ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ ಇವರು ನುಡಿದ ಅಮೃತವಚನಗಳು
‘ಓರ್ವ ಸಾಧಕನು ಅವನಿಗಾಗುವ ಆಧ್ಯಾತ್ಮಿಕ ತೊಂದರೆಗಳಿಂದ ನಿರಾಶೆಯಲ್ಲಿದ್ದನು. ಈ ಸ್ಥಿತಿಯಿಂದ ಹೊರ ಬರಲು ಅವನಿಗೆ ಕೆಲವು ದಿನಗಳು ಕೇವಲ ನಾಮಜಪಾದಿ ಉಪಾಯಗಳನ್ನು ಮಾಡಲು ಹೇಳಿದ್ದರು. ಒಮ್ಮೆ ಪರಾತ್ಪರ ಗುರುದೇವರು (ಪರಾತ್ಪರ ಗುರು ಡಾ. ಆಠವಲೆ ಇವರು) ಆ ಸಾಧಕನೊಂದಿಗೆ ಸೇವೆಯಲ್ಲಿರುವ ಸಾಧಕರಿಗೆ, “ನಿಮ್ಮ ಗೆಳೆಯನು ಹೇಗಿದ್ದಾನೆ ? ನೀವು ಅವನನ್ನು ವಿಚಾರಿಸುತ್ತಿರಲ್ಲ ? ನೀವು ಪರಸ್ಪರರೊಂದಿಗೆ ಮನಮುಕ್ತವಾಗಿ ಮಾತನಾಡುತ್ತೀರಲ್ಲ ?” ಎಂದು ಕೇಳಿದರು.
ಸಾಧಕರು ಪರಸ್ಪರರನ್ನು ವಿಚಾರಿಸುವುದು, ಎಂದರೆ ಕೇವಲ ಸ್ಥೂಲದ ಮಾತುಕತೆಯಾಗಿರದೇ ಅದು ಚೈತನ್ಯದ ಕೊಡು-ಕೊಳ್ಳುವಿಕೆಯಾಗಿದೆ. ನಾವು ಇಷ್ಟು ದಿನಗಳಿಂದ ಒಟ್ಟಿಗೆ ಸೇವೆ ಮಾಡುತ್ತಿರುವಾಗ ಪರಸ್ಪರರಲ್ಲಿ ಮನಮುಕ್ತತೆ ಇರಬೇಕು. ‘ಮನಮುಕ್ತವಾಗಿ ಮಾತನಾಡುವುದು, ಪರಸ್ಪರರ ಕಾಳಜಿ ತೆಗೆದುಕೊಳ್ಳುವುದು, ಇತರರಿಗೆ ಸಹಾಯ ಮಾಡುವುದು, ಪ್ರೀತಿಯಿಂದ ನಡೆದುಕೊಳ್ಳುವುದು’, ಈ ಎಲ್ಲವೂ ಕೌಟುಂಬಿಕಭಾವದ ಗುಣಗಳಾಗಿವೆ. ‘ಸನಾತನ ಸಂಸ್ಥೆ ಮತ್ತು ಅದರ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುವ ಎಲ್ಲ ಸಾಧಕರು’ ದೇವರ ಒಂದು ಆದರ್ಶ ಕುಟುಂಬವಾಗಿದೆ. ಪ್ರತಿಯೊಬ್ಬ ಸಾಧಕನು ಈ ಆದರ್ಶ ಮತ್ತು ವಾತ್ಸಲ್ಯಯುಕ್ತ ಕುಟುಂಬದ ಅವಿಭಾಜ್ಯ ಅಂಗವಾಗಿದ್ದಾನೆ.
ತಾಯಿಯ ಹಾಗೆ ಪ್ರತಿಯೊಬ್ಬ ಸಾಧಕರ ಕಾಳಜಿ ವಹಿಸುವ ಬಗ್ಗೆ ಪರಾತ್ಪರ ಗುರುದೇವರು ಸ್ವತಃ ಸಾಧಕರಿಗೆ ಅವರ ಆದರ್ಶವನ್ನು ವರ್ತನೆಯಿಂದ ‘ಆದರ್ಶ ಕುಟುಂಬದ ದೈವಿ ಗುಣಗಳನ್ನು ನಾವು ಹೇಗೆ ಅಂಗೀಕರಿಸಬೇಕು ?’, ಎಂಬುದನ್ನು ಕಲಿಸುತ್ತಾರೆ ಮತ್ತು ಅವರು ಆ ಆದರ್ಶ ಸಾಧಕರ ನಿರ್ಮಾಣವನ್ನೂ ಸಹ ಮಾಡುತ್ತಾರೆ, ಎಂಬುದನ್ನು ನಾವು ಗಮನದಲ್ಲಿಡಬೇಕು.
– (ಶ್ರೀಚಿತ್‌ಶಕ್ತಿ) ಸೌ. ಅಂಜಲಿ ಮುಕುಲ ಗಾಡಗೀಳ
ಇತರರಿಗೆ ಗುರುಗಳ ಸಂದೇಶವನ್ನು ನೀಡುವಾಗಲೂ ನಮ್ಮ ಸಾಧನೆಯಾಗುವುದು ಅವಶ್ಯಕವಿದೆ !‘ಒಮ್ಮೆ ಓರ್ವ ಮೂರ್ತಿಕಾರರಿಗೆ ನಾವು ಗಣಪತಿಯ ಒಂದು ಮೂರ್ತಿಯನ್ನು ಸಿದ್ಧಪಡಿಸಲು ಹೇಳಿದ್ದೆವು. ಮೂರ್ತಿಯನ್ನು ಸಿದ್ಧಪಡಿಸಿದ ನಂತರ ಆ ಮೂರ್ತಿಗೆ ಬಣ್ಣವನ್ನು ಕೊಡುವುದರ ಬಗ್ಗೆ ಪರಾತ್ಪರ ಗುರು ಡಾಕ್ಟರರು, “ಮೂರ್ತಿಕಾರರಿಗೆ ಹೇಗೆ ಬೇಕೋ, ಹಾಗೆ ಬಣ್ಣವನ್ನು ಅವರು ಕೊಡಬಹುದು”, ಎಂದು ಹೇಳಿದರು. ಗುರುಗಳ ಸಂದೇಶವನ್ನು ಇತರರಿಗೆ ಕೊಡುವಾಗಲೂ ನಮ್ಮ ಸಾಧನೆಯಾಗಬೇಕು; ಆದುದರಿಂದ ನಾನು ಆ ಮೂರ್ತಿಕಾರನಿಗೆ, “ನಿಮಗೆ ಒಳಗಿನಿಂದ ಲಭಿಸುವ ಈ ದೈವಿ ಪ್ರೇರಣೆಯಿಂದ ತಾವು ಮೂರ್ತಿಗೆ ಬಣ್ಣವನ್ನು ಬಳಿಯಿರಿ (ಬಣ್ಣವನ್ನು ಕೊಡಿ)” ಎಂದು ಹೇಳಿದೆನು. – (ಶ್ರೀಚಿತ್‌ಶಕ್ತಿ) ಸೌ. ಅಂಜಲಿ ಮುಕುಲ ಗಾಡಗೀಳ |