ಶ್ರೀಲಂಕಾದಿಂದ 11 ಭಾರತೀಯ ಮೀನುಗಾರರ ಬಿಡುಗಡೆ

ಪ್ರಧಾನಿ ಮೋದಿ ಅವರು ವಿಷಯ ಪ್ರಸ್ತಾಪಿಸಿದ್ದರು

ಕೊಲಂಬೊ (ಶ್ರೀಲಂಕಾ) – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀಲಂಕಾ ಪ್ರವಾಸದಲ್ಲಿದ್ದಾಗ, ಮಾನವೀಯ ದೃಷ್ಟಿಯಿಂದ ಮೀನುಗಾರರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಹೇಳಿಕೆ ನೀಡಿದ್ದರು. ಪ್ರಧಾನಿ ಮೋದಿ ಅವರು ಪ್ರವಾಸ ಮುಗಿಸಿ ಭಾರತಕ್ಕೆ ಮರಳುವ ಮುನ್ನವೇ ಶ್ರೀಲಂಕಾ ಜೈಲಿನಲ್ಲಿದ್ದ 11 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿತು.

1. ಪ್ರಧಾನಮಂತ್ರಿ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಅವರ ನಡುವೆ ನಡೆದ ಚರ್ಚೆಯಲ್ಲಿ ಮೀನುಗಾರರ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ಈ ವಿಷಯಕ್ಕೆ ಸಂಬಂಧಿಸಿದಂತೆ, ಮೀನುಗಾರರ ಜೀವನೋಪಾಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಮೀನುಗಾರರು ಮತ್ತು ಅವರ ದೋಣಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ನಾವು ಒತ್ತಾಯಿಸಿದ್ದೇವೆ, ಎಂದು ಹೇಳಿದರು.

2. ಮೀನುಗಾರರ ವಿಷಯದ ಕುರಿತು ಶ್ರೀಲಂಕಾ ಮತ್ತು ಭಾರತದ ನಡುವೆ ಯಾವಾಗಲೂ ವಿವಾದಗಳು ಉಂಟಾಗುತ್ತವೆ. ಈ ಹಿಂದೆ ಅನೇಕ ಬಾರಿ ಪಾಲ್ಕ ಜಲಸಂಧಿಯಲ್ಲಿ ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರ ಮೇಲೆ ಬಲಪ್ರಯೋಗ ಮಾಡಿದೆ.