ಅಮೇರಿಕಾದ ಓರ್ವ ನಟಿ ಹಾಗೂ ಗಾಯಕಿಗೆ ಏನು ಅನಿಸುತ್ತದೆ, ಅದು ಭಾರತದ ನರರು, ಗಾಯಕರು, ಕ್ರೀಡಾಪಟುಗಳಿಗೆ ಏಕೆ ಅನಿಸುವುದಿಲ್ಲ ? ಕಳೆದ ೩೨ ವರ್ಷಗಳಿಂದ ಅವರು ಎಂದು ಈ ವಿಷಯವಾಗಿ ಎಂದೂ ಮಾತನಾಡಿಲ್ಲ ? ಇಂತಹವರನ್ನು ದೇಶಪ್ರೇಮಿ ಹಿಂದೂಗಳು ಕಾನೂನು ರೀತಿಯಲ್ಲಿ ವಿಚಾರಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ !- ಸಂಪಾದಕರು
ನ್ಯೂಯಾರ್ಕ್ (ಅಮೆರಿಕ) – ಜಗತ್ತಿನಾದ್ಯಂತ ಧಾರ್ಮಿಕ ಶೋಷಣೆ ನಡೆಯುತ್ತಿದೆ. ಇಂದು ನಮಗೆ ‘ಪಲಾಯನ ದಿನ’ದ ಭೀಕರತೆ ನೆನಪಾಗುತ್ತದೆ. ಆಗ ಕಾಶ್ಮೀರಿ ಹಿಂದೂಗಳನ್ನು ಕಾಶ್ಮೀರದ ಇಸ್ಲಾಮಿಕ್ ಭಯೋತ್ಪಾದಕರ ನರಮೇಧದಿಂದ ಪಲಾಯನ ಮಾಡಬೇಕಾಯಿತು. ನನ್ನ ಪ್ರಾರ್ಥನೆ ಕಾಶ್ಮೀರಿ ಹಿಂದೂಗಳ ಜೊತೆಗೆ ಇದೆ; ಕಾರಣ ಇಂದಿಗೂ ಅನೇಕ ಜನರು ಅವರ ಪ್ರಿಯ ಜನರಿಗಾಗಿ ಹಾಗೂ ಅವರ ಮನೆಗಳಿಗಾಗಿ ಶೋಕಾಚರಣೆ ಮಾಡುತ್ತಿದ್ದಾರೆ, ಇಂತಹ ಶಬ್ದಗಳಲ್ಲಿ ಅಮೆರಿಕಾದ ನಟಿ ಮತ್ತು ಗಾಯಕಿ ಮೇರಿ ಮಿಲಬೇನ ಇವರು ಕಾಶ್ಮೀರಿ ಹಿಂದುಗಳ ನಿರಾಶ್ರಿತ ದಿನದಂದು ಟ್ವೀಟ್ ಮಾಡಿ ನೋವನ್ನು ವ್ಯಕ್ತಪಡಿಸಿದ್ದಾರೆ. ಭಾರತದ ರಾಷ್ಟ್ರಗೀತೆ ಮತ್ತು ‘ಓಂ ಜಯ ಜಗದೀಶ ಹರೇ’ ಈ ಭಕ್ತಿ ಗೀತೆ ಹಾಡಿದ ನಂತರ ಮಿಲಬೆನ ಭಾರತದಲ್ಲಿ ಮತ್ತು ಭಾರತೀಯ ಅಮೆರಿಕ ಜನರಲ್ಲಿ ಬಹಳ ಜನಪ್ರಿಯರಾದರು.
‘Genocide, Ethnic Cleansing From Kashmir At Hands Of Islamist Terrorists’: American Singer Mary Millben Marks Exodus Of Kashmiri Panditshttps://t.co/oL9L88ad83
— Swarajya (@SwarajyaMag) January 21, 2022
ಮೀಲಬೆನ ಇವರು ತಮ್ಮ ಟ್ವಿಟ್‌ನಲ್ಲಿ, ಒಂದು ಜಾಗತಿಕ ವ್ಯಕ್ತಿತ್ವದಂತೆ ನಾನು ಯಾವಾಗಲೂ ಕಾಶ್ಮೀರಿ ಹಿಂದೂಗಳಿಗೆ ಬೆಂಬಲ ನೀಡುವೆ; ಕಾರಣ ಧಾರ್ಮಿಕ ಸ್ವಾತಂತ್ರ್ಯ ಮತ್ತು ಜಾಗತಿಕ ಧೋರಣೆ ಇದು ಯಾವುದೇ ಧರ್ಮದ ಸಂರಕ್ಷಣೆ ಮಾಡುವುದು ಅವಶ್ಯಕವಾಗಿದೆ. ಕ್ರೈಸ್ತರ ಶೋಷಣೆ, ಸೇಮಿಟಿಝಮ್, (ಜಾತಿ ಗುಂಪು ಮತ್ತು ಅವರ ಧರ್ಮ ಎರಡು ವಿಷಯವಾಗಿ ಜ್ಯೂ ಜನರಲ್ಲಿ ಬೇದಬಾವ ನಡೆಸುವ ಪೂರ್ವಗ್ರಹ) ಜ್ಯುಗಳ ದ್ವೇಷ, ಹಿಂದೂ ಮತ್ತು ಇತರರ ವಿರುದ್ಧ ನರಮೇಧ ಇಂದಿಗೂ ನಡೆಯುತ್ತಲೇ ಇದೆ. ನಾನು ಅಮೆರಿಕ ಮತ್ತು ಜಾಗತಿಕ ನಾಗರಿಕ ಇವರಿಗೆ ಈ ಕೆಟ್ಟ ವಿಷಯವಾಗಿ ಉದಾಸೀನರಾಗದಿರಿ ಎಂದು ಕರೆ ನೀಡುತ್ತೇನೆ ಎಂದು ಹೇಳಿದರು.