ಕೋಟ್ಯಂತರ ಭ್ರಷ್ಟಾಚಾರ ಮಾಡಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ! – ವಿರೋಧಕರ ಆರೋಪ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇವರ ‘ಪಾಕಿಸ್ತಾನ ತಹರಿಕ ಏ ಇನ್ಸಾಫ್’ ಈ ಪಕ್ಷವು ವಿದೇಶಿ ನಾಗರೀಕ ಮತ್ತು ಕಂಪನಿಗಳಿಂದ ಸಿಕ್ಕಿರುವ ಪಕ್ಷ ನಿಧಿಯ ಸಂಪೂರ್ಣ ಮಾಹಿತಿ ದೇಶದ ಚುನಾವಣೆ ಆಯೋಗಕ್ಕೆ ನೀಡಿಲ್ಲ. ಪಕ್ಷದ ಬ್ಯಾಂಕ್ ಖಾತೆಗೆ ಸಂಬಂಧಿತ ಮಾಹಿತಿ ಕೂಡ ಚುನಾವಣೆಯ ಆಯೋಗದಿಂದ ಮುಚ್ಚಿಡಲಾಗಿದೆ. ಪಾಕಿಸ್ತಾನದ ಚುನಾವಣೆ ಆಯೋಗವು ಸಂಗ್ರಹಿಸಿರುವ ವರದಿಯ ಆಧಾರದ ಮೇಲೆ ಸ್ಥಳೀಯ ಪ್ರಚಾರ ಮಾಧ್ಯಮಗಳು ಈ ದಾವೆ ಮಾಡಿದೆ.

ಜಮೀಯತ್ ಉಲೇಮಾ ಇಸ್ಲಾಂನ ಮುಖ್ಯಸ್ಥ ಫಜಲುರ ರೆಹಮಾನ್ ಇವರು ಈ ಅಂಶದಿಂದ ಇಮ್ರಾನ್ ಖಾನ್ ಇವರ ಪಕ್ಷದ ಮೇಲೆ ಟೀಕೆ ಮಾಡುತ್ತಾ, ಎಲ್ಲಾ ಪಾಕಿಸ್ತಾನಿ ರಾಜಕಾರಣಿಗಳ ತಪ್ಪಿನ ಕೃತ್ಯಗಳು ಏಣಿಸಿದರೆ, ಅದರ ತುಲನೆ ಪ್ರಧಾನಿ ಇಮ್ರಾನ್ ಖಾನ್ ಇವರ ನಡೆಸಿರುವ ಭ್ರಷ್ಟಾಚಾರದ ಜೊತೆ ಹೋಲಿಸಲು ಸಾಧ್ಯವಿಲ್ಲ. ಪಾಕಿಸ್ತಾನ ತಹರಿಕ-ಏ-ಇಂಸಾಫ್ ಇದು ಕಳ್ಳರ ಪಕ್ಷವಾಗಿದೆ. ರಾಜಕಾರಣದಲ್ಲಿ ಬೈಗುಳದ ಸಂಸ್ಕೃತಿ ಹೊಂದಿರುವ ಏಕೈಕ ಪಕ್ಷವಾಗಿದೆ. ಪಾಕಿಸ್ತಾನದ ಪ್ರಧಾನಿ ಚುನಾವಣೆಯ ಆಯೋಗದಿಂದ ೫೩ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಮುಚ್ಚಿಟ್ಟಿದೆ.