ಪ್ರೇಮಭಾವ, ಬುದ್ಧಿವಂತ, ಸ್ವಯಂಶಿಸ್ತು ಮತ್ತು ಸಾಧನೆಯ ತೀವ್ರ ತಳಮಳವಿರುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ದೈವೀ ಬಾಲಕಿ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) !

‘ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು’

ಪರಾತ್ಪರ ಗುರು ಡಾ.ಆಠವಲೆಯವರ ಸಂಕಲ್ಪಕ್ಕನುಸಾರ ಕೆಲವೇ ವರ್ಷಗಳಲ್ಲಿ ಈಶ್ವರೀ ರಾಜ್ಯ ಸ್ಥಾಪನೆಯಾಗಲಿಕ್ಕಿದೆ. ಅನೇಕ ಜನರ ಮನಸ್ಸಿನಲ್ಲಿ ‘ಈ ರಾಷ್ಟ್ರವನ್ನು ನಡೆಸುವವರು ಯಾರು ?’, ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕಾಗಿ ಈಶ್ವರನು ಉಚ್ಚ ಲೋಕದಿಂದ ದೈವೀ ಬಾಲಕರಿಗೆ ಪೃಥ್ವಿಯ ಮೇಲೆ ಜನ್ಮ ನೀಡಿ ಕಳುಹಿಸಿದ್ದಾನೆ. ಈ ದೈವೀ ಬಾಲಕರಲ್ಲಿನ ಕಲಿಯುವ ವೃತ್ತಿ, ವೈಚಾರಿಕ ಪ್ರಬುದ್ಧತೆ, ಅವರಲ್ಲಿ ಉತ್ತಮ ಶಿಷ್ಯನ ಅನೇಕ ಗುಣಗಳಿರುವುದು, ಶ್ರೀ ಗುರುಗಳ ಆಜ್ಞಾಪಾಲನೆಯನ್ನು ತಕ್ಷಣ ಮಾಡುವುದು, ಅವರಿಗೆ ಬರುವ ಅನುಭೂತಿಗಳು ಮತ್ತು ಅವರ ಸೂಕ್ಷ್ಮದ ವಿಷಯವನ್ನು ತಿಳಿದುಕೊಳ್ಳುವ ಕ್ಷಮತೆಯಂತಹ ಅಲೌಕಿಕ ವೈಶಿಷ್ಟ್ಯಗಳನ್ನು ಈ ಲೇಖನದ ಮೂಲಕ ಪ್ರಕಟಿಸುತ್ತಿದ್ದೇವೆ.

ತಾಯಿ-ತಂದೆಯರೇ, ದೈವಿ ಬಾಲಕರ ಸಾಧನೆಗೆ ವಿರೋಧಿಸದೇ ಅವರ ಸಾಧನೆಯತ್ತ ಗಮನ ಹರಿಸಿ !

ಪರಾತ್ಪರ ಗುರು ಡಾ. ಆಠವಲೆ

‘ಕೆಲವು ದೈವಿ ಬಾಲಕರ ಆಧ್ಯಾತ್ಮಿಕ ಮಟ್ಟ ಎಷ್ಟು ಒಳ್ಳೆಯದಿರುತ್ತದೆ ಎಂದರೆ ಅವರು ೨೦-೨೫ ವಯಸ್ಸನ್ನು ತಲುಪುವುದರೊಳಗೆ ಸಂತರಾಗಬಹುದು. ತಾಯಿ-ತಂದೆಯವರು ಇಂತಹ ಬಾಲಕರಿಗೆ ಪೂರ್ಣವೇಳೆ ಸಾಧನೆ ಮಾಡಲು ವಿರೋಧಿಸುತ್ತಾರೆ ಮತ್ತು ಅವರಿಗೆ ಮಾಯೆಯಲ್ಲಿನ ಶಿಕ್ಷಣ ನೀಡಿ ಅವರ ಜೀವನವನ್ನು ವ್ಯರ್ಥಗೊಳಿಸುತ್ತಾರೆ. ಸಾಧಕನಿಗೆ ಸಾಧನೆಗೆ ವಿರೋಧ ಮಾಡುವಷ್ಟು ಮಹಾಪಾಪ ಇನ್ನೊಂದಿಲ್ಲ. ಇದನ್ನು ಗಮನದಲ್ಲಿಟ್ಟು ತಾಯಿ-ತಂದೆಯರು ಮಕ್ಕಳ ಸಾಧನೆ ಒಳ್ಳೆಯದಾಗಲು ಗಮನಹರಿಸಿದರೆ ತಾಯಿ-ತಂದೆಯರ ಸಾಧನೆಯಾಗಿ ಅವರೂ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು !

– ಪರಾತ್ಪರ ಗುರು ಡಾ. ಆಠವಲೆ (೧೮.೧೦.೨೦೨೧)

ಕು. ಪ್ರಾರ್ಥನಾ ಮಹೇಶ ಪಾಠಕ
ಶ್ರೀ ಮಹೇಶ ಪಾಠಕ್
ಸೌ. ಮನಿಷಾ ಪಾಠಕ

೧. ನಮ್ರತೆ

‘ಕು. ಪ್ರಾರ್ಥನಾ ರಾಮನಾಥಿ (ಗೋವಾ) ಯಲ್ಲಿನ ಸನಾತನದ ಆಶ್ರಮದಲ್ಲಿರುವಾಗ ಅನೇಕ ಸಾಧಕರು ಬರುವಾಗ-ಹೋಗುವಾಗ ಅವಳೊಂದಿಗೆ ತಮಾಷೆಯಿಂದ ಮಾತನಾಡುತ್ತಾರೆ. ಆಗ ಅವಳು ಎಲ್ಲರೊಂದಿಗೆ ನಗುತ್ತ ಮತ್ತು ನಮ್ರತೆಯಿಂದ ಮಾತನಾಡುತ್ತಾಳೆ.

೨. ಪ್ರೇಮಭಾವ

ಪ್ರಾರ್ಥನಾ ಅವಳ ಪರಿಚಯದ ವ್ಯಕ್ತಿಯ ಹುಟ್ಟುಹಬ್ಬದ ದಿನ ಅವರಿಗೆ ಕೊಡಲು ಶುಭಾಶಯಪತ್ರಗಳನ್ನು ತಯಾರಿಸುತ್ತಾಳೆ. ಅವಳು ಸಂಬಂಧಪಟ್ಟವರಿಗೆ ಸಂಸ್ಕೃತದಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿ ವಾತಾವರಣವನ್ನು ಪ್ರಸನ್ನ ಮತ್ತು ಆನಂದವನ್ನಾಗಿ ಮಾಡುತ್ತಾಳೆ.

೩. ಬುದ್ಧಿವಂತಿಕೆ

ಅ. ನನ್ನ ಪತ್ನಿ ಸೌ. ಮನಿಷಾ (ಆಧ್ಯಾತ್ಮಿಕ ಮಟ್ಟ ಶೇ. ೬೮) ಮತ್ತು ಮಗಳು ಕು. ಪ್ರಾರ್ಥನಾ ಇವರಿಬ್ಬರೂ ಮಾರ್ಚ್ ೨೦೨೦ ರಲ್ಲಿ ಗೋವಾದ ರಾಮನಾಥಿಯ ಸನಾತನದ ಆಶ್ರಮಕ್ಕೆ ಹೋಗಿದ್ದರು. ಆಗ ನಾನು ಇತರ ಒಂದು ಸೇವಾಕೇಂದ್ರದಲ್ಲಿ ಸೇವೆಯನ್ನು ಮಾಡುತ್ತಿದ್ದೆನು. ನಾನು ನವೆಂಬರ್ ೨೦೨೦ ರಲ್ಲಿ ರಾಮನಾಥಿ ಆಶ್ರಮಕ್ಕೆ ಹೋದೆನು. ಸಂಚಾರಸಾರಿಗೆ ನಿಷೇಧದ ಕಾಲದಲ್ಲಿ ನನ್ನ ಮತ್ತು ಪ್ರಾರ್ಥನಾಳ ಭೇಟಿಯು ೮ ತಿಂಗಳುಗಳ ನಂತರ ಆಯಿತು. ಆ ಮೊದಲು ನಾವು ಸಂಚಾರವಾಣಿಯಿಂದ ಸಂಪರ್ಕದಲ್ಲಿದ್ದೆವು. ಆ ಕಾಲಾವಧಿಯಲ್ಲಿ ಪ್ರಾರ್ಥನಾ ಆಶ್ರಮಜೀವನದೊಂದಿಗೆ ಎಷ್ಟೊಂದು ಹೊಂದಿಕೊಂಡಿದ್ದಳೆಂದರೆ, ಅವಳು ಮಾಯೆಯಲ್ಲಿನ ಇತರ ವಿಷಯಗಳನ್ನು ಮರೆತೇ ಬಿಟ್ಟಿದ್ದಳು. ಅವಳು ನನ್ನನ್ನು ಬಿಟ್ಟು ಇಷ್ಟೊಂದು ದಿನ ಬೇರೆ ಸ್ಥಳದಲ್ಲಿರುವುದು ಇದೇ ಮೊದಲನೇಯದಾಗಿತ್ತು; ಆದರೆ ಅವಳು ‘ನಾನು ಅವಳಿಗೆ ಭೇಟಿಯಾಗಲು ಬರಬೇಕು’, ಎಂಬ ಹಠವನ್ನು ಎಂದಿಗೂ ಮಾಡಲಿಲ್ಲ. ಇತರ ಬಾಲಸಾಧಕರ ತಂದೆಯರು ಆಶ್ರಮಕ್ಕೆ ಬರುತ್ತಿದ್ದರು. ಆಗ ಅವಳು ನನಗೆ, “ನಿಮಗೆ ಯಾವಾಗ ಸಾಧ್ಯವಾಗುತ್ತದೆಯೋ, ಆಗ ನೀವು ಇಲ್ಲಿಗೆ ಬನ್ನಿರಿ. ನಮ್ಮ ಕಾಳಜಿ ಮಾಡಬೇಡಿ. ಇಲ್ಲಿ ಪರಾತ್ಪರ ಗುರು ಡಾಕ್ಟರರಿದ್ದಾರೆ. ಅವರೇ ನಮ್ಮ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ”, ಎನ್ನುತ್ತಿದ್ದಳು.

ಆ. ಕು. ಪ್ರಾರ್ಥನಾ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ನಡೆಯುವ ಸಂಶೋಧನೆಳ ಪ್ರಯೋಗಗಳಿಗೂ ಹೋಗುತ್ತಾಳೆ. ಅಲ್ಲಿ ಅವಳಿಗೆ ಒಂದೇ ಜಾಗದಲ್ಲಿ ತುಂಬಾ ಸಮಯ ಕುಳಿತಿರಬೇಕಾಗುತ್ತದೆ; ಆದರೆ ಆ ಬಗ್ಗೆ ಅವಳು ಎಂದೂ ಬೇಸರ ಬಂದಿದೆ ಎನ್ನಲಿಲ್ಲ ಅಥವಾ ಎಂದಿಗೂ ತಕರಾರು ಮಾಡಲಿಲ್ಲ.

೪. ಆಶ್ರಮ ಜೀವನದೊಂದಿಗೆ ಏಕರೂಪವಾಗುವುದು

ಅವಳು ಆಶ್ರಮದಲ್ಲಿ ಬಂದಾಗಿನಿಂದ ಇಂದಿನವರೆಗೆ ಅವಳ ಜೀವನಶೈಲಿಯನ್ನು ನೋಡಿ, ಅವಳು ತುಂಬಾ ವರ್ಷಗಳಿಂದ ಆಶ್ರಮದಲ್ಲಿಯೇ ಇದ್ದಾಳೆ ಎಂದೆನಿಸುತ್ತದೆ. ಅವಳು ನನಗೆ ಸಂಚಾರವಾಣಿಯಲ್ಲಿ, “ನೀವು ಇಲ್ಲಿಗೆ ಬಂದ ನಂತರ ನಿಮಗೆ ಏನೂ ಕಠಿಣವಾಗಲಾರದು. ನಾನು ನಿಮಗೆ ತಪ್ಪುಗಳನ್ನು ಮಾಡಲು  ಬಿಡುವುದಿಲ್ಲ ಎಂದು ಹೇಳಿದಳು. ಆಗ ನನಗೆ, ಅವಳು ಇದೆಲ್ಲ ತಮಾಷೆಯಿಂದ ಹೇಳುತ್ತಿದ್ದಾಳೆ ಎಂದು ಅನಿಸುತ್ತಿತ್ತು; ಆದರೆ ನಾನು ಆಶ್ರಮಕ್ಕೆ ಬಂದ ನಂತರ, ಅವಳು ನಿಜ ಹೇಳುತ್ತಿದ್ದಳು, ಎಂಬುದು ಗಮನಕ್ಕೆ ಬಂದಿತು. ಅವಳು ನನಗೆ ಚಿಕ್ಕ ಚಿಕ್ಕ ವಿಷಯಗಳ ಕುರಿತು ಅರಿವು ಮಾಡಿಕೊಡುತ್ತಾಳೆ, ಉದಾ.

ಅ. ಲಿಫ್ಟ್‌ನಲ್ಲಿ ಬಿಸಿ ದ್ರವಪದಾರ್ಥಗಳನ್ನು ಒಯ್ಯಬಾರದು.

ಆ. ಧ್ಯಾನಮಂದಿರದ ಹತ್ತಿರದಿಂದ ಹೋಗುವಾಗ ಶಾಂತವಾಗಿ ಮತ್ತು ಮಾತನಾಡದೇ ಹೋಗಬೇಕು.

ಇ. ಮಹಾಪ್ರಸಾದವನ್ನು ಸೇವಿಸುವಾಗ ಭೋಜನಕಕ್ಷೆಯಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳಬಾರದು.

ಈ ರೀತಿ ಅವಳು ನನಗೆ ಅನೇಕ ಅಂಶಗಳನ್ನು ಮತ್ತು ಆಶ್ರಮದಲ್ಲಿನ ಕಾರ್ಯಪದ್ಧತಿಗಳನ್ನು ತಿಳಿಸಿ ಹೇಳಿದಳು. ‘ಪ್ರತಿಯೊಬ್ಬ ಸಾಧಕನ ಹೆಸರು, ಅವನು ಯಾವ ಸೇವೆಯನ್ನು ಮಾಡುತ್ತಾನೆ ? ಅವನ ಸಂಬಂಧಿಕರು ಇಲ್ಲಿ ಇದ್ದಾರೆಯೇ ?’, ಎಂಬುದರ ಎಲ್ಲ ಮಾಹಿತಿಯು ಅವಳಿಗೆ ನೆನಪಿನಲ್ಲಿದೆ.

೫. ಸ್ವಯಂಶಿಸ್ತು

ಅವಳಲ್ಲಿನ ‘ತತ್ಪರತೆ, ಸಮಯ ಪಾಲನೆ, ಸಾತತ್ಯ ಈ ಗುಣಗಳು ನನಗೆ ಕಲಿಯಲು ಸಿಕ್ಕಿದವು. ಅವಳು ಪ್ರತಿದಿನ ತಪ್ಪದೇ ‘ಫಲಕದಲ್ಲಿ ತನ್ನ ತಪ್ಪುಗಳನ್ನು ಬರೆಯುತ್ತಾಳೆ. ‘ಬೆಳಗ್ಗೆ ೭ ಗಂಟೆಗೆ ‘ಆನ್‌ಲೈನ್ ಶಾಲೆಯ ವರ್ಗದಲ್ಲಿ ಉಪಸ್ಥಿತವಿರುವುದು, ೯.೩೦ ಕ್ಕೆ ಶಾಲೆ ಮುಗಿದ ನಂತರ ಸ್ನಾನವನ್ನು ಮಾಡಿ ದತ್ತಮಾಲಾ ಪಠಣಕ್ಕೆ ಹೋಗುವುದು, ನಂತರ ಮಹಾಪ್ರಸಾದವನ್ನು ಸೇವಿಸಿ ಸಾಧಕರಿಗೆ ಚಿಕ್ಕ ಚಿಕ್ಕ ಸೇವೆಗಳಲ್ಲಿ ಸಹಾಯ ಮಾಡುವುದು, ಮಧ್ಯಾಹ್ನ ೪ ಗಂಟೆಗೆ ತಿಂಡಿ ತಿಂದು ಸ್ತೋತ್ರಪಠಣಕ್ಕೆ ಹೋಗುವುದು, ಅನಂತರ ನಾಮಜಪವನ್ನು ಮಾಡಿ ರಾತ್ರಿ ಮಹಾಪ್ರಸಾದ ಸೇವಿಸುವುದು ಈ ಎಲ್ಲ ಕೃತಿ ಮತ್ತು ಅವುಗಳ ಸಮಯವನ್ನೂ ಎಂದೂ ತಪ್ಪಿಸಲಿಲ್ಲ.

‘ಪ್ರತಿಯೊಂದು ಅಂಶವನ್ನು ಸರಿಯಾಗಿ ತಿಳಿದುಕೊಳ್ಳುವುದು ಮತ್ತು ಅದನ್ನು ಆಚರಣೆಯಲ್ಲಿ ತರುವುದು, ಇದಕ್ಕಾಗಿ ಅವಳಿಗೆ ಅತ್ಯಂತ ಕಠಿಣ ಪ್ರಯತ್ನಗಳನ್ನು ಮಾಡಬೇಕಾಗಿದ್ದರೂ, ಅವಳು ಎಂದಿಗೂ ಬೇಸರಪಡಲಿಲ್ಲ. ಅವಳು ಸ್ವಯಂಪ್ರೇರಿತ ಕವಿತೆಗಳನ್ನು ರಚಿಸುತ್ತಾಳೆ. ಅವಳು ಚಿತ್ರಗಳನ್ನು ಬಿಡಿಸುವುದು, ನೃತ್ಯ ಮಾಡುವುದು, ಈ ಕಲೆಗಳನ್ನು ಯಾವುದೇ ಗೃಹಪಾಠವಿಲ್ಲದೇ ಕಲಿಯುತ್ತಿದ್ದಾಳೆ.

೬. ಸಾಧನೆಯ ತೀವ್ರ ತಳಮಳ

ಒಮ್ಮೆ ನಾವು (ನಾನು ಮತ್ತು ಕು. ಪ್ರಾರ್ಥನಾ) ಭೋಜನ ಕಕ್ಷೆಯಲ್ಲಿದ್ದಾಗ ಆಶ್ರಮದಲ್ಲಿನ ಧ್ವನಿವರ್ಧಕದಲ್ಲಿ ಸೂಚನೆಯನ್ನು ಹೇಳುತ್ತಿದ್ದರು. ಆಗ ಪ್ರಾರ್ಥನಾ ತಕ್ಷಣ ಒಂದು ಕೋಣೆಯ ದಿಶೆಯಲ್ಲಿ ಓಡಿ ಹೋದಳು. ನಂತರ ನಾನು ಅವಳಿಗೆ, “ನೀನು ಏಕೆ ಓಡಿ ಹೋದೆ ?” ಎಂದು ಕೇಳಿದೆನು. ಆಗ ಅವಳು, “ಭೋಜನಕಕ್ಷೆಯಲ್ಲಿ ಎಲ್ಲರೂ ಮಾತನಾಡುತ್ತಿರುವುದರಿಂದ ನನಗೆ ಸೂಚನೆ ಕೇಳಿಸುವುದಿಲ್ಲ; ಆದುದರಿಂದ ನಾನು ಓಡಿ ಧ್ವನಿವರ್ಧಕ ಇರುವ ಜಾಗಕ್ಕೆ ಹೋದೆನು” ಎಂದು ಹೇಳಿದಳು. ಪ್ರಾರ್ಥನಾಳಿಗೆ ಸಾಧನೆಯನ್ನು ಮಾಡಲು ತುಂಬಾ ಇಷ್ಟವಾಗುತ್ತದೆ. ಅವಳು ಸಾಧನೆಯ ಸಂದರ್ಭದಲ್ಲಿನ ಪ್ರತಿಯೊಂದು ಕೃತಿಯನ್ನು ಅತ್ಯಂತ ತಳಮಳದಿಂದ ಮಾಡುತ್ತಾಳೆ. ‘ಅದರಲ್ಲಿನ ಸಣ್ಣಪುಟ್ಟ ಅಂಶಗಳನ್ನು ತಿಳಿದುಕೊಳ್ಳುವುದು, ಕೇಳಿ ಕೃತಿಯನ್ನು ಮಾಡುವುದು ಈ ಗುಣಗಳು ಅವಳಲ್ಲಿ ಹುಟ್ಟಿದಾಗಿನಿಂದಲೇ ಇವೆ’, ಎಂದು ಎನಿಸುತ್ತದೆ.

೭. ತಪ್ಪುಗಳ ಬಗ್ಗೆ ಸಂವೇದನಾಶೀಲತೆ

ಒಮ್ಮೆ ಊಟ ಮಾಡುವಾಗ ಓರ್ವ ಸಾಧಕನು ಅವಳಿಗೆ, “ಇಂದು ಊಟ ಬೇಗ ಆಗುತ್ತಿದೆ” ಎಂದನು. ಆಗ ಅವಳು ಆ ಸಾಧಕನಿಗೆ, “ಗಡಿಯಾರದ ಕಡೆಗೆ ನೋಡು !” ಎಂದಳು. ಆಗ ನನಗೆ ಅವಳ ಮಾತಿನಲ್ಲಿ ಒರಟುತನದ ಅರಿವಾಯಿತು. ಆದುದರಿಂದ ನಾನು ಅವಳಿಗೆ ಅದರ ಅರಿವು ಮಾಡಿಕೊಟ್ಟೆನು. ಆಗ ಅವಳು ತಕ್ಷಣ ಆ ಸಾಧಕನಲ್ಲಿ ಕ್ಷಮೆಯನ್ನು ಕೇಳಿದಳು.

೮. ‘ಪರಾತ್ಪರ ಗುರು ಡಾ. ಆಠವಲೆ’, ಸದ್ಗುರುಗಳು ಮತ್ತು ಸಂತರ ಬಗೆಗಿನ ಭಾವ

ಅ. ಅವಳಿಗೆ ಪ.ಪೂ. ಗುರುದೇವರ (ಪರಾತ್ಪರ ಗುರು ಡಾಕ್ಟರರ) ಸತತ ನೆನಪಾಗುತ್ತಿರುತ್ತದೆ. ಪ.ಪೂ. ಗುರುದೇವರ ನೆನಪಾಗಿ ಅವಳಿಗೆ ಭಾವಜಾಗೃತಿಯಾಗುತ್ತದೆ. ‘ಪ.ಪೂ. ಗುರುದೇವರನ್ನು ಭೇಟಿಯಾಗಿ ಎಷ್ಟು ದಿನಗಳಾದವು ?’, ಎಂದು ಅವಳು ಆ ದಿನಗಳನ್ನು ಎಣಿಸುತ್ತಿರುತ್ತಾಳೆ.

ಆ. ಸಂತರು ಮತ್ತು ಸದ್ಗುರುಗಳೊಂದಿಗೆ ಮಾತನಾಡುವಾಗ ಅವಳ ಮಾತಿನಿಂದ ಅವರ ಬಗ್ಗೆ ತುಂಬಾ ಗೌರವವಿರುವುದು ಅರಿವಾಗುತ್ತದೆ.

– ಶ್ರೀ. ಮಹೇಶ ಪಾಠಕ (ಕು. ಪ್ರಾರ್ಥನಾಳ ತಂದೆ, ಆಧ್ಯಾತ್ಮಿಕ ಮಟ್ಟ ಶೇ. ೬೮ ರಷ್ಟು), ಪುಣೆ (೨೭.೯.೨೦೨೧)

‘ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರದಲ್ಲಿನ ಕಣ್ಣುಗಳು ಅಲುಗಾಡುತ್ತಿದ್ದು ಅವರು ಎಲ್ಲ ಸಾಧಕರ ಕಡೆಗೆ ಕೃಪಾದೃಷ್ಟಿಯಿಂದ ನೋಡುತ್ತಿದ್ದಾರೆ’, ಎಂದೆನಿಸುವುದು

‘೭.೭.೨೦೨೧ ರಂದು ಸನಾತನದ ಶ್ರದ್ಧಾಸ್ಥಾನವಾಗಿರುವ ಪ.ಪೂ. ಭಕ್ತರಾಜ ಮಹಾರಾಜರ ದಿನಾಂಕಕ್ಕನುಸಾರ ಜನ್ಮೋತ್ಸವವಿತ್ತು. ಅಂದು ನಾನು ರಾಮನಾಥಿ ಆಶ್ರಮದಲ್ಲಿನ ಧ್ಯಾನಮಂದಿರದಲ್ಲಿ ‘ಜ್ಯೋತಸೆ ಜ್ಯೋತ ಜಗಾವೋ | ಸದ್ಗುರು ಜ್ಯೋತಸೆ ಜ್ಯೋತ ಜಗಾವೋ |……’ ಈ ಸದ್ಗುರುಗಳ ಆರತಿಯನ್ನು ಹೇಳುತ್ತಿದ್ದೆ. ಆರತಿಯನ್ನು ಹೇಳುತ್ತಿರುವಾಗ ನಾನು ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರದ ಕಡೆಗೆ ನೋಡುತ್ತಿದ್ದೆ. ಆಗ ನನಗೆ ‘ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರದಲ್ಲಿ ಏನೋ ಚಲನವಲನವಾಗುತ್ತಿದೆ’, ಎಂದೆನಿಸಿತು. ನನಗೆ ‘ಛಾಯಾಚಿತ್ರದಲ್ಲಿನ ಪ.ಪೂ. ಭಕ್ತರಾಜ ಮಹಾರಾಜರ ಕಣ್ಣುಗಳು ಅಲುಗಾಡುತ್ತಿದ್ದು ಅವರು ಎಲ್ಲ ಸಾಧಕರ ಕಡೆಗೆ ಕೃಪಾದೃಷ್ಟಿಯಿಂದ ನೋಡುತ್ತಿದ್ದಾರೆ’, ಎಂದೆನಿಸಿತು. ಹಾಗೆಯೇ ನನಗೆ ‘ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರದಲ್ಲಿ ಅವರ ವಿಶುದ್ಧ ಚಕ್ರದ ಜಾಗದಲ್ಲಿ (ಕೊರಳಿನ ಹತ್ತಿರ) ಚಲನವಲನ ಆಗುತ್ತಿದೆ’, ಎಂಬುದೂ ಕಾಣಿಸಿತು. ಈ ದೃಶ್ಯವನ್ನು ನೋಡಿ ನನಗೆ ತುಂಬಾ ಆನಂದವಾಯಿತು ಮತ್ತು ನನ್ನ ಭಾವಜಾಗೃತವಾಯಿತು.

ಈ ಅನುಭೂತಿ ಕೊಟ್ಟಿರುವುದರಿಂದ ನಾನು ಭಗವಾನ ಶ್ರೀಕೃಷ್ಣ, ಪ.ಪೂ. ಭಕ್ತರಾಜ ಮಹಾರಾಜರ ಮತ್ತು ಪ.ಪೂ. ಗುರುದೇವರ (ಪರಾತ್ಪರ ಗುರು ಡಾ. ಆಠವಲೆ) ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.

– ಗುರುದೇವರ ಚರಣಗಳ ಮೇಲಿನ ಆನಂದದ ಹೂವು,

ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ, ಆಧ್ಯಾತ್ಮಿಕ ಮಟ್ಟ ಶೇ. ೬೭ ರಷ್ಟು), ಪುಣೆ (೧೫.೭.೨೦೨೧)