ಅಡುಗೆ ಮಾಡುವ ವ್ಯಕ್ತಿ ಸಾಧನೆ ಮಾಡುವವನು ಮತ್ತು ಅಡುಗೆ ಮಾಡುವ ಸ್ಥಳವು ಸಾತ್ತ್ವಿಕವಾಗಿದ್ದರೆ, ಅವರು ಮಾಡುವ ಅಡುಗೆಯ ಪದಾರ್ಥಗಳ ಮೇಲೆ ಹಾಗೆಯೇ ಅವುಗಳನ್ನು ಸೇವಿಸುವವರ ಮೇಲೆ ಆಗುವ ಪರಿಣಾಮ

ಅಡುಗೆಯನ್ನು ಮಾಡುವುದರ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಅಡುಗೆಯ ಆಚಾರಗಳು, ಅಡುಗೆಯಲ್ಲಿನ ಘಟಕಗಳು, ಅಡುಗೆಯನ್ನು ಮಾಡುವ ಪದ್ಧತಿ ಇತ್ಯಾದಿಗಳ ಸಂದರ್ಭದಲ್ಲಿ ವಿಫುಲವಾಗಿ ಸಂಶೋಧನೆಯನ್ನು ಮಾಡುತ್ತಿದೆ. ಈ ಸಂಶೋಧನೆಗಳ ನಿಷ್ಕರ್ಷದಿಂದ ಹಿಂದೂ ಧರ್ಮವು ಅಡುಗೆಯ ಆಚಾರಗಳ ಸಂದರ್ಭದಲ್ಲಿ ಹಾಕಿಕೊಟ್ಟಿರುವ ನಿಯಮಗಳು, ಹಾಗೆಯೇ ಹೇಳಿದ ಅಂಶಗಳು ಎಷ್ಟು ಯೋಗ್ಯವಾಗಿವೆ, ಹಾಗೆಯೇ ಈಗಿನ ಆಧುನಿಕ ಕಾಲದಲ್ಲಿಯೂ ಅವು ಎಷ್ಟು ಸರಿಯಾಗಿ ಅನ್ವಯಿಸುತ್ತವೆ, ಎಂಬುದು ಗಮನಕ್ಕೆ ಬರುತ್ತದೆ. ಇಂತಹ ಒಂದು ಸಂಶೋಧನೆಯನ್ನು ಮುಂದೆ ಕೊಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

ಓರ್ವ ಸಾಮಾನ್ಯ ಗೃಹಿಣಿಯು ಅಡುಗೆಯನ್ನು ಮಾಡುವಾಗ ಚಪಾತಿ, ಪಲ್ಯ, ಸಾರು, ಅನ್ನ, ಚಟ್ನಿ, ಕೊಸಂಬರಿ ಈ ಎಲ್ಲ ಪದಾರ್ಥಗಳನ್ನು ಪ್ರತಿದಿನ ಮಾಡುತ್ತಾಳೆ. ಅಡುಗೆಗಾಗಿ ಬಳಸುವ ಆಹಾರದ ಘಟಕಗಳು, ಅಡುಗೆ ಮಾಡುವ ಪದ್ಧತಿ, ಅಡುಗೆ ಮಾಡುವ ಸ್ಥಳ, ಅಡುಗೆ ಮಾಡುವ ವ್ಯಕ್ತಿ ಇತ್ಯಾದಿ ಘಟಕಗಳು ಎಷ್ಟು ಸಾತ್ತ್ವಿಕವಾಗಿರುತ್ತವೆಯೋ, ಅಷ್ಟು ಅಡುಗೆ ಸಾತ್ತ್ವಿಕವಾಗುತ್ತದೆ ಮತ್ತು ಅದನ್ನು ಸೇವಿಸುವವರಿಗೆ ಆ ಸಾತ್ತ್ವಿಕತೆಯ ಲಾಭವಾಗುತ್ತದೆ.

ಸೌ. ಮಧುರಾ ಕರ್ವೆ

‘ಅಡುಗೆ’ಯನ್ನು ಮಾಡುವ ವ್ಯಕ್ತಿಯು ಸಾಧನೆಯನ್ನು ಮಾಡುವವನಾಗಿದ್ದರೆ ಮತ್ತು ಅಡುಗೆ ಮಾಡುವ ಸ್ಥಳವು ಸಾತ್ತ್ವಿಕವಾಗಿದ್ದರೆ, ಅಡುಗೆಯಲ್ಲಿನ ಪದಾರ್ಥಗಳ ಮೇಲೆ, ಹಾಗೆಯೇ ಅದನ್ನು ಸೇವಿಸುವವರ ಮೇಲಾಗುವ ಪರಿಣಾಮಗಳನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ರಾಮನಾಥಿ (ಗೋವಾ) ಯಲ್ಲಿನ ಸನಾತನದ ಆಶ್ರಮದಲ್ಲಿ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವರ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿ, ಸ್ಥೂಲದಲ್ಲಿ ಆಧ್ಯಾತ್ಮಿಕ ತೊಂದರೆಯ ಅರಿವಿರದ ಸಾಧಕಿ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಮತ್ತು ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸಾಧಕಿಯರು ಪಾಲ್ಗೊಂಡಿದ್ದರು. ಈ ಪರೀಕ್ಷಣೆಯಲ್ಲಿ ಮುಂದಿನಂತೆ ೪ ಪ್ರಯೋಗಗಳನ್ನು ಮಾಡಲಾಯಿತು.

೧ ನೇ ಪ್ರಯೋಗ : ಈ ಪರೀಕ್ಷಣೆಯಲ್ಲಿ ಸಾಧಕಿಯರು ಸಾಮಾನ್ಯ ಗೃಹಿಣಿ (ಸಾಧನೆಯನ್ನು ಮಾಡದಿರುವ ಗೃಹಿಣಿ) ಮನೆಯಲ್ಲಿ ತಯಾರಿಸಿದ ಚಪಾತಿಯನ್ನು ತಿನ್ನುವುದು

೨ ನೇ ಪ್ರಯೋಗ : ಈ ಪರೀಕ್ಷಣೆಯಲ್ಲಿ ಸಾಧಕಿಯರು ಸಾಧಕಿ-ಗೃಹಿಣಿ ಮನೆಯಲ್ಲಿ ತಯಾರಿಸಿದ ಚಪಾತಿಯನ್ನು ತಿನ್ನುವುದು

೩ ನೇ ಪ್ರಯೋಗ : ಈ ಪರೀಕ್ಷಣೆಯಲ್ಲಿನ ಸಾಧಕಿಯರು ಸನಾತನದ ಆಶ್ರಮದಲ್ಲಿ ಸಾಧಕಿ ತಯಾರಿಸಿದ ಚಪಾತಿಯನ್ನು ತಿನ್ನುವುದು. ಪರೀಕ್ಷಣೆಯಲ್ಲಿ ಮೂರೂ ಪ್ರಯೋಗಗಳಲ್ಲಿ ಸಾಮಾನ್ಯ ಗೃಹಿಣಿ ಮತ್ತು ಸಾಧಕಿಯರು ತಮ್ಮ ಕೈಯಿಂದ ಚಪಾತಿಯನ್ನು ಮಾಡಿದ್ದರು.

೪ ನೇ ಪ್ರಯೋಗ : ಈ ಪರೀಕ್ಷಣೆಯಲ್ಲಿ ಸಾಧಕಿಯರು ಸನಾತನದ ಆಶ್ರಮದಲ್ಲಿ ಯಂತ್ರದಲ್ಲಿ ತಯಾರಿಸಿದ ಚಪಾತಿಯನ್ನು ಸೇವಿಸುವುದು

(ಸನಾತನದ ಆಶ್ರಮದಲ್ಲಿ ಸಾಧಕರ ಸಂಖ್ಯೆ ಹೆಚ್ಚಿರುವುದರಿಂದ ಚಪಾತಿಗಳನ್ನು ತಯಾರಿಸಲು ಯಂತ್ರವನ್ನು ಉಪಯೋಗಿಸಲಾಗುತ್ತದೆ. ಸಾತ್ತ್ವಿಕ ಸ್ಥಳದಲ್ಲಿ (ಆಶ್ರಮದಲ್ಲಿ) ಯಂತ್ರದಲ್ಲಿ ತಯಾರಿಸಿದ ಚಪಾತಿ ಸೇವಿಸುವುದರಿಂದ ವ್ಯಕ್ತಿಯ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡಲು ಈ ಪ್ರಯೋಗವನ್ನು ಮಾಡಲಾಯಿತು.)

ಸಾಮಾನ್ಯ ಗೃಹಿಣಿ ಮನೆಯಲ್ಲಿ ತಯಾರಿಸಿದ ಚಪಾತಿ, ಸಾಧಕಿ-ಗೃಹಿಣಿಯು ಮನೆಯಲ್ಲಿ ತಯಾರಿಸಿದ ಚಪಾತಿ, ಸನಾತನದ ಆಶ್ರಮದಲ್ಲಿ ಸಾಧಕಿ ತಯಾರಿಸಿದ ಚಪಾತಿ ಮತ್ತು ಸನಾತನದ ಆಶ್ರಮದಲ್ಲಿ ಯಂತ್ರದಲ್ಲಿ ತಯಾರಿಸಿದ ಚಪಾತಿಗಳನ್ನು ‘ಯು.ಎ.ಎಸ್.’ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯಲ್ಲಿನ ಮೂವರೂ ಸಾಧಕಿಯರು ಪ್ರತಿಯೊಂದು ಪ್ರಯೋಗದಲ್ಲಿ ಚಪಾತಿಯನ್ನು ತಿನ್ನುವ ಮೊದಲು ಮತ್ತು ಚಪಾತಿಯನ್ನು ತಿಂದ ನಂತರ ೨೦ ನಿಮಿಷಗಳ ನಂತರ ‘ಯು.ಎ.ಎಸ್.’ ಉಪಕರಣದಿಂದ ನಿರೀಕ್ಷಣೆ ಮಾಡಲಾಯಿತು. ಅವುಗಳ ವಿವರವು ಮುಂದಿನಂತಿದೆ.

೧ ಅ. ಸಾಧಾರಣ ಗೃಹಿಣಿಗಿಂತ ಸಾಧಕಿ-ಗೃಹಿಣಿಯ ಮನೆಯಲ್ಲಿ ತಯಾರಿಸಿದ ಚಪಾತಿಗಳಲ್ಲಿ ಮತ್ತು ಅದಕ್ಕಿಂತಲೂ ಹೆಚ್ಚು ಸನಾತನದ ಆಶ್ರಮದಲ್ಲಿ ತಯಾರಿಸಿದ ಚಪಾತಿಗಳಲ್ಲಿ ಸಕಾರಾತ್ಮಕ ಊರ್ಜೆ ಇರುವುದು : ಇದು ಮುಂದೆ ಕೊಟ್ಟಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೧ ಆ. ಪರೀಕ್ಷಣೆಯಲ್ಲಿನ ಸಾಧಕಿಯರು ಪ್ರಯೋಗದಲ್ಲಿ ಚಪಾತಿಯನ್ನು ಸೇವಿಸಿದ ನಂತರ ಅವರ ಮೇಲಾದ ಪರಿಣಾಮ

ಪರೀಕ್ಷಣೆಯಲ್ಲಿನ ಸಾಧಕಿಯರು ಪ್ರಯೋಗದಲ್ಲಿನ ಚಪಾತಿಗಳನ್ನು ಸೇವಿಸಿದ ನಂತರ ಅವರಲ್ಲಿನ ನಕಾರಾತ್ಮಕ ಊರ್ಜೆ ಎಷ್ಟು ಶೇಕಡಾದಷ್ಟು ಪ್ರಮಾಣ ಕಡಿಮೆ ಆಯಿತು ಮತ್ತು ಸಕಾರಾತ್ಮಕ ಊರ್ಜೆಯು ಎಷ್ಟು ಶೇಕಡಾದಷ್ಟು ಪ್ರಮಾಣ ಹೆಚ್ಚಾಯಿತು, ಎಂಬುದನ್ನು ಮುಂದೆ ಕೊಟ್ಟಿರುವ ಕೋಷ್ಟಕದಲ್ಲಿ ನೀಡಲಾಗಿದೆ.

ಮೇಲಿನ ಕೋಷ್ಟಕದಿಂದ ಗಮನಕ್ಕೆ ಬರುವುದೇನೆಂದರೆ, ಪರೀಕ್ಷಣೆಯಲ್ಲಿನ ಮೂವರೂ ಸಾಧಕಿಯರ ಮೇಲೆ ಆಶ್ರಮದ ಯಂತ್ರದಲ್ಲಿ ತಯಾರಿಸಿದ ಚಪಾತಿಯ ಪರಿಣಾಮ ಎಲ್ಲಕ್ಕಿಂತ ಹೆಚ್ಚಾಗಿದೆ.

೨. ನಿಷ್ಕರ್ಷ

ಅ. ಸಾಮಾನ್ಯ ಗೃಹಿಣಿಯು ಮನೆಯಲ್ಲಿ ತಯಾರಿಸಿದ ಚಪಾತಿಗಿಂತ ಸಾಧಕಿ-ಗೃಹಿಣಿಯು ಮನೆಯಲ್ಲಿ ತಯಾರಿಸಿದ ಚಪಾತಿಯು ಹೆಚ್ಚು ಸಾತ್ತ್ವಿಕವಾಗಿದೆ. ಇದರಿಂದ ‘ಪದಾರ್ಥವನ್ನು ತಯಾರಿಸುವ ವ್ಯಕ್ತಿಯು ಸಾಧನೆಯನ್ನು ಮಾಡುವವಳಾಗಿದ್ದರೆ, ಅವಳಲ್ಲಿನ ಸಾತ್ತ್ವಿಕತೆಯ ಸಕಾರಾತ್ಮಕ ಪರಿಣಾಮವು ಅವಳು ತಯಾರಿಸಿದ ಪದಾರ್ಥಗಳ ಮೇಲಾಗುತ್ತದೆ’, ಎಂಬುದು ಗಮನಕ್ಕೆ ಬರುತ್ತದೆ.

ಆ. ಇತರ ಸ್ಥಳಗಳ ತುಲನೆಯಲ್ಲಿ ಸಂತರ ಆಶ್ರಮಗಳು ತುಂಬಾ ಸಾತ್ತ್ವಿಕವಾಗಿರುತ್ತವೆ. ಸನಾತನದ ಆಶ್ರಮದಲ್ಲಿ ಸಾಧಕಿಯು ತಯಾರಿಸಿದ ಚಪಾತಿ ಮತ್ತು ಯಂತ್ರದಲ್ಲಿ ತಯಾರಿಸಿದ ಚಪಾತಿ ಇವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಾತ್ತ್ವಿಕತೆ ಇರುವುದು ಕಂಡುಬಂದಿತು. ಸನಾತನದ ಆಶ್ರಮದಲ್ಲಿ ಯಂತ್ರದಲ್ಲಿ ತಯಾರಿಸಿದ ಚಪಾತಿಯನ್ನು ಸೇವಿಸಿದ್ದರಿಂದ ಪರೀಕ್ಷಣೆಯಲ್ಲಿನ ಸಾಧಕಿಯರ ಮೇಲೆ ಎಲ್ಲಕ್ಕಿಂತ ಹೆಚ್ಚು ಸಕಾರಾತ್ಮಕ ಪರಿಣಾಮವಾಯಿತು. ಇದರಿಂದ ‘ಅಡುಗೆ ಮಾಡುವ ವ್ಯಕ್ತಿಯು ಸಾಧನೆ ಮಾಡುತ್ತಿದ್ದರೆ ಮತ್ತು ಅಡುಗೆ ಮಾಡುವ ಸ್ಥಳವು ಸಾತ್ತ್ವಿಕವಾಗಿದ್ದರೆ, ಅವರು ತಯಾರಿಸಿದ ಆ ಪದಾರ್ಥಗಳು ಮತ್ತು ಆ ಪದಾರ್ಥಗಳನ್ನು ಸೇವಿಸುವವರ ಮೇಲೆ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಪರಿಣಾಮವಾಗುತ್ತದೆ’, ಎಂಬುದು ಗಮನಕ್ಕೆ ಬಂದಿತು.

೩. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ  ವಿಶ್ಲೇಷಣೆ

೩ ಅ. ಸಾಮಾನ್ಯ ಗೃಹಿಣಿಗಿಂತ ಸಾಧಕಿ-ಗೃಹಿಣಿ ತಯಾರಿಸಿದ ಚಪಾತಿಯಲ್ಲಿ ಹೆಚ್ಚು ಸಕಾರಾತ್ಮಕ ಊರ್ಜೆ ಇರುವುದರ ಕಾರಣ : ಪ್ರಯೋಗದಲ್ಲಿನ ಸಾಧಕಿ-ಗೃಹಿಣಿಯು ಅನೇಕ ವರ್ಷಗಳಿಂದ ಸಾಧನೆಯನ್ನು ಮಾಡುತ್ತಿದ್ದಾಳೆ. ಅವಳು ಮನೆಯಲ್ಲಿನ ಪ್ರತಿಯೊಂದು ಕೃತಿಯನ್ನು ಸಾಧನೆಯೆಂದು ಮಾಡುತ್ತಾಳೆ, ಉದಾ. ಅಡುಗೆ ಮಾಡುವ ಮೊದಲು ದೇವರಿಗೆ ಪ್ರಾರ್ಥನೆ ಮಾಡುವುದು, ನಾಮಜಪ ಮಾಡುತ್ತ ಅಡುಗೆ ಮಾಡುವುದು, ಅಡುಗೆಯನ್ನು ಮಾಡಿದ ನಂತರ ದೇವರಿಗೆ ಕೃತಜ್ಞತೆಯನ್ನು ಅರ್ಪಿಸುವುದು ಇತ್ಯಾದಿ. ಹಾಗೆಯೇ ಅವಳು ಅಡುಗೆಮನೆಯಲ್ಲಿನ ವಾತಾವರಣ ಪ್ರಸನ್ನ ಮತ್ತು ಸಾತ್ತ್ವಿಕವಾಗಿರಬೇಕೆಂದು, ನಿಯಮಿತವಾಗಿ ಅಡುಗೆಮನೆಯ ಸ್ವಚ್ಛತೆ ಮತ್ತು ಶುದ್ಧಿಯನ್ನು ಮಾಡುತ್ತಾಳೆ. ಇದರ ಸಕಾರಾತ್ಮಕ ಪರಿಣಾಮ ಅವಳು ಮಾಡಿದ ಅಡುಗೆಯ ಮೇಲೆ ಆಗುತ್ತದೆ. ಕುಟುಂಬದಲ್ಲಿನ ಎಲ್ಲ ಸದಸ್ಯರು ಆ ಅಡುಗೆಯನ್ನು (ಆಹಾರವನ್ನು) ಸೇವಿಸುವುದರಿಂದ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ. ಇದರ ಅನುಭವವೇ ಈ ಪರೀಕ್ಷಣೆಯಿಂದ ಬಂದಿತು. ಸಾಮಾನ್ಯ ಗೃಹಿಣಿಗಿಂತ ಸಾಧಕಿ-ಗೃಹಿಣಿಯು ತಯಾರಿಸಿದ ಚಪಾತಿಯಲ್ಲಿ ಹೆಚ್ಚು ಸಾತ್ತ್ವಿಕತೆ ಕಂಡು ಬಂದಿತು, ಹಾಗೆಯೇ ಅವಳು ತಯಾರಿಸಿದ ಚಪಾತಿಯನ್ನು ಸೇವಿಸಿದ ನಂತರ ಪರೀಕ್ಷಣೆಯಲ್ಲಿನ ಸಾಧಕಿಯರ ಮೇಲೆ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಪರಿಣಾಮವಾಗಿರುವುದು ಕಂಡುಬಂದಿತು.

೩ ಆ. ಸನಾತನದ ಆಶ್ರಮದಲ್ಲಿ ತಯಾರಿಸಿದ ಚಪಾತಿಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ (ಸಕಾರಾತ್ಮಕ ಊರ್ಜೆ) ಇರುವುದರ ಕಾರಣ : ‘ಸನಾತನ ಆಶ್ರಮದಲ್ಲಿನ ಚೈತನ್ಯವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ’, ಎಂದು ಅಧ್ಯಾತ್ಮದಲ್ಲಿನ ತಜ್ಞರು (ಸಂತರು) ಹೇಳುತ್ತಿದ್ದಾರೆ. ಆಶ್ರಮದಲ್ಲಿನ ಚೈತನ್ಯದ ಸಕಾರಾತ್ಮಕ ಪರಿಣಾಮ ಆಶ್ರಮದಲ್ಲಿರುವ ಸಾಧಕರು, ಆಶ್ರಮದಲ್ಲಿನ ವಸ್ತುಗಳು, ಆಶ್ರಮದ ವಾಸ್ತು, ಆಶ್ರಮದ ಸುತ್ತಮುತ್ತಲಿನ ವಾತಾವರಣ ಇತ್ಯಾದಿಗಳ ಮೇಲೆ ಆಗುತ್ತದೆ. ಆಶ್ರಮದ ಅಡುಗೆಮನೆಯಲ್ಲಿ ಸಂತರ ವಾಣಿಯಲ್ಲಿನ ಚೈತನ್ಯಮಯ ಭಜನೆಗಳು ಅಥವಾ ದೇವತೆಗಳ ನಾಮಜಪವನ್ನು ಸಣ್ಣ ಧ್ವನಿಯಲ್ಲಿ ಹಾಕಿಡಲಾಗುತ್ತದೆ. ಅಡುಗೆಮನೆಯಲ್ಲಿ ಸೇವೆಯನ್ನು ಮಾಡುವ ಸಾಧಕರು ಭಾವಪೂರ್ಣ ಪ್ರಾರ್ಥನೆ ಮತ್ತು ನಾಮಜಪವನ್ನು ಮಾಡುತ್ತ ಸೇವೆಯನ್ನು ಮಾಡುತ್ತಾರೆ. ಆಶ್ರಮದಲ್ಲಿನ ಚೈತನ್ಯ ಮತ್ತು ಸಾಧಕರ ಸೇವಾಭಾವದಿಂದ ಆಶ್ರಮದಲ್ಲಿ ತಯಾರಿಸಲಾಗುವ ಪದಾರ್ಥಗಳು ಚೈತನ್ಯದಿಂದ ತುಂಬಿಕೊಳ್ಳುತ್ತವೆ. ಸನಾತನದ ಆಶ್ರಮದಲ್ಲಿ ತಯಾರಿಸಿದ ಚಪಾತಿಯಲ್ಲಿ ಚೈತನ್ಯವಿರುವುದರಿಂದ ಅದರಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆ ಕಂಡುಬಂದಿತು. ಪರೀಕ್ಷಣೆಯಲ್ಲಿನ ಸಾಧಕಿಯರು ಈ ಚಪಾತಿಗಳನ್ನು ಸೇವಿಸಿದ್ದರಿಂದ ಅವರಿಗೆ ಅದರಲ್ಲಿನ ಚೈತನ್ಯದ ಲಾಭವಾಯಿತು.

೩ ಇ. ಆಶ್ರಮದಲ್ಲಿನ ಸಾಧಕಿಗಿಂತ ಯಂತ್ರದಲ್ಲಿ ತಯಾರಿಸಿದ ಚಪಾತಿ ಎಲ್ಲಕ್ಕಿಂತ ಹೆಚ್ಚು ಸಕಾರಾತ್ಮಕವಾಗಿರುವುದರ ಕಾರಣ : ಸದ್ಯದ ಕಾಲದಲ್ಲಿ ಅನೇಕ ಗೃಹಿಣಿಯರು ಸಮಯದ ಉಳಿತಾಯ ಮತ್ತು ಕಷ್ಟ ಕಡಿಮೆಯಾಗಬೇಕೆಂದು, ಅಡುಗೆಮನೆಯಲ್ಲಿ ವಿದ್ಯುತ್ತಿನಿಂದ ನಡೆಯುವ ವಿವಿಧ ಪ್ರಕಾರದ ಯಂತ್ರಗಳನ್ನು ಉಪಯೋಗಿಸುತ್ತಾರೆ, ಉದಾ. ‘ಫುಡ್ ಪ್ರೊಸೆಸರ್’ (ತರಕಾರಿಗಳನ್ನು ಹೆಚ್ಚುವ ಯಂತ್ರ), ‘ಮಿಕ್ಸರ್ ಗ್ರೈಂಡರ್’ (ಚಟ್ನಿ ಮತ್ತು ವಿವಿಧ ಪದಾರ್ಥಗಳನ್ನು ಸಣ್ಣ ಪುಡಿ ಮಾಡುವ ಯಂತ್ರ), ‘ರೊಟಿ ಮೆಕರ್’ (ಚಪಾತಿಗಳನ್ನು ತಯಾರಿಸುವ ಯಂತ್ರ) ಇತ್ಯಾದಿಗಳು. ಯಂತ್ರಗಳನ್ನು ಉಪಯೋಗಿಸಿದರೆ ಬೇಗ ಅಡುಗೆ ತಯಾರಾಗುತ್ತದೆ; ಆದರೆ ಪದಾರ್ಥಗಳಲ್ಲಿನ ಸಾತ್ತ್ವಿಕತೆಯ ಮೇಲೆ ಅದರ ಪರಿಣಾಮವಾಗುತ್ತದೆ. ವಿದ್ಯುತ್ತಿನ ಮೇಲೆ ನಡೆಯುವ ಯಂತ್ರಗಳಿಂದ ನಿರ್ಮಾಣವಾಗುವ ನಾದದ ಕಡೆಗೆ ವಾತಾವರಣದಲ್ಲಿನ ತೊಂದರೆದಾಯಕ ಸ್ಪಂದನಗಳು ಆಕರ್ಷಿಸುತ್ತವೆ. ಇದರಿಂದ ಅಲ್ಲಿನ ವಾಯುಮಂಡಲವು ಕಲುಷಿತಗೊಂಡು ಅದರ ಪರಿಣಾಮ ಆ ಪದಾರ್ಥ, ಪದಾರ್ಥಗಳನ್ನು ತಯಾರಿಸುವ ವ್ಯಕ್ತಿ ಮತ್ತು ಆ ಪದಾರ್ಥಗಳನ್ನು ಸೇವಿಸುವ ವ್ಯಕ್ತಿ ಎಲ್ಲರ ಮೇಲಾಗಿ ಅವರೂ ತೊಂದರೆದಾಯಕ ಸ್ಪಂದನಗಳಿಂದ ತುಂಬಿಕೊಳ್ಳುತ್ತಾರೆ. (ಈ ಸಂಶೊಧನೆಯ ವಿವರವನ್ನು ಒಂದು ಬೇರೆ ಲೇಖನದಲ್ಲಿ ಕೊಡಲಾಗಿದೆ.) ಆದರೂ ಸನಾತನದ ಆಶ್ರಮದಲ್ಲಿ ಯಂತ್ರದಲ್ಲಿ ತಯಾರಿಸಿದ ಚಪಾತಿಯಲ್ಲಿ ಮಾತ್ರ  ಇಷ್ಟೊಂದು ಸಾತ್ತ್ವಿಕತೆ ಕಂಡುಬರುವುದು, ಹಾಗೆಯೇ ಆ ಚಪಾತಿಯನ್ನು ಸೇವಿಸಿದ ನಂತರ ಪರೀಕ್ಷಣೆಯಲ್ಲಿನ ಸಾಧಕಿಯರ ಮೇಲೆ ಎಲ್ಲಕ್ಕಿಂತ ಹೆಚ್ಚು ಪರಿಣಾಮವಾಗುವುದು, ಇದು ವೈಶಿಷ್ಟ್ಯಪೂರ್ಣವಾಗಿದೆ. ಇದರ ಹಿಂದಿನ ಕಾರಣಗಳನ್ನು ಮುಂದೆ ಕೊಡಲಾಗಿದೆ.

೧. ಆಧುನಿಕ ಯಂತ್ರಗಳನ್ನು ಉಪಯೋಗಿಸುವುದರ ಹಿಂದಿನ ಉದ್ದೇಶ ಸಾತ್ತ್ವಿಕವಾಗಿದೆ : ‘ಆಶ್ರಮದಲ್ಲಿನ ಸಾಧಕಿಯರು ಕೈಯಿಂದ ಚಪಾತಿಗಳನ್ನು ಮಾಡುವ ಸಮಯವನ್ನು ಅವರು ತಮ್ಮ ವ್ಯಷ್ಟಿ ಸಾಧನೆಗಾಗಿ, ಹಾಗೆಯೇ ಇತರ ಸಮಷ್ಟಿ ಸೇವೆಗಾಗಿ ಉಪಯೋಗಿಸಲು ಬರಬೇಕು’, ಎಂಬ ಉದ್ದೇಶದಿಂದ ಆಶ್ರಮದಲ್ಲಿ ಹಿಟ್ಟು ನಾದುವ ಯಂತ್ರ, ತರಕಾರಿಗಳನ್ನು ಹೆಚ್ಚುವ ಯಂತ್ರ, ಚಪಾತಿ ತಯಾರಿಸುವ ಯಂತ್ರ ಇತ್ಯಾದಿ ಯಂತ್ರಗಳನ್ನು ಉಪಯೋಗಿಸುತ್ತಾರೆ.

೨. ಯಂತ್ರದಲ್ಲಿ ಚಪಾತಿ ಮಾಡುವ ಸಾಧಕಿಯರು ನಾಮಜಪವನ್ನು ಮಾಡುತ್ತ ಭಾವಪೂರ್ಣವಾಗಿ ಎಲ್ಲ ಕೃತಿಗಳನ್ನು ಮಾಡುತ್ತಾರೆ.

೩. ಆಶ್ರಮದಲ್ಲಿನ ಅಡುಗೆಮನೆಯಲ್ಲಿ ಸಂತರ ವಾಣಿಯಲ್ಲಿನ ಭಜನೆಗಳು ಅಥವಾ ದೇವತೆಗಳ ನಾಮಜಪವನ್ನು ಸಣ್ಣ ಧ್ವನಿಯಲ್ಲಿ ಹಾಕಿಡಲಾಗುತ್ತದೆ. ಇದರಿಂದ ಅಲ್ಲಿನ ವಾತಾವರಣದಲ್ಲಿನ ಸಾತ್ತ್ವಿಕತೆ ಉಳಿಯುತ್ತದೆ. ಈ ಸಾತ್ತ್ವಿಕತೆಯ ಸಕಾರಾತ್ಮಕ ಪರಿಣಾಮವು ಆಶ್ರಮದಲ್ಲಿ ತಯಾರಿಸಿದ ಪದಾರ್ಥಗಳ ಮೇಲಾಗಿ ಅವೂ ಚೈತನ್ಯದಿಂದ ತುಂಬಿಕೊಳ್ಳುತ್ತವೆ.

೪. ಆಶ್ರಮದಲ್ಲಿನ ಯಂತ್ರದಲ್ಲಿ ತಯಾರಿಸಿದ ಚಪಾತಿಗಳಲ್ಲಿ ಉಚ್ಚಸ್ತರದ ಸಕಾರಾತ್ಮಕ ಸ್ಪಂದನಗಳಿರುವುದು : ಮನೆಯಲ್ಲಿ ಕೈಯಿಂದ ತಯಾರಿಸಿದ ಚಪಾತಿಗಳ ಮೇಲೆ ವ್ಯಕ್ತಿಯಲ್ಲಿನ ಸ್ಪಂದನಗಳ ಪರಿಣಾಮವಾಗುವುದರಿಂದ ಆ ಚಪಾತಿಗಳಲ್ಲಿ ಸಗುಣ ಸ್ತರದಲ್ಲಿನ ಸಕಾರಾತ್ಮಕ ಸ್ಪಂದನಗಳಿವೆ. ಆಶ್ರಮದಲ್ಲಿನ ಯಂತ್ರದಲ್ಲಿ ಮಾಡಿದ ಚಪಾತಿಗಳಲ್ಲಿ (ಸಗುಣ-ನಿರ್ಗುಣ) ಉಚ್ಚ ಸ್ತರದಲ್ಲಿನ ಸಕಾರಾತ್ಮಕ ಸ್ಪಂದನಗಳಿವೆ. ಇದರಿಂದಾಗಿ ಪರೀಕ್ಷಣೆಯಲ್ಲಿನ ಸಾಧಕಿಯರ ಮೇಲೆ ಯಂತ್ರದಲ್ಲಿ ಮಾಡಿದ ಚಪಾತಿಗಳನ್ನು ಸೇವಿಸಿದ್ದರಿಂದ ಎಲ್ಲಕ್ಕಿಂತ ಹೆಚ್ಚು ಸಕಾರಾತ್ಮಕ ಪರಿಣಾಮವಾಯಿತು.’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.(೩.೯.೨೦೨೧)

ವಿ-ಅಂಚೆ ವಿಳಾಸ : [email protected]

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

ಈ ವಾರದ ಸಂಚಿಕೆಯಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು