ದೇವಬಂದ (ಉತ್ತರ ಪ್ರದೇಶ) – ಯೋಗ ಸಾಧನಾ ಯಶವೀರ ಆಶ್ರಮದಲ್ಲಿ ದೇವಬಂದ ಇಲ್ಲಿನ 10 ಮುಸ್ಲಿಮರು ಇಸ್ಲಾಂ ಧರ್ಮವನ್ನು ತ್ಯಜಿಸಿ ಸನಾತನ ಧರ್ಮಕ್ಕೆ ಘರವಾಪಸಿ ಮಾಡಿದರು. ಸ್ವಾಮಿ ಯಶವೀರ ಮಹಾರಾಜರಿಂದ ಶುದ್ಧೀಕರಣ ಯಜ್ಞವನ್ನು ನೆರವೇರಿಸಿದ ನಂತರ ಅವರೆಲ್ಲರು ಸನಾತನ ಧರ್ಮಕ್ಕೆ ಮರಳಿದ್ದಾರೆ ಎಂದು ಘೋಷಿಸಲಾಯಿತು. ಯಜ್ಞದ ನಂತರ ಅವರು ಹಿಂದೂ ಹೆಸರುಗಳನ್ನು ಸಹ ಪಡೆದರು. ಸುಮಾರು 50 ವರ್ಷಗಳ ಹಿಂದೆ ತಮ್ಮ ಪೂರ್ವಜರು ಕೆಲವು ಕಾರಣಗಳಿಂದ ಸನಾತನ ಧರ್ಮವನ್ನು ತೊರೆದು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು, ಎಂದು ಅವರು ಹೇಳಿದರು.
ಸ್ವಾಮಿ ಯಶವೀರ ಮಹಾರಾಜರು ಮಾತನಾಡಿ, ಭಾರತದಲ್ಲಿ ವಾಸಿಸುವ ಎಲ್ಲಾ ಮುಸ್ಲಿಮರು ಮೊದಲು ಹಿಂದೂಗಳೇ ಆಗಿದ್ದರು. ಇಸ್ಲಾಂ ಆಳ್ವಿಕೆಯ ಸಮಯದಲ್ಲಿ ಅವರ ಮೇಲೆ ಅನ್ಯಾಯ ಮತ್ತು ದಬ್ಬಾಳಿಕೆಯಿಂದಾಗಿ ಅಥವಾ ಕೆಲವು ಆಮಿಷಗಳಿಗೆ ಬಲಿಯಾಗಿ ಸನಾತನ ಧರ್ಮವನ್ನು ತೊರೆದರು. ಈಗ ದೇಶದಲ್ಲಿ ಯಾವುದೇ ರೀತಿಯ ಭಯದ ವಾತಾವರಣವಿಲ್ಲ. ಸರಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಅಂತಹ ಜನರು ಸನಾತನ ಧರ್ಮಕ್ಕೆ ಮರುಪ್ರವೇಶಿಸಬೇಕು, ಎಂದು ಅವರು ಕರೆ ನೀಡಿದರು.