ದೀಪಾವಳಿ ನಿಮಿತ್ತ ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ಸೈನಿಕರಿಂದ ಪರಸ್ಪರ ಸಿಹಿ ಹಂಚಿಕೆ

ನವದೆಹಲಿ – ಭಾರತ ಮತ್ತು ಚೀನಾ ಇವರ ನಡುವೆ ಆದ ಒಪ್ಪಂದದ ಪ್ರಕಾರ, ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನಲ್ಲಿ ನೇರ ನಿಯಂತ್ರಣ ರೇಖೆಯಿಂದ ಎರಡೂ ದೇಶಗಳ ಸೈನಿಕರನ್ನು ಹಿಂಪಡೆಯಲಾಗಿದೆ. ಅಕ್ಟೋಬರ್ 31 ರಂದು ದೀಪಾವಳಿ ನಿಮಿತ್ತ ಚೀನಾ ಮತ್ತು ಭಾರತದ ಸೈನಿಕರು ಪರಸ್ಪರ ಸಿಹಿ ಹಂಚಿದರು. ಇಲ್ಲಿ ಈಗ ಗಸ್ತು ತಿರುಗುವ ಬಗ್ಗೆ ಶೀಘ್ರದಲ್ಲೇ ಗ್ರೌಂಡ್ ಕಮಾಂಡರ್ ನ ಅಧಿಕಾರಿಗಳ ಮಧ್ಯೆ ಚರ್ಚೆ ನಡೆಯಲಿದೆ. ಭಾರತ ಮತ್ತು ಚೀನಾ ಇವರ ನಡುವಿನ ಒಪ್ಪಂದದ ಕುರಿತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಮಾತನಾಡಿ, ಸೇನೆಯನ್ನು ಹಿಂಪಡೆಯುವುದು, ಇದು ಮೊದಲ ಹೆಜ್ಜೆ ಆಗಿದೆ. ಮುಂದಿನ ಹಂತವು ಅಂದರೆ ಒತ್ತಡವನ್ನು ಕಡಿಮೆ ಮಾಡುವುದು, ಯಾವಾಗ ಭಾರತಕ್ಕೆ, ಚೀನಾ ಕೂಡ ಅದನ್ನೇ ಬಯಸುತ್ತದೆ ಎಂದು ಖಚಿತವಾಗುವುದೋ. ಆಗ ಗಡಿಯನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಚೀನಾವು ಸಿಹಿ ಕೊಟ್ಟರೂ, ಚೀನಾದ ಇತಿಹಾಸ ವಿಶ್ವಾಸಘಾತುಕ ಇರುವುದರಿಂದ ಅವರ ಜೊತೆಗೆ ಎಚ್ಚರಿಕೆಯಿಂದ ಇರುವುದು ಅವಶ್ಯಕವಾಗಿದೆ !