ಯದ್ಧಕಾಲದಲ್ಲಿ ನೆರವಾಗುವ ಹಾಗೂ ಆಪತ್ಕಾಲದಿಂದ ಬದುಕುಳಿಸುವ ಈ ಕೃತಿಯನ್ನು ಈಗಿನಿಂದಲೇ ಮಾಡಿರಿ !

(ಸದ್ಗುರು) ಡಾ. ಮುಕುಲ ಗಾಡಗೀಳ

‘ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭವಾಗಿದೆ. ಉಕ್ರೇನ್‌ನ್ನಿನ ಜನರು ‘ಯುದ್ಧದ ಬೇಗೆ ಹೇಗಿರುತ್ತದೆ ?, ಎಂಬುದು ಅನುಭವಿಸುತ್ತಿರುವ ಬಗ್ಗೆ ನಾವು ಪ್ರತಿದಿನ ಬರುವ ವಾರ್ತೆಗಳಲ್ಲಿ ಓದುತ್ತಿದ್ದೇವೆ. ಮುಂದೆ ಈ ಯುದ್ಧದಲ್ಲಿ ಇತರ ದೇಶಗಳೂ ಸೇರಿಕೊಂಡರೆ ಮೂರನೇ ಮಹಾಯುದ್ಧ ಆರಂಭವಾಗಲು ಹೆಚ್ಚು ಸಮಯ ತಗಲುವುದಿಲ್ಲ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಉಕ್ರೇನ್‌ನಲ್ಲಿನ ಜನರು ಮೂರನೇ ಯುದ್ಧವನ್ನು ಎದುರಿಸಲು ಸ್ವಲ್ಪವಾದರೂ ಸಿದ್ಧರಾಗಿರ ಬಹುದು. ಅಲ್ಲಿಯ ಸೈನ್ಯವು ಜನರಿಗೆ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವ ತರಬೇತಿಯನ್ನು ನೀಡುತ್ತಿದೆ. ಆದ್ದರಿಂದ ಅವರಲ್ಲಿನ ಮನೋಬಲ ಹೆಚ್ಚಾಗಿ ಆ ಜನರು ರಷ್ಯಾದ ಸೈನ್ಯನೊಂದಿಗೆ ಹೋರಾಡುತ್ತಿದ್ದಾರೆ. ಇದರಿಂದ ರಷ್ಯಾಗೆ ಉಕ್ರೇನ್‌ಅನ್ನು ವಶಪಡಿಸಿಕೊಳ್ಳಲು ಕಷ್ಟವಾಗುತ್ತಿದೆ. ಉಕ್ರೇನ್‌ನಲ್ಲಿನ ಜನರ ಈ ಸಿದ್ಧತೆಯು ಶ್ಲಾಘನೀಯವಾಗಿದ್ದರೂ, ಅದು ಕೇವಲ ಶಾರೀರಿಕ ಹಾಗೂ ಮಾನಸಿಕ ಸ್ತರದಲ್ಲಿದೆ. ಎಲ್ಲಕ್ಕಿಂತ ಮಹತ್ವದ ಸಿದ್ಧತೆ ಎಂದರೆ ಆಧ್ಯಾತ್ಮಿಕ ಸ್ತರದ ಸಿದ್ಧತೆ !

ಭಾರತದ ಜನರು ರಷ್ಯಾ-ಉಕ್ರೇನ್ ಯುದ್ಧದ ವಾರ್ತೆಗಳಿಂದ ‘ಪ್ರತ್ಯಕ್ಷವಾಗಿ ಯದ್ಧವನ್ನು ಹೇಗೆ ಎದುರಿಸಬೇಕಾಗಬಹುದು ?, ಎಂಬುದನ್ನು ಕಲಿಯಬೇಕು. ಮೂರನೇ ಮಹಾಯುದ್ಧವಾದರೆ ಅದು ಅನೇಕ ತಿಂಗಳುಗಟ್ಟಲೆ ನಡೆಯಲಿದೆ. ಆದ್ದರಿಂದ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳಲು ನಿಖರವಾಗಿ ಯಾವ ಅಂಶಗಳತ್ತ ಗಮನ ಹರಿಸಬೇಕು, ಎಂಬುದನ್ನು ಇಲ್ಲಿ ನೀಡಲಾಗಿದೆ. ಈ ಸಿದ್ಧತೆ ಇಂದಿನಿಂದಲೇ ಗಾಂಭೀರ್ಯದಿಂದ ಮಾಡಿರಿ !

೧. ಶಾರೀರಿಕ ಸ್ತರದ ಸಿದ್ಧತೆ

ಅ. ವಿಪತ್ತನ್ನು ಎದುರಿಸಲು ನಮ್ಮ ಶರೀರ ಸಧೃಢವಾಗಿರಬೇಕು. ಅದಕ್ಕಾಗಿ ಪ್ರತಿದಿನ ನಿಯಮಿತವಾಗಿ ೩೦ ನಿಮಿಷವಾದರೂ ವ್ಯಾಯಾಮ ಮಾಡಿ. ಎಲ್ಲ ಅಂಗಗಳನ್ನು ಶಕ್ತಿಶಾಲಿಯನ್ನಾಗಿಸಲು ಸುಂದರ ವ್ಯಾಯಾಮ ಪದ್ದತಿಯೆಂದರೆ ಸೂರ್ಯನಮಸ್ಕಾರ ಮಾಡುವುದು. ಇದನ್ನು ನಿಯಮಿತವಾಗಿ ೧೨ ಸಲವಾದರೂ ಮಾಡಬೇಕು. ಪ್ರತಿದಿನ ಸ್ವಲ್ಪವಾದರೂ ಓಡುವ ವ್ಯಾಯಾಮ ವಿಧ ಮಾಡಿರಿ. ನಮಗೆ ೫-೧೦ ನಿಮಿಷಗಳಾದರೂ ಓಡಲು ಬರಬೇಕು. ನಮಗೆ ಸಾಧ್ಯವಾಗುವಷ್ಟು ವ್ಯಾಯಾಮವನ್ನು ನಿಯಮಿತವಾಗಿ ಮಾಡಬೇಕು ಹಾಗೂ ಅದನ್ನು ಪ್ರತಿದಿನ ಸ್ವಲ್ಪಸ್ವಲ್ಪ ಹೆಚ್ಚಿಸಬೇಕು.

ಆ. ನಿಯಮಿತವಾಗಿ ಪ್ರಾಣಾಯಾಮ ಮಾಡಿ. ಅದು ಗೊತ್ತಿಲ್ಲದಿದ್ದರೆ ಕಲಿತುಕೊಳ್ಳಿ. ಪ್ರಾಣಾಯಾಮ ಮಾಡುವುದರಿಂದ ಉಸಿರನ್ನು ಹಿಡಿದಿಟ್ಟುಕೊಳ್ಳುವ (ಕುಂಭಕ ಮಾಡುವ) ಅಭ್ಯಾಸವಾಗುತ್ತದೆ. ಈ ಅಭ್ಯಾಸವು ನೀರಿನಿಂದ ಯಾರನ್ನಾದರೂ ಕಾಪಾಡಲು, ಹೊಗೆ ಇದ್ದಲ್ಲಿ ಅಥವಾ ಅನಿಲ ಸೋರಿಕೆಯಾದಲ್ಲಿ ನಮಗೆ ಉಪಯೋಗವಾಗುವುದು.

ಇ. ಈಜಲು ಬರಬೇಕು, ಇದು ಅತ್ಯಂತ ಅಗತ್ಯವಿದೆ. ನೀರಿನಲ್ಲಿ ಬಿದ್ದಿರುವ ಇನ್ನೊಬ್ಬರನ್ನು ಅಥವಾ ನಮ್ಮ ಜೀವವನ್ನು ಉಳಿಸಿಕೊಳ್ಳಲು ಇದರ ಉಪಯೋಗವಾಗುವುದು.

ಈ. ಯುದ್ಧದ ಸಮಯದಲ್ಲಿ ಆಹಾರ ಸಿಗುವುದು ಕಷ್ಟವಿರುತ್ತದೆ. ಆಗ ನಮಗೆ ೧-೨ ದಿನ ಉಪವಾಸವೂ ಇರಬೇಕಾಗುತ್ತದೆ. ಅದನ್ನು ಅಭ್ಯಾಸ ಮಾಡಿಕೊಳ್ಳಲು ಏನೂ ತಿನ್ನದೇ-ಕುಡಿಯದೇ ಒಂದು ಹೊತ್ತಾದರೂ ಉಪವಾಸ ಇರುವ ಅಭ್ಯಾಸವನ್ನು ಮಾಡಿ ಕೊಳ್ಳಬೇಕು. ಇದಕ್ಕಾಗಿ ವಾರದಲ್ಲಿ ಒಂದು ದಿನ ಅದರ ಅಭ್ಯಾಸ ಮಾಡಿಕೊಳ್ಳಿ. ಮುಂದೆ ‘ಇಡೀ ದಿನ ಕೇವಲ ನೀರು ಕುಡಿದು ಉಪವಾಸ ಇರಬಹುದೇ ?’, ಎಂಬುದನ್ನೂ ನೋಡಿರಿ.

ಉ. ನಮಗೆ ಕೆಲವು ಶಾರೀರಿಕ ತೊಂದರೆಗಳಿದ್ದರೆ, ಸಮಯದಲ್ಲೇ ಅದನ್ನು ವೈದ್ಯರು ಅಥವಾ ಆಧುನಿಕ ವೈದ್ಯರಿಗೆ (ಡಾಕ್ಟರ್) ತೋರಿಸಿ ದೂರ ಮಾಡಿರಿ. ಸ್ವಲ್ಪ ನೋವಿದ್ದರೂ ಅದರ ಕಡೆಗೆ ನಿರ್ಲಕ್ಷಿಸಬಾರದು. ೪೦ ವರ್ಷ ಮತ್ತು ಅದಕ್ಕೂ ಹೆಚ್ಚು ವಯಸ್ಸಿನ ವ್ಯಕ್ತಿಗಳು ತಮ್ಮ ಸಾಮಾನ್ಯ ವೈದ್ಯಕೀಯ, ಕಣ್ಣಿನ ಮತ್ತು ಹಲ್ಲಿನ ಪರೀಕ್ಷೆಯನ್ನು (ಡಿouಣiಟಿe ಛಿheಛಿಞuಠಿ) ಮಾಡಿಸಿಕೊಳ್ಳಬೇಕು. ಮುಂದೆ ಯುದ್ಧಕಾಲದಲ್ಲಿ ವೈದ್ಯಕೀಯ ಸಹಾಯವು ಸುಲಭವಾಗಿ ದೊರಕುವುದಿಲ್ಲ.

ಊ. ಮೇಲಿನ ಪರೀಕ್ಷೆಯಲ್ಲಿ ಕಂಡುಬಂದ ವ್ಯಾಧಿಗಳ ಮೇಲೆ ಅವಶ್ಯಕತೆಗನುಸಾರವಾಗಿ ಮುಂದಿನ ಪರೀಕ್ಷೆಗಳನ್ನು ಮತ್ತು ಚಿಕಿತ್ಸೆಗಳನ್ನು ಮಾಡಿ ತಮ್ಮ ವೈದ್ಯಕೀಯ ಸ್ಥಿತಿಯನ್ನು ಸಾಧ್ಯವಾದಷ್ಟು ಸಾಮಾನ್ಯ ಮಾಡಿಕೊಳ್ಳಬೇಕು, ಉದಾ. ರಕ್ತದಲ್ಲಿನ ಜೀವಸತ್ವಗಳ ಪ್ರಮಾಣವು ಅವಶ್ಯಕತೆಗಿಂತಲೂ ಕಡಿಮೆ ಇದ್ದರೆ, ಅದು ಮೊದಲಿನಂತೆ ಆಗುವ ಸಲುವಾಗಿ ಅದಕ್ಕೆ ಸಂಬಂಧಿಸಿದ ಜೀವಸತ್ವಗಳಿಗೆ ಪೂರಕವಾದ ಆಹಾರ ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುವುದು ಇತ್ಯಾದಿ.

ಎ. ನಮಗಾದ ಕಾಯಿಲೆಗಳು ‘ಅವು ಎಂದು ಗಮನಕ್ಕೆ ಬಂದವು ?’, ಅದರ ಕಾರಣಗಳು, ಅವುಗಳಿಗೆ ತೆಗೆದುಕೊಳ್ಳುತ್ತಿರುವ ವೈದ್ಯಕೀಯ ಚಿಕಿತ್ಸೆಗಳು, ಪೂರಕವಾದ ಆಹಾರ, ಪಥ್ಯ ಇತ್ಯಾದಿಗಳನ್ನು ಒಂದು ಪುಸ್ತಕದಲ್ಲಿ ನೋಂದಣಿ ಮಾಡಿಡಬೇಕು. ‘ಯಾವುದೇ ಒಂದು ಕಾಯಿಲೆಗೆ ಸಂಬಂಧಿಸಿದ ಪರೀಕ್ಷೆಯನ್ನು ಪುನಃ ಯಾವಾಗ ಮಾಡಬೇಕು ?’, ಇದರ ನೋಂದಣಿಯನ್ನು ಪುಸ್ತಕದಲ್ಲಿ ಮಾಡಬೇಕು. ನೋಂದಣಿಯಲ್ಲಿ ನಮಗೆ ಯಾವುದಾದರೊಂದು ಔಷಧಿ, ಪದಾರ್ಥ, ಆಹಾರಪದಾರ್ಥ, ಧೂಳು ಇವುಗಳಲ್ಲಿನ ಯಾವ ಘಟಕದ ಅಲರ್ಜಿ ಇದ್ದರೆ ಅದರ ನೋಂದಣಿಯನ್ನು ಮಾಡಿಡಬೇಕು.

ಏ. ನಮ್ಮ ಕಾಯಿಲೆಗೆ ಸಂಬಂಧಿಸಿದ ವೈದ್ಯಕೀಯ ಕಾಗದಪತ್ರಗಳು ಹಾಗೂ ವರದಿಗಳು ಇವುಗಳ ಕಡತವನ್ನು (ಫೈಲ್) ಮಾಡಿಡಬೇಕು. ಒಂದು ಕಾಯಿಲೆಯ ಕಾಗದಪತ್ರ ಹಾಗೂ ವರದಿಗಳು ಒಟ್ಟಿಗಿರಬೇಕು ಮತ್ತು ಅದರ ಕ್ರಮವನ್ನು ದಿನಾಂಕಾನುಸಾರವಾಗಿ ಜೋಡಿಸಬೇಕು. ಇತ್ತೀಚಿನ ಕಾಗದಪತ್ರಗಳನ್ನು ಎಲ್ಲಕ್ಕಿಂತಲೂ ಮೇಲಿಡಬೇಕು. ಅದೇ ರೀತಿಯಲ್ಲಿ ‘ಹಿಂದಿನ ೩ ವರ್ಷಗಳ ಕಾಗದಪತ್ರಗಳನ್ನು ಒಂದು ಕಡತದಲ್ಲಿ ಮತ್ತು ಅದಕ್ಕಿಂತಲೂ ಹಳೆಯ ಕಾಗದ ಪತ್ರಗಳನ್ನು ಇನ್ನೊಂದು ಕಡತದಲ್ಲಿ’, ಈ ರೀತಿಯಲ್ಲಿ ಇಡಬಹುದು. ಸಾಧ್ಯವಿದ್ದಲ್ಲಿ ಮಹತ್ವದ ಕಾಗದಪತ್ರ ಮತ್ತು ವರದಿಗಳನ್ನು ಸಂಚಾರವಾಣಿಯಿಂದ ಛಾಯಾಚಿತ್ರ ತೆಗೆಯಬೇಕು ಮತ್ತು ಅದನ್ನು ಸಂಚಾರವಾಣಿ, ‘ಪೆನ್‌ಡ್ರೈವ್’ ಇತ್ಯಾದಿಗಳಲ್ಲಿ ಸುರಕ್ಷಿತವಾಗಿಡಬೇಕು.

ಐ. ರಕ್ತದೊತ್ತಡ, ಮಧುಮೇಹ ಇಂತಹ ದೀರ್ಘಕಾಲಾವಧಿಗಾಗಿ (ಒಂದೊಮ್ಮೆ ಜೀವಮಾನವಿಡಿ) ಔಷಧೋಪಚಾರವನ್ನು ಮುಂದುವರೆಸಬೇಕಾದಂತಹ ಕಾಯಿಲೆಗಳಿದ್ದರೆ ಆಧುನಿಕ ವೈದ್ಯರ ಸಲಹೆಯಂತೆ ಅವುಗಳ ಔಷಧಿಯನ್ನು ಸಂಗ್ರಹಿಸಿಡಬೇಕು. ಕನ್ನಡಕ, ಕಿವಿಯಂತ್ರ ಇವುಗಳಂತಹ ದಿನನಿತ್ಯದ ಜೀವನಕ್ಕಾಗಿ ನಮಗೆ ಅತ್ಯಾವಶ್ಯಕವಾಗಿರುವ ಪ್ರತಿಯೊಂದು ಉಪಕರಣಗಳ ಒಂದು ಸಂಖ್ಯೆ ಹೆಚ್ಚಿನದು ನಮ್ಮಲ್ಲಿರಬೇಕು ಹಾಗೂ ಆ ಉಪಕರಣಕ್ಕಾಗಿ ಬೇಕಾಗುವ ‘ಬ್ಯಾಟರಿ’ ಇತ್ಯಾದಿಗಳ ಅವಶ್ಯತೆ ಇರುವಷ್ಟು ಸಂಗ್ರಹವು ನಮ್ಮಲ್ಲಿರಬೇಕು. ನಮಗೆ ಚಿಕಿತ್ಸೆಗಾಗಿ ಬೇಕಾಗುವ ಔಷಧಗಳು, ಉಪಕರಣಗಳು ಇವುಗಳ ಒಂದು ‘ಎಮರ್ಜನ್ಸಿ ಕಿಟ್’ ಸಿದ್ಧಪಡಿಸಿಡಬೇಕು. ಅದರಲ್ಲಿ ಕಡಿಮೆಯೆಂದರೆ ೧೫ ದಿನಕ್ಕೆ ಸಾಕಾಗುವಷ್ಟು ಔಷಧಿಗಳಿರಬೇಕು. ತುರ್ತು ಪರಿಸ್ಥಿತಿಯಲ್ಲಿ ನಾವು ಆ ‘ಕಿಟ್’ ನ್ನು ತಕ್ಷಣ ತೆಗೆದುಕೊಂಡು ಹೋಗಬಹುದು.

೨. ಮಾನಸಿಕ ಸ್ತರದ ಸಿದ್ಧತೆಗಳು

ಅ. ‘ಯಾವುದಾದರೊಂದು ಕಠಿಣ ಪ್ರಸಂಗವನ್ನು ನಾವು ಎದರಿಸಬಹುದಾ ?’, ಇದನ್ನು ನೋಡಬೇಕು. ಇನ್ನೊಬ್ಬರ ಮೇಲೆ ಒಂದು ಕಠಿಣ ಪ್ರಸಂಗ ಬಂದರೆ ‘ಆ ಸಮಯದಲ್ಲಿ ನಾವು ಏನು ಮಾಡುತ್ತೇವೆ ?’, ಎಂಬ ಪ್ರಶ್ನೆಯನ್ನು ನಾವೇ ನಮಗೆ ಕೇಳಿ ಆ ಪ್ರಸಂಗದ ಅಭ್ಯಾಸವನ್ನು ಮಾಡಬೇಕು. ಅದರಿಂದ ಮನಸ್ಸಿನ ಸಿದ್ಧತೆಯಾಗುತ್ತದೆ ಮತ್ತು ನಮ್ಮ ಮೇಲೆ ಆ ರೀತಿಯಾದ ಪ್ರಸಂಗವು ಬಂದರೆ ನಮ್ಮಿಂದ ಆ ಸಮಯದಲ್ಲಿ ಬೇಗ ಬೇಗನೆ ಕೃತಿಗಳಾಗುತ್ತವೆ.

ಆ. ನಮಗೆ ಅಥವಾ ಇತರರಿಗೆ ಬಹಳಷ್ಟು ಪ್ರಮಾಣದಲ್ಲಿ ಕೊಯ್ದ ಗಾಯವಾದರೆ ಅಥವಾ ಸುಟ್ಟಿದರೆ, ನಾವು ಅದನ್ನು ಸಹಿಸಬಹುದಾ ? ಆ ಪ್ರಸಂಗದಲ್ಲಿ ನಾವು ಸುಮ್ಮನೆ ನರಳುತ್ತೇವಾ, ಭಯಭೀತರಾಗುತ್ತೇವಾ ಅಥವಾ ಅದರ ಮೇಲೆ ಉಪಚಾರವೆಂದು ಏನಾದರೂ ಕೃತಿಯನ್ನು ಮಾಡುತ್ತೇವಾ ? ‘ಯಾರಿಗಾದರೂ ಅಪಘಾತವಾಗಿದ್ದನ್ನು ನೋಡಿದರೆ ನಾವು ಅವರಿಗೆ ಸಹಾಯ ಮಾಡಲು ಧಾವಿಸುತ್ತೇವಾ ?’, ಇದನ್ನು ನೋಡಬೇಕು. ಇಂತಹ ಸಮಯದಲ್ಲಿ ನಾವು ಜವಾಬ್ದಾರಿ ವಹಿಸಿ ಕೃತಿ ಮಾಡಬೇಕು.

ಇ. ಮನೆಯಲ್ಲಿ ಅಥವಾ ಇನ್ನೆಲ್ಲಾದರೂ ಸ್ವಲ್ಪ ಬೆಂಕಿ ತಗುಲಿದರೆ, ನಾವು ಗಾಬರಿಗೊಂಡು ಓಡುತ್ತೇವಾ ಅಥವಾ ಆ ಬೆಂಕಿಯನ್ನು ನಂದಿಸಲು ಏನಾದರೂ ಕೃತಿಯನ್ನು ಮಾಡುತ್ತೇವಾ ? ನಾವು ಗಾಬರಿಗೊಂಡರೆ, ನಮಗೆ ಬೆಂಕಿಯನ್ನು ಎದುರಿಸುವ ತಾತ್ತ್ವಿಕ ಮಾಹಿತಿ ಇದ್ದರೂ ‘ಆ ಪ್ರಸಂಗದಲ್ಲಿ ಏನು ಮಾಡಬೇಕು ?’ ಎಂಬುದು ತೋಚುವುದಿಲ್ಲ; ಆದುದರಿಂದ ಆ ಪ್ರಸಂಗದಲ್ಲಿ ಮನಸ್ಸು ಗಟ್ಟಿಯಾಗಿರುವುದು ಮಹತ್ವದಾಗಿದೆ.

ಈ. ‘ಯಾರಾದರೂ ನಮ್ಮೊಂದಿಗೆ ಗುಂಡಾಗಿರಿ ಮಾಡುತ್ತಿದ್ದರೆ ನಾವು ಚಾಣಾಕ್ಷತೆಯಿಂದ ಅದನ್ನು ಎದುರಿಸಬಹುದಾ ?, ಎಂದು ತಮ್ಮನ್ನೇ ತಾವು ಕೇಳಬೇಕು. ಪ್ರಸಂಗ ಬಂದರೆ ಗೂಂಡಾನ ಜೊತೆ ಹೊಡೆದಾಡುವ ಸಿದ್ಧತೆ ಇರಬೇಕು. ನಮ್ಮ ಪರಿಚಯದ ವ್ಯಕ್ತಿ ಹಾಗೂ ಇನ್ನೊಬ್ಬ ವ್ಯಕ್ತಿಯಲ್ಲಿ ಜಗಳವಾಗುತ್ತಿದ್ದರೆ ಅದನ್ನು ಬಿಡಿಸುವ ಪ್ರಯತ್ನವನ್ನು ಮಾಡಬೇಕು.

ಉ. ಇತರರಿಗೆ ಸಹಾಯ ಮಾಡುವ ವೃತ್ತಿ ನಮ್ಮಲ್ಲಿರಬೇಕು ಮತ್ತು ಅದು ಇಲ್ಲದಿದ್ದರೆ ಪ್ರಯತ್ನಪೂರ್ವಕವಾಗಿ ಬೆಳೆಸಬೇಕು. ನಮ್ಮಲ್ಲಿ ಆ ವೃತ್ತಿ ಇದ್ದರೆ, ನಮ್ಮ ಕಠಿಣ ಪ್ರಸಂಗದಲ್ಲಿ ದೇವರು ಇತರರನ್ನು ನಮ್ಮ ಸಹಾಯಕ್ಕೆ ಕಳುಹಿಸುವನು.

ಊ. ನಮ್ಮ ಸ್ವಭಾವ ಏಕಾಂಗಿಯಾಗಿರಬಾರದು. ಇಂತಹ ವ್ಯಕ್ತಿಗೆ ಆಪತ್ಕಾಲದಲ್ಲಿ ಸಹಾಯ ಸಿಗುವುದು ಕಠಿಣವಾಗುತ್ತದೆ; ಏಕೆಂದರೆ ಅವರಿಗೆ ಪರಿಚಯದವರು ಎಂದು ಯಾರೂ ಇರುವುದಿಲ್ಲ. ಆದ್ದರಿಂದ ಎಲ್ಲರೊಂದಿಗೆ ಹೊಂದಿಕೊಳ್ಳುವ, ಎಲ್ಲರೊಂದಿಗೆ ಮಾತನಾಡುವ ಮತ್ತು ಒಟ್ಟಾಗಿರುವ ಅಭ್ಯಾಸವನ್ನು ನಾವು ಮಾಡಿಕೊಳ್ಳಬೇಕು. ಏಕಾಂಗಿ ವ್ಯಕ್ತಿಯು ಕೇವಲ ತನ್ನ ವಿಚಾರವನ್ನೇ ಮಾಡುತ್ತಾನೆ. ತದ್ವಿರುದ್ಧ ಇತರರ ವಿಚಾರ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.

ಎ. ಮನಸ್ಸಿನಲ್ಲಿ ಮಾತೃಭೂಮಿಯ ಬಗ್ಗೆ ಅಪಾರ ಪ್ರೀತಿಯನ್ನು ಬೆಳೆಸಬೇಕು. ಯಾವ ರೀತಿ ತಾಯಿಯು ನಮ್ಮನ್ನು ಬೆಳೆಸು ತ್ತಾಳೋ, ಅದೇ ರೀತಿ ನಮ್ಮ ಮಾತೃಭೂಮಿಯೂ ನಮ್ಮ ಪಾಲನೆ ಪೋಷಣೆಯನ್ನು ಮಾಡುತ್ತದೆ; ಆದ್ದರಿಂದ ಅವಳ ಬಗ್ಗೆ ನಮಗೆ ಕೃತಜ್ಞತೆ ಎನಿಸಬೇಕು. ಹೀಗೆನಿಸಿದಾಗಲೇ, ನಾವು ಅವಳಿಗಾಗಿ ಪ್ರಾಣತ್ಯಾಗವನ್ನು ಮಾಡಲು ಸಹ ಹಿಂದೆಮುಂದೆ ನೋಡಲಾರೆವು. ಸ್ವಾತಂತ್ರ್ಯವೀರರು ಹೀಗೆ ಮಾಡಿದರೆಂದೆ ನಮಗೆ ಸ್ವಾತಂತ್ರ್ಯ ದೊರಕಿತು. ಮಾತೃಭೂಮಿಯ ಬಗ್ಗೆ ಪ್ರೀತಿ ಎನಿಸುವುದು, ಅಂದರೆ ದೇಶಪ್ರೇಮವೆನಿಸುವುದಾಗಿದೆ. ಹೀಗೆ ಅನಿಸಿದಾಗಲೇ, ನಾವು ಸಮಯ ಬಂದಾಗ, ದೇಶಕ್ಕಾಗಿ ಶತ್ರುಗಳ ವಿರುದ್ಧ ಹೋರಾಡ ಬಹುದು. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಉಕ್ರೇನ್ ಜನತೆಯು ಇದನ್ನೇ ಮಾಡುತ್ತಿದೆ. ಮಾತೃಭೂಮಿಯ ಬಗ್ಗೆ ಪ್ರೀತಿ ಅನಿಸಿದರೆ, ನಾವು ಸ್ವಾರ್ಥಕ್ಕಾಗಿ ನಮ್ಮ ಸಹೋದರ ಸಹೋದರಿಯರನ್ನು ವಂಚಿಸಿ ಭ್ರಷ್ಟಾಚಾರ ಮಾಡಲಾರೆವು ಅಥವಾ ಶತ್ರುವಿಗೆ ಮಾರ ಲಾರೆವು. ಮಾತೃಭೂಮಿಯ ಎಲ್ಲರ ಬಗ್ಗೆ ನಮಗೆ ಪ್ರೀತಿಯೇ ಅನಿಸುವುದು. ದೇಶಕ್ಕಾಗಿ ನಾವು ಕರ್ತವ್ಯದಿಂದ ವರ್ತಿಸಲು ಸಿದ್ಧರಾಗೋಣ.

೩. ಬೌದ್ಧಿಕ ಸ್ತರದ ಸಿದ್ಧತೆ

ಅ. ಯುದ್ಧಕಾಲದಲ್ಲಿ ಇತರರಿಗೆ ಸಹಾಯ ಮಾಡಲು ಪ್ರಥಮೋಪಚಾರ ಮಾಡಲು ಬರುವುದು ಆವಶ್ಯಕವಾಗಿದೆ. ಶರೀರಕ್ಕೆ ಗಾಯವಾದರೆ ‘ಬ್ಯಾಂಡೆಜ್ ಹೇಗೆ ಕಟ್ಟಬೇಕು ?, ‘ಮೂಳೆ ಮುರಿತವಾದರೆ ಹೇಗೆ ಸಹಾಯ ಮಾಡಬೇಕು ?, ‘ಸ್ಟ್ರೆಚರ್ ಲಭ್ಯವಿಲ್ಲದಿದ್ದರೆ ಜೋಳಿಗೆಯ ಸಹಾಯದಿಂದ ವ್ಯಕ್ತಿಯನ್ನು ಇನ್ನೊಂದೆಡೆ ಹೇಗೆ ಕರೆದೊಯ್ಯಬೇಕು ?, ಇತ್ಯಾದಿ ವಿಷಯಗಳನ್ನು ಕಲಿತುಕೊಳ್ಳಬೇಕು. ಯುದ್ಧಕಾಲದಲ್ಲಿ ನಮಗೆ ಈ ರೀತಿ ಸಹಾಯ ಮಾಡಲಿಕ್ಕಿದೆ. ಈ ಜ್ಞಾನವನ್ನು ಪಡೆಯಲು ಸನಾತನ ಸಂಸ್ಥೆಯ ಮುಂದಿನ ೩ ಗ್ರಂಥಗಳು ಲಭ್ಯವಿವೆ.

೧. ರೋಗಿಯ ಜೀವರಕ್ಷಣೆ ಮತ್ತು ಮರ್ಮಾಘಾತ ಮುಂತಾದ ರೋಗಗಳಿಗೆ ಪ್ರಥಮ ಚಿಕಿತ್ಸೆ

೨. ರಕ್ತಸ್ರಾವ, ಗಾಯ, ಮೂಳೆಮುರಿತ ಮುಂತಾದವುಗಳಿಗೆ ಪ್ರಥಮ ಚಿಕಿತ್ಸೆ

೩. ಉಸಿರುಗಟ್ಟುವುದು, ಸುಟ್ಟುಕೊಳ್ಳುವುದು, ಪ್ರಾಣಿಗಳ ಕಡಿತ ಇತ್ಯಾದಿಗಳಿಗೆ ಪ್ರಥಮ ಚಿಕಿತ್ಸೆ

ಆ. ರಕ್ತದಲ್ಲಿನ ಸಕ್ಕರೆ(ಶರ್ಕರ)ಯನ್ನು ಪರೀಕ್ಷಿಸಲು, ರಕ್ತದೊತ್ತಡ ವನ್ನು ಅಳೆಯಲು ಮತ್ತು ‘ಪಲ್ಸ್ ಆಕ್ಸಿಮೀಟರ್ ಬಳಸಲು ಕಲಿತುಕೊಳ್ಳಬಹುದು.

ಇ. ‘ಯುದ್ಧಕಾಲದಲ್ಲಿ ಯಾವುದಾದರೊಂದು ಸ್ಥಳದಲ್ಲಿ ಬೆಂಕಿ ಹತ್ತಿಕೊಂಡರೆ ಅದನ್ನು ಹೇಗೆ ನಂದಿಸಬೇಕು ?. ಎಂಬುದರ ಸ್ವಲ್ಪವಾದರೂ ಜ್ಞಾನವಿರುವುದು ಆವಶ್ಯಕವಾಗಿದೆ. ಎಣ್ಣೆಯಿಂದ ಹತ್ತಿಕೊಂಡ ಬೆಂಕಿ, ವಿದ್ಯುತ್ ಉಪಕರಣಗಳಿಂದ ಹತ್ತಿಕೊಂಡ ಬೆಂಕಿ, ಇಂತಹ ವಿವಿಧ ಬೆಂಕಿಗಳನ್ನು ವಿವಿಧ ಪದ್ಧತಿಗಳಿಂದ ನಂದಿಸಬೇಕಾಗುತ್ತದೆ. ಇದರ ಜ್ಞಾನವಿರಬೇಕು. ಈ ಜ್ಞಾನವನ್ನು ಪಡೆಯಲು ಸನಾತನ ಸಂಸ್ಥೆಯ ‘ಅಗ್ನಿಶಮನ ತರಬೇತಿ ಈ ಗ್ರಂಥವು ಲಭ್ಯವಿದೆ.

ಈ. ಯುದ್ಧಕಾಲದಲ್ಲಿ ವೈದ್ಯಕೀಯ ಸಹಾಯ ಬೇಗ ದೊರಕುವುದು ಕಠಿಣವಿರುತ್ತದೆ. ಅಂತಹ ಸಮಯದಲ್ಲಿ ರೋಗಿಗೆ ನಾವು ಬಿಂದುಒತ್ತಡ ಮಾಡಿ, ಅವನಿಗಾಗಿ ನಾಮಜಪವನ್ನು ಮಾಡಿ
ಅವನ ಮೇಲೆ ಪ್ರಾಣಶಕ್ತಿವಹನ ಪದ್ಧತಿಯಿಂದ ಉಪಾಯ ಮಾಡಿ ಕೆಲವು ರೋಗಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಮತ್ತು ಕೆಲವು ರೋಗಗಳಲ್ಲಿ ರೋಗಿಯ ನೋವನ್ನು ಕಡಿಮೆ ಮಾಡಬಹುದು. ಈ ಉಪಾಯಪದ್ಧತಿಗಳ ಮಾಹಿತಿ ಪಡೆಯಲು ಸನಾತನ ಸಂಸ್ಥೆಯ ಮುಂದಿನ ಗ್ರಂಥಗಳ ಅಧ್ಯಯನವನ್ನು ಈಗಲೇ ಮಾಡಿರಿ, ಹಾಗೆಯೇ ಈ ಗ್ರಂಥಗಳನ್ನು ತಮ್ಮ ಹತ್ತಿರವಿಟ್ಟುಕೊಳ್ಳಿರಿ.

೧. ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ‘ಬಿಂದುಒತ್ತಡ

೨. ಸಾಮಾನ್ಯ ರೋಗಗಳಿಗೆ ಬಿಂದುಒತ್ತಡ ಉಪಚಾರ (ಜ್ವರ, ಮಲಬದ್ಧತೆ ಮುಂತಾದ ೮೦ ಕ್ಕಿಂತಲೂ ಹೆಚ್ಚು ಕಾಯಿಲೆಗಳಿಗೆ ಉಪಯುಕ್ತ !)

೩. ರೋಗ ನಿವಾರಣೆಗಾಗಿ ನಾಮಜಪ

೪. ನಾಮಜಪಗಳಿಂದ ದೂರವಾಗುವ ರೋಗಗಳು (ನಾಮಜಪದ ಬಗೆಗಿನ ಸೂಚನೆಗಳೊಂದಿಗೆ ಮುದ್ರೆ ಮತ್ತು ನ್ಯಾಸವೂ ಸಮಾವೇಶಗೊಂಡಿದೆ)

೫. ರೋಗಗಳಿಗನುಸಾರ ನಾಮಜಪ ಉಪಾಯ (ದೇವತೆಗಳ ಜಪ, ಬೀಜಮಂತ್ರ, ಅಂಕಜಪ ಇತ್ಯಾದಿ)

೬. ರೋಗ ನಿವಾರಣೆಗಾಗಿ ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಹೇಗೆ ಹುಡುಕಬೇಕು??

೭. ಪ್ರಾಣಶಕ್ತಿವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಮಾಡಬೇಕಾದ ಉಪಾಯ

ಉ. ಯುದ್ಧಕಾಲದಲ್ಲಿ ಭೂಮಿಯ ಕೆಳಗಿರುವ ನೆಲಮಾಳಿಗೆಯಲ್ಲಿ ಅಡಗಿಕೊಳ್ಳುವುದು ಎಲ್ಲಕ್ಕಿಂತ ಸುರಕ್ಷಿತವಾಗಿರುತ್ತದೆ. ‘ಇಂತಹ ನೆಲಮಾಳಿಗೆಗಳು ನಮ್ಮ ನಮ್ಮ ಊರುಗಳಲ್ಲಿ ಎಲ್ಲೆಲ್ಲಿವೆ ?, ಎಂಬುದರ ಮಾಹಿತಿಯನ್ನು ಪಡೆದುಕೊಳ್ಳಬೇಕು. ನಗರದಲ್ಲಿನ ‘ಮೆಟ್ರೋ ರೈಲು ಹೆಚ್ಚಾಗಿ ಭೂಮಿಯ ಕೆಳಗೆ ಇರುತ್ತವೆ. ಇಂತಹ ಭೂಮಿಯ ಕೆಳಗಿರುವ ‘ಮೆಟ್ರೋ ನಿಲ್ದಾಣಗಳಲ್ಲಿಯೂ ನಾವು ಸ್ವಲ್ಪ ಸಮಯ ಅಡಗಿಕೊಳ್ಳಬಹುದು. ಕೆಲವೊಮ್ಮೆ ದೊಡ್ಡ ಚತುಷ್ಪದ ರಸ್ತೆಗಳನ್ನು ದಾಟಲು ಭೂಮಿಯ ಕೆಳಗೆ ಪಾದಚಾರಿಗಳಿಗಾಗಿ ಮಾರ್ಗವಿರುತ್ತದೆ. ಇಂತಹ ಸ್ಥಳದಲ್ಲಿಯೂ ನಾವು ಅಡಗಿಕೊಳ್ಳಬಹುದು. ಬಾಂಬ್‌ಸ್ಫೋಟ, ಅಣುಬಾಂಬ್ ಸ್ಫೋಟ್‌ನಿಂದ ಹರಡುವ ಘಾತಕ ವಿಕಿರಣಗಳು ಇವುಗಳಿಂದ ಈ ಭೂಮಿಯ ಕೆಳಗಿನ ಸ್ಥಾನಗಳು ನಮ್ಮನ್ನು ರಕ್ಷಿಸುತ್ತವೆ.

ಊ. ನಮ್ಮ ಊರಲ್ಲಿ ಅಥವಾ ನಗರಗಳಲ್ಲಿ ವಿವಿಧ ಸೇವಾಭಾವಿ ಸಂಘಟನೆಗಳಿರುತ್ತವೆ. ಅವುಗಳ ಮಾಹಿತಿ ಪಡೆದುಕೊಂಡು ಅವರ ಪರಿಚಯ ಮಾಡಿಕೊಳ್ಳಬೇಕು. ನಮ್ಮ ಮೇಲೆ ಅಥವಾ ನಮ್ಮ ಅಕ್ಕಪಕ್ಕದ ಪರಿಸರದಲ್ಲಿ ಯಾವುದಾದರೊಂದು ಕಠಿಣ ಪ್ರಸಂಗಗಳಾದರೆ ಅವರ ಸಹಾಯ ಪಡೆಯಲು ಸಾಧ್ಯವಾಗುವುದು. ಅವರ ಸಂಪರ್ಕ ಕ್ರಮಾಂಕವನ್ನು ಪಡೆಯಬೇಕು. ನಮ್ಮ ಸಂಪರ್ಕ
ಕ್ರಮಾಂಕವನ್ನು ಅವರಿಗೆ ನೀಡಬೇಕು, ಅದರಿಂದ ಸಮಯ ಬಂದಾಗ
ನಾವು ಸಹ ಅವರ ಸಹಾಯಕ್ಕೆ ಹೋಗಲು ಸಾಧ್ಯವಾಗುತ್ತದೆ.

೪. ಆಧ್ಯಾತ್ಮಿಕ ಸ್ತರದ ಸಿದ್ಧತೆ

ಅ. ಹಿಂದೂ ಸಂಸ್ಕೃತಿಯಲ್ಲಿನ ‘ಆಚಾರಧರ್ಮದ ಪಾಲನೆಯನ್ನು ಮಾಡಬೇಕು. ಆಚಾರಧರ್ಮದ ಪಾಲನೆಯನ್ನು ಮಾಡಿದರೆ ನಮ್ಮ ಪ್ರತಿಯೊಂದು ಕೃತಿ ಸಾತ್ತ್ವಿಕವಾಗಿ ನಮಗೆ ಚೈತನ್ಯ ಸಿಗುತ್ತದೆ, ಇದರ ಹೊರತಾಗಿ ನಮಗೆ ಈಶ್ವರನ ವರೆಗೆ ಹೋಗಲು ಸಾಧ್ಯವಾಗುತ್ತದೆ. ಆಚಾರಧರ್ಮದ ಪಾಲನೆ ಮಾಡುವುದರಿಂದ, ಅಂದರೆ ಧರ್ಮಾಚರಣೆ ಮಾಡುವುದರಿಂದ ನಮ್ಮ ವೃತ್ತಿಯು ಸಾತ್ತ್ವಿಕವಾಗುತ್ತದೆ ಮತ್ತು ನಮ್ಮ ಮಾರ್ಗಕ್ರಮಣ ಈಶ್ವರನ ದಿಶೆಯತ್ತ ಬೇಗನೆ ಆಗುತ್ತದೆ. ಆಚಾರಧರ್ಮದ ಪಾಲನೆಯಿಂದ ವ್ಯಕ್ತಿಯ ವ್ಯಾವಹಾರಿಕ ಜೀವನದಲ್ಲಿಯೂ ಅಭಿವೃದ್ಧಿಯಾಗಲು ಸಹಾಯವಾಗುತ್ತದೆ, ಉದಾ. ‘ಸತ್ಯದಿಂದ ನಡೆಯಬೇಕು, ಈ ಆಚಾರಧರ್ಮದ ಪಾಲನೆ ಮಾಡುವುದರಿಂದ ವ್ಯಕ್ತಿಗೆ ಸುಳ್ಳು ಮಾತನಾಡಿದ ಬಗ್ಗೆ ಪಾಪವು ತಗಲುವುದಿಲ್ಲ, ಹಾಗೆಯೇ ಅವನಲ್ಲಿ ನೈತಿಕತೆ ಮತ್ತು ಸುಸಂಸ್ಕೃತತನ ಈ ಗುಣಗಳ ವಿಕಾಸವೂ ಆಗುತ್ತದೆ. ಈಶ್ವರನು ಇಂತಹ ಸತ್ತ್ವಗುಣಿ ವ್ಯಕ್ತಿಯನ್ನೇ ಅವನ ಕಠಿಣ ಕಾಲದಲ್ಲಿ ರಕ್ಷಣೆ ಮಾಡುತ್ತಾನೆ. ‘ದೈನಂದಿನ ಜೀವನದಲ್ಲಿ ಆಚಾರಧರ್ಮವನ್ನು ಹೇಗೆ ಪಾಲಿಸಬೇಕು ?, ಎಂದು ತಿಳಿದು ಕೊಳ್ಳಲು ಸನಾತನ ಸಂಸ್ಥೆಯ ಮುಂದಿನ ಪ್ರಾಥಮಿಕ ಗ್ರಂಥವನ್ನು ಓದಬೇಕು.

೧. ಆಚಾರಧರ್ಮದ ಪ್ರಾಸ್ತಾವಿಕ

೨. ಸ್ನಾನದ ಮೊದಲಿನ ಆಚಾರಗಳ ಶಾಸ್ತ್ರ

೩. ಸ್ನಾನದಿಂದ ಮುಸ್ಸಂಜೆಯವರೆಗಿನ ಆಚಾರಗಳ ಹಿಂದಿನ ಶಾಸ್ತ್ರ

ಆ. ಪ್ರತಿದಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ಈ ಸಮಯದಲ್ಲಿ ಅಗ್ನಿಹೋತ್ರವನ್ನು ಮಾಡಬೇಕು. ಎರಡೂ ಸಮಯದಲ್ಲಿ ಸಾಧ್ಯವಾಗದಿದ್ದರೆ ಯಾವು ದಾದರೊಂದು ಸಮಯ ಮಾಡಬೇಕು. ಅಗ್ನಿಹೋತ್ರ ಮಾಡುವುದರಿಂದ ನಮ್ಮ ಸುತ್ತಲಿನ ವಾತಾವರಣವು ಜಂತು ಮುಕ್ತ, ಶುದ್ಧ, ಪ್ರಾಣಶಕ್ತಿಯುಕ್ತ ಮತ್ತು ಪವಿತ್ರವಾಗುತ್ತದೆ. ಪ್ರತಿದಿನ ಮನೆಯಲ್ಲಿ ಅಗ್ನಿಹೋತ್ರವನ್ನು ಮಾಡಿದರೆ ನಮ್ಮ ಮನೆಯಲ್ಲಿ ಎಲ್ಲರ ಆರೋಗ್ಯವು ಚೆನ್ನಾಗಿರುತ್ತದೆ, ಯಾರಿಗೂ ರೋಗ ರುಜಿನಗಳು ಆಗುವುದಿಲ್ಲ, ಹಾಗೆಯೇ ಪ್ರಕ್ಷೇಪಿತವಾದ ಚೈತನ್ಯದಿಂದ ಎಲ್ಲರಿಗೂ ಆಧ್ಯಾತ್ಮಿಕ ದೃಷ್ಟಿಯಿಂದಲೂ ಲಾಭವಾಗುತ್ತದೆ. ಕೊರೊನಾ ಮಹಾಮಾರಿಯ ಅವಧಿಯಲ್ಲಿ ಅಗ್ನಿಹೋತ್ರ ಮಾಡುತ್ತಿರುವ ವ್ಯಕ್ತಿಗೆ ಕೊರೊನಾ ತಗಲದಿರುವುದು ಗಮನಕ್ಕೆ ಬಂದಿದೆ. ಸದ್ಯ ಅನೇಕ ರಾಷ್ಟ್ರಗಳ ಬಳಿ ರೋಗರುಜಿನಗಳನ್ನು ಹರಡುವ ಜೈವಿಕ ಅಸ್ತ್ರಗಳೂ ಇವೆ. ಯುದ್ಧದಲ್ಲಿ ಅವುಗಳ ಬಳಕೆಯಾದರೆ ಹರಡುವ ರೋಗರುಜಿನಗಳಿಂದ, ಹಾಗೆಯೇ ಅಣುಬಾಂಬ್‌ನ ಸ್ಫೋಟ್‌ನಿಂದ ಹರಡುವ ಘಾತಕ ಕಿರಣಗಳಿಂದಲೂ ಅಗ್ನಿಹೋತ್ರ ಮಾಡುವುದರಿಂದ ರಕ್ಷಣೆಯಾಗಲಿದೆ. ಈ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆಯ ‘ಅಗ್ನಿಹೋತ್ರ ಈ ಗ್ರಂಥವನ್ನು ಓದಬೇಕು.

ಇ. ದೇವರ ಕೃಪಾಶೀರ್ವಾದವನ್ನು ಪಡೆಯಲು ಪ್ರತಿದಿನ ಕನಿಷ್ಠ ೨ ಗಂಟೆಗಳ ಕಾಲ ತಮ್ಮ ಉಪಾಸ್ಯದೇವತೆಯ ನಾಮಜಪವನ್ನು ಮಾಡಬೇಕು. ತಮ್ಮ ಯಾವುದೇ ಉಪಾಸ್ಯದೇವತೆ ಇಲ್ಲದಿದ್ದರೆ, ಭಗವಾನ ಶ್ರೀಕೃಷ್ಣನ ‘ಓಂ ನಮೋ ಭಗವತೇ ವಾಸುದೇವಾಯ | ಈ ನಾಮಜಪವನ್ನು ಮಾಡಬೇಕು. ದುಃಖದ, ಹಾಗೆಯೇ ಆನಂದದ ಪ್ರಸಂಗದಲ್ಲಿಯೂ ದೇವರ ಸ್ಮರಣೆಯನ್ನು ಮಾಡಬೇಕು; ಏಕೆಂದರೆ ‘ಕಠಿಣ ಪ್ರಸಂಗದಲ್ಲಿ ಅವನೇ ನಮ್ಮನ್ನು ರಕ್ಷಿಸುವನು, ಎಂಬುದನ್ನು ಗಮನದಲ್ಲಿಡಬೇಕು. ಅವರ ಸ್ಮರಣೆಯನ್ನು ಮಾಡದಿದ್ದರೆ, ಅವನಿಗೆ ಮೊರೆಯಿಡದಿದ್ದರೆ, ನಮ್ಮ ಸಹಾಯಕ್ಕೆ ಅವನು ಏಕೆ ಧಾವಿಸಿ ಬರುವನು ! ದೇವರ ಭಕ್ತನಾದರೆ, ‘ಅವನು ನಮ್ಮ ರಕ್ಷಣೆಯನ್ನು ಮಾಡುವನು, ಎಂಬ ದೃಢ ಶ್ರದ್ಧೆ ನಮ್ಮಲ್ಲಿ ನಿರ್ಮಾಣವಾಗುತ್ತದೆ ಮತ್ತು ನಮಗೆ ಕಠಿಣ ಪ್ರಸಂಗದಲ್ಲಿ ಸ್ಥಿರವಾಗಿರಲು ಬರುತ್ತದೆ. ‘ನನ್ನ ಭಕ್ತನು ನಾಶವಾಗಲಾರನು, ಎಂಬ ಅವನ ವಚನವೇ ಇದೆ !

ಈ. ಧರ್ಮದ ರಕ್ಷಣೆಯನ್ನು ಮಾಡಿರಿ. ‘ಧರ್ಮದ ವಿನಾಶವನ್ನು ತೆರೆದ ಕಣ್ಣುಗಳಿಂದ ನೋಡುವವನು ಮಹಾಪಾಪಿಯಾಗಿರುತ್ತಾನೆ ಮತ್ತು ಧರ್ಮರಕ್ಷಣೆಗಾಗಿ ಪರಿಶ್ರಮ ಪಡುವವನು ಮುಕ್ತಿಯ ಅಧಿಕಾರಿಯಾಗುತ್ತಾನೆ ಎಂಬ ಧರ್ಮವಚನವಿದೆ. ಹಾಗೆಯೇ ‘ಯಾರು ಧರ್ಮದ ರಕ್ಷಣೆಯನ್ನು ಮಾಡುವರೋ, ಅವರ ರಕ್ಷಣೆಯನ್ನು ಸ್ವತಃ ಧರ್ಮವು (ಈಶ್ವರನು) ಮಾಡುತ್ತದೆ, ಎಂಬ ಧರ್ಮ ವಚನವು ಸಹ ಇದೆ. ಧರ್ಮರಕ್ಷಣೆ ಮಾಡುವುದು, ಇದು ಸದ್ಯದ ಕಾಲಾನುಸಾರ ಆವಶ್ಯಕವಾಗಿರುವ ಧರ್ಮ ಪಾಲನೆಯೇ ಆಗಿದೆ. ಧರ್ಮರಕ್ಷಣೆಗಾಗಿ ಕೌರವರೊಂದಿಗೆ ಹೋರಾಡಿದುದರಿಂದ ಶಿಷ್ಯ ಅರ್ಜುನನು ಗುರು ಶ್ರೀಕೃಷ್ಣನಿಗೆ ಪ್ರಿಯನಾದನು. ಸಂಕ್ಷಿಪ್ತದಲ್ಲಿ ಧರ್ಮರಕ್ಷಣೆಗಾಗಿ ಕೃತಿ ಮಾಡಿದರೆ, ನಮ್ಮ ಮೇಲೆ ಈಶ್ವರನ ಕೃಪೆಯಾಗುತ್ತದೆ. ಸದ್ಯ ಧರ್ಮದ್ರೋಹಿ ಮತ್ತು ಹಿಂದೂದ್ವೇಷಿಗಳು ರಾಜಾರೋಷ ವಾಗಿ ಸನಾತನ ಹಿಂದೂ ಧರ್ಮದ ಮೇಲೆ ಆಘಾತವನ್ನು ಮಾಡುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿದ್ದು ಮೊದಲಿಗೆ ಅವರಿಗೆ ಪ್ರಬೋಧನೆ ಮಾಡಿ. ಆದರೂ ಅವರು ಕೇಳದಿದ್ದರೆ ಅವರನ್ನು ನಿಷೇಧಿಸುತ್ತಾ ಅವರನ್ನು ಕಾನೂನುರೀತ್ಯಾ ವಿರೋಧಿಸಿ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೬.೩.೨೦೨೨)