ಮಧ್ಯಪ್ರದೇಶದಲ್ಲಿ ಭಾಜಪ ಸರಕಾರವಿದ್ದಾಗ ಹಿಂದೂಗಳ ಮೇಲೆ ದಾಳಿಯಾಗಿ ಹತ್ಯೆ ಆಗುತ್ತದೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !- ಸಂಪಾದಕರು
ಈ ಮತಾಂಧರಿಗೆ ಗಲ್ಲು ಶಿಕ್ಷೆ ಆಗುವುದಕ್ಕೆ ಸರಕಾರ ಪ್ರಯತ್ನಿಸಬೇಕು ! -ಸಂಪಾದಕರು |
ಭೋಪಾಲ್ (ಮಧ್ಯಪ್ರದೇಶ) – ರಾಯಸೇನ ಜಿಲ್ಲೆಯಲ್ಲಿಯ ಖಮರಿಯಾ ಪೌಡಿ ಈ ಗ್ರಾಮದಲ್ಲಿ ಮತಾಂದರು ಮಾಡಿದ ಆಕ್ರಮಣದಲ್ಲಿ ಒಬ್ಬ ಆದಿವಾಸಿ ಹಿಂದೂವಿನ ಮೃತ್ಯುವಾಗಿದೆ, ಅಲ್ಲದೇ 38 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 6 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ರಾಜ್ಯದ ಮುಖ್ಯಮಂತ್ರಿ ಶಿವರಾಜ ಸಿಂಗ ಚೌಹಾಣ ಅವರು ಆಸ್ಪತ್ರೆಗೆ ಹೋಗಿ ಗಾಯಾಳುಗಳ ವಿಚಾರಣೆ ಮಾಡಿದರು. ಅವರು ಮೃತನಾದ ರಾಜು ಆದಿವಾಸಿಯ ಕುಟುಂಬದವರಿಗೆ 5 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಾದ ಪ್ರತಿಯೊಬ್ಬರಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಗುಂಡು ಹಾರಿಸುವುದು, ಸಾಮಾನ್ಯ ಅಪರಾಧವಲ್ಲ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
Man dies of bullet wounds, several injured as two groups clash in Madhya Pradesh’s Raisen https://t.co/kQCqpinOOZ
— TOI Cities (@TOICitiesNews) March 19, 2022
ಈ ಘಟನೆ ಮಕ್ಕಳಿಬ್ಬರ ಜಗಳದಿಂದ ನಡೆದಿದೆ. ಒಬ್ಬ ಮತಾಂಧ ಹುಡುಗನು ಆದಿವಾಸಿ ಹುಡುಗನಿಗೆ ಹೊಡೆದಿದ್ದರಿಂದ ಎರಡು ಸಮುದಾಯಗಳಲ್ಲಿ ವಾಗ್ವಾದ ಉಂಟಾಗಿ ಅದರ ರೂಪಾಂತರವು ಜಗಳವಾಯಿತು. ಆ ಸಮಯದಲ್ಲಿ ದೊಣ್ಣೆ, ಕೊಡಲಿ ಇವುಗಳನ್ನು ಉಪಯೋಗಿಸಲಾಯಿತು, ಅಲ್ಲದೆ ಕೆಲವರು ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲಿಯ ಅಂಗಡಿಗಳು, ವಾಹನಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಈ ಪ್ರಕರಣದಲ್ಲಿ 17 ಮಂದಿಯನ್ನು ಬಂಧಿಸಿರುವ ಪೊಲೀಸರು ಎರಡು ರೈಫಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಯ ನಂತರ ಆ ಪ್ರದೇಶದಲ್ಲಿ ಕಫ್ರ್ಯೂ ವಿಧಿಸಲಾಯಿತು.