ಅಕ್ರಮ ಹಸುಗಳ ಸಾಗಾಟ; ವಾಹನ ತಡೆದ ಹಿಂದು ಸಂಘಟನೆಯ ಕಾರ್ಯಕರ್ತರು; ಚಾಲಕ ಪರಾರಿ!

ಬೆಳ್ತಂಗಡಿ – 10 ರಿಂದ 15 ಹಸುಗಳನ್ನು ಒಂದೇ ಗಾಡಿಯಲ್ಲಿ ಹಾಕಿಕೊಂಡು ಮಂಗಳೂರಿನ ಕಡೆಗೆ ಹೊರಟಿದ್ದ ವಾಹನವನ್ನು ಕಲಿಯಾ ಕೋರ್ಟ್ ಬಳಿಯ ಜಾರಿಗೇಬೈಲು ಎಂಬಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದರು. ಗೋವುಗಳನ್ನು ಹತ್ಯೆ ಮಾಡಲು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಹಿಂದೂ ಕಾರ್ಯಕರ್ತರಿಗೆ ಲಭಿಸಿತ್ತು. (ಹಿಂದೂನಿಷ್ಠರಿಗೆ ಸಿಗುವ ಮಾಹಿತಿ, ಆಧುನಿಕ ಯಂತ್ರೋಪಕರಣಗಳನ್ನು ಹೊಂದಿರುವ ಪೊಲೀಸರಿಗೆ ಯಾಕೆ ಸಿಗುವುದಿಲ್ಲ? ಅಥವಾ ಸಿಕ್ಕರೂ ಅವರು ಅದನ್ನು ನಿರ್ಲಕ್ಷಿಸುತ್ತಾರೆಯೇ? – ಸಂಪಾದಕರು) ಈ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿ ತಡೆದಾಗ, ಚಾಲಕ ವಾಹನವನ್ನು ಬಿಟ್ಟು ಪರಾರಿಯಾದನು. (ಗೋಹತ್ಯೆಯನ್ನು ತಡೆಯಲು ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಪೇಕ್ಷಿತವಾಗಿದೆ! – ಸಂಪಾದಕರು) ಈ ಕುರಿತು ಹಿಂದೂ ಸಂಘಟನೆಯ ಕಾರ್ಯಕರ್ತರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನ ಮತ್ತು ಗೋವುಗಳನ್ನು ವಶಪಡಿಸಿಕೊಂಡಿದ್ದಾರೆ.