India China Border Standoff : ಭಾರತ ಮತ್ತು ಚೀನಾ ನಡುವೆ ವಿಶ್ವಾಸ ನಿರ್ಮಾಣವಾಗಲು ತಡವಾಗುವುದು !

ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿಯವರ ಹೇಳಿಕೆ

ಭಾರತದ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

ನವ ದೆಹಲಿ – ಭಾರತ ಮತ್ತು ಚೀನಾ ಇವರಲ್ಲಿ ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ ಪುನಃ ಗಸ್ತು ಹಾಕುವ ಸಂದರ್ಭದಲ್ಲಿ ಒಪ್ಪಂದ ಆಗಿದೆ, ಹೀಗೆ ಎರಡು ದೇಶಗಳು ಅಧಿಕೃತವಾಗಿ ಮಾಹಿತಿ ನೀಡಿರುವಾಗ ಇದರ ಕುರಿತು ಭಾರತದ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಇವರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ಈ ಒಪ್ಪಂದ ಒಳ್ಳೆಯದೇ ಇದೆ; ಆದರೆ ಎಲ್ಲಕ್ಕಿಂತ ಮೊದಲು ಎರಡು ದೇಶಗಳಲ್ಲಿ ಪುನಃ ವಿಶ್ವಾಸ ನಿರ್ಮಾಣ ಆಗಬೇಕಾಗುತ್ತದೆ. ಅದಕ್ಕಾಗಿ ಸೈನಿಕರು ಪರಸ್ಪರರನ್ನು ನೋಡುವುದು ಮತ್ತು ಮಾತನಾಡುವುದು ಆವಶ್ಯಕವಾಗಿದೆ. ಇದಕ್ಕಾಗಿ ಗಸ್ತು ಹಾಕುವುದಕ್ಕಾಗಿ ಯೋಗ್ಯ ವಾತಾವರಣ ಉಪಲಬ್ಧ ಮಾಡಿಕೊಡಲಾಗುವುದು. ನಾವು ಪುನಃ ವಿಶ್ವಾಸ ಗಳಿಸುವ ಪ್ರಕ್ರಿಯೆಯಲ್ಲಿದ್ದೂ ಅದಕ್ಕೆ ಸಮಯ ಬೇಕಾಗಬಹುದು, ಎಂದು ಅವರು ಸ್ಪಷ್ಟನೆ ನೀಡಿದರು.

ಜನರಲ್ ದ್ವಿವೇದಿ ಇವರು ಮಾತು ಮುಂದುವರೆಸುತ್ತಾ, ಎರಡು ದೇಶಗಳಲ್ಲಿ ವಿಶ್ವಾಸ ನಿರ್ಮಾಣ ಆಗುವುದಕ್ಕಾಗಿ ಸೈನ್ಯ ಹಿಂದೆ ಕರೆಸಿಕೊಳ್ಳುವುದು ಮತ್ತು ‘ಬಫರ್ ಝೋನ್’ (ಗಡಿಯಲ್ಲಿನ ನಿರ್ಜನ ಪ್ರದೇಶ) ವ್ಯವಸ್ಥಾಪನೆ ಮಾಡುವುದು ಕೂಡ ಅಷ್ಟೇ ಮಹತ್ವದ್ದಾಗಿದೆ. ನಾವು ಯಾವಾಗ ಪರಸ್ಪರ ಮಾತು ಕೇಳುವೆವು ಮತ್ತು ಪರಸ್ಪರರನ್ನು ಸಮಾಧಾನ ಮತ್ತು ಸಂತುಷ್ಟ ಗೊಳಿಸುವೆವು, ಆಗಲೇ ವಿಶ್ವಾಸ ನಿರ್ಮಾಣವಾಗಬಹುದು. ಸಿದ್ಧ ಇರುವ ಬಫರ್ ಝೋನನಲ್ಲಿ ನಾವು ಹೋಗುವೆವು, ಹೀಗೆ ವಿಶ್ವಾಸ ವ್ಯಕ್ತಪಡಿಸಬಹುದು. ಪೆಟ್ರೋಲಿಂಗನಿಂದ ಈ ಪ್ರಕ್ರಿಯೆ ನಡೆಸುವುದು ಸುಲಭ. ಎರಡು ಕಡೆಯವರು ಪರಸ್ಪರರ ಮನಸ್ಸು ಹೊರಳಿಸಲು ಅವಕಾಶ ದೊರೆಯುವುದು. ಒಮ್ಮೆ ವಿಶ್ವಾಸ ನಿರ್ಮಾಣವಾದರೆ, ಮುಂದಿನ ಹೆಜ್ಜೆ ಇಡಬಹುದು ಎಂದು ಹೇಳಿದರು.

ಏನು ಈ ಪ್ರಕರಣ

ಏಪ್ರಿಲ್ ೨೦೨೦ ರಲ್ಲಿ ಚೀನಾ ಪೂರ್ವ ಲಢಾಖನ ೬ ಪ್ರದೇಶದಲ್ಲಿ ಅತಿಕ್ರಮಣ ಮಾಡಿತ್ತು. ೨೦೨೨ ವರೆಗೆ ಚೀನಾ ಸೈನ್ಯವು ೪ ಪ್ರದೇಶಗಳಿಂದ ಹಿಂದೆ ಸರಿದಿತ್ತು. ಅದರ ನಂತರ ಗಲ್ವಾನ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನ್ಯದ ನಡುವೆ ಯುದ್ಧವಾಗಿತ್ತು. ಅದರಲ್ಲಿ ಭಾರತದ ೨೦ ಸೈನಿಕರು ವೀರಮರಣ ಹೊಂದಿದರು ಹಾಗೂ ಚೀನಾದ ೪೦ ಕ್ಕಿಂತಲೂ ಹೆಚ್ಚಿನ ಸೈನಿಕರು ಹತರಾಗಿದ್ದರು. ಅಂದಿನಿಂದ ಭಾರತೀಯ ಸೈನ್ಯದಲ್ಲಿ ದೌಲತ್ ಬೇಗ ಓಲ್ಡಿ ಮತ್ತು ಡೇಮಚೋಕ ಈ ಪ್ರದೇಶಗಳಲ್ಲಿ ಗಸ್ತು ಹಾಕುವ ಅನುಮತಿ ಇರಲಿಲ್ಲ.

ಸಂಪಾದಕೀಯ ನಿಲುವು

ಭಾರತ ಮತ್ತು ಚೀನಾ ಇವರಲ್ಲಿ ವಿಶ್ವಾಸ ಎಂದಿಗೂ ನಿರ್ಮಾಣವಾಗಲು ಸಾಧ್ಯವಿಲ್ಲ; ಕಾರಣ ಚಪ್ಪಾಳೆ ಒಂದೇ ಕೈಯಿಂದ ಹೊಡೆಯಲಾಗದು. ಚೀನಾದ ಮನಸಿನಸ್ಥಿತಿ, ಅದರ ಇತಿಹಾಸ ನೋಡಿದರೆ, ಇದೇ ಸತ್ಯವಾಗಿದೆ. ಆದ್ದರಿಂದ ಭಾರತವು ಯಾವಾಗಲೂ ಜಾಗರೂಕರಾಗಿ ಚೀನಾದೊಂದಿಗೆ ವರ್ತಿಸಬೇಕು !