ಜಾಗತಿಕ ಮಹಾಮಾರಿಯನ್ನು ಹಬ್ಬಿಸುವ ‘ಕೊರೊನಾ ವಿಷಾಣು’ಗಳ ಹೊಸ ತಳಿಯಾಗಿರುವ ‘ಓಮಿಕ್ರಾನ್’ಗಳೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹೋರಾಡಲು ಈ ನಾಮಜಪವನ್ನು ಮಾಡಿರಿ !

(ನಾಮಜಪ – ‘ಓಂ ನಮೋ ಭಗವತೇ ವಾಸುದೇವಾಯ | ಶ್ರೀ ದುರ್ಗಾದೇವೈ ನಮಃ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |’)

ಸದ್ಗುರು (ಡಾ.) ಮುಕುಲ ಗಾಡಗೀಳ

‘೨೦೨೦ ನೇ ಇಸವಿಯಿಂದ ಜಗತ್ತಿನಾದ್ಯಂತದ ಜನರಿಗೆ ‘ಕೊರೋನಾ ವಿಷಾಣು’ಗಳ ಸಂಕಟ ಎದುರಾಗಿದೆ ಮತ್ತು ೨ ವರ್ಷಗಳಾದರೂ ಇದು ವರೆಗೂ ಆ ವಿಷಾಣುಗಳ ಸೋಂಕು ಜನರಿಗೆ ಆಗುತ್ತಲೇ ಇದೆ. ಅಂತಹದರಲ್ಲಿ ಈಗ ಕೊರೋನಾದ ಹೊಸ ತಳಿಯಾಗಿರುವ ‘ಓಮಿಕ್ರಾನ್’ ಹೆಸರಿನ ವಿಷಾಣುಗಳು ಹರಡುತ್ತಿರುವುದು ಗಮನಕ್ಕೆ ಬಂದಿದೆ. ‘ಕೊರೊನಾ ವಿಷಾಣು’ಗಳೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹೋರಾಡಲು ಯಾವ ನಾಮಜಪವನ್ನು ಮಾಡಬೇಕು ಮತ್ತು ಅದನ್ನು ಎಷ್ಟು ಸಮಯ ಮಾಡಬೇಕು ?’, ಎಂಬ ಮಾಹಿತಿ, ಹಾಗೆಯೇ ಆ ನಾಮಜಪದ ಧ್ವನಿಮುದ್ರಿತವನ್ನು ಸನಾತನ ಸಂಸ್ಥೆಯ ‘sanatan.org’ ಜಾಲತಾಣದಲ್ಲಿ, ಹಾಗೆಯೇ `ಸ್ಪಿರಿಚ್ಯುವಲ್ ಸೈನ್ಸ್ ರಿಸಚ್ ಫೌಂಡೇಶನ್’ದ ‘SSRF.org’ ಈ ಜಾಲತಾಣದಲ್ಲಿ ಕೊಡಲಾಗಿದೆ. ಜಗತ್ತಿನಾದ್ಯಂತ ಅನೇಕರಿಗೆ ಇದರ ಲಾಭವಾಗಿದೆ. ಈಗ ‘ಓಮಿಕ್ರಾನ್’ ಈ ವಿಷಾಣುಗಳೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹೋರಾಡಲು ಮಾಡುವ ನಾಮಜಪವನ್ನು ಇಲ್ಲಿ ಕೊಡಲಾಗಿದೆ.

೧. ನಾಮಜಪ

‘ಓಂ ನಮೋ ಭಗವತೇ ವಾಸುದೇವಾಯ | ಶ್ರೀ ದುರ್ಗಾದೇವೈ ನಮಃ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |’ ಈ ೫ ನಾಮಜಪಗಳು ಸೇರಿ ಒಂದು ನಾಮಜಪವಿದೆ ಮತ್ತು ಅದನ್ನು ಇಲ್ಲಿ ಕೊಟ್ಟಿರುವ ಕ್ರಮದಂತೆ ಆಗಾಗ ಮಾಡಬೇಕು.

೨. ನಾಮಜಪವನ್ನು ಮಾಡುವ ಕಾಲಾವಧಿ

ಅ. ಯಾವುದಾದರೊಂದು ಪ್ರದೇಶದಲ್ಲಿ ‘ಓಮಿಕ್ರಾನ್’ ತಳಿಯ ವಿಷಾಣುಗಳು ಹರಡಿದರೆ ಅಲ್ಲಿನ ಜನರು ಆ ವಿಷಾಣುಗಳಿಗೆ ತುತ್ತಾಗಬಹುದು. ಅಂತಹ ಸಮಯದಲ್ಲಿ ಆ ವಿಷಾಣುಗಳ ಸೋಂಕು ತಮಗಾಗದಂತೆ ಆಧ್ಯಾತ್ಮಿಕ ಸ್ತರದಲ್ಲಿ ಪ್ರತಿಬಂಧ ಮಾಡಲು ಈ ನಾಮಜಪವನ್ನು ಪ್ರತಿದಿನ ೧ ಗಂಟೆ ಮಾಡಬೇಕು.

ಆ. ಆ ವಿಷಾಣುಗಳ ಸೋಂಕಾದರೆ ಅವುಗಳ ಉಚ್ಚಾಟನೆಯಾಗಲು ಈ ನಾಮಜಪವನ್ನು ಸೋಂಕು ತಗಲಿರುವ ತೀವ್ರತೆಗನುಸಾರ ಮುಂದಿನ ಕಾಲಾವಧಿಗಾಗಿ ಪ್ರತಿದಿನ ಮಾಡಬೇಕು.

೩. ನಾಮಜಪವನ್ನು ಮಾಡಿದ ಧ್ವನಿಮುದ್ರಿತ

ನಾಮಜಪವನ್ನು ಕೇಳಿ ಅದನ್ನು ಮಾಡಲು ಬರಬೇಕೆಂದು ಅದರ ಧ್ವನಿಮುದ್ರಿತವನ್ನು ಜಾಲತಾಣದಲ್ಲಿ ಮುಂದಿನ ಕೊಂಡಿಯಲ್ಲಿ (ಪಾತ್‌ದಲ್ಲಿ) ಇಡಲಾಗಿದೆ : https://www.sanatan.org/kannada/omicron-protectionchant

೪. ‘ಕೊರೋನಾ ವಿಷಾಣು’ ಮತ್ತು ‘ಓಮಿಕ್ರಾನ್ ವಿಷಾಣು’ ಇವುಗಳಲ್ಲಿ ಅರಿವಾದ ವ್ಯತ್ಯಾಸ

‘ಕೊರೋನಾ ವಿಷಾಣು’ಗಳಿಗಿಂತ ‘ಓಮಿಕ್ರಾನ್ ವಿಷಾಣು’ಗಳು ಕಡಿಮೆ ಅಪಾಯಕಾರಿಯಾಗಿವೆ ಎಂದು ಆಧುನಿಕ ವೈದ್ಯರು (ಡಾಕ್ಟರ್ಸ್) ಹೇಳುತ್ತಿದ್ದಾರೆ.

ಟಿಪ್ಪಣಿ – ಆಪತ್ಕಾಲದ ತೀವ್ರತೆಯು ಹೆಚ್ಚಳವಾಗುತ್ತಿರುವಾಗ ಕೆಟ್ಟ ಶಕ್ತಿಗಳೊಂದಿಗೆ ಮಾಡುವ ಯುದ್ಧವು ಸೂಕ್ಷ್ಮಯುದ್ಧದಿಂದ ಸ್ಥೂಲ ಯುದ್ಧದ ಕಡೆಗೆ (ಮೂರನೇ ಮಹಾಯುದ್ಧದ ಕಡೆಗೆ) ಹೇಗೆ ಪ್ರಯಾಣ ಮಾಡುತ್ತೇವೆಯೋ, ಹಾಗೆಯೇ ಶಾರೀರಿಕ ರೋಗಗಳನ್ನು ಉದ್ಭವಿಸುವ ವಿಷಾಣುರೂಪಿ ಕೆಟ್ಟ ಶಕ್ತಿಗಳೂ ಸೂಕ್ಷ್ಮದಿಂದ ಸ್ಥೂಲದ ಕಡೆಗೆ ಹೋಗುತ್ತಿವೆ. ಅದಕ್ಕನುಸಾರ ‘ಕೊರೊನಾ ವಿಷಾಣು’ಗಳ (ಮೂಲ) ನಂತರ ಬಂದಿರುವ ‘ಓಮಿಕ್ರಾನ್ ತಳಿ’ಗಳೂ ಕಡಿಮೆ ಸೂಕ್ಷ್ಮವಾಗಿವೆ.

೫. ಪ್ರಾರ್ಥನೆ

‘ಇಲ್ಲಿ ಕೊಟ್ಟಿರುವ ನಾಮಜಪದಿಂದ ಗುರುಕೃಪೆಯಿಂದ ಜಗತ್ತಿನಾದ್ಯಂತ ಎಲ್ಲರಿಗೂ ಲಾಭವಾಗಿ ‘ಓಮಿಕ್ರಾನ್ ತಳಿ’ಗಳ ಜಗತ್ತಿನಾದ್ಯಂತದ ಪ್ರಭಾವವು ಹತೋಟಿಗೆ ಬರಬೇಕು ಮತ್ತು ಅದರ ಹರಡುವಿಕೆ ನಿಲ್ಲಬೇಕು, ಹಾಗೆಯೇ ಈ ನಾಮಜಪವನ್ನು ಮಾಡುವ ನಿಮಿತ್ತದಿಂದ ಅನೇಕರಿಗೆ ಈ ಆಪತ್ಕಾಲದಲ್ಲಿ ಸಾಧನೆ ಮಾಡುವ ಗಾಂಭೀರ್ಯವು ಗಮನಕ್ಕೆ ಬಂದು ಅವರಿಂದ ಸಾಧನೆಯು ಆರಂಭವಾಗಬೇಕು, ಎಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ !’

ಸಾಧಕರಿಗೆ ಸೂಚನೆ !

೧. ಯಾವ ಪರಿಸರದಲ್ಲಿ ‘ಓಮಿಕ್ರಾನ್’ ತುತ್ತಾದವರು ಸಿಕ್ಕಿದರೆ, ಅಲ್ಲಿ ‘ಓಮಿಕ್ರಾನ್’ಗೆ ಆಧ್ಯಾತ್ಮಿಕ ಸ್ತರದಲ್ಲಿ ಪ್ರತಿಬಂಧಾತ್ಮಕ ನಾಮಜಪವನ್ನು ಮಾಡಬೇಕಾಗುವುದರಿಂದ ಸದ್ಯ ‘ಕೊರೊನಾ’ದ ಮೇಲೆ ಪ್ರತಿಬಂಧಾತ್ಮಕ ಆಧ್ಯಾತ್ಮಿಕ ಶಕ್ತಿಯನ್ನು ನೀಡುವ ನಾಮಜಪ (ಶ್ರೀದುರ್ಗಾ-ಶ್ರೀದತ್ತ-ಶಿವ ಇವುಗಳನ್ನು ಒಟ್ಟಿಗೆ ಮಾಡುವ ನಾಮಜಪ) ಮಾಡುವುದನ್ನು ಸಾಧಕರು ನಿಲ್ಲಿಸಬಹುದು. ಯಾವ ಪರಿಸರದಲ್ಲಿ ಇದುವರೆಗೆ ‘ಓಮಿಕ್ರಾನ್’ದ ಸೋಂಕು ತಗಲಿಲ್ಲವೋ, ಅಲ್ಲಿ ಸದ್ಯ ಯಾವ ರೀತಿ ‘ಕೊರೊನಾ’ದ ಮೇಲೆ ಪ್ರತಿಬಂಧಾತ್ಮಕ ಆಧ್ಯಾತ್ಮಿಕ ಶಕ್ತಿಯನ್ನು ನೀಡುವ ನಾಮಜಪವನ್ನು ಮಾಡುತ್ತೇವೆಯೋ, ಅದೇ ರೀತಿ ಮುಂದುವರೆಸಬೇಕು.

೨. ‘ಓಮಿಕ್ರಾನ್’ ಅಥವಾ ‘ಕೊರೋನಾ’ ಇವುಗಳ ಮೇಲೆ ಪ್ರತಿಬಂಧಾತ್ಮಕ ಆಧ್ಯಾತ್ಮಿಕ ಶಕ್ತಿಯನ್ನು ಕೊಡುವ ನಾಮಜಪವನ್ನು ಮಾಡಿದ ನಂತರ ಉಳಿದ ಸಮಯದಲ್ಲಿ ಸಾಧಕರು ಸದ್ಯ ಯಾವ ರೀತಿ ಪ್ರಾಣಶಕ್ತಿವಹನದ ಪದ್ಧತಿಗನುಸಾರ ಕಂಡುಹಿಡಿದು ನಾಮಜಪವನ್ನು ಮಾಡುತ್ತಾರೆಯೋ, ಅದೇರೀತಿ ಮಾಡಬೇಕು.

೩. ಈ ಮೊದಲು ‘ನಿರ್ವಿಚಾರ’, ‘ಓಂ ನಿರ್ವಿಚಾರ’ ಮತ್ತು ‘ಶ್ರೀ ನಿರ್ವಿಚಾರಾಯ ನಮಃ |’ ಈ ನಾಮಜಪಗಳ ಬಗೆಗಿನ ಸೂಚನೆಯನ್ನು ಎಲ್ಲೆಡೆಯಲ್ಲಿನ ಸಾಧಕರಿಗೆ ಸ್ಪಷ್ಟಪಡಿಸಲಾಗಿದೆ. ಅದರಂತೆ ಆ ನಾಮಜಪವನ್ನೂ ಮುಂದುವರೆಸಬೇಕು.

– ಸದ್ಗುರು (ಡಾ.) ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೭.೧೨.೨೦೨೧)

ಈ ನಾಮಜಪವು ‘ಸನಾತನ ಚೈತನ್ಯವಾಣಿ’ಯಲ್ಲಿಯೂ ಲಭ್ಯವಿದೆ. ‘ಸನಾತನದ ಚೈತನ್ಯವಾಣಿ’ಯಲ್ಲಿ ಡೌನಲೋಡ್ ಮಾಡಲು https://www.sanatan.org/Chaitanyavani ಈ ಲಿಂಕ್‌ನಲ್ಲಿ ನೋಡಿರಿ.