ಪರಾತ್ಪರ ಗುರು ಡಾ. ಆಠವಲೆಯವರ ಉಚ್ಚಆಧ್ಯಾತ್ಮಿಕ ಸ್ಥಿತಿಯನ್ನು ಪ್ರತಿಬಿಂಬಿಸುವ ಅವರ ‘ಪ್ರಾರ್ಥನೆ’ಯ ಸಂದರ್ಭದಲ್ಲಿನ ವಿಚಾರಗಳು

‘ಪ್ರಾರ್ಥನೆ’ಯೂ ಸ್ವೇಚ್ಛೆಯಾಗಿರುವುದರಿಂದ ಅದನ್ನಾದರೂ ಏಕೆ ಮಾಡಬೇಕು ?

ಪರಾತ್ಪರ ಗುರು ಡಾ. ಆಠವಲೆ

‘ನಾನು ಇದುವರೆಗೆ ಭಗವಂತನಿಗೆ ಎಂದಿಗೂ ಯಾವುದಕ್ಕೂ, ಅಷ್ಟೇ ಅಲ್ಲದೇ ಹಿಂದೂ ರಾಷ್ಟ್ರಕ್ಕಾಗಿಯೂ ಒಮ್ಮೆಯೂ ಪ್ರಾರ್ಥನೆ ಮಾಡಲಿಲ್ಲ; ಏಕೆಂದರೆ ‘ಭಗವಂತನು ಯೋಗ್ಯವಾದುದನ್ನೇ ಮಾಡುತ್ತಾನೆ’, ಎಂದು ನನಗೆ ಶ್ರದ್ಧೆ ಇದೆ; ಹಾಗಾಗಿ ಗುರುಕೃಪಾಯೋಗದಲ್ಲಿನ ಅಷ್ಟಾಂಗ ಸಾಧನೆಯಲ್ಲಿ ಪ್ರತ್ಯೇಕವಾಗಿ ಪ್ರಾರ್ಥನೆಗಳನ್ನು ಕಲಿಸುವುದಿಲ್ಲ. ಕೇವಲ ಭಾವಜಾಗೃತಿ ಮತ್ತು ಅಹಂ ನಿರ್ಮೂಲನೆ ಮಾಡುವ ಏಕೈಕ ಮಾಧ್ಯಮವೆಂದು ಪ್ರಾರ್ಥನೆ ಮಾಡಲು ಹೇಳಲಾಗುತ್ತದೆ.

ನಾವು ಅರ್ಹರಾಗಿದ್ದರೆ ದೇವರು ಕೊಟ್ಟೇ ಕೊಡುತ್ತಾನೆ ಮತ್ತು ಇಲ್ಲದಿದ್ದರೆ ನಾವು ಪ್ರಾರ್ಥನೆ ಮಾಡಿದರೂ ಕೊಡುವುದಿಲ್ಲ. ಹಾಗಾದರೆ ಪ್ರಾರ್ಥನೆ ಏಕೆ ಮಾಡಬೇಕು ? ಪ್ರಾರ್ಥನೆ ಮಾಡುವುದು, ಇದೂ ಒಂದು ಹಂತದ ಸ್ವೇಚ್ಛೆಯೇ ಆಗುತ್ತದೆ. ಸಾಧನೆಯಲ್ಲಿ ಸ್ವೇಚ್ಛೆ, ಪರೇಚ್ಛೆ ಮತ್ತು ಈಶ್ವರೇಚ್ಛೆ ಇಂತಹ ಹಂತಗಳಿರುತ್ತವೆ. ಎಲ್ಲವೂ ಈಶ್ವರೇಚ್ಛೆಯಂತೆ ಆಗುವುದರಿಂದ ಪ್ರಾರ್ಥನೆಯಾದರೂ ಏಕೆ ಮಾಡುವುದು ?

– (ಪರಾತ್ಪರ ಗುರು) ಡಾ. ಆಠವಲೆ (೮.೧.೨೦೨೨)

ಸಾಧನೆಯಲ್ಲಿ ಸ್ಥೂಲದಲ್ಲಿನ ತಪ್ಪುಗಳನ್ನು ಹೇಳುವ ಮಹತ್ವ !

‘ಸಾಧನೆಯಲ್ಲಿ ಮನಸ್ಸಿನ ಮಟ್ಟದಲ್ಲಿ ನಡೆಯುವ ಅಯೋಗ್ಯ ವಿಚಾರಪ್ರಕ್ರಿಯೆಯು ಹೆಚ್ಚು ಅಡ್ಡಿಯಾಗುತ್ತಿರುತ್ತದೆ. ಅಂತರ್ಮುಖತೆಯ ಅಭಾವದಿಂದಾಗಿ, ಸಾಧಕನಿಗೆ ತನ್ನ ತಪ್ಪುಗಳು ತಿಳಿಯುವುದಿಲ್ಲ ಮತ್ತು ಮನಸ್ಸಿನ ಮಟ್ಟದ ಆ ತಪ್ಪುಗಳಿರುವುದರಿಂದ ಅದು ಇತರರ ಗಮನಕ್ಕೆ ಬರುವುದಿಲ್ಲ. ಈ ವಿಚಾರಪ್ರಕ್ರಿಯೆಯು ಅಯೋಗ್ಯ ಕೃತಿಯ ಮೂಲಕ ವ್ಯಕ್ತವಾಗುತ್ತಿರುತ್ತದೆ. ಅದರಿಂದ, ಈ ಅಯೋಗ್ಯ ಕೃತಿಯ ಅರಿವು ಸಂಬಂಧಿತರಿಗೆ ಮಾಡಿಕೊಟ್ಟರೆ, ಅದು ಅವರ ಅಯೋಗ್ಯ ವಿಚಾರ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ, ಉದಾ. ಒಬ್ಬ ಸಾಧಕನ ಮನಸ್ಸಿನಲ್ಲಿ ಇನ್ನೊಬ್ಬ ಸಾಧಕನ ಬಗ್ಗೆ ಇರುವ ಪೂರ್ವಗ್ರಹವು ಇತರರ ಗಮನಕ್ಕೆ ಬರುವುದಿಲ್ಲ; ಆದರೆ ಒಂದು ಸಂದರ್ಭದಲ್ಲಿ ‘ಸಾಧಕನೊಬ್ಬನು ಸಾಧ್ಯವಿದ್ದರೂ ಇನ್ನೊಬ್ಬ ಸಾಧಕನಿಗೆ ಸಹಾಯ ಮಾಡಲಿಲ್ಲ’ ಎಂಬ ಅಯೋಗ್ಯ ಕೃತಿಯ ಅರಿವು ಆ ಸಾಧಕನಿಗೆ ಮಾಡಿಕೊಟ್ಟರೆ ‘ನಾನು ಆ ಸಾಧಕನಿಗೆ ಪೂರ್ವಗ್ರಹದಿಂದ ಸಹಾಯ ಮಾಡಲಿಲ್ಲ’ ಎಂದು ಅರಿವಾಗಬಹುದು. ಅದರಿಂದ, ಸಾಧನೆಯಲ್ಲಿ ಸ್ಥೂಲದಲ್ಲಿ ಆಗುತ್ತಿರುವ ತಪ್ಪುಗಳನ್ನು ಸಂಬಂಧಿತನಿಗೆ ಹೇಳುವುದು ಅವನ ಸಾಧನೆಗಾಗಿ ಅತ್ಯಂತ ಮಹತ್ವದ್ದಾಗಿದೆ.

– (ಪರಾತ್ಪರ ಗುರು) ಡಾ. ಆಠವಲೆ (೩೦.೧೨.೨೦೨೧)

ಸತ್ಸೇವೆ ಕೇಳುವ ಪ್ರತಿಯೊಬ್ಬನಿಗೆ ಸೇವೆಯನ್ನು ನೀಡುವುದು ಜವಾಬ್ದಾರ ಸಾಧಕರ ಸೇವೆಯಾಗಿದೆ !

‘ಸಾಧನೆಯಲ್ಲಿ ಹೊಸದಾಗಿ ಬಂದಿರುವ ಕೆಲವರು ಸತ್ಸೇವೆ ಮಾಡಲು ಇಚ್ಛಿಸುತ್ತಾರೆ. ಅಂತಹವರಿಗೆ ಸತ್ಸೇವೆಯ ಅವಕಾಶ ನೀಡುವುದು ಜವಾಬ್ದಾರ ಸಾಧಕರ ಕರ್ತವ್ಯವಾಗಿದೆ. ಸತ್ಸೇವೆಯನ್ನು ಕೇಳಿದ ನಂತರವೂ ಅದನ್ನು ನೀಡದಿರುವುದು ಜವಾಬ್ದಾರ ಸಾಧಕರ ಸಮಷ್ಟಿ ಸಾಧನೆಯ ದೃಷ್ಟಿಯಿಂದ ಅಯೋಗ್ಯವಾಗಿದೆ.  ಸತ್ಸೇವೆಯಿಂದಾಗಿ ಸಾಧಕನಿಗೆ ಸತ್‌ನಲ್ಲಿರುವ ಅಭ್ಯಾಸವಾಗುತ್ತದೆ ಮತ್ತು ಅವನ ಸಾಧನೆಯ ಆಸಕ್ತಿ ಹೆಚ್ಚಾಗುತ್ತದೆ’.

– (ಪರಾತ್ಪರ ಗುರು) ಡಾ.  ಆಠವಲೆ (೧೪.೧೧.೨೦೨೧)

ಪೂರ್ಣವೇಳೆ ಸಾಧನೆ ಮಾಡುವ ನಿರ್ಧಾರವು ಸಾಧಕನ ಜೀವನದಲ್ಲಿನ ಸರ್ವೋತ್ತಮ ನಿರ್ಧಾರವಾಗಿರುತ್ತದೆ. ಸಾಧನೆಗಾಗಿ ಅಥವಾ ಗುರುಗಳಿಗಾಗಿ ಸರ್ವಸ್ವವನ್ನು ತ್ಯಜಿಸುವ ಸಾಮರ್ಥ್ಯ ಎಷ್ಟು ಜನರಲ್ಲಿರುತ್ತದೆ ?

– (ಪರಾತ್ಪರ ಗುರು) ಡಾ.  ಆಠವಲೆ (೧೪.೧೧.೨೦೨೧)