ಸಂಸ್ಕೃತ ಭಾಷೆಯ ‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯನ್ನು ಹಾಡಿದಾಗ  ಹಾಡಿದ ಸಾಧಕಿಯರಲ್ಲಿ ತುಂಬಾ ಪ್ರಮಾಣದಲ್ಲಿ ಸಕಾರಾತ್ಮಕತೆ ಹೆಚ್ಚಳವಾಗುವುದು 

ಕರ್ನಾಟಕದಲ್ಲಿ ಸ್ಥಾಪಿಸಲಾಗುತ್ತಿರುವ ಸಂಸ್ಕೃತ ವಿಶ್ವವಿದ್ಯಾಲಯವು ‘ನಿರುಪಯುಕ್ತ’ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಪಂಡಿತ ನೆಹರು ಇವರು ಸಂಸ್ಕೃತವನ್ನು ‘ಮೃತಭಾಷೆ’ ಎಂದು ನಿರ್ಧರಿಸಿದ್ದರು. ಪ್ರತ್ಯಕ್ಷದಲ್ಲಿ ದೇವವಾಣಿಯಾಗಿರುವ ಸಂಸ್ಕೃತ ಭಾಷೆಯ ಬಗ್ಗೆ ಮಾಡಿದ ಸಂಶೋಧನೆಯನ್ನು ನಮ್ಮ ವಾಚಕರಿಗಾಗಿ ಇಲ್ಲಿ ಕೊಡುತ್ತಿದ್ದೇವೆ.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !

‘ವಂದೇ ಮಾತರಮ್’ ಈ ಗೀತೆಯು ಸ್ವಾತಂತ್ರ್ಯ ಹೋರಾಟದಲ್ಲಿ ಅವಿಭಾಜ್ಯ ಘಟಕವಾಗಿತ್ತು; ಅಷ್ಟೇ ಅಲ್ಲ ‘ವಂದೇ ಮಾತರಮ್’ ಹೊರತು ಭಾರತೀಯ ಸ್ವಾತಂತ್ರ್ಯ ಹೋರಾಟವು ಅಪೂರ್ಣವೇ ಎಂದೆನ್ನಬಹುದು. ‘ವಂದೇ ಮಾತರಮ್ !’  ಈ ಎರಡು ಪದಗಳು ಸಾವಿರಾರು ಕ್ರಾಂತಿಕಾರರಿಗೆ ಪ್ರೇರಣೆ ನೀಡಿತು. ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಅದೊಂದು ಮೂಲಮಂತ್ರವೇ ಆಗಿದೆ ! ‘ವಂದೇ ಮಾತರಮ್’ ಇದು ಭಾರತೀಯರ ಸ್ವಾತಂತ್ರ್ಯ ಹೋರಾಟದಲ್ಲಿ ಎಷ್ಟೊಂದು ಪ್ರೇರಣೆಯ ಮಂತ್ರವಾಗಿತ್ತು ಎಂದರೆ, ಮೇಡಂ ಕಾಮಾ ಇವರು ‘ವಂದೇ ಮಾತರಮ್’ ಈ ಪದಕ್ಕೆ ಭಾರತವು ಯೋಜಿಸಿದ ರಾಷ್ಟ್ರಧ್ವಜದ ಮಧ್ಯ ಭಾಗದಲ್ಲಿ ಮುಖ್ಯಸ್ಥಾನ ನೀಡಿದರು ಮತ್ತು ಆ ರಾಷ್ಟ್ರಧ್ವಜವನ್ನು ೧೯೦೭ ರಲ್ಲಿ ಬರ್ಲಿನ್‌ನಲ್ಲಿ ಹಾರಾಡಿಸಿದರು. ‘ವಂದೇ ಮಾತರಮ್’ ಈ ರಾಷ್ಟ್ರೀಯ ಗೀತೆಗೆ ಇಂದಿಗೂ, ಅಂದರೆ ಅದನ್ನು ರಚಿಸಿದ ೧೫೦ ವರ್ಷಗಳ ನಂತರವೂ ರಾಷ್ಟ್ರಾಭಿಮಾನಿಗಳಲ್ಲಿ ಜಾಜ್ವಲ್ಯ ರಾಷ್ಟ್ರಭಕ್ತಿ, ಹಾಗೆಯೇ ಭಾರತ ಭೂಮಿಯ ಕುರಿತು ಅದರ ಶ್ರೇಷ್ಠತ್ವವನ್ನು ಕೊಂಡಾಡುವುದರಲ್ಲಿ ಸಿಂಹಪಾಲಿದೆ.

ಸೌ. ಮಧುರಾ ಕರ್ವೆ

‘ಸಂಸ್ಕೃತ ಭಾಷೆಯಲ್ಲಿನ ‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯನ್ನು ಹಾಡಿದ ನಂತರ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದ ಏನು ಪರಿಣಾಮವಾಗುತ್ತದೆ ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ೧೧.೮.೨೦೧೮ ರಂದು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯು.ಎ.ಎಸ್. (ಯುನಿರ್ವಸಲ್ ಔರಾ ಸ್ಕ್ಯಾನರ್)’ ಈ ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವರ್ಗೀಕರಣ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಗಳನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

ಈ ಪರೀಕ್ಷಣೆಯಲ್ಲಿ ಇಬ್ಬರು ಸಾಧಕಿಯರು ಪಾಲ್ಗೊಂಡಿದ್ದರು. ಪರೀಕ್ಷಣೆಯಲ್ಲಿನ ಮೊದಲನೇ ಸಾಧಕಿಗೆ ಆಧ್ಯಾತ್ಮಿಕ ತೊಂದರೆ (ಟಿಪ್ಪಣಿ) ಇದೆ, ಇನ್ನೊಬ್ಬ ಸಾಧಕಿಗೆ ಆಧ್ಯಾತ್ಮಿಕ ತೊಂದರೆ ಇಲ್ಲ. ಇಬ್ಬರು ಸಾಧಕಿಯರು ‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯನ್ನು ಹಾಡುವ ಮೊದಲು ಮತ್ತು ಹಾಡಿದ ನಂತರ ‘ಯು.ಎ.ಎಸ್.’ ಉಪಕರಣದ ಮೂಲಕ ಅವರ ನಿರೀಕ್ಷಣೆಯನ್ನು ಮಾಡಲಾಯಿತು. ‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯನ್ನು ಹಾಡಿದ ನಂತರ ಸಾಧಕಿಯರ ಮೇಲಾದ ಪರಿಣಾಮಗಳನ್ನು ಮುಂದೆ ಕೊಡಲಾಗಿದೆ.

೧ ಅ. ‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯನ್ನು ಹಾಡಿದ ನಂತರ ಸಾಧಕಿಯರ ಮೇಲೆ ಸಕಾರಾತ್ಮಕ ಪರಿಣಾಮವಾಗುವುದು : ‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯನ್ನು ಹಾಡಿದ ನಂತರ ಇಬ್ಬರ ಸಾಧಕಿಯರಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಗಿ ಅವರಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಯಿತು ಅಥವಾ ಅದರಲ್ಲಿ ಹೆಚ್ಚಳವಾಯಿತು. ಇದು ಮುಂದೆ ಕೊಟ್ಟಿರುವ ಕೋಷ್ಟಕದಿಂದ ಸ್ಪಷ್ಟವಾಗುತ್ತದೆ.

೨. ನಿಷ್ಕರ್ಷ

‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯನ್ನು ಹಾಡಿದ ನಂತರ ಇಬ್ಬರು ಸಾಧಕಿಯರ ಮೇಲೆ ಸಕಾರಾತ್ಮಕ ಪರಿಣಾಮವಾಯಿತು.

೩. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯನ್ನು ಹಾಡಿದ ನಂತರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕಿ ಇವರಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭವಾಗುವುದು ಮತ್ತು ಅದರ ಹಿಂದಿನ ಕಾರಣಗಳು

೩ ಅ ೧. ‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯು ಸಂಸ್ಕೃತದ ಭಾಷೆಯಲ್ಲಿರುವುದರಿಂದ, ಹಾಗೆಯೇ ಅದರಲ್ಲಿ ಮಾತೃಭೂಮಿಗೆ ವಂದನೆ ಮತ್ತು ಮಾತೃಭೂಮಿಯ ಸ್ತುತಿಯಿರುವುದರಿಂದ ಈ ಗೀತೆಯಲ್ಲಿ ಶಕ್ತಿ ಮತ್ತು ಚೈತನ್ಯವಿರುವುದು : ಸಂಸ್ಕೃತವು ಜಗತ್ತಿನಲ್ಲಿನ ಎಲ್ಲಕ್ಕಿಂತ ಹೆಚ್ಚು ಸಾತ್ತ್ವಿಕ ಭಾಷೆಯಾಗಿದೆ. ಸಾತ್ತ್ವಿಕ ಭಾಷೆಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ರಾಷ್ಟ್ರಭಕ್ತರಾದ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಇವರು ರಚಿಸಿದ ‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯು ಸಂಸ್ಕೃತ ಭಾಷೆಯಲ್ಲಿರುವುದರಿಂದ, ಹಾಗೆಯೇ ಅದರಲ್ಲಿ ಮಾತೃಭೂಮಿಗೆ ವಂದನೆ ಮತ್ತು ಅವಳ ಸ್ತುತಿಯನ್ನು ಮಾಡಿರುವುದರಿಂದ ಅದರಲ್ಲಿ ಶಕ್ತಿ ಮತ್ತು ಚೈತನ್ಯವಿದೆ. ‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯನ್ನು ಹಾಡುವಾಗ ಮಾತೃಭೂಮಿಯ ಕುರಿತು ಪ್ರೀತಿ ಮತ್ತು ಗೌರವವು ಉತ್ಪನ್ನವಾಗುತ್ತದೆ. ಹಾಗಾಗಿ ಹಾಡುವವರಲ್ಲಿ ರಾಷ್ಟ್ರದ ಬಗ್ಗೆ ಸ್ವಾಭಿಮಾನವು ಹೆಚ್ಚಾಗಿ ರಾಷ್ಟ್ರನಿಷ್ಠೆ ಸದೃಢವಾಗುತ್ತದೆ.

ಪರೀಕ್ಷಣೆಯಲ್ಲಿನ ಸಾಧಕಿಯರು ‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯನ್ನು ಹಾಡಿದುದರಿಂದ ಅವರಿಗೆ ಗೀತೆಯಲ್ಲಿನ ಶಕ್ತಿ ಮತ್ತು ಚೈತನ್ಯದ ಲಾಭವಾಯಿತು. ಆದುದರಿಂದ ಇಬ್ಬರು ಸಾಧಕಿಯರಿಗೆ ‘ಅವರಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗುವುದು’, ಅವರಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಗುವುದು ಅಥವಾ ಅದರಲ್ಲಿ ಹೆಚ್ಚಳವಾಗುವುದು, ಈ ರೀತಿ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಯಿತು. ‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯನ್ನು ಹಾಡುವುದರಿಂದ ವ್ಯಕ್ತಿಗೆ ಆಧ್ಯಾತ್ಮಿಕದೃಷ್ಟಿಯಿಂದ ಲಾಭವಾಗುತ್ತದೆ,’ ಎಂಬುದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಸ್ಪಷ್ಟವಾಯಿತು.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೧.೫.೨೦೧೯)

ವಿ-ಅಂಚೆ : [email protected]

ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.