Exclusive News : ೨೦೧೫ ರಿಂದ ಸಂಸ್ಕೃತಕ್ಕೆ ಅನುದಾನ ಇಲ್ಲ; ಆದರೆ ಉರ್ದುಗಾಗಿ ಕೋಟಿಗಟ್ಟಲೆ ಖರ್ಚು !

  • ಮಹಾರಾಷ್ಟ್ರದಲ್ಲಿ ಸಂಸ್ಕೃತ ಭಾಷೆಗಿಲ್ಲ ಗೌರವ; ಅನುದಾನದ ಕೊರತೆ ಪ್ರಶಸ್ತಿ ಬಂದ್ ಮಾಡುವ ಹಾದಿಯಲ್ಲಿ !

  • ಸರಕಾರದಿಂದ ೧೮ ಲಕ್ಷಕ್ಕಿಂತಲೂ ಹೆಚ್ಚಿನ ಅನುದಾನ ಬಾಕಿ !

  • ೨೦೧೫ ರಿಂದ ಸಂಸ್ಕೃತಕ್ಕೆ ಅನುದಾನ ಇಲ್ಲ; ಆದರೆ ಉರ್ದು ಗಾಗಿ ಕೊಟ್ಟಾಂತರ ರೂಪಾಯಿ ಖರ್ಚು !

ಶ್ರೀ. ಪ್ರೀತಮ ನಾಚಣಕರ

ಮುಂಬಯಿ, ಆಗಸ್ಟ್ ೧೪ (ವಾರ್ತೆ) – ರಾಜ್ಯ ಸರಕಾರ ಅನುದಾನ ನೀಡದೆ ಇರುವುದರಿಂದ ಮಹಾರಾಷ್ಟ್ರದ ‘ಮಹಾಕವಿ ಕಾಳಿದಾಸ ಸಂಸ್ಕೃತ ಸಾಧನ ಪ್ರಶಸ್ತಿ’ ನಿಲ್ಲಿಸುವ ಪ್ರಮೇಯ ಬಂದಿದೆ. ಅನುದಾನ ನೀಡುವ ಸಚಿವರ ಆಶ್ವಾಸನೆಯ ಮೇಲೆ ವಿಶ್ವಾಸ ಇರಿಸಿ ‘ಕವಿ ಕಾಲಿದಾಸ ಸಂಸ್ಕೃತ ವಿಶ್ವವಿದ್ಯಾಲಯ’ವು ೨೦೧೫ ರಿಂದ ೨೦೨೧ ಈ ೬ ವರ್ಷಗಳ ಪ್ರಶಸ್ತಿ ೨೦೨೧ ರಲ್ಲಿ ಸ್ವಂತ ಖರ್ಚದಿಂದ ನೀಡಿತ್ತು. ಆದರೆ ಈ ಸಮಾರಂಭ ನಡೆದು ೩ ವರ್ಷ ಕಳೆದರೂ ಸರಕಾರದಿಂದ ಪ್ರಶಸ್ತಿಯ ಹಣ ಮತ್ತು ಸಮಾರಂಭಕ್ಕಾಗಿ ಖರ್ಚಾಗಿರುವ ಹಣ ಕಾಲೇಜಿಗೆ ನೀಡಲಿಲ್ಲ. ಈ ಪ್ರಶಸ್ತಿಗಾಗಿ ಸರಕಾರದಿಂದ ೧೮ ಲಕ್ಷ ೧೭ ಸಾವಿರ ರೂಪಾಯಿ ಅನುದಾನ ಬಾಕಿ ಇದೆ. ಹಾಗೂ ಇನ್ನೊಂದು ಕಡೆಗೆ ಉರ್ದು ಭಾಷೆಗಾಗಿ ಪ್ರತಿ ವರ್ಷ ಸರಕಾರದಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ.

ರಾಜ್ಯ ಸರಕಾರದ ಉಚ್ಚ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ. ೨೦೨೧ ರಲ್ಲಿ ಉಚ್ಚ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ ಸಾಮಂತ ಇವರ ಉಪಸ್ಥಿತಿಯಲ್ಲಿ ೨೦೧೫ ರಿಂದ ೨೦೨೧ ವರೆಗಿನ ಬಾಕಿ ಉಳಿದಿರುವ ಪ್ರಶಸ್ತಿಗಳು ನೀಡಲಾಗಿದ್ದವು. ಆ ಸಮಯದಲ್ಲಿ ಸಚಿವ ಉದಯ ಸಾಮಂತ ಇವರು ‘ಪ್ರಶಸ್ತಿಗಾಗಿ ಕಾಲೇಜು ಖರ್ಚು ಮಾಡಬೇಕು ನಂತರ ಸರಕಾರದಿಂದ ಹಣ ನೀಡಲಾಗುವುದೆಂದು’, ಆಶ್ವಾಸನೆ ನೀಡಿದ್ದರು; ಆದರೆ ಇಲ್ಲಿಯವರೆಗೆ ಹಣ ನೀಡಿಲ್ಲ. ಈಗ ಭಾಜಪದ ಚಂದ್ರಕಾಂತ ಪಾಟೀಲ ಇವರು ಉಚ್ಚ ಮತ್ತು ತಾಂತ್ರಿಕ ಶಿಕ್ಷಣ ಸಚಿವರಾಗಿದ್ದಾರೆ. ಅವರ ಬಳಿ ಕೂಡ ಈ ಕಾಲೇಜಿನಿಂದ ಅನುದಾನಕ್ಕಾಗಿ ಸಮಯಕ್ಕೆ ಬೆಂಬೇತ್ತುವಿಕೆ ಮಾಡಿದೆ; ಆದರೂ ಇಲ್ಲಿಯವರೆಗೆ ಕಾಲೇಜಿಗೆ ಅನುದಾನ ದೊರೆತಿಲ್ಲ.

ಎಲ್ಲಿಯವರೆಗೆ ಅನುದಾನ ಸಿಗಲ್ಲ ಅಲ್ಲಿಯವರೆಗೆ ಪ್ರಶಸ್ತಿ ಇಲ್ಲ ! – ಕವಿ ಕಾಳಿದಾಸ ಸಂಸ್ಕೃತ ಕಾಲೇಜ್, ನಾಗಪುರ

ಪ್ರಶಸ್ತಿ ನೀಡುವುದರ ಕುರಿತು ದೈನಿಕ ‘ಸನಾತನ ಪ್ರಭಾತ’ ಪ್ರತಿನಿಧಿಗಳು ಕವಿ ಕಾಳಿದಾಸ ಸಂಸ್ಕೃತ ಕಾಲೇಜಿನ ಸಂಸ್ಕೃತ ವಿಭಾಗದ ಜೊತೆಗೆ ಸಂಪರ್ಕಿಸಿದಾಗ ಪದಾಧಿಕಾರಿಗಳು, ಕಾಲೇಜಿನಲ್ಲಿ ಈ ಹಿಂದೆ ಪ್ರಶಸ್ತಿಗಾಗಿ ಖರ್ಚು ಮಾಡಿರುವ ಹಣ ಸರಕಾರದಿಂದ ಇಲ್ಲಿಯವರೆಗೆ ದೊರೆತಿಲ್ಲ. ಆದ್ದರಿಂದ ಎಲ್ಲಿಯವರೆಗೆ ಅನುದಾನ ಸಿಗುವುದಿಲ್ಲ ಅಲ್ಲಿಯವರೆಗೆ ಕಾಲೇಜದಿಂದ ಪ್ರಶಸ್ತಿ ನೀಡದಿರುವ ನಿಲುವು ತಾಳಿದೆ ಎಂದು ಹೇಳಿದರು.

ಉರ್ದು ಭಾಷೆಗಾಗಿ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ; ಸಂಸ್ಕೃತಕ್ಕೆ ನಿರ್ಲಕ್ಷ !

೨೦೧೫ ರಿಂದ ಮಹಾರಾಷ್ಟ್ರ ಸರಕಾರವು ಉರ್ದು ಭಾಷೆಯ ಪ್ರಚಾರ ಮತ್ತು ಪ್ರಸಾರ ಮಾಡುವುದಕ್ಕಾಗಿ ಕಟ್ಟಿರುವ ‘ಉರ್ದು ಮನೆಗಳಿಗಾಗಿ’ ೨೯ ಕೋಟಿ ೬೦ ಲಕ್ಷದ ೧೫ ಸಾವಿರದಷ್ಟು ಅನುದಾನ ನೀಡಿದೆ. ಹಾಗೂ ಉರ್ದು ಸಾಹಿತ್ಯದ ಪ್ರಚಾರಕ್ಕಾಗಿ ಉರ್ದು ಅಕಾಡೆಮಿಗೆ ೨೦೧೫ ರಿಂದ ೫ ಕೋಟಿ ೨೫ ಲಕ್ಷ ರೂಪಾಯದಷ್ಟು ಅನುದಾನ ನೀಡಿದೆ; ಆದರೆ ಸಂಸ್ಕೃತ ಭಾಷೆಯ ಪ್ರಚಾರ ಮತ್ತು ಪ್ರಸಾರಕ್ಕಾಗಿ ವರ್ಷದಲ್ಲಿ ಒಂದು ಬಾರಿ ಇರುವ ಮಹಾಕವಿ ಕಾಳಿದಾಸ ಸಂಸ್ಕೃತ ಸಾಧನ ಪ್ರಶಸ್ತಿಗಾಗಿ ಪ್ರತಿ ವರ್ಷ ಬೇಕಾಗುವ ೧ ಲಕ್ಷ ೫೦ ಸಾವಿರ ರೂಪಾಯಿ ಸರಕಾರ ನೀಡುತ್ತಿಲ್ಲ.

೧೨ ವರ್ಷಗಳಲ್ಲಿ ಸಂಸ್ಕೃತ ಭಾಷೆಯ ಪ್ರಶಸ್ತಿಗಾಗಿ ೧ ರೂಪಾಯಿ ಕೂಡ ಹೆಚ್ಚಿಸಿಲ್ಲ !

ಸರಕಾರ ೨೦೧೨ ರಿಂದ ಕವಿ ಕಾಳಿದಾಸ ಸಂಸ್ಕೃತ ಸಾಧನ ಪ್ರಶಸ್ತಿ’ ನೀಡುವುದನ್ನು ಆರಂಭಿಸಿದೆ. ಇದರಲ್ಲಿ ೮ ರೀತಿಯ ಪ್ರಶಸ್ತಿಗಳು ನೀಡಲಾಗುತ್ತದೆ. ಪ್ರಾಚೀನ ಸಂಸ್ಕೃತ ಪಂಡಿತ, ವೇದಮೂರ್ತಿ, ಸಂಸ್ಕೃತ ಶಿಕ್ಷಕ, ಸಂಸ್ಕೃತ ಪ್ರಾಧ್ಯಾಪಕ, ಸಂಸ್ಕೃತ ಕಾರ್ಯಕರ್ತ ಇವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಇದರಲ್ಲಿ ಪ್ರತಿಯೊಂದು ಪ್ರಶಸ್ತಿಗಾಗಿ ೨೫ ಸಾವಿರ ರೂಪಾಯಿ ನಗದು ಹಣ ನೀಡಲಾಗುತ್ತದೆ. ಕಳೆದ ೧೨ ವರ್ಷಗಳಲ್ಲಿ ಈ ಹಣದಲ್ಲಿ ಸರಕಾರದಿಂದ ಒಂದು ರೂಪಾಯಿ ಕೂಡ ಹೆಚ್ಚಿಸಲಾಗಿಲ್ಲ. ತದ್ವಿರುದ್ಧ ಉರ್ದು ಭಾಷೆಯ ಪ್ರಚಾರಕ್ಕಾಗಿ ಸರಕಾರ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತದೆ.

‘ಈ ಪ್ರಶಸ್ತಿ ಪ್ರತಿ ವರ್ಷ ಸಂಸ್ಕೃತ ದಿನದಂದು ನೀಡಬೇಕು, ಹೀಗೆ ಸರಕಾರಿ ಆದೇಶದಲ್ಲಿ ಸ್ಪಷ್ಟವಾಗಿ ನಮೂದಿಸಿದೆ; ಆದರೆ ಪ್ರಶಸ್ತಿ ಆರಂಭವಾದ ದಿನದಿಂದಲೂ ಎಂದು ಕೂಡ ಸಂಸ್ಕೃತ ದಿನದಂದು ಈ ಪ್ರಶಸ್ತಿ ನೀಡಲಾಗಿಲ್ಲ. ೨-೩ ವರ್ಷಗಳ ಪ್ರಶಸ್ತಿ ಒಂದು ದಿನ ನೀಡಿ ಈ ಪ್ರಶಸ್ತಿ ನೀಡುವ ಔಪಚಾರಿಕತೆ ನಡೆಯುತ್ತಿದೆ.

ಈ ವರ್ಷವಾದರೂ ಸಂಸ್ಕೃತ ದಿನದಂದು ಪ್ರಶಸ್ತಿ ಘೋಷಣೆ ಮಾಡಬೇಕು !

ಈ ವರ್ಷ ಆಗಸ್ಟ್ ೧೯ ರಂದು ಸಂಸ್ಕೃತ ದಿನವಾಗಿದೆ. ಅದರ ಪ್ರಯುಕ್ತ ‘ಕವಿ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ’ ಹಾಗೂ ಬಾಕಿ ಇರುವ ಅನುದಾನ, ಹಾಗೂ ಕಳೆದ ೩ ವರ್ಷದಿಂದ ತಡೆ ಹಿಡಿದಿರುವ ಪ್ರಶಸ್ತಿಗಳನ್ನು ಸರಕಾರ ಘೋಷಿಸಬೇಕು, ಎಂದು ಎಲ್ಲಾ ಸಂಸ್ಕೃತ ಪ್ರೇಮಿಗಳ ಅಪೇಕ್ಷೆ ಆಗಿದೆ.

ಸಂಪಾದಕೀಯ ನಿಲುವು

  • ಇತ್ತೀಚಿಗೆ ಘೋಷಿತವಾಗಿರುವ ೧೨ ಸಾಂಸ್ಕೃತಿಕ ಪ್ರಶಸ್ತಿಯ ಅಡಿಯಲ್ಲಿ ಸರಕಾರದಿಂದ ಪ್ರತಿಯೊಬ್ಬ ವಿಜೇತನಿಗೆ ೧ ಲಕ್ಷ ರೂಪಾಯ ನೀಡಲಾಯಿತು. ಪ್ರಶಸ್ತಿಯಲ್ಲಿ ಹಣ ಎಷ್ಟು ದೊರೆಯುತ್ತದೆ ?, ಇದಕ್ಕಿಂತ ಪ್ರಶಸ್ತಿ ಪಡೆಯುವುದು ಮಹತ್ವದ್ದಾಗಿರುತ್ತದೆ. ಆದರೂ ಇತರ ಪ್ರಶಸ್ತಿಯ ತುಲನೆಯಲ್ಲಿ ‘ಕವಿ ಕಾಲಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿಯ ಹಣ ಇಷ್ಟೊಂದು ಕಡಿಮೆ ಏಕೆ ? ಮತ್ತು ಇದರಲ್ಲಿ ವರ್ಷಗಟ್ಟಲೆ ಹೆಚ್ಚಳ ಹೇಗೆ ಮಾಡಲಾಗುತ್ತಿಲ್ಲ ? ಇದರ ಉತ್ತರ ಜನರಿಗೆ ಸಿಗಬೇಕು !
  • ಸಂಸ್ಕೃತದ ಮಹತ್ವ ತಿಳಿದಿರುವ ವಿದೇಶಿ ನಾಗರಿಕರು ಹಾಗೂ ಅದರ ನಿರ್ಲಕ್ಷ ಮಾಡುವ ಸ್ವಾತಂತ್ರ್ಯದ ನಂತರದ ೭೭ ವರ್ಷದಲ್ಲಿನ ಎಲ್ಲಾ ರಾಜಕಾರಣಿಗಳು ! ಇದರಿಂದ ಹಿತ್ತಲ ಗಿಡ ಮದ್ದಲ್ಲ, ಹೀಗೆ ಚಿತ್ರ ನಿರ್ಮಾಣವಾಗಿದೆ. ಇದು ಇಲ್ಲಿಯವರೆಗೆ ಎಲ್ಲಾ ರಾಜಕಾರಣಿಗಳಿಗೂ ಲಜ್ಜಾಸ್ಪದ !