Lady Police Constable Dismissed : ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಪಂಜಾಬ್ ಮಹಿಳಾ ಪೊಲೀಸ್ ಪೇದೆ

ಭಟಿಂಡಾ (ಪಂಜಾಬ್) – ಪಂಜಾಬ್ ಪೊಲೀಸ್ ದಳದ ಮಹಿಳಾ ಪೊಲೀಸ್ ಪೇದೆ ಅಮನ್‌ದೀಪ್ ಕೌರ್ ಅವರನ್ನು 17 ಗ್ರಾಂ ಹೆರಾಯಿನ್‌ನೊಂದಿಗೆ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ. ಅಮನ್‌ದೀಪ್ ಕೌರ್ ತನ್ನ ಥಾರ್ ವಾಹನದಲ್ಲಿ ಮಾದಕ ದ್ರವ್ಯವನ್ನು ಕಳ್ಳಸಾಗಣೆ ಮಾಡಲು ಹರಿಯಾಣಕ್ಕೆ ಹೋಗುತ್ತಿದ್ದಾಗ ಆಕೆಯನ್ನು ಬಂಧಿಸಲಾಯಿತು. ಪೊಲೀಸರು ಥಾರ್ ವಾಹನವನ್ನು ಸಹ ಜಪ್ತಿ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಮೊದಲೇ ಪೊಲೀಸ್ ಮತ್ತು ಅದರಲ್ಲಿಯೂ ಮಹಿಳೆಯಾಗಿದ್ದರೂ ಇಂತಹ ಅಪರಾಧ ಕೃತ್ಯಗಳಲ್ಲಿ ತೊಡಗುವುದು ‘ಮುಂದುವರೆದ’ ಲಕ್ಷಣವೆಂದು ತಿಳಿಯಬೇಕೆ?