ಸನಾತನ ಸಂಸ್ಥೆಯ ಸಾಧಕರಿಗೆ ಮತ್ತು ಹಿಂದು ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಸೂಚನೆ !
೧. ಸಾಧಕರು, ಧರ್ಮಪ್ರೇಮಿಗಳು ಮತ್ತು ಹಿಂದುತ್ವನಿಷ್ಠರು ಇವರಿಗೆ ಕಾನೂನುಗಳ ಕುರಿತು ಏನಾದರೂ ಸಮಸ್ಯೆಗಳು ಉದ್ಭವಿಸಿದ್ದಲ್ಲಿ ಸಮಾಜದಲ್ಲಿನ ನ್ಯಾಯವಾದಿಗಳ ಬಳಿ ಹೋಗಬೇಕಾಗುತ್ತದೆ
‘ಸಾಧಕರು, ಧರ್ಮಪ್ರೇಮಿಗಳು ಮತ್ತು ಹಿಂದುತ್ವನಿಷ್ಠರು ಇವರಿಗೆ ಕಾರಣಾಂತರಗಳಿಂದ ಕಾನೂನಿನ ವಿಷಯದಲ್ಲಿ ನ್ಯಾಯಾಲಯೀನ ಸಮಸ್ಯೆಗಳು ಉದ್ಭವಿಸುತ್ತವೆ; ಆದರೆ ಅವರಿಗೆ ಹಿತಚಿಂತಕ, ಹಿಂದುತ್ವನಿಷ್ಠ ಅಥವಾ ಸನಾತನದ ಸಾಧಕ ನ್ಯಾಯವಾದಿಗಳೊಂದಿಗೆ ಆತ್ಮೀಯತೆ ಇಲ್ಲದಿರುವುದರಿಂದ ನ್ಯಾಯಾಲಯದಲ್ಲಿ ತಮ್ಮ ಮೊಕದ್ದಮೆಗಳನ್ನು ಸಾಧಕ, ಧರ್ಮಪ್ರೇಮಿ ಮತ್ತು ಹಿಂದುತ್ವನಿಷ್ಠ ನ್ಯಾಯವಾದಿಗಳಿಗೆ ವಹಿಸಿಕೊಡದೇ ಅಥವಾ ಅವರ ಸಲಹೆಯನ್ನು ಪಡೆಯದೇ ಸಮಾಜದಲ್ಲಿನ ಇತರ ನ್ಯಾಯವಾದಿಗಳ ಕಡೆಗೆ ಒಪ್ಪಿಸುತ್ತಾರೆ.
೨. ಸಮಾಜದಲ್ಲಿನ ನ್ಯಾಯವಾದಿಗಳ ಶುಲ್ಕವು ಭರಿಸಲು ಅಸಾಧ್ಯವಾಗುವುದು ಮತ್ತು ಸಮಾಧಾನಕರ ಸೇವೆ ಸಿಗದಿರುವುದು
ಸಾಧಕರಿಗೆ ಅಥವಾ ಧರ್ಮ ಪ್ರೇಮಿಗಳಿಗೆ ಇತರ ನ್ಯಾಯವಾದಿಗಳ ಶುಲ್ಕವನ್ನು ಭರಿಸಲು ಸಾಧ್ಯವಾಗುವುದಿಲ್ಲ ಅಥವಾ ಅವರಿಗೆ ಸಮಾಧಾನಕರ ಸೇವೆ ಸಿಗುವುದಿಲ್ಲ. ಇದರಲ್ಲಿ ಸಾಧಕರ, ಧರ್ಮಪ್ರೇಮಿಗಳ ಮತ್ತು ಹಿಂದುತ್ವನಿಷ್ಠರ ಸಮಯ ಮತ್ತು ಶಕ್ತಿ ಅನಾವಶ್ಯಕವಾಗಿ ಖರ್ಚಾಗುತ್ತದೆ.
‘ಸನಾತನದ ಸಾಧಕರು ಹಿಂದುತ್ವನಿಷ್ಠ, ಹಿತಚಿಂತಕ ಅಥವಾ ಸನಾತನದ ನ್ಯಾಯವಾದಿಗಳೊಂದಿಗೆ ಆತ್ಮೀಯತೆಯನ್ನು ಬೆಳೆಸುವುದು, ಇದು ಕಾಲಕ್ಕೆ ಅವಶ್ಯಕವಾಗಿರುವುದು
‘ಸನಾತನದ ಸಾಧಕರು ಹಿತಚಿಂತಕ, ಹಿಂದುತ್ವನಿಷ್ಠ ಅಥವಾ ಸನಾತನದ ಸಾಧಕ ನ್ಯಾಯವಾದಿಗಳೊಂದಿಗೆ ಆತ್ಮೀಯತೆಯನ್ನು ಬೆಳೆಸದಿದ್ದರೆ, ಸಮಾಜದಲ್ಲಿನ ಇತರ ಜನರೊಂದಿಗೆ ನಮ್ಮ ಆತ್ಮೀಯತೆ ಹೇಗೆ ಬೆಳೆಸುವರು ? ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ‘ಸನಾತನದ ಸಾಧಕರು ಹಿಂದುತ್ವನಿಷ್ಠರ, ಹಿತಚಿಂತಕರ ಮತ್ತು ಸನಾತನದ ಸಾಧಕ ನ್ಯಾಯವಾದಿಗಳೊಂದಿಗೆ ಆತ್ಮೀಯತೆಯನ್ನು ಬೆಳೆಸುವುದು, ಇದು ಕಾಲದ ಆವಶ್ಯಕತೆಯಾಗಿದೆ.
– ನ್ಯಾಯವಾದಿ ರಾಮದಾಸ ಕೇಸರಕರ, ಸನಾತನ ಸಂಸ್ಥೆಯ ಕಾನೂನಿನ ವಿಷಯದಲ್ಲಿ ಗೌರವ ಸಲಹೆಗಾರರು, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೧೨.೨೦೨೧)