‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ
‘ಹಿಂದೂ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಮತ್ತು ದೇವಸ್ಥಾನದಲ್ಲಿ ಹೋಗಿ ದೇವತೆಯ ದರ್ಶನವನ್ನು ಪಡೆಯುವುದಕ್ಕೆ ತುಂಬಾ ಮಹತ್ವವಿದೆ. ದೇವಸ್ಥಾನವನ್ನು ಚೈತನ್ಯದಾಯಕ ಊರ್ಜೆಯ ಸ್ರೋತವೆಂದು ನಂಬಲಾಗಿದೆ. ದೇವಸ್ಥಾನದಲ್ಲಿ ದೇವತೆಯ ದರ್ಶನಕ್ಕಾಗಿ ಹೋಗುವ ಭಕ್ತರಿಗೆ ಅಲ್ಲಿನ ಚೈತನ್ಯದ ಪರಿಣಾಮವಾಗುತ್ತದೆ. ದೇವಸ್ಥಾನದಲ್ಲಿ ದೇವತೆಯ ದರ್ಶನ ಪಡೆದ ನಂತರ ನಮ್ಮ ಮನಸ್ಸು ಪ್ರಸನ್ನವಾಗುತ್ತದೆ ಮತ್ತು ಉತ್ಸಾಹವೂ ಅನಿಸುತ್ತದೆ.
‘ವ್ಯಕ್ತಿಯು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯುವ ಮೊದಲು ಮತ್ತು ಪಡೆದ ನಂತರ ಅವನ ಸೂಕ್ಷ್ಮ-ಊರ್ಜೆಯ ಮೇಲೆ (ಪ್ರಭಾವಲಯದ ಮೇಲೆ) ಏನು ಪರಿಣಾಮವಾಗುತ್ತದೆ ?’, ಎಂಬುದನ್ನು ವೈಜ್ಞಾನಿಕದೃಷ್ಟಿಯಿಂದ ಅಧ್ಯಯನ ಮಾಡಲು ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಎಂಬ ಉಪಕರಣವನ್ನು ಉಪಯೋಗಿಸಲಾಯಿತು. ಈ ಉಪಕರಣದಿಂದ ವ್ಯಕ್ತಿ, ವಸ್ತು ಮತ್ತು ವಾಸ್ತುವಿನಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಗಳನ್ನು ಅಳೆಯಬಹುದು.
೧. ಪರೀಕ್ಷಣೆಯ ನಿರೀಕ್ಷಣೆಗಳು
ಈ ಪ್ರಯೋಗದಲ್ಲಿ ನಾಲ್ಕು ಜನ ವ್ಯಕ್ತಿಗಳನ್ನು ದೇವಸ್ಥಾನಕ್ಕೆ ಹೋಗಿ ದರ್ಶನವನ್ನು ಪಡೆಯುವ ಮೊದಲು ಮತ್ತು ದರ್ಶನ ಪಡೆದ ನಂತರ ‘ಯುನಿರ್ವಸಲ್ ಔರಾ ಸ್ಕ್ಯಾನರ್’ ಈ ಉಪಕರಣದಿಂದ ಅವರ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳನ್ನು ಮುಂದೆ ಕೊಡಲಾಗಿದೆ.
ಟಿಪ್ಪಣಿ – ಪರೀಕ್ಷಣೆಯಲ್ಲಿನ ಎಲ್ಲಾ ವ್ಯಕ್ತಿಗಳಲ್ಲಿ ತೊಂದರೆದಾಯಕ ಸ್ಪಂದನಗಳು ಕಂಡುಬಂದವು. ಕಾರಣವೇನೆಂದರೆ, ಸದ್ಯದ ಕಾಲವು ಅತ್ಯಂತ ರಜ-ತಮಪ್ರಧಾನವಾಗಿರುವುದರಿಂದ ವ್ಯಕ್ತಿಯ ಮನಸ್ಸು, ಬುದ್ಧಿ ಮತ್ತು ಶರೀರದ ಮೇಲೆ ರಜ-ತಮಾತ್ಮಕ (ತೊಂದರೆದಾಯಕ) ಸ್ಪಂದನಗಳ ಆವರಣ ಬರುತ್ತದೆ. ಈ ತೊಂದರೆದಾಯಕ ಸ್ಪಂದನಗಳಿಂದ ರಕ್ಷಣೆಯಾಗಲು ಪ್ರತಿಯೊಬ್ಬರು ಪ್ರತಿದಿನ ತಮ್ಮ ಮೇಲಿನ ಆವರಣವನ್ನು ಆಗಾಗ ತೆಗೆಯವುದು ಆವಶ್ಯಕವಾಗಿದೆ. ಆವರಣವನ್ನು ತೆಗೆಯಲು ವಿವಿಧ ಪದ್ಧತಿಗಳನ್ನು ಉಪಯೋಗಿಸಬಹುದು, ಉದಾ. ವಿಭೂತಿ ಊದುವುದು, ತಮ್ಮ ಮೇಲೆ ಗೋಮೂತ್ರವನ್ನು ಸಿಂಪಡಿಸುವುದು, ಸ್ತೋತ್ರವನ್ನು ಹೇಳುವುದು ಅಥವಾ ಕೇಳುವುದು, ನಾಮಜಪವನ್ನು ಮಾಡುವುದು ಇತ್ಯಾದಿ.
೨. ದೇವಸ್ಥಾನದಲ್ಲಿ ದೇವತೆಯ ದರ್ಶನ ಪಡೆದ ನಂತರ ಪರೀಕ್ಷಣೆಯಲ್ಲಿನ ವ್ಯಕ್ತಿಗಳ ಸೂಕ್ಷ್ಮ-ಊರ್ಜೆಯ ಮೇಲಾದ ಪರಿಣಾಮ
ಅ. ಮೊದಲನೇ ವ್ಯಕ್ತಿಯಲ್ಲಿ ನಕಾರಾತ್ಮಕ ಊರ್ಜೆ ಕಡಿಮೆಯಾಗಿ ಆ ವ್ಯಕ್ತಿಯಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಯಿತು.
ಆ. ಎರಡನೇ ವ್ಯಕ್ತಿಯ ನಕಾರಾತ್ಮಕ ಊರ್ಜೆ ತುಂಬಾ ಕಡಿಮೆಯಾಗಿ
ಆ ವ್ಯಕ್ತಿಯಲ್ಲಿ ಸಕಾರಾತ್ಮಕ ಊರ್ಜೆ ತುಂಬಾ ಹೆಚ್ಚಾಯಿತು.
ಇ. ಮೂರನೇ ಮತ್ತು ನಾಲ್ಕನೇ ವ್ಯಕ್ತಿಗಳಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಗಿ ಅವರಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು.
ನಿಷ್ಕರ್ಷ : ದೇವತೆಯ ದರ್ಶನ ಪಡೆದ ನಂತರ ಪರೀಕ್ಷಣೆಯಲ್ಲಿನ ಎಲ್ಲರ ಸೂಕ್ಷ್ಮ-ಊರ್ಜೆಯ ಮೇಲೆ ಸಕಾರಾತ್ಮಕ ಪರಿಣಾಮವಾಯಿತು; ಆದರೆ ಅದರ ಪ್ರಮಾಣ ಬೇರೆ ಬೇರೆ ಆಗಿತ್ತು.
೩. ಪರೀಕ್ಷಣೆಯ ನಿರೀಕ್ಷಣೆಗಳ ವಿಶ್ಲೇಷಣೆ
೩ ಅ. ದೇವಸ್ಥಾನಕ್ಕೆ ಹೋಗಿ ದೇವತೆಯ ದರ್ಶನ ಪಡೆಯುವಾಗ ವ್ಯಕ್ತಿಯಲ್ಲಿ ದೇವರ ಬಗ್ಗೆ ಇರುವ ಭಾವಕ್ಕನುಸಾರ ಅವನಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ : ಪರೀಕ್ಷಣೆಯಲ್ಲಿನ ವ್ಯಕ್ತಿಗಳು ದೇವರ ದರ್ಶನವನ್ನು ಪಡೆದ ನಂತರ ಅವರ ಸೂಕ್ಷ್ಮ-ಊರ್ಜೆಯ ಮೇಲೆ ಸಕಾರಾತ್ಮಕ ಪರಿಣಾಮವಾಯಿತು; ಆದರೆ ಅದರ ಪರಿಣಾಮ ಬೇರೆ ಬೇರೆ ಆಗಿತ್ತು. ಇತರ ವ್ಯಕ್ತಿಗಳ ತುಲನೆಯಲ್ಲಿ ಎರಡನೇಯ ವ್ಯಕ್ತಿಯ ಮೇಲೆ ಅತ್ಯಧಿಕ ಸಕಾರಾತ್ಮಕ ಪರಿಣಾಮ ಕಂಡುಬಂದಿತು. ಕಾರಣವೇನೆಂದರೆ, ದರ್ಶನವನ್ನು ತೆಗೆದುಕೊಳ್ಳುವಾಗ ವ್ಯಕ್ತಿಯಲ್ಲಿ ದೇವರ ಬಗ್ಗೆ ಹೇಗೆ ಭಾವ ಇರುತ್ತದೆಯೋ, ಹಾಗೆಯೇ ಅವನಿಗೆ ದೇವರ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಗ್ರಹಿಸಿದ ಚೈತನ್ಯವನ್ನು ಉಳಿಸಿಕೊಳ್ಳುವುದೂ ಆವಶ್ಯಕವಾಗಿದೆ. ಅದಕ್ಕಾಗಿ ದೇವರ ದರ್ಶನವನ್ನು ಪಡೆದ ನಂತರ ದೇವಸ್ಥಾನದಲ್ಲಿ ಸ್ವಲ್ಪ ಸಮಯ ಕುಳಿತು ಅಂತರ್ಮುಖರಾಗಿ ದೇವತೆಯ ನಾಮಜಪವನ್ನು ಮಾಡಬೇಕು.
ಸಂಕ್ಷಿಪ್ತವಾಗಿ ಹೇಳುವುದಾದರೆ ‘ದೇವಸ್ಥಾನದಲ್ಲಿ ದರ್ಶನಕ್ಕಾಗಿ ಹೋದ ನಂತರ ವ್ಯಕ್ತಿಯು ಯಾವ ಭಾವದಿಂದ ಮತ್ತು ಶ್ರದ್ಧೆಯಿಂದ ದೇವರ ದರ್ಶನವನ್ನು ಪಡೆಯುತ್ತಾನೆಯೋ, ಅದಕ್ಕನುಸಾರ ಅವನಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ’, ಎಂಬುದನ್ನು ಗಮನದಲ್ಲಿಡಬೇಕು.
– ಶ್ರೀ. ಗಿರೀಶ ಪಾಟೀಲ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೩.೨೦೨೪)
ವಿ-ಅಂಚೆ : mav.research@[email protected]
ಭಕ್ತರೇ, ದೇವಸ್ಥಾನದಲ್ಲಿ ಅಂತರ್ಮುಖರಾಗಿ ದೇವರ ದರ್ಶನ ಪಡೆಯಿರಿ !‘ಸದ್ಯ ಅನೇಕ ದೇವಸ್ಥಾನಗಳ-ಪರಿಸರದಲ್ಲಿ ದರ್ಶನಕ್ಕೆ ಬರುವ ಅನೇಕ ಜನರು ಸಕಾಮ ಉದ್ದೇಶವನ್ನಿಟ್ಟು ದೇವಸ್ಥಾನಕ್ಕೆ ಬರುತ್ತಾರೆ. ದೇವಸ್ಥಾನಕ್ಕೆ ಹೋಗುವಾಗ ಅವರ ಉಡುಪು ಮತ್ತು ಕೇಶರಚನೆ ಇವುಗಳೂ ಅಸಾತ್ತ್ವಿಕವಾಗಿರುತ್ತವೆ. ದೇವಸ್ಥಾನಕ್ಕೆ ಹೋದ ನಂತರ ದರ್ಶನಕ್ಕಾಗಿ ಸಾಲು ಇದ್ದರೆ, ಜನರು ಮಾಯೆಯಲ್ಲಿನ ಮಾತುಕತೆಗಳನ್ನು ಮಾಡುವುದು, ಹಾಗೆಯೇ ಸಂಚಾರವಾಣಿಯಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡುವುದು, ಅದರಲ್ಲಿನ ಸಂದೇಶಗಳನ್ನು ಓದುವುದು ಇವೆಲ್ಲ ಕಂಡುಬರುತ್ತದೆ. ಇಂತಹ ವರ್ತನೆಗಳಿಂದ ದೇವಸ್ಥಾನದ ಪಾವಿತ್ರ್ಯ ಕಡಿಮೆಯಾಗುತ್ತದೆ, ಎಂದು ಯಾರಿಗೂ ಅರಿವು ಇರುವುದಿಲ್ಲ. ದರ್ಶನವನ್ನು ತೆಗೆದುಕೊಳ್ಳುವಾಗಲೂ ಮನಸ್ಸಿನಲ್ಲಿ ಮಾಯೆಯಲ್ಲಿನ ವಿಚಾರಗಳು ನಡೆದಿರುತ್ತವೆ. ‘ಹೀಗೆ ಮಾಡುವುದರಿಂದ ದೇವರ ಚೈತನ್ಯವನ್ನು ಗ್ರಹಿಸಬಹುದೇ ?’, ಎಂಬುದನ್ನು ಎಲ್ಲರೂ ವಿಚಾರ ಮಾಡುವುದು ಆವಶ್ಯಕವಾಗಿದೆ. ದೇವಸ್ಥಾನ ಮತ್ತು ದೇವತೆ ಇವು ಚೈತನ್ಯದ ಸ್ರೋತವಾಗಿವೆ. ಆದ್ದರಿಂದ ನಮ್ಮ ವೃತ್ತಿಯನ್ನು ಅಂತರ್ಮುಖವನ್ನಾಗಿಸಿ ದೇವರ ನಾಮಜಪ ಮಾಡುತ್ತ ದರ್ಶನ ಪಡೆಯುವುದು, ದರ್ಶನಕ್ಕೆ ಹೋದಾಗ ಮಾಯೆಯ ಮಾತುಕತೆ ಬಿಟ್ಟು ನಾಮಜಪ ಮಾಡುತ್ತ ದೇವರ ಅನುಸಂಧಾನದಲ್ಲಿರುವುದು ಇತ್ಯಾದಿಗಳನ್ನು ಮಾಡಿದರೆ ದೇವರ ಚೈತನ್ಯ ಹೆಚ್ಚು ಪ್ರಮಾಣದಲ್ಲಿ ಗ್ರಹಿಸಿ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. – ಸೌ. ಮಧುರಾ ಧನಂಜಯ ಕರ್ವೆ (೨೮.೩.೨೦೨೪) |