ಭಾರತವು ಕೆನಡಾ ಸರಕಾರಕ್ಕೆ ‘ಅರ್ಥವಾಗುವ ಭಾಷೆಯಲ್ಲಿ’ ಪ್ರತ್ಯುತ್ತರ ನೀಡಿದೆ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ

ಪುಣೆ – ಭಾರತವು ಕೆನಡಾದಲ್ಲಿ ಸಂಘಟಿತ ಅಪರಾಧದ ವಿಷಯವನ್ನು ಎತ್ತಿತು; ಆದರೆ ಕೆನಡಾ ಸರಕಾರ ಇದರತ್ತ ಕಣ್ಣು ಮುಚ್ಚಿ ಕುಳಿತು. ಕೆನಡಾ ಸರಕಾರವು ಭಾರತೀಯ ಹೈಕಮಿಷನರ್‌ಗಳು ಮತ್ತು ರಾಜತಾಂತ್ರಿಕರನ್ನು ಗುರಿಯಾಗಿಸಿತ್ತು. ಭಾರತವು ‘ಅರ್ಥವಾಗುವ ಭಾಷೆಯಲ್ಲಿ’ ಉತ್ತರಿಸಿದೆ. ಭಾರತದ ರಾಷ್ಟ್ರೀಯ ಹಿತಾಸಕ್ತಿ, ಸಮಗ್ರತೆ ಅಥವಾ ಸಾರ್ವಭೌಮತ್ವದ ಪ್ರಶ್ನೆ ಎದುರಾದಾಗ ಭಾರತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹೇಳಿದರು. ಅವರು ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ಡಾ. ಜೈಶಂಕರ್ ಮಾತು ಮುಂದುವರೆಸಿ, ಕೆನಡಾದಲ್ಲಿ ಒಂದು ಸಣ್ಣ ಗುಂಪು (ಖಾಲಿಸ್ತಾನಿ) ಇದೆ, ಅದು ತನ್ನನ್ನು ದೊಡ್ಡ ರಾಜಕೀಯ ಶಕ್ತಿಯನ್ನಾಗಿ ಮಾಡಿದೆ. ದುರದೃಷ್ಟವಶಾತ್, ಅಲ್ಲಿನ ರಾಜಕಾರಣಿಗಳು ಆ ಗುಂಪಿನ ಓಲೈಕೆ ಮಾಡುತ್ತಿದೆ. ಇದು ನಮಗೆ ಮಾತ್ರವಲ್ಲ, ದ್ವಿಪಕ್ಷೀಯ ಸಂಬಂಧಕ್ಕೂ ಕೆಟ್ಟದು. ಇದು ಕೆನಡಾಕ್ಕೂ ಅಪಾಯವಾಗಿದೆ. ಸ್ನೇಹಪರ ಪ್ರಜಾಸತ್ತಾತ್ಮಕ ದೇಶವೆಂದು ಪರಿಗಣಿಸುವ ದೇಶವೇ ಭಾರತದ ಬೆನ್ನಿಗೆ ಚೂರಿ ಹಾಕಿದೆ ಮತ್ತು ಅತ್ಯಂತ ವೃತ್ತಿಪರವಲ್ಲದ ಮನೋಭಾವವನ್ನು ಅಳವಡಿಸಿಕೊಂಡಿದೆ. ಸಮಾಧಾನಕರ ಪರಿಹಾರವನ್ನು ಪ್ರಯತ್ನಿಸಬಹುದಿತ್ತು ಎಂದು ಹೇಳಿದರು.

ಭಾರತ-ಚೀನಾ ಗಡಿಯಲ್ಲಿ 2 ಕಾರಣಗಳಿಗೆ ಒಪ್ಪಂದ, ಅಂದರೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗಿಲ್ಲ !

ನೇರ ನಿಯಂತ್ರಣ ರೇಖೆಯಲ್ಲಿ ಗಸ್ತು ತಿರುಗಲು ಭಾರತ ಮತ್ತು ಚೀನಾ ನಡುವಿನ ಒಪ್ಪಂದದ ಕುರಿತು ಭಾರತ ಸರಕಾರ ತನ್ನ ಮಾತಿಗೆ ಬದ್ಧವಾಗಿ ನಡೆದುಕೊಂಡಿದೆ ಎಂದು ಎಸ್. ಜೈಶಂಕರ ಹೇಳಿದರು. ನಾವು ಇಂದು ಎಲ್ಲಿ ತಲುಪಿದ್ದೇವೆ ಅದಕ್ಕೆ 2 ಕಾರಣಗಳಿವೆ.

ಮೊದಲು ನಾವು ನಮ್ಮ ಮಾತಿಗೆ ಹಿಂತಿರುಗಲಿಲ್ಲ. ದೇಶವನ್ನು ರಕ್ಷಿಸುವ ಪ್ರತಿಯೊಂದು ಅವಕಾಶದಲ್ಲೂ ಸೇನೆಯು ದೃಢವಾಗಿ ನಿಂತಿದ್ದರಿಂದ ಮಾತ್ರ ಇದು ಸಾಧ್ಯವಾಯಿತು. ಸೇನೆ ತನ್ನ ಕೆಲಸವನ್ನು ಮಾಡಿದೆ. ಎರಡನೆಯದಾಗಿ, ರಾಜತಾಂತ್ರಿಕತೆ ಕೆಲಸ ಮಾಡಿದೆ. ಈ ಒಪ್ಪಂದವು ಎರಡು ದೇಶಗಳ ನಡುವಿನ ಸಮಸ್ಯೆಗಳು ಬಗೆಹರಿದಿದೆ ಎಂದಲ್ಲ; ಆದರೆ ಸೈನ್ಯ ಹಿಂಪಡೆಯುವಿಕೆಯ ಮೊದಲ ಹಂತವನ್ನು ಸಾಧಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಸಹಜವಾಗಿ ನಂಬಿಕೆಯನ್ನು ಪುನರ್ನಿರ್ಮಿಸಲು ಮತ್ತು ಒಟ್ಟಿಗೆ ಕೆಲಸ ಮಾಡಲು ಸಮಯ ತೆಗೆದುಕೊಳ್ಳುತ್ತದೆ. ಬ್ರಿಕ್ಸ್ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ರಷ್ಯಾದ ಕಜಾನ್‌ನಲ್ಲಿ ಭೇಟಿಯಾದಾಗ, ಹೇಗೆ ಮುಂದುವರಿಯಬೇಕು ಎಂಬುದನ್ನು ನೋಡಲು ಎರಡೂ ದೇಶಗಳ ವಿದೇಶಾಂಗ ಸಚಿವರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಭೇಟಿ ಮಾಡಲು ನಿರ್ಧರಿಸಲಾಗಿತ್ತು.

ಭಾರತದ ಬೆನ್ನಿಗೆ ಚೂರಿ ಹಾಕಿದ ಕೆನಡಾ ! – ಕೆನಡಾದಲ್ಲಿನ ಭಾರತದ ಮಾಜಿ ಹೈಕಮಿಷನರ್ ಸಂಜಯ ವರ್ಮಾ

ಕೆನಡಾದಲ್ಲಿನ ಭಾರತದ ಮಾಜಿ ಹೈಕಮಿಷನರ್ ಸಂಜಯ ವರ್ಮಾ ಅವರು ಕೆನಡಾದ ವರ್ತನೆಯನ್ನು ಆಕ್ಷೇಪಿಸುತ್ತಾ, ‘ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ‘ಪ್ರಜಾಪ್ರಭುತ್ವ ದೇಶವು ಬೆನ್ನಿಗೆ ಚೂರಿ ಹಾಕಿದೆ’ ಎಂದು ಆರೋಪಿಸಿದ್ದಾರೆ. ವರ್ಮಾ ಇವರು ಕೆನಡಾದಲ್ಲಿ ಖಲಿಸ್ತಾನಿ ಚಳವಳಿಯ ಮೂಲ, ಚುನಾವಣಾ ಲಾಭಕ್ಕಾಗಿ ಸ್ಥಳೀಯ ರಾಜಕಾರಣಿಗಳಿಂದ ಪಡೆದ ಬೆಂಬಲ ಇತ್ಯಾದಿಗಳ ಬಗ್ಗೆ ಮಾತನಾಡಿದರು. ಖಲಿಸ್ತಾನಿಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಲು ಅಪರಾಧ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂದು ಅವರು ಆರೋಪಿಸಿದ್ದಾರೆ.