗಳ ವಿಶ್ಲೇಷಣೆ
ಪರಾತ್ಪರ ಗುರು ಡಾ. ಆಠವಲೆಯವರು ಆಹುತಿ ಕೊಡಲಿಕ್ಕಿದ್ದ ಹವನ-ದ್ರವ್ಯಗಳನ್ನು ನೋಡುವುದು, ಹಸ್ತಸ್ಪರ್ಶ ಮಾಡುವುದು ಇತ್ಯಾದಿ ಕೃತಿಗಳನ್ನು ಮಾಡಿರುವುದರಿಂದ ಹವನ-ದ್ರವ್ಯಗಳ ಮೇಲಾದ ಪರಿಣಾಮ
ಇಲ್ಲಿ ನೀಡಿದ ಕೋಷ್ಟಕದಿಂದ ಮುಂದಿನ ವಿಷಯಗಳು ಗಮನಕ್ಕೆ ಬರುತ್ತದೆ.
೨ ಅ. ಪರಾತ್ಪರ ಗುರು ಡಾಕ್ಟರರು ಹವನ-ದ್ರವ್ಯಗಳನ್ನು ನೋಡುವುದು ಮತ್ತು ಹವನ-ದ್ರವ್ಯಗಳ ಹಸ್ತಸ್ಪರ್ಶ ಮಾಡುವುದು, ಈ ಕೃತಿಗಳನ್ನು ಮಾಡಿದ ನಂತರ ಹವನ-ದ್ರವ್ಯಗಳ ಸಕಾರಾತ್ಮಕ ಊರ್ಜೆಯು ತುಂಬಾ ಹೆಚ್ಚಾಯಿತು : ಪ್ರಯೋಗ ಕ್ರ. ೧ ರಲ್ಲಿ ಪರಾತ್ಪರ ಗುರು ಡಾಕ್ಟರರು ಹವನ-ದ್ರವ್ಯಗಳನ್ನು ಕೇವಲ ನೋಡಿದಾಗ ಹವನ-ದ್ರವ್ಯಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಶೇ. ೬೭.೯೧ ಮೀಟರ್ನಷ್ಟು ಹೆಚ್ಚಾಗಿ ಅದು ೭೭.೪೬ ಮೀಟರ್ ಆಯಿತು. ಅನಂತರ ಪರಾತ್ಪರ ಗುರು ಡಾಕ್ಟರರು ಹವನ-ದ್ರವ್ಯಗಳಿಗೆ ಹಸ್ತಸ್ಪರ್ಶ ಮಾಡಿದ ನಂತರ ಹವನ-ದ್ರವ್ಯಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಇನ್ನೂ ೬೭.೭೨ ಮೀಟರ್ನಷ್ಟು ಹೆಚ್ಚಾಗಿ ಅದು ೧೪೫.೨೮ ಮೀಟರ್ ಆಯಿತು.
೨ ಆ. ಪರಾತ್ಪರ ಗುರು ಡಾ. ಆಠವಲೆಯವರು ನಾಮಜಪ ಮಾಡುತ್ತಾ ಹವನ-ದ್ರವ್ಯಗಳನ್ನು ಹಸ್ತಸ್ಪರ್ಶ ಮಾಡುವ ಬದಲು ನಾಮಜಪ ಮಾಡದೆಯೇ ಹಸ್ತಸ್ಪರ್ಶ ಮಾಡಿದ್ದರಿಂದ ಹವನ-ದ್ರವ್ಯಗಳ ಸಕಾರಾತ್ಮಕ ಊರ್ಜೆಯು ಅಪಾರ ಪ್ರಮಾಣದಲ್ಲಿ ಹೆಚ್ಚಾಗುವುದು : ಪ್ರಯೋಗ ಕ್ರ. ೨ ರಲ್ಲಿ ಪರಾತ್ಪರ ಗುರು ಡಾಕ್ಟರರು ನಾಮಜಪ ಮಾಡುತ್ತಾ ಹವನ-ದ್ರವ್ಯಗಳನ್ನು ಹಸ್ತಸ್ಪರ್ಶ ಮಾಡಿದ ನಂತರ ಹವನದ್ರವ್ಯದ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಶೇ. ೧೦೮.೬೭ ಮೀಟರ್ನಷ್ಟು ಹೆಚ್ಚಾಯಿತು. ಅವರು ಹವನ-ದ್ರವ್ಯಗಳಿಗೆ ನಾಮಜಪ ಮಾಡದೇ ಹಸ್ತಸ್ಪರ್ಶ ಮಾಡಿದ ನಂತರ ಹವನ-ದ್ರವ್ಯಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ೧೬೦.೧೭ ಮೀಟರ್ನಷ್ಟು ಹೆಚ್ಚಾಯಿತು, ಅಂದರೆ ನಾಮಜಪ ಮಾಡುವುದಕ್ಕಿಂತ ನಾಮಜಪ ಮಾಡದೇ ಹವನ-ದ್ರವ್ಯಗಳಿಗೆ ಹಸ್ತಸ್ಪರ್ಶ ಮಾಡಿದಾಗ ಹವನ-ದ್ರವ್ಯಗಳ ಸಕಾರಾತ್ಮಕ ಊರ್ಜೆಯು ತುಂಬ ಹೆಚ್ಚು ಪ್ರಮಾಣದಲ್ಲಿ ಹೆಚ್ಚಾಯಿತು.
೩. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೩ ಅ. ಪರಾತ್ಪರ ಗುರು ಡಾ. ಆಠವಲೆಯವರು ‘ಹವನ-ದ್ರವ್ಯಗಳನ್ನು ನೋಡುವುದು’ ಮತ್ತು ‘ಹವನ-ದ್ರವ್ಯಗಳಿಗೆ ಹಸ್ತಸ್ಪರ್ಶ ಮಾಡು ವುದು’ ಈ ಕೃತಿ ಮಾಡುವುದರಿಂದ ಹವನ-ದ್ರವ್ಯಗಳಲ್ಲಿನ ಚೈತನ್ಯವು ತುಂಬಾ ಹೆಚ್ಚಾಗುವುದು : ಪರಾತ್ಪರ ಗುರು ಡಾ. ಆಠವಲೆಯವರು ‘ಪರಾತ್ಪರ ಗುರು’ ಪದವಿಯ ಸಮಷ್ಟಿ ಸಂತರಾಗಿರುವುದ ರಿಂದ ಅವರಿಂದ ತುಂಬಾ ಚೈತನ್ಯವು ಪ್ರಕ್ಷೇಪಿತವಾಗುತ್ತದೆ. ಈ ಪ್ರಯೋಗದಲ್ಲಿ ಪರಾತ್ಪರ ಗುರು ಡಾಕ್ಟರರು ಹವನ-ದ್ರವ್ಯಗಳನ್ನು ನೋಡಿದಾಗ ಅವರ ನೇತ್ರಗಳಿಂದ ಪ್ರಕ್ಷೇಪಣೆಯಾದ ತೇಜತತ್ತ್ವದಿಂದ (ಚೈತನ್ಯದಿಂದ) ಹವನ-ದ್ರವ್ಯಗಳು ಚೈತನ್ಯಭರಿತ ವಾದವು. ಪರಾತ್ಪರ ಗುರು ಡಾಕ್ಟರರ ಚೈತನ್ಯಮಯ ಹಸ್ತಸ್ಪರ್ಶದಿಂದ ಹವನ-ದ್ರವ್ಯಗಳಲ್ಲಿ ತುಂಬಾ ಚೈತನ್ಯವು ಸಂಕ್ರಮಿತವಾಯಿತು.
೩ ಆ. ಪರಾತ್ಪರ ಗುರು ಡಾ. ಆಠವಲೆಯವರು ಹವನ-ದ್ರವ್ಯಗಳನ್ನು ನಾಮಜಪ ಮಾಡುತ್ತಾ ಹಸ್ತಸ್ಪರ್ಶ ಮಾಡುವ ಬದಲು ನಾಮಜಪ ಮಾಡದೆಯೇ ಹಸ್ತಸ್ಪರ್ಶ ಮಾಡಿರುವುದರಿಂದ ಹವನ-ದ್ರವ್ಯಗಳಲ್ಲಿನ ಚೈತನ್ಯವು ತುಂಬಾ ಹೆಚ್ಚು ಪ್ರಮಾಣದಲ್ಲಿ ಹೆಚ್ಚಾಗುವುದು : ‘ಪರಾತ್ಪರ ಗುರು’ ಪದವಿಯ ಸಮಷ್ಟಿ ಸಂತರು ನಾಮಜಪ ಮಾಡುವ ಅವಶ್ಯಕತೆಯಿರುವುದಿಲ್ಲ. ಅವರ ಎಲ್ಲ ಕಾರ್ಯಗಳು ಕೇವಲ ಅವರ ಸಂಕಲ್ಪದಿಂದ ಸಿದ್ಧ(ಪೂರ್ಣ)ವಾಗುತ್ತವೆ. (‘ಪರಾತ್ಪರ ಗುರು’ ಪದವಿಯಲ್ಲಿರುವ ಸಂತರು ಹೆಚ್ಚಾಗಿ ನಿರ್ಗುಣದಲ್ಲಿ ಕಾರ್ಯನಿರತರಾಗಿರುತ್ತಾರೆ); ಆದರೆ ಸಮಷ್ಟಿ-ಕಾರ್ಯದ ಅವಶ್ಯಕತೆಗನುಸಾರ ಅವರು ನಿರ್ಗುಣ ಸ್ಥಿತಿಯಿಂದ (ಉಚ್ಚ ಆಧ್ಯಾತ್ಮಿಕ ಸ್ಥಿತಿಯಿಂದ) ಸಗುಣ ಸ್ಥಿತಿಗೆ ಬರುತ್ತಾರೆ.) ‘ಪರಾತ್ಪರ ಗುರು ಪದವಿಯ ಸಂತರು ನಾಮಜಪ ಮಾಡುವುದೆಂದರೆ ನಿರ್ಗುಣ-ಸ್ಥಿತಿಯಿಂದ ಸಗುಣ-ಸ್ಥಿತಿಗೆ ಬರುವುದಾಗಿದೆ. ಸಗುಣಕ್ಕಿಂತ ನಿರ್ಗುಣ ಹೆಚ್ಚು ಸೂಕ್ಷ್ಮವಾಗಿರುವುದರಿಂದ ಹೆಚ್ಚು ಪ್ರಭಾವಶಾಲಿಯಾಗಿದೆ. ಇದರ ಅನುಭವವು ‘ಪ್ರಯೋಗ ಕ್ರ. ೨’ರಲ್ಲಿ ಪರಾತ್ಪರ ಗುರು ಡಾಕ್ಟರರು ಹವನ-ದ್ರವ್ಯಗಳಿಗೆ ನಾಮಜಪ ಮಾಡುತ್ತಾ ಹಸ್ತಸ್ಪರ್ಶ ಮಾಡುವ ಮತ್ತು ನಾಮಜಪ ಮಾಡದೆಯೇ ಹಸ್ತಸ್ಪರ್ಶ ಮಾಡುವ ಕೃತಿಗಳಿಂದ ಮುಂದಿನ ಪರಿಣಾಮವು ಕಾಣಿಸಿತು.
೧. ಪರಾತ್ಪರ ಗುರು ಡಾಕ್ಟರರು ಹವನ-ದ್ರವ್ಯಗಳನ್ನು ನಾಮಜಪ ಮಾಡುತ್ತಾ ಹಸ್ತಸ್ಪರ್ಶ ಮಾಡಿದಾಗ ಹವನ-ದ್ರವ್ಯಗಳಲ್ಲಿನ ಸಕಾರಾತ್ಮಕ ಊರ್ಜೆಯು ಹೆಚ್ಚಾಗಿ ಅದರ ಪ್ರಭಾವಲಯವು ೧೧೭.೯೧ ರಷ್ಟಾಯಿತು. ಇದು ಪರಾತ್ಪರ ಗುರು ಡಾಕ್ಟರರು ನಾಮಜಪ ಮಾಡಿರುವುದರ ಪರಿಣಾಮವಾಗಿದೆ.
೨. ಪರಾತ್ಪರ ಗುರು ಡಾಕ್ಟರರು ನಾಮಜಪ ಮಾಡದೆಯೇ ಹವನ-ದ್ರವ್ಯಗಳಿಗೆ ಹಸ್ತಸ್ಪರ್ಶ ಮಾಡಿದಾಗ ಹವನ-ದ್ರವ್ಯಗಳಲ್ಲಿನ ಸಕಾರಾತ್ಮಕ ಊರ್ಜೆಯು ಹೆಚ್ಚಾಗಿ ಅದರ ಪ್ರಭಾವಲಯವು ೧೬೯.೮೨ ಮೀಟರ್ ಆಯಿತು; ಅಂದರೆ ಪರಾತ್ಪರ ಗುರು ಡಾಕ್ಟರರು ನಾಮಜಪ ಮಾಡುವುದಕ್ಕಿಂತ ನಾಮಜಪ ಮಾಡದೆಯೇ ಹವನ-ದ್ರವ್ಯಗಳಿಗೆ ಹಸ್ತಸ್ಪರ್ಶ ಮಾಡಿದ್ದರಿಂದ ಹವನ-ದ್ರವ್ಯಗಳ ಚೈತನ್ಯದ ಪ್ರಮಾಣವು ತುಂಬಾ ಹೆಚ್ಚಾಯಿತು. ಇದು ಪರಾತ್ಪರ ಗುರು ಡಾಕ್ಟರರ ಸಂಕಲ್ಪದ ಪರಿಣಾಮವಾಗಿದೆ.
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೩.೧.೨೦೨೧)
ವಿ-ಅಂಚೆ : mav.research೨೦೧೪@gmail.com