೧. ‘ವಿವಿಧಪ್ರಕಾರದ ಸೇವೆಗಳು ಸಿಗಲು ಮುಖ್ಯ ಕಾರಣವೆಂದರೆ ನನ್ನಲ್ಲಿರುವ ‘ಜಿಜ್ಞಾಸೆ’ ಹಾಗೂ ‘ಗುರುಕೃಪೆ’ ಎಂದು ನನಗನಿಸುತ್ತದೆ
‘ನಾನು ೨೦೦೩ ರಿಂದ ಮುಖ್ಯವಾಗಿ ಗ್ರಂಥಗಳಿಗೆ ಸಂಬಂಧಿಸಿದ ಸೇವೆಗಳನ್ನು ಮಾಡುತ್ತಿದ್ದೇನೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರು ನನಗೆ ಸಂಕಲನ ಮಾಡಲು ಕಲಿಸಿದರು. ಈ ಮುಖ್ಯ ಸೇವೆಯ ಜೊತೆಗೆ ನನಗೆ ಇತರ ಅನೇಕ ಸೇವೆಗಳು ಸಿಗುತ್ತಾ ಹೋದವು. ‘ಇದಕ್ಕೆ, ನನ್ನಲ್ಲಿರುವ ‘ಜಿಜ್ಞಾಸೆ’ ಮತ್ತು ಪ್ರಾಮುಖ್ಯವಾಗಿ ‘ಗುರುಕೃಪೆಯೇ ಕಾರಣವಾಗಿದೆ’ ಎಂದು ನನಗೆ ಅನಿಸುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಆಗುವ ಆಧ್ಯಾತ್ಮಿಕ ತೊಂದರೆಗಳಿಗೆ ಕೈಬೆರಳುಗಳ ಮುದ್ರೆ, ಚಕ್ರಗಳ ಮೇಲಿನ ನ್ಯಾಸ ಹಾಗೂ ನಾಮಜಪವನ್ನು ಹುಡುಕಿ ಕೊಡುತ್ತಿದ್ದರು. ‘ಅವರು ಈ ಆಧ್ಯಾತ್ಮಿಕ ಸ್ತರದಲ್ಲಿನ ಉಪಾಯ ವನ್ನು ಹೇಗೆ ಕಂಡುಹಿಡಿಯುತ್ತಾರೆ ?’, ಎಂಬುದರ ಕುತೂಹಲ ನನಗಿತ್ತು. ೨೦೦೭ ರಿಂದ ನಾನು ಕೂಡ ಅದರ ಅಭ್ಯಾಸ ಮಾಡಲು ಆರಂಭಿಸಿದೆನು. ನಾನು ‘ಚಕ್ರಗಳ ಮೇಲೆ ತೊಂದರೆಯ ಸ್ಪಂದನಗಳು ಹೇಗೆ ಅರಿವಾಗುತ್ತವೆ ?’, ಎಂಬುದನ್ನು ನೋಡು ತ್ತಿದ್ದೆನು ಹಾಗೂ ನಾಮಜಪವನ್ನು ಕಂಡುಹಿಡಿಯಲು ಪ್ರಯತ್ನಿಸು ತ್ತಿದ್ದೆನು. ನಂತರ ನನ್ನ ಪತ್ನಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಸಾಧಕರಿಗೆ ನಾಮಜಪಾದಿ ಉಪಾಯಗಳನ್ನು ಹೇಳಲು ಆರಂಭಿಸಿದರು. ೨೦೧೦ ರಲ್ಲಿ ಅವರು ನನಗೆ, ”ಈಗ ನೀವು ಸಾಧಕರಿಗೆ ನಾಮಜಪಾದಿ ಉಪಾಯಗಳನ್ನು ಹೇಳಿರಿ’’ ಎಂದು ಹೇಳಿದರು. ನನಗೆ ಅದರ ಬಗ್ಗೆ ಹೆಚ್ಚೇನೂ ತಿಳಿಯುತ್ತಿರಲಿಲ್ಲ; ಆದರೆ ‘ನೀರಿಗೆ ತಳ್ಳಿದರೆ ಈಜಲು ತನ್ನಿಂತಾನೆ ಬರುತ್ತದೆ’, ಎನ್ನುವ ಹಾಗೆ ನನ್ನ ಮೇಲೆ ನಾಮಜಪಾದಿ ಉಪಾಯ ಹೇಳುವ ಜವಾಬ್ದಾರಿ ಬಂದಿರುವುದರಿಂದ ನನಗೆ ಇನ್ನೂ ಹೆಚ್ಚು ತಿಳಿಯುತ್ತಾ ಹೋಯಿತು. ನಂತರ ೨೦೧೧ ರಲ್ಲಿ ನಾನು ಗುರುಕೃಪೆಯಿಂದ ಸಂತಪದವಿಗೆ ತಲುಪಿದಾಗ ಗುರುದೇವರು ನನಗೆ ನಾಮಜಪಾದಿ ಉಪಾಯ ಹೇಳುವ ಜವಾಬ್ದಾರಿಯನ್ನು ಒಪ್ಪಿಸಿದರು. ೨೦೧೭ ರಲ್ಲಿ ‘ಪ್ರಾಣಶಕ್ತಿವಹನ ಉಪಾಯಪದ್ಧತಿ’ಯ ಸನಾತನದ ಗ್ರಂಥ ಬಿಡುಗಡೆಯಾದುದರಿಂದ ತೊಂದರೆಗನುಸಾರ ಉಪಾಯ ಹೇಳಲು ಸುಲಭವಾಯಿತು.
ಅನಂತರ ನಾಮಜಪಾದಿ ಉಪಾಯ ಹೇಳುವ ನನ್ನ ವ್ಯಾಪ್ತಿ ಹೆಚ್ಚುತ್ತಾ ಹೋಯಿತು. ಸಾಧಕರಲ್ಲಿ ಯಾರಿಗಾದರೂ ಅಪಘಾತವಾದರೆ ಅಥವಾ ಅವರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ (ಐ.ಸಿ.ಯು.ದಲ್ಲಿ) ಇಟ್ಟಿದ್ದರೆ ಆ ಕಠಿಣ ಪ್ರಸಂಗದಲ್ಲಿಯೂ ನಾನು ಉಪಾಯ ಹೇಳಬೇಕಾಗುತ್ತಿತ್ತು. ಪ್ರಸಾರಸೇವೆ, ಗಣಕಯಂತ್ರ ಸೇವೆ, ಮನೆ ಅಥವಾ ಭೂಮಿಯ ಕೊಡು-ಕೊಳ್ಳುವ ವ್ಯವಹಾರ ಇತ್ಯಾದಿಗಳಲ್ಲಿನ ವಿವಿಧ ಸಮಸ್ಯೆಗಳಿಗಾಗಿ ಸಾಧಕರು ನನಗೆ ಆಧ್ಯಾತ್ಮಿಕ ಸ್ತರದ ಉಪಾಯ ಕೇಳುತ್ತಿದ್ದುದರಿಂದ ನನ್ನಲ್ಲಿ ಸೂಕ್ಷ್ಮ ಜ್ಞಾನದ ಕ್ಷಮತೆ ಹೆಚ್ಚಾಗಲು ಸಹಾಯವಾಯಿತು.
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಈಶ್ವರನಿಂದ ಜ್ಞಾನ ಸಿಗುತ್ತಿತ್ತು ಹಾಗೂ ಅವರು ಅಧ್ಯಾತ್ಮಕ್ಕೆ ಸಂಬಂಧಿಸಿದ ಕೆಲವು ಘಟನೆಗಳ ಸೂಕ್ಷ್ಮ ಪರೀಕ್ಷಣೆಯನ್ನೂ ಮಾಡುತ್ತಿದ್ದರು. ಈ ವಿಷಯದಲ್ಲಿಯೂ ನನಗೆ ಕುತೂಹಲವಿತ್ತು. ‘ಸೂಕ್ಷ್ಮದಲ್ಲಿನ ವಿಷಯವನ್ನು ಹೇಗೆ ತಿಳಿದುಕೊಳ್ಳುವುದು ? ಸೂಕ್ಷ್ಮದಲ್ಲಿ ಉತ್ತರಗಳು ಹೇಗೆ ಸಿಗುತ್ತವೆ ? ನನಗೂ ಸೂಕ್ಷ್ಮದ ವಿಷಯಗಳು ತಿಳಿಯಬಹುದೇ ?’, ಇಂತಹ ಪ್ರಶ್ನೆಗಳು ಉದ್ಭವಿಸುತ್ತಿದ್ದವು. ನನ್ನ ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂಬ ಕಾರಣಕ್ಕಾಗಿಯೋ ಏನೋ, ನನಗೆ ಗುರುಕೃಪೆಯಿಂದ ಅದಕ್ಕೆ ಸಂಬಂಧಿಸಿದ ಕೆಲವು ಸೇವೆಗಳು ಸಿಕ್ಕಿದವು, ಉದಾ. ಗಾಯನ, ವಾದನ, ನೃತ್ಯ ಇವುಗಳ ವಿವಿಧ ಪ್ರಯೋಗ, ಧ್ವನಿಮುದ್ರಣ ಮಾಡಿದ ವಿವಿಧ ನಾಮಜಪಗಳ ಪ್ರಯೋಗ, ವಿವಿಧ ವಸ್ತುಗಳು, ಪ್ರಾಣಿಗಳ ಸಾತ್ತ್ವಿಕತೆಯ ದೃಷ್ಟಿಯಲ್ಲಿ ಮಾಡಿದ ಪ್ರಯೋಗ ಇತ್ಯಾದಿಗಳಲ್ಲಿ ಭಾಗವಹಿಸಿ ಸೂಕ್ಷ್ಮದಿಂದ ಏನು ಅರಿವಾಗುತ್ತದೆಯೋ, ಅದರ ಲೇಖನ ಮಾಡುವುದು.
ಈ ರೀತಿ ನನ್ನ ಸೇವೆಯ ವ್ಯಾಪ್ತಿ ಹೆಚ್ಚುತ್ತಾ ಹೋಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನನಗೆ ನನ್ನ ಸೇವೆಗಳ ವ್ಯಾಪ್ತಿಯ ವಿಷಯದಲ್ಲಿ ಲೇಖನ ಮಾಡಲು ಹೇಳಿದರು. ಅವರ ಆಜ್ಞಾಪಾಲನೆಯೆಂದು ನಾನು ನನ್ನ ಸೇವೆಗಳ ವ್ಯಾಪ್ತಿಯನ್ನು ಇಲ್ಲಿ ಕೊಡುತ್ತಿದ್ದೇನೆ.
ಕಲ್ಪನಾತೀತ ಹಾಗೂ ಅಪ್ರತಿಮ ಲೇಖನವನ್ನು ಬರೆಯುವ ಸದ್ಗುರು ಡಾ. ಮುಕುಲ ಗಾಡಗೀಳಸದ್ಗುರು ಡಾ. ಮುಕುಲ ಗಾಡಗೀಳರ ಈ ಲೇಖನವನ್ನು ಓದಿ ನಾನು ಆಶ್ಚರ್ಯಚಕಿತನಾದೆ ! ಇದರಲ್ಲಿರುವ ಜ್ಞಾನ ಜಗತ್ತಿನಲ್ಲಿ ಯಾರಲ್ಲಿಯೂ ಇರಲಿಕ್ಕಿಲ್ಲ ! ಭಾರತೀಯ ಸಂಗೀತದಲ್ಲಿನ ದೊಡ್ಡ ದೊಡ್ಡ ಸಂಗೀತತಜ್ಞರಿಗೂ ಈ ಲೇಖನವನ್ನು ಓದಿ ಆಶ್ಚರ್ಯವೆನಿಸಬಹುದು ! ‘ಸದ್ಗುರು ಡಾ. ಮುಕುಲ ಗಾಡಗೀಳರು ಈ ಜ್ಞಾನವನ್ನು ಜಗತ್ತಿನಾದ್ಯಂತದ ಜಿಜ್ಞಾಸು ಸಾಧಕರಿಗೆ ಕಲಿಸಿ ಉಪಾಯ ಮಾಡಲು ಅವರಂತಹ ಅನೇಕ ಜನರನ್ನು ತಯಾರಿಸಬೇಕು. ಅದರಿಂದ ಜಗತ್ತಿನಾದ್ಯಂತ ಸಂಗೀತದಿಂದ ಗುಣಮುಖರಾಗುವ ಸಾಧಕರಿಗೆ ಉಪಾಯ ಉಪಲಬ್ಧವಾಗಬಹುದು’, ಎಂದು ನಾನು ಅವರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ |
೨. ಆಧ್ಯಾತ್ಮಿಕ ತೊಂದರೆಗಳಿಗೆ ಉಪಾಯವನ್ನು ಹೇಳುವುದು
ನಾನು ಕಳೆದ ೧೨ ವರ್ಷಗಳಿಂದ ಸಾಧಕರಿಗಾಗುವ ಆಧ್ಯಾತ್ಮಿಕ ತೊಂದರೆಗಳಿಗೆ ನ್ಯಾಸ, ಮುದ್ರೆ ಮತ್ತು ನಾಮಜಪವನ್ನು ಹುಡುಕಿಕೊಡುತ್ತಿದ್ದೇನೆ. ಅದಕ್ಕಾಗಿ ನನ್ನನ್ನು ಎಲ್ಲೆಡೆಯ ಸಾಧಕರು ಸಂಪರ್ಕಿಸುತ್ತಾರೆ. ಸದ್ಯ ನನಗೆ ಪ್ರತಿದಿನ ೫೦ ರಿಂದ ೬೦ ಸಾಧಕರಿಗೆ ನಾಮಜಪಾದಿ ಉಪಾಯ ಹೇಳಬೇಕಾಗುತ್ತದೆ. ಅದಕ್ಕೆ ನನಗೆ ಸುಮಾರು ೪ ಗಂಟೆ ತಗಲುತ್ತದೆ. ಕೊರೊನಾ ಮಹಾಮಾರಿಯ ಅವಧಿಯಲ್ಲಿ ಈ ಪ್ರಮಾಣ ೧೦೦ ಕ್ಕಿಂತಲೂ ಹೆಚ್ಚಿರುತ್ತಿತ್ತು. ಉಪಾಯ ಹೇಳುವ ಸೇವೆ ಮಾಡುವಾಗ ನನಗೆ ಈ ಮುಂದಿನ ವಿಷಯಗಳು ಕಲಿಯಲು ಸಿಕ್ಕಿದುವು.
ಅ. ಸಾಧಕರ ತೊಂದರೆಗಳಿಗೆ ಉಪಾಯವನ್ನು ಹುಡುಕಿ ಕೊಡುವಾಗ ಕೆಲವೊಮ್ಮೆ ಕೆಟ್ಟ ಶಕ್ತಿಗಳು ಸಾಧಕರ ಮೇಲೆ ತಂದಿರುವ ತೊಂದರೆದಾಯಕ (ಕಪ್ಪು) ಶಕ್ತಿಯ ಆವರಣದಿಂದಾಗಿ ಆ ಸಾಧಕನ ಯಾವ ಚಕ್ರದ ಮೇಲೆ ತೊಂದರೆ ಇದೆಯೆಂಬುದು ನನಗೆ ಅರಿವಾಗುತ್ತಿರಲಿಲ್ಲ. ಆಗ ಜಾಗರೂಕತೆಯಿಂದ ಪರೀಕ್ಷಣೆ ಮಾಡಿದಾಗ ‘ಕೆಟ್ಟ ಶಕ್ತಿಗಳು ನನಗೆ ಮೋಸ ಮಾಡುತ್ತಿವೆ, ಎಂಬುದು ತಿಳಿಯುತ್ತಿತ್ತು.
ಆ. ‘ಯಾರಾದರೊಬ್ಬ ಸಾಧಕನ ಮೇಲೆ ತೊಂದರೆದಾಯಕ ಶಕ್ತಿಯ ಆವರಣವಿದೆ’, ಎಂಬುದನ್ನು ಕೆಲವೊಮ್ಮೆ ಕೆಟ್ಟ ಶಕ್ತಿಗಳು ನನಗೆ ತಿಳಿಯಲು ಬಿಡುತ್ತಿರಲಿಲ್ಲ. ಆದ್ದರಿಂದ ಸಾಧಕರಿಗೆ ಉಪಾಯವನ್ನು ಹುಡುಕುವಾಗ ಜಾಗರೂಕವಾಗಿರಬೇಕಾಗುತ್ತಿತ್ತು.
ಇ. ಸಾಧಕರಿಗೆ ನಾಮಜಪಾದಿ ಉಪಾಯಗಳನ್ನು ಹುಡುಕುವಾಗ ಕಾಲಾನುಸಾರ ಉಪಾಯದ ಸಮಯದಲ್ಲಿ ನ್ಯಾಸ ಮಾಡುವ ಮುಖ್ಯ ಸ್ಥಾನವಾಗಿರುವ ‘ಆಜ್ಞಾಚಕ್ರ’ದಲ್ಲಿ ಬದಲಾವಣೆಯಾಗುತ್ತಾ ಹೋಗುತ್ತಿರುವುದನ್ನು ಈಶ್ವರನು ನನ್ನ ಗಮನಕ್ಕೆ ತಂದು ಕೊಟ್ಟನು. ಅದರಲ್ಲಿ ‘ಆಜ್ಞಾಚಕ್ರದ ಮೇಲೆ ಉಪಾಯ ಮಾಡುವ ಬದಲು ಕಣ್ಣುಗಳ ಮೇಲೆ ಉಪಾಯ ಮಾಡುವುದು ಹೆಚ್ಚು ಮಹತ್ವದ್ದಾಗಿದೆ’, ಎಂಬುದು ತಿಳಿಯಿತು; ಏಕೆಂದರೆ ನಾವು ಕಣ್ಣುಗಳಿಂದ ಸಂಪೂರ್ಣ ಜಗತ್ತನ್ನು ನೋಡುತ್ತಿರುವುದರಿಂದ ಅವುಗಳ ಮೂಲಕ ಒಳ್ಳೆಯ ಅಥವಾ ಕೆಟ್ಟ ಶಕ್ತಿಗಳು ಸಹಜವಾಗಿ ನಮ್ಮ ಶರೀರದೊಳಗೆ ಪ್ರವೇಶಿಸಬಲ್ಲವು.
ಈ. ಇನ್ನು ಮುಂದೆ ಆಜ್ಞಾಚಕ್ರ ಅಥವಾ ಕಣ್ಣುಗಳ ಮೇಲೆ ಉಪಾಯ ಮಾಡುವುದಕ್ಕಿಂತ ತಲೆಯ ಮೇಲೆ ಉಪಾಯ ಮಾಡುವುದು ಹೆಚ್ಚು ಪರಿಣಾಮಕಾರಿಯೆಂಬುದು ತಿಳಿಯಿತು. ತಲೆಯ ಭಾಗವು ಮೆದುಳಿಗೆ ಸಂಬಂಧಿಸಿರುತ್ತದೆ ಹಾಗೂ ಮೆದುಳು ನಮ್ಮ ಕೃತಿಗಳ ಆಯೋಜನೆ ಮಾಡುತ್ತದೆ. ಆದ್ದರಿಂದ ಕೆಟ್ಟ ಶಕ್ತಿಗಳು ಸಾಧಕನ ಮೆದುಳಿನ ಮೇಲೆ ಆಕ್ರಮಣ ಮಾಡಿ ಅವನ ಕೃತಿಯನ್ನು ಕೆಡಿಸಲು ಪ್ರಯತ್ನಿಸುತ್ತವೆ. ಇತ್ತೀಚೆಗೆ ಕಾಲಾನುಸಾರ ಕೆಟ್ಟ ಶಕ್ತಿಗಳು ಶಾರೀರಿಕ ಸ್ತರದಲ್ಲಿ ಹೆಚ್ಚು ಪ್ರಮಾಣದಲ್ಲಿ ಆಕ್ರಮಣ ಮಾಡುತ್ತಿವೆ.
೨ ಅ. ವಿವಿಧ ರೋಗಗಳಿಗಾಗಿ ದೇವತೆಗಳ ನಾಮಜಪಗಳನ್ನು ಗುರುಕೃಪೆಯಿಂದ ಕಂಡುಹಿಡಿಯುವುದು : ‘ಯಾವುದಾದರೊಂದು ರೋಗವನ್ನು ದೂರಗೊಳಿಸಲು ದುರ್ಗಾದೇವಿ, ಶ್ರೀರಾಮ, ಶ್ರೀಕೃಷ್ಣ, ದತ್ತ, ಗಣಪತಿ, ಮಾರುತಿ ಮತ್ತು ಶಿವ ಈ ೭ ಮುಖ್ಯ ದೇವತೆಗಳ ಪೈಕಿ ಯಾವ ದೇವತೆಯ ತತ್ತ್ವ ಎಷ್ಟು ಪ್ರಮಾಣದಲ್ಲಿ ಆವಶ್ಯಕವಿದೆ ?’, ಎಂಬುದನ್ನು ಧ್ಯಾನದಲ್ಲಿ ಹುಡುಕಿ ಅದಕ್ಕನುಸಾರ ನಾನು ಕೆಲವು ರೋಗಗಳಿಗೆ ಜಪವನ್ನು ತಯಾರಿಸಿದೆನು. ಮಾರ್ಚ್ ೨೦೨೦ ರಲ್ಲಿ ಕೊರೊನಾದ ವಿಷಜಂತುವಿನ ಬಾಧೆಯನ್ನು ದೂರಗೊಳಿಸಲು ನಾನು ಮೊಟ್ಟಮೊದಲು ಇಂತಹ ಜಪವನ್ನು ಕಂಡುಹಿಡಿದೆನು. ಅದು ಪರಿಣಾಮಕಾರಿ ಆಗಿರುವುದು ತಿಳಿದಾಗ ನನಗೆ ಇತರ ರೋಗಗಳಿಗೆ ಕೂಡ ಜಪಗಳನ್ನು ಕಂಡು ಹಿಡಿಯಲು ಸ್ಫೂರ್ತಿ ಸಿಕ್ಕಿತು. ಈ ಜಪವೆಂದರೆ ಆವಶ್ಯಕವಿರುವ ವಿವಿಧ ದೇವತೆಗಳ ಜಪಗಳ ಮಿಶ್ರಣವಾಗಿದೆ. ನಾನು ಕಂಡು ಹಿಡಿದ ಈ ಜಪವನ್ನು ಸಾಧಕರಿಗೆ ಅವರ ರೋಗಗಳಿಗಾಗಿ ಕೊಡುತ್ತಿದ್ದೇನೆ. ‘ಆ ಜಪಗಳಿಂದ ಅವರಿಗೆ ಉತ್ತಮ ಲಾಭವಾಗುತ್ತಿದೆ’ ಎಂಬುದು ಅವರ ಅನುಭವದಿಂದ ನನ್ನ ಗಮನಕ್ಕೆ ಬಂದಿತು. ನಾನು ಇಷ್ಟರವರೆಗೆ (ಮಾರ್ಚ್ ೨೦೨೪ ರ ವರೆಗೆ) ಶಾರೀರಿಕ ಹಾಗೂ ಮಾನಸಿಕ ವಿಕಾರಗಳ ಸಹಿತ ಒಟ್ಟು ೨೫೦ ರೋಗಗಳಿಗೆ ದೇವತೆಗಳ ನಾಮಜಪಗಳನ್ನು ಕಂಡುಹಿಡಿದಿದ್ದೇನೆ.
೩. ಇತರರಿಗಾಗಿ ನಾಮಜಪಾದಿ ಉಪಾಯ ಮಾಡುವುದು
ಕೆಲವು ಸಾಧಕರಿಗೆ ತೀವ್ರ ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ತೊಂದರೆಯಿಂದಾಗಿ ಕೆಲವೊಮ್ಮೆ ಸ್ವತಃ ನಾಮಜಪ ಇತ್ಯಾದಿ ಉಪಾಯಗಳನ್ನು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ಅವರಿಗಾಗಿ ಉಪಾಯ ಮಾಡಬೇಕಾಗುತ್ತದೆ. ಕೆಲವೊಮ್ಮೆ ಜವಾಬ್ದಾರ ಸಾಧಕರು ಅಥವಾ ಸಂತರು ಯಾವುದಾದರೊಂದು ಮಹತ್ವದ ಸಮಷ್ಟಿ ಸೇವೆಯಲ್ಲಿರುವಾಗ ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿ ಅವರಿಗೆ ತೊಂದರೆ ಕೊಡುತ್ತಿರುವುದು ಗಮನಕ್ಕೆ ಬರುತ್ತದೆ. ಆಗ ಅವರಿಗೆ ಸಮಷ್ಟಿ ಸೇವೆ ಮಾಡಲು ಸಾಧ್ಯವಾಗುವುದಿಲ್ಲ. ಆಗ ಅವರಿಗಾಗಿ ನಾಮಜಪಾದಿ ಉಪಾಯ ಮಾಡಬೇಕಾಗುತ್ತದೆ. ಸಮಷ್ಟಿ ಸೇವೆಯಲ್ಲಿನ ಸಂತರು ಅಥವಾ ಸಾಧಕರಿಗೆ ತೊಂದರೆಯಾಗುತ್ತಿರುವಾಗ ಅವರಿಗಾಗಿ ನಾಮಜಪಾದಿ ಉಪಾಯ ಮಾಡುವಾಗ ನನಗೆ ‘ಸಮಷ್ಟಿ ಸೇವೆಯ ಅವಕಾಶ ಸಿಕ್ಕಿತು’, ಎಂದು ಕೃತಜ್ಞತೆಯೆನಿಸುತ್ತದೆ. ಉಪಾಯ ಮಾಡುವಾಗ ನನಗೆ ಹೊಸ ಹೊಸ ವಿಷಯಗಳು ಕಲಿಯಲು ಸಿಕ್ಕಿದವು. ಅವುಗಳಲ್ಲಿನ ಕೆಲವನ್ನು ಸಂಕ್ಷಿಪ್ತದಲ್ಲಿ ಕೊಡುತ್ತಿದ್ದೇನೆ.
ಅ. ಕೆಟ್ಟ ಶಕ್ತಿಗಳು ಶರೀರದ ಮೇಲೆ ತೊಂದರೆದಾಯಕ ಶಕ್ತಿಯ ಆವರಣ ತಂದಿದ್ದರೆ, ನಾಮಜಪ, ಮುದ್ರೆ ಮತ್ತು ನ್ಯಾಸ ಇವುಗಳ ಮೂಲಕ ಉಪಾಯ ಮಾಡುವ ಮೊದಲು ಆವರಣ ತೆಗೆಯಬೇಕು, ಇಲ್ಲದಿದ್ದರೆ ಉಪಾಯದಿಂದ ಪರಿಣಾಮವಾಗುವುದಿಲ್ಲ.
ಆ. ಕೆಟ್ಟ ಶಕ್ತಿಗಳು ಹಾಕಿರುವ ಆವರಣವು ವಿವಿಧ ಆಕಾರದಲ್ಲಿ ಅರಿವಾಗುತ್ತದೆ. ಉದಾ. ತಲೆಯ ಮೇಲೆ ಟೊಪ್ಪಿಯ ಹಾಗೆ, ತಲೆಯ ಸುತ್ತಲೂ ‘ಹೆಲ್ಮೇಟ್’ನ ಹಾಗೆ, ಶರೀರದ ಎದುರಿಗೆ ಪರದೆಯ ಹಾಗೆ, ಶರೀರದ ಮೇಲೆ ಬಂದಿರುವ ಊತ, ಸಂಪೂರ್ಣ ಶರೀರದ ಮೇಲೆ ಬುರ್ಖಾದ ಹಾಗೆ ಇತ್ಯಾದಿ.
ಇ. ಆವರಣವನ್ನು ತೆಗೆಯಲು ‘ಒಂದು ಅಂಗೈಯನ್ನು ನಮ್ಮ ಕಡೆಗೆ ಮತ್ತು ಅದರ ಹಿಂದಿನ ಭಾಗಕ್ಕೆ ಇನ್ನೊಂದು ಅಂಗೈಯನ್ನು ಹೊರಗಿನ ದಿಕ್ಕಿಗೆ ಬರುವ ಹಾಗೆ ಇಟ್ಟು ಮಾಡಿದ ಮುದ್ರೆ’ ಮತ್ತು ಎರಡೂ ಕೈಗಳ ಮಧ್ಯದ ಬೆರಳುಗಳ ತುದಿಗಳನ್ನು ಜೋಡಿಸಿ ಮಾಡಿದ ‘ಟವರ್ ಮುದ್ರೆ’ ಈ ಮುದ್ರೆಗಳನ್ನು ಗುರುಕೃಪೆಯಿಂದಲೇ ನನಗೆ ಕಂಡು ಹಿಡಿಯಲು ಸಾಧ್ಯವಾಯಿತು.
ಈ. ಚಕ್ರಗಳ ಮೇಲೆ ಉಪಾಯ ಮಾಡುವಾಗ ಸ್ವಲ್ಪ ಸಮಯದ ನಂತರ ಕೆಟ್ಟ ಶಕ್ತಿಯ ತೊಂದರೆ ಕಡಿಮೆಯಾದಾಗ ಪುನಃ ನಾಮಜಪವನ್ನು ಕಂಡು ಹಿಡಿದು ಉಪಾಯ ಮಾಡಿದರೆ ಮತ್ತು ಈ ಪ್ರಕ್ರಿಯೆಯನ್ನು ತೊಂದರೆ ಕಡಿಮೆಯಾಗುವ ಪ್ರತಿಯೊಂದು ಹಂತದಲ್ಲಿ ಪುನಃ ಪುನಃ ಮಾಡಿದರೆ ತೊಂದರೆ ಶೀಘ್ರವಾಗಿ ಸಂಪೂರ್ಣ ನಿವಾರಣೆಯಾಗುತ್ತದೆ. ಇದಕ್ಕೆ ಕಾರಣವೆಂದರೆ, ತೊಂದರೆಯ ಪ್ರತಿಯೊಂದು ಹಂತದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯ ಊರ್ಜೆಯ ಸ್ತರ ಮತ್ತು ಆ ತೊಂದರೆಗಾಗಿ ಕಂಡುಹಿಡಿದ ಯೋಗ್ಯ ನಾಮಜಪದ ಸ್ತರ ಸಮಾನವಾಗಿರುವುದರಿಂದ ಉಪಾಯ ಪರಿಣಾಮಕಾರಿಯಾಗುತ್ತದೆ.
ಉ. ಚಕ್ರಗಳ ಮೇಲಿನ ಕೆಟ್ಟ ಶಕ್ತಿಗಳ ತೊಂದರೆ ಸಂಪೂರ್ಣ ದೂರವಾದರೂ, ಕಣ್ಣುಗಳಲ್ಲಿ ತೊಂದರೆದಾಯಕ ಶಕ್ತಿ ಬಾಕಿ ಇರುತ್ತದೆ ಹಾಗೂ ಕಣ್ಣುಗಳ ಮೇಲೆ ಉಪಾಯ ಮಾಡಿ ಅದನ್ನೂ ಸಂಪೂರ್ಣ ದೂರಗೊಳಿಸಬೇಕಾಗುತ್ತದೆ.
ಊ. ಉಪಾಯ ಮಾಡುವಾಗ ನಡುನಡುವೆ ಕೇವಲ ಶ್ವಾಸದ ಮೇಲೆ ಗಮನವನ್ನು ಇಟ್ಟು ೨-೩ ನಿಮಿಷ ಧ್ಯಾನ ಮಾಡಿದರೆ ನಿರ್ಗುಣ ಸ್ತರದ ಉಪಾಯವಾಗಿ ತೊಂದರೆ ಶೀಘ್ರವಾಗಿ ಕಡಿಮೆಯಾಗುತ್ತದೆ.
ಎ. ಉಪಾಯ ಮಾಡುವಾಗ ಶಣಾಗತಭಾವವನ್ನಿಟ್ಟರೆ ಪರಿಣಾಮಕಾರಿ ಉಪಾಯವಾಗಿ ತೊಂದರೆ ಶೀಘ್ರವಾಗಿ ಕಡಿಮೆಯಾಗುತ್ತದೆ.
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೭.೪.೨೦೨೪)
(ಮುಂದುವರಿಯುವುದು)
*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |