India America Relations: ಭಾರತದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದಕ್ಕೆ ನಮಗೆ ಹೆಮ್ಮೆ (ಅಂತೆ) – ಅಮೇರಿಕಾ

ಕಣ್ಮರೆಯಾಗುತ್ತಿರುವ ಅಮೇರಿಕಾದ ಜೋ ಬೈಡನ್ ಸರಕಾರದ ಹೇಳಿಕೆ

ಅಮೇರಿಕೆಯ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್

ವಾಷಿಂಗ್ಟನ (ಅಮೇರಿಕಾ) – ಭಾರತದೊಂದಿಗಿನ ಸಂಬಂಧವನ್ನು ಸುಭದ್ರಗೊಳಿಸಲು ಬೈಡನ ಆಡಳಿತ ಹೆಮ್ಮೆ ಪಡುತ್ತದೆಯೆಂದು ಅಮೇರಿಕೆಯ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಪತ್ರಿಕಾಗೋಷ್ಠಿಯಲ್ಲಿನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರು ಮಾತನಾಡಿ, ‘ಕ್ವಾಡ್’ನ (ಅಮೇರಿಕಾ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ನ ಗುಂಪು) ಮೂಲಕ ಹೆಚ್ಚುತ್ತಿರುವ ನಮ್ಮ ಸಹಕಾರದಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧಗಳು ಬಲಗೊಂಡಿವೆ ಎಂದು ಹೇಳಿದರು. ನಾವು ಮೊದಲ ದಿನದಿಂದಲೇ ನಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಿದ್ದೇವೆ ಮತ್ತು ಈಗ ನಾವು ಹುದ್ದೆಯನ್ನು ತೊರೆಯುತ್ತಿರುವ ಸಿದ್ಧತೆಯಲ್ಲಿರುವಾಗ, ಅದನ್ನು ಒಂದು ದೊಡ್ಡ ಯಶಸ್ಸು ಎಂದು ನೋಡುತ್ತೇವೆ ಎಂದು ಹೇಳಿದರು.

ಟ್ರಂಪ್ ಸರಕಾರದ ಅವಧಿಯಲ್ಲಿಯೂ ಭಾರತದೊಂದಿಗೆ ಉತ್ತಮ ಸಂಬಂಧ ಉಳಿಯಲಿದೆ ! – ತಜ್ಞರು

ಟ್ರಂಪ ಇವರ ಸರಕಾರ ಬಂದ ಬಳಿಕ ಭಾರತ ಮತ್ತು ಅಮೇರಿಕದ ಸಂಬಂಧ ಹೇಗಿರುತ್ತದೆ ? ಎನ್ನುವ ಬಗ್ಗೆ ತಜ್ಞರು, ಅಮೇರಿಕಾದಲ್ಲಿ ಯಾವುದೇ ಪಕ್ಷದ ಸರಕಾರ ಬಂದರೂ ಭಾರತದೊಂದಿಗಿನ ಅಮೇರಿಕಾದ ಸಂಬಂಧ ದೃಢವಾಗಿಯೇ ಇರುತ್ತದೆ. ಇದರ ಕಾರಣ ಚೀನಾದ ಹೆಚ್ಚುತ್ತಿರುವ ಪ್ರಭಾವ ಮತ್ತು ಭಾರತದ ಹೆಚ್ಚುತ್ತಿರುವ ಆರ್ಥಿಕತೆಯಾಗಿದೆ. 2016 ರಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದಾಗಲೂ ಅವರು ಭಾರತದೊಂದಿಗಿನ ಸಂಬಂಧಗಳಿಗೆ ಆದ್ಯತೆ ನೀಡಿದ್ದರು. ಆದ್ದರಿಂದ ಟ್ರಂಪ್ ಅಧಿಕಾರಕ್ಕೆ ಮರಳಿ ಬಂದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಉತ್ತಮವಾಗಿರುತ್ತವೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಟ್ರಂಪ್ ಅವರ ರಾಜಕೀಯವನ್ನು ನೋಡಿದರೆ ಭಾರತದಲ್ಲಿಯೂ ಕೆಲವು ಸಮಸ್ಯೆಗಳೂ ಆಗುವ ಸಾಧ್ಯತೆಯಿದೆ ಮತ್ತು ಅವುಗಳಲ್ಲಿ ಆರ್ಥಿಕ ಸಂಬಂಧಗಳ ವಿಷಯವು ಅತ್ಯಂತ ಮಹತ್ವದ್ದಾಗಿದೆ. ಟ್ರಂಪ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಅಮೇರಿಕದ ವಸ್ತುಗಳ ಮೇಲೆ ಭಾರತ ವಿಧಿಸಿರುವ ಸುಂಕದ ಬಗ್ಗೆ ದೂರಿದ್ದರು. ಒಂದು ವೇಳೆ ಅವರು ಅಧಿಕಾರಕ್ಕೆ ಬಂದರೆ, ಅಮೇರಿಕಾದ ವಸ್ತುಗಳ ಮೇಲೆ ಹೆಚ್ಚು ತೆರಿಗೆ ವಿಧಿಸುವ ದೇಶಗಳ ಮೇಲೆ ಅವರು ಹೆಚ್ಚು ತೆರಿಗೆ ವಿಧಿಸುವುದಾಗಿ ಹೇಳಿದ್ದರು. ಈಗ ಒಂದು ವೇಳೆ ಟ್ರಂಪ ಅವರು ಹೆಚ್ಚಿನ ತೆರಿಗೆ ವಿಧಿಸಿದರೆ ಭಾರತಕ್ಕೆ ಹೊಡೆತ ಬೀಳಬಹುದು ಎಂದು ಹೇಳಿದರು.

ಸಂಪಾದಕೀಯ ನಿಲುವು

‘ಭಾರತದ ವಿರುದ್ಧ ಕ್ರಮ ಕೈಗೊಳ್ಳುವುದು ಎಂದರೆ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವುದು’ ಎಂದು ಬೈಡನ್ ಸರಕಾರಕ್ಕೆ ಅನಿಸುತ್ತದೆಯೇ ? ಒಂದು ವೇಳೆ ಬೈಡೆನ್ ಸರಕಾರ ಭಾರತದೊಂದಿಗೆ ನಿಜವಾಗಿಯೂ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಬಯಸುತ್ತಿದ್ದರೆ, ಖಲಿಸ್ತಾನಿ ಭಯೋತ್ಪಾದಕ ಪನ್ನುವನ್ನು ಬಂಧಿಸಿ ಭಾರತಕ್ಕೆ ಒಪ್ಪಿಸುತ್ತಿದ್ದರು. ಬಾಂಗ್ಲಾದೇಶದಲ್ಲಿ ಹಸ್ತಕ್ಷೇಪ ಮಾಡಿ ಭಾರತ ವಿರೋಧಿ ಮತಾಂಧರನ್ನು ಅಧಿಕಾರಕ್ಕೆ ಕೂರಿಸುತ್ತಿರಲಿಲ್ಲ !