ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
‘ಮನುಷ್ಯನು ವಿಜ್ಞಾನವನ್ನು ಕೊಂಡಾಡುವಾಗ ಅನೇಕ ಪಾರಂಪರಿಕ ನೈಸರ್ಗಿಕ ರೂಢಿ ಪರಂಪರೆಗಳನ್ನು ದುರ್ಲಕ್ಷಿಸಿದನು. ನಮ್ಮ ಪೂರ್ವಜರು ನೀಡಿದ ಸಮೃದ್ಧ ವಂಶಪರಂಪರೆಯು ಈಗ ನಾಶವಾಗುವ ಸ್ಥಿತಿಯಲ್ಲಿದೆ. ಅದರಲ್ಲಿನ ಒಂದೆಂದರೆ ಮಣ್ಣಿನ ಒಲೆ ! ಸುಮಾರು ೩ ದಶಕಗಳ ಹಿಂದೆ ಸಂಪೂರ್ಣ ಭಾರತದಲ್ಲಿ ಮಣ್ಣಿನ ಒಲೆಗಳ ಮೇಲೆಯೇ ಅಡುಗೆಯನ್ನು ಮಾಡಲಾಗುತ್ತಿತ್ತು; ಆದರೆ ಈಗ ಅದರ ಸ್ಥಾನವನ್ನು ಮೊದಲು ‘ಗ್ಯಾಸ್ ಮತ್ತು ನಂತರ ‘ಇಂಡಕ್ಶನ್ (ವಿದ್ಯುತ್) ಒಲೆಯು ತೆಗೆದುಕೊಂಡಿದೆ. ಕೈಗಾರಿಕಾ ಕ್ರಾಂತಿಯು ಈ ಎರಡೂ ಉಪಕರಣಗಳನ್ನು ಮನೆಮನೆಗಳಿಗೆ ತಲುಪಿಸಿತು. ಈ ಉಪಕರಣಗಳು ಮನೆಮನೆಗಳಿಗೆ ಹೋಗುವಾಗ ‘ಮಣ್ಣಿನ ಒಲೆಗಳು ಯಾವಾಗ ಮನೆಯ ಹೊರಗೆ ಹೋದವು ?, ಎಂಬುದು ಗೊತ್ತಾಗಲೇ ಇಲ್ಲ. ನಿಸರ್ಗವು ಲಕ್ಷಗಟ್ಟಲೆ ವರ್ಷಗಳಿಂದ ಗಿಡ-ಮರಗಳ ಮಾಧ್ಯಮದಿಂದ ವಾತಾವರಣದಲ್ಲಿ ಸಂಗ್ರಹವಾದ ‘ಕಾರ್ಬನ್ನನ್ನು ಭೂಮಿಯಲ್ಲಿ ಶೇಖರಿಸಿತ್ತು; ಆದರೆ ಇಂಧನದ ಹೆಸರಿನಲ್ಲಿ ಮನುಷ್ಯನು ಕೆಲವೇ ದಶಕಗಳಲ್ಲಿ ಆ ‘ಕಾರ್ಬನ್ನನ್ನು ಪುನಃ ವಾತಾವರಣ ದಲ್ಲಿ ಹರಡಿದನು. ನಮ್ಮ ದಿನನಿತ್ಯದ ಬಳಕೆಯಲ್ಲಿನ ‘ಗ್ಯಾಸ್ ಕೂಡ ಈ ಇಂಧನದ ಒಂದು ಭಾಗವಾಗಿದೆ. ಭೂಮಿಯಲ್ಲಿನ ಖನಿಜ ಎಣ್ಣೆಯನ್ನು ಹೊರಗೆ ತೆಗೆಯುವಾಗ ಅದರ ಮೇಲೆ ಪ್ರಕ್ರಿಯೆಯನ್ನು ಮಾಡಿ ಈ ‘ಗ್ಯಾಸ್ನ್ನು ಪಡೆಯಲಾಗುತ್ತದೆ. ‘ಇಂಡಕ್ಶನ್ಗಾಗಿ ಬೇಕಾಗುವ ವಿದ್ಯುತ್ ಕೂಡ ಭೂಮಿಯಿಂದ ತೆಗೆಯಲಾಗುವ ಕಲ್ಲಿದ್ದಲುಗಳಿಂದಲೇ ಉತ್ಪನ್ನವಾಗುತ್ತದೆ. ಈ ರೀತಿ ‘ನಿಸರ್ಗಕ್ಕೆ ಹಾನಿಯುಂಟು ಮಾಡುವ ಕೃತಿಯು ಅಸಾತ್ತ್ವಿಕವಾಗಿದೆ. ೪.೯.೨೦೨೦ ರಂದು ‘ಇಂಡಕ್ಶನ್ ಒಲೆ, ‘ಗ್ಯಾಸ್ ಒಲೆ ಮತ್ತು ಮಣ್ಣಿನ ಒಲೆಯ ಮೇಲೆ ಆಹಾರವನ್ನು ಬೇಯಿಸುವ ಪ್ರಯೋಗವನ್ನು ಮಾಡಿದೆವು. ಆಗ ಅರಿವಾದ ಅಂಶಗಳನ್ನು ಮುಂದೆ ಕೊಡಲಾಗಿದೆ.
ಆಹಾರ ಮತ್ತು ಆಚಾರ ಇವುಗಳ ಕುರಿತು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಅದ್ವಿತೀಯ ಸಂಶೋಧನಾ ಕಾರ್ಯದ ಲೇಖನಮಾಲೆಯ ಕುರಿತು…
ಸಮಾಜಕ್ಕೆ ಅಧ್ಯಾತ್ಮಶಾಸ್ತ್ರ ತಿಳಿಯಲು ಸುಲಭವಾಗಬೇಕೆಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಮಾಡುತ್ತಿರುವ ವಿನೂತನ ಮತ್ತು ಅದ್ವಿತೀಯವಾದ ಸಂಶೋಧನೆಗಳು ಶಾಸ್ತ್ರೀಯ ಭಾಷೆಯಲ್ಲಿ ‘ಸನಾತನ ಪ್ರಭಾತ’ದ ನಿಯತ ಕಾಲಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ. ಇದರಲ್ಲಿ ಯಜ್ಞ ಯಾಗ, ಪೂಜೆ, ವಿವಿಧ ಪ್ರಕಾರಗಳ ಆಧ್ಯಾತ್ಮಿಕ ವಿಧಿಗಳು, ಸಂಗೀತ, ಕಲೆ ಮುಂತಾದ ವಿಷಯ ಗಳ ಸಮಾವೇಶವಿದೆ.‘ಅನ್ನ ಇದು ಪೂರ್ಣ ಬ್ರಹ್ಮ !’ ಆಹಾರವು ನಮ್ಮ ಜೀವನದಲ್ಲಿನ ಅವಿಭಾಜ್ಯ ಅಂಗವಾಗಿದೆ. ಇದಕ್ಕನುಸಾರ ಆಹಾರದ, ಅಂದರೆ ನಾವು ದೈನಂದಿನ ಜೀವನದಲ್ಲಿ ಸೇವಿಸುವ ಆಹಾರದ ನಮ್ಮ ಜೀವನದ ಮೇಲೆ ವಿಶೇಷ ಪರಿಣಾಮವಾಗುತ್ತಿರುತ್ತದೆ. ಆದುದರಿಂದ ‘ಸತ್ತ್ವ, ರಜ ಮತ್ತು ತಮೋ ಗುಣಗಳುಳ್ಳ ಆಹಾರವನ್ನು ಸೇವಿಸುವುದರಿಂದ ಅದರ ನಮ್ಮ ಶರೀರದ ಮೇಲೆ ಯಾವ ಪರಿಣಾಮವಾಗುತ್ತದೆ ?’ ಹಾಗೆಯೇ ‘ಆಹಾರಪದಾರ್ಥಗಳನ್ನು ಖರೀದಿಸುವುದು, ಕತ್ತರಿಸುವುದು, ಬೇಯಿಸುವುದು, ಅದರಿಂದ ಪದಾರ್ಥವನ್ನು ತಯಾರಿಸುವುದು ಈ ಎಲ್ಲ ಪ್ರಕ್ರಿಯೆಯಲ್ಲಿ ಆ ಆಹಾರಪದಾರ್ಥದ ಮೇಲೆ ಯಾವ ಪರಿಣಾಮವಾಗುತ್ತದೆ ?’ ‘ಆಹಾರ ಮತ್ತು ಆಚಾರ’ ಇವುಗಳ ಕುರಿತು ಅದ್ವಿತೀಯ ಸಂಶೋಧನೆಯ ಕಾರ್ಯವನ್ನು ಸಮಾಜದವರೆಗೆ ತಲುಪಿಸಲು ಅದನ್ನು ‘ಸಾಪ್ತಾಹಿಕ ಸನಾತನ ಪ್ರಭಾತ’ದಲ್ಲಿ ಲೇಖನ ಸ್ವರೂಪದಲ್ಲಿ ಈ ವಾರದಿಂದ ಪ್ರಕಟಪಡಿಸಲಾಗುತ್ತಿದೆ. ಹಾಗೆಯೇ ಮುಂಬರುವ ಭೀಕರ ಆಪತ್ಕಾಲದಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡುವುದು, ಅದನ್ನು ಬೇಯಿಸುವುದು ಇವುಗಳ ಸಂದರ್ಭದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ವೈಜ್ಞಾನಿಕ ಉಪಕರಣಗಳ ಮೂಲಕ ಸಾಧ್ಯವಾದ ಸಂಶೋಧನೆ ಮಾಡುವುದಕ್ಕೆ ಹೆಚ್ಚು ಮಹತ್ವ ನೀಡಿದೆ; ಏಕೆಂದರೆ ಅದು ಕಾಲದ ಅವಶ್ಯಕತೆಯಾಗಿದೆ. ಈ ಲೇಖನ ಮಾಲೆಯಿಂದ ಸಂಶೋಧನೆಯ ಕಾರ್ಯದ ಸಂದರ್ಭದಲ್ಲಿನ ಕೆಲವು ವೈಶಿಷ್ಟ್ಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಹಿಂದುತ್ವನಿಷ್ಠರು, ರಾಷ್ಟ್ರಪ್ರೇಮಿಗಳು, ಜಾಹೀರಾತುದಾರರು, ಅರ್ಪಣೆದಾರರು ಮತ್ತು ವಾಚಕರಿಗೆ ಈ ಲೇಖನಮಾಲೆಯಿಂದ ಖಂಡಿತವಾಗಿಯೂ ಲಾಭವಾಗುವುದು ! – (ಪರಾತ್ಪರ ಗುರು) ಡಾ. ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ.
೧. ‘ಇಂಡಕ್ಶನ್ ಒಲೆ
‘ಇಂಡಕ್ಶನ್ ಒಲೆಯು ಆಯಸ್ಕಾಂತದ ಪರಿವರ್ತನೆಯ ಮೂಲಕ ಆಹಾರವನ್ನು ಬಿಸಿ ಮಾಡುತ್ತದೆ. ಆದ್ದರಿಂದ ಆಹಾರವು ಬೇಗನೆ ಬೇಯುತ್ತದೆ. ಆಯಸ್ಕಾಂತದ ಪರಿರ್ತನೆಯ ಮೂಲಕ ಆಹಾರವನ್ನು ಬೇಯಿಸುವಾಗ ಪಾತ್ರೆಯ ವಿಶಿಷ್ಟ ಭಾಗವಷ್ಟೇ ಬಿಸಿಯಾಗುತ್ತದೆ ಮತ್ತು ಅದರ ಮೇಲೆಯೇ ಎಲ್ಲ ಆಹಾರವು ಬೇಯುತ್ತದೆ.
೧ ಅ. ‘ಇಂಡಕ್ಶನ್ ಒಲೆಯ ಮೇಲೆ ಆಹಾರವನ್ನು ಬೇಯಿಸುವಾಗ ಅರಿವಾದ ಅಂಶಗಳು
೧. ‘ಇಂಡಕ್ಶನ್ ಒಲೆಯ ಮೇಲೆ ಅಡುಗೆಯನ್ನು ಮಾಡಲು ‘ಇಂಡಕ್ಶನ್ ಒಲೆಯನ್ನು ತರುವಾಗ ಅದನ್ನು ಕೈಯಲ್ಲಿ ಹಿಡಿದುಕೊಂಡಾಗ ನನ್ನ ಮನಸ್ಸಿನಲ್ಲಿ ವಿಚಾರಗಳು ಹೆಚ್ಚಾಗತೊಡಗಿದವು.
೨. ಅಡುಗೆಯನ್ನು ಮಾಡುವಾಗ ಮನಸ್ಸಿನ ವಿಚಾರಗಳಲ್ಲಿ ಹೆಚ್ಚಾಳವಾಗತೊಡಗಿತು ಮತ್ತು ಮನಸ್ಸು ತುಂಬಾ ಅಸ್ಥಿರವಾಯಿತು.
೩. ಆಹಾರವನ್ನು ಬೇಯಿಸುವಾಗ ನೀರಿಗೆ ತುಂಬಾ ನೊರೆ ಬರುತ್ತಿತ್ತು ಮತ್ತು ಆಹಾರವು ತುಂಬಾ ಬೇಗ ಬೆಂದಿತು.
೪. ಅಡುಗೆಯನ್ನು ಮಾಡುವಾಗ ಸಂಪೂರ್ಣ ಪಾತ್ರೆ ಬಿಸಿಯಾಗಲಿಲ್ಲ. ಕೇವಲ ಒಳಗಿನ ಆಹಾರ ಮಾತ್ರ ಬಿಸಿಯಾಗುತ್ತಿತ್ತು. ನೈಸರ್ಗಿಕ ರೀತಿಯಲ್ಲಿ ಮೊದಲು ಪಾತ್ರೆ ಬಿಸಿಯಾಗಿ ನಂತರ ಒಳಗಿನ ಆಹಾರ ಬಿಸಿಯಾಗುವ ಪ್ರಕ್ರಿಯೆಯು ‘ಇಂಡಕ್ಶನ್ ಒಲೆಯಲ್ಲಿ ಆಗುವುದಿಲ್ಲ.
೨. ‘ಗ್ಯಾಸ್ ಒಲೆ
‘ಗ್ಯಾಸ್ ಒಲೆಯ ಮೇಲೆ ಆಹಾರವನ್ನು ಬೇಯಿಸುವಾಗ ‘ಗ್ಯಾಸ್ನಿಂದ ‘ನೈಟ್ರೋಜನ್ ಆಕ್ಸೈಡ್, ‘ನೈಟ್ರೋಜನ್ ಡೈಆಕ್ಸೈಡ್, ಹಾಗೆಯೇ ‘ಕಾರ್ಬನ್ ಮೊನೋಕ್ಸೈಡ್ ಮತ್ತು ‘ಫಾರ್ಮೆಲ್ಡಿಹೈಡ್ ಎಂಬ ವಾಯುಗಳು ಉತ್ಪನ್ನವಾಗುತ್ತವೆ. ಅವು ಚಿಕ್ಕ ಮಕ್ಕಳ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತವೆ. ಇಂತಹ ಅಪಾಯಕಾರಿ ವಾತಾವರಣ ದಿಂದಾಗಿ ಚಿಕ್ಕ ಮಕ್ಕಳಲ್ಲಿ ಅಸ್ತಮಾ ಮತ್ತು ಇತರ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳ ತೊಂದರೆಗಳಲ್ಲಿ ಹೆಚ್ಚಳವಾಗುತ್ತದೆ. ಇಂತಹ ವಾತಾವರಣದಲ್ಲಿ ಮಕ್ಕಳ ಬುದ್ಧಿಮತ್ತೆಯ ಪ್ರಮಾಣ (IQ) ಕಡಿಮೆಯಾಗುವ ಅಪಾಯವೂ ಇರುತ್ತದೆ.
೨ ಅ. ‘ಗ್ಯಾಸ್ ಒಲೆಯ ಮೇಲೆ ಆಹಾರವನ್ನು ಬೇಯಿಸುವಾಗ ಅರಿವಾದ ಅಂಶಗಳು
೧. ‘ಗ್ಯಾಸ್ ಒಲೆಯ ಮೇಲೆ ಆಹಾರವನ್ನು ಬೇಯಿಸುವಾಗ ಮನಸ್ಸಿನಲ್ಲಿ ಅನೇಕ ವಿಚಾರಗಳು ಬಂದು ಮನಸ್ಸು ಅಸ್ಥಿರವಾಗುತ್ತಿತ್ತು.
೨. ಈ ಒಲೆಯ ಮೇಲೆ ಅನೇಕ ಬಾರಿ ಅಡುಗೆ ಮಾಡುತ್ತಿದ್ದರೂ ಈ ಸಮಯದಲ್ಲಿ ಆತ್ಮವಿಶ್ವಾಸವು ಕಡಿಮೆಯಿತ್ತು.
೩. ಆಹಾರವನ್ನು ಬೇಯಿಸುವಾಗ ಪಾತ್ರೆಯ ಅಂಚಿನಿಂದ ನೀರಿನಲ್ಲಿ ಬಹಳಷ್ಟು ನೊರೆ ಬರುತ್ತಿತ್ತು.
೩. ಮಣ್ಣಿನ ಒಲೆಯ ಮೇಲೆ ಆಹಾರವನ್ನು ಬೇಯಿಸುವಾಗ ಅರಿವಾದ ಅಂಶಗಳು
ಅ. ಮಣ್ಣಿನ ಒಲೆಯ ಮೇಲೆ ಮೊದಲಬಾರಿಗೆ ಅಡುಗೆಯನ್ನು ಮಾಡುತ್ತಿರುವುದರಿಂದ ಇಬ್ಬರು ಸಹಸಾಧಕಿಯರು ನನಗೆ ‘ಒಲೆಯನ್ನು ಹೇಗೆ ಉರಿಸಬೇಕು ?, ಎಂದು ಹೇಳುತ್ತಿದ್ದರು. ಅವರು ಪ್ರತಿಬಾರಿ ಹೇಳುತ್ತಿದ್ದ ಸೂಚನೆಗಳನ್ನು ಏಕಾಗ್ರತೆಯಿಂದ ಕೇಳಲು ಸಾಧ್ಯವಾಗುತ್ತಿತ್ತು ಹಾಗೂ ಯಾವುದೇ ಗೊಂದಲವಾಗಲಿಲ್ಲ.
ಆ. ಈ ಬಾರಿ ಅಡುಗೆಯನ್ನು ಮಾಡುವಾಗ ಮನಸ್ಸು ಶಾಂತವಾಯಿತು. ನನ್ನ ಮನಸ್ಸಿನ ಇತರ ವಿಚಾರಗಳ ಪ್ರಮಾಣವೂ ಕಡಿಮೆಯಾಯಿತು. ಅಡುಗೆಯಾದ ನಂತರವೂ ಆ ಆಹಾರದ ಕಡೆಗೆ ನೋಡಿ ಮನಸ್ಸಿನ ವಿಚಾರಗಳು ಕಡಿಮೆಯಾಗಿರುವುದು ಅರಿವಾಯಿತು.
ಇ. ಒಲೆಯ ಮೇಲೆ ಮೊದಲಬಾರಿಗೆ ಅಡುಗೆ ಮಾಡುತ್ತಿದ್ದರೂ ನನ್ನಲ್ಲಿ ಆತ್ಮವಿಶ್ವಾಸವಿತ್ತು.
ಈ. ಬೇಯಿಸಿದ ಪದಾರ್ಥಗಳ ಕಡೆಗೆ ನೋಡಿಯೇ ‘ಈ ಪದಾರ್ಥಗಳನ್ನು ಒಲೆಯ ಮೇಲೆ ಮಾಡಲಾಗಿದೆ, ಎಂದು ಗಮನಕ್ಕೆ ಬರುತ್ತಿತ್ತು.
ಉ. ಆಹಾರವು ಬೇಯುವಾಗ, ನೈಸರ್ಗಿಕ ರೀತಿಯಲ್ಲಿ ಕುದಿಯುವ ನೀರಿನಲ್ಲಿ ಹೇಗೆ ಆಹಾರವು ಬೇಯುತ್ತದೆಯೋ, ಹಾಗೆಯೇ ಬೇಯುತ್ತಿತ್ತು.
ಊ. ಆಹಾರವು ಬೇಯುವಾಗ ಆ ಆಹಾರದ ಕಡೆಗೆ ನೋಡಿಯೇ ಭಾವಜಾಗೃತವಾಗುತ್ತಿತ್ತು.
– ಶ್ರೀ. ಋತ್ವಿಜ ಢವಣ (‘ಹೊಟೇಲ್ ಮ್ಯಾನೇಜ ಮೆಂಟ್ ಈ ವಿಷಯದ ವಿದ್ಯಾರ್ಥಿ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೪.೯.೨೦೨೦)