ಸಂತರ ಬಳಿ ಸಕಾಮ ಸಾಧನೆ ಮಾಡುವ ಸಾವಿರಾರು ಭಕ್ತರಿರುತ್ತಾರೆ; ಆದರೆ ಈಶ್ವರಪ್ರಾಪ್ತಿಗಾಗಿ ಹೆಚ್ಚೆಂದರೆ ೧-೨ ಶಿಷ್ಯರಿರುತ್ತಾರೆ !
‘ಹೆಚ್ಚಿನ ಸಂತರು ವ್ಯಷ್ಟಿ ಪ್ರಕೃತಿಯವರಾಗಿರುತ್ತಾರೆ. ಅವರು ಮಾನಸಿಕ ಸ್ತರದಲ್ಲಿದ್ದು ವ್ಯಾವಹಾರಿಕ ದುಃಖವನ್ನು ದೂರ ಮಾಡುವುದಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಅವರು ತಮ್ಮ ಬಳಿ ಬರುವವರಿಂದ ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಮಾಡಿಸಿಕೊಳ್ಳುವುದಿಲ್ಲ. ಅದುದರಿಂದ ಅವರಲ್ಲಿ ಬರುವ ಭಕ್ತರಲ್ಲಿ ‘ತಮ್ಮ ವ್ಯಾವಹಾರಿಕ ಅಡಚಣೆಗಳು ದೂರವಾಗಲಿ’, ಎಂಬುದಕ್ಕಾಗಿ ಬರುವಂತಹವರ ಭಕ್ತರ ಸಂಖ್ಯೆಯು ಹೆಚ್ಚಿರುತ್ತದೆ. ಆ ಸಂತರಿಂದ ಸಾಧನೆಯನ್ನು ಕಲಿತು ಶಿಷ್ಯಪದವಿಯ ವರೆಗೆ ತಲುಪುವುದು ಕಡಿಮೆಯೆಂದರೆ ೧-೨ ಜನರಷ್ಟೇ ಇರುತ್ತಾರೆ. ಬಹಳಷ್ಟು ಸಲ ಸಂತರ ನಂತರ ಅವರ ಪೀಠದಲ್ಲಿ ಕುಳಿತುಕೊಳ್ಳಲು ಅರ್ಹರು ಇಲ್ಲದಿರುವುದರಿಂದ ಅಲ್ಲಿ ಆ ಸಂತರ ಪಾದುಕೆಯ ಸ್ಥಾಪನೆ ಮಾಡಬೇಕಾಗುತ್ತದೆ’.
– (ಪರಾತ್ಪರ ಗುರು) ಡಾ. ಆಠವಲೆ (೫.೧೧.೨೦೨೧)