೧. ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹೇಳಿದ ಜಾಗದಲ್ಲಿ ಹುಡುಕಿದಾಗ ಒಂದು ನಿಮಿಷದೊಳಗೆ ಧನಾದೇಶ ಮತ್ತು ನಗದು ಹಣ ಸಿಗುವುದು
೧೪.೫.೨೦೨೪ ರಂದು ಧರ್ಮಪ್ರೇಮಿಯೊಬ್ಬರು ಹಿಂದೂ ಜನಜಾಗೃತಿ ಸಮಿತಿಯ ಅಧಿವೇಶನಕ್ಕಾಗಿ ಹಣ ಅರ್ಪಣೆ ಮಾಡಿದ್ದರು. ಅದನ್ನು ನಾನು ಒಂದು ಕವರ್‌ನಲ್ಲಿ ಹಾಕಿ ಜವಾಬ್ದಾರ ಸಾಧಕರಿಗೆ ಕೊಡಲು ಕೋಣೆಯಲ್ಲಿನ ಒಂದು ಖಾನೆಯಲ್ಲಿ ಇಟ್ಟಿದ್ದೆ. ಎರಡು ದಿನಗಳ ನಂತರ ಧನಾದೇಶ (ಚೆಕ್) ಮತ್ತು ನಗದು ಹಣ ಎರಡು ಸಹ ನಿಗದಿತ ಜಾಗದಲ್ಲಿ ಸಿಗಲಿಲ್ಲ. ಅದಕ್ಕಾಗಿ ತುಂಬಾ ಹುಡುಕಾಡಿದೆ. ಎಲ್ಲ ಬ್ಯಾಗ್, ಆಶ್ರಮದ ಕೋಣೆ, ಕಪಾಟಿನಲ್ಲಿ ಹುಡುಕಿದರೂ ಸಿಗಲಿಲ್ಲ. ಎಲ್ಲ ಸಾಧಕರ ಬಳಿ ವಿಚಾರಿಸಿದರೂ ಸಿಗಲಿಲ್ಲ. ಇದರಿಂದ ನನಗೆ ಒತ್ತಡ (ಟೆನ್ಶನ್) ಬಂದಿತು. ತದನಂತರ ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಈ ಕುರಿತು ಕೇಳಿದೆನು. ಆಗ ಸದ್ಗುರು ಗಾಡಗೀಳಕಾಕಾರವರು ಒಂದು ಕ್ಷಣವೂ ವಿಚಾರ ಮಾಡದೇ ‘ಕೋಣೆಯ ಒಂದು ಮೂಲೆಯ ಬಲಗಡೆಯ ‘ರ್ಯಾಕ್’ನಲ್ಲಿದೆ’, ಎಂದು ಹೇಳಿದರು. ಸದ್ಗುರು ಗಾಡಗೀಳಕಾಕಾರವರು ಹೇಳಿದ ಜಾಗದಲ್ಲಿ ಹುಡುಕಿದಾಗ ಒಂದು ನಿಮಿಷದಲ್ಲಿ ಚೆಕ್ ಮತ್ತು ನಗದು ಹಣ ಸಿಕ್ಕಿತು.
೨. ಕಳೆದು ಹೋಗಿರುವ ನಾಮಪಟ್ಟಿಗಳ ಪೆಟ್ಟಿಗೆಯನ್ನು ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹೇಳಿದ ಜಾಗದಲ್ಲಿ ಹುಡುಕಿದ ತಕ್ಷಣ ಬೇರೊಂದು ಪೆಟ್ಟಿಗೆಯ ಜೊತೆಗೆ ಸಿಗುವುದು
೩ ತಿಂಗಳ ಹಿಂದೆ ಇಂತಹ ಇನ್ನೊಂದು ಪ್ರಸಂಗ ಘಟಿಸಿತ್ತು. ಸನಾತನದ ಗ್ರಂಥಗಳ ಮುದ್ರಣದ ಸೇವೆಯನ್ನು ಮಾಡುವ ಶ್ರೀ. ಹರೀಶ ಆಚಾರ್ಯ ಇವರು ಒಂದು ಮುದ್ರಣಾಲಯದಲ್ಲಿ ಸನಾತನ ಸಂಸ್ಥೆಯ ೧೦ ಸಾವಿರ ‘ಸ್ಟಿಕರ್’ನ ನಾಮಪಟ್ಟಿಗಳನ್ನು ಮುದ್ರಿಸಿದ್ದರು. ‘ಆ ನಾಮಪಟ್ಟಿಗಳ ಪೆಟ್ಟಿಗೆಯನ್ನು ಕೆಲಸಗಾರರು ಎಲ್ಲಿ ಇಟ್ಟಿದ್ದಾರೆಂದು ತಿಳಿಯದೇ ೨-೩ ದಿನ ಪೂರ್ಣ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಹುಡುಕಿದರೂ ಸಿಗಲಿಲ್ಲ. ತದನಂತರ ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಈ ಬಗ್ಗೆ ಕೇಳಿದಾಗ ಅವರು ತಕ್ಷಣ, ”ಮುದ್ರಣಾಲಯದಲ್ಲಿ ಮೇಲಿನ ಬಲಬದಿಯಲ್ಲಿದೆ. ಅಲ್ಲಿ ಹುಡುಕಿ” ಎಂದು ಹೇಳಿದರು. ಅಲ್ಲಿ ಹುಡುಕಿದಾಗ, ”ಅದು ಬೇರೆ ಒಂದು ಬಂಡಲ್ ಜೊತೆಗೆ ಆ ಪೆಟ್ಟಿಗೆಯೂ ಇರುವುದು ಗಮನಕ್ಕೆ ಬಂದಿತು.”
ಈ ಎರಡೂ ಪ್ರಸಂಗಗಳಿಂದ ಸನಾತನ ಸಂಸ್ಥೆಯ ಸದ್ಗುರು ಡಾ. ಮುಕುಲ ಗಾಡಗೀಳ ಇವರ ಸೂಕ್ಷ್ಮ ಜ್ಞಾನದ ಪ್ರಬುದ್ಧತೆ ಗಮನಕ್ಕೆ ಬಂದಿತು. ಇಂತಹ ಅನೇಕ ಸದ್ಗುರು ಮತ್ತು ಸಂತರನ್ನು ಕರುಣಿಸಿದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು.
– ಶ್ರೀ. ಮೋಹನ ಗೌಡ, ಬೆಂಗಳೂರು (೩೧.೫.೨೦೨೪)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |