ಛತ್ತೀಸ್‌ಗಢನಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸುವಂತೆ ವಿದ್ಯಾರ್ಥಿನಿಯ ಮೇಲೆ ಒತ್ತಡ

ಹಿಂದೂ ಸಂಘಟನೆಗಳಿಂದ ವಿರೋಧ

ಜಶಪುರ (ಛತ್ತಿಸ್ಗಢ) – ಜಶಪುರ ಜಿಲ್ಲೆಯಲ್ಲಿ ಹೋಲಿ ಕ್ರಾಸ್ ಮಿಷನರಿ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಕ್ರೈಸ್ತ ಧರ್ಮ ಸ್ವೀಕರಿಸುವಂತೆ ವಿದ್ಯಾರ್ಥಿನಿಯ ಮೇಲೆ ಒತ್ತಡ ತರಲಾಗುತ್ತಿದೆ. ವಿದ್ಯಾರ್ಥಿನಿಯು ಮತಾಂತರಗೊಳ್ಳಲು ಒಪ್ಪದಿದ್ದರೆ ಪರೀಕ್ಷೆಯಲ್ಲಿ ಕೂರುವುದನ್ನು ತಡೆಯುವುದು ಹಾಗೂ ಇತರ ಮಾರ್ಗದಿಂದ ಕಿರುಕುಳ ನೀಡಲಾಗುತ್ತದೆ ಎಂಬುದು ಬೆಳಕಿಗೆ ಬಂದಿದೆ.

೧. ನರ್ಸಿಂಗ್ ಕೋರ್ಸಿನ ಅಂತಿಮ ವರ್ಷದ ವಿದ್ಯಾರ್ಥಿನಿಯೊಬ್ಬರು ಪ್ರಾಧ್ಯಾಪಕ ವಿನ್ಸಿ ಜೋಸೆಫ್ ಅವರ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರುತ್ತಿದ್ದಾರೆಂದು ಆರೋಪಿಸಿದ್ದಾಳೆ. ನರ್ಸಿಂಗ್ ಕೋರ್ಸಿನ ಮೊದಲ ವರ್ಷಕ್ಕೆ ಪ್ರವೇಶ ಪಡೆದ ನಂತರ ೩ ತಿಂಗಳಲ್ಲಿಯೇ ಪ್ರಾಧ್ಯಾಪಕರು ಆಕೆಗೆ ಕರೆಸಿದರು ಮತ್ತು ಹಿಂದೂ ಧರ್ಮ ತ್ಯಜಿಸಿ ಕ್ರೈಸ್ತ ಧರ್ಮ ಸ್ವೀಕರಿಸುವ ಪ್ರಸ್ತಾವ ಇಟ್ಟರು ಎಂದು ಆ ವಿದ್ಯಾರ್ಥಿನಿ ಹೇಳಿದ್ದಾಳೆ.

೨. ವಿದ್ಯಾರ್ಥಿನಿ ಇದನ್ನು ನಿರ್ಲಕ್ಷಿಸಿದಾಗ ಈ ಪ್ರಸ್ತಾಪವು ಒತ್ತಡದಲ್ಲಿ ಬದಲಾಯಿತು. ಪ್ರಾಧ್ಯಾಪಕ ವಿನ್ಸಿ ಅವರು ಆಕೆಗೆ ಪದೇ-ಪದೇ ಮತಾಂತರಗೊಂಡು ನನ್ ಆಗುವಂತೆ ಆಗ್ರಹಿಸುತ್ತಿದ್ದರು. ವಿದ್ಯಾರ್ಥಿನಿ ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದಾಗ ಮಹಾವಿದ್ಯಾಲಯದ ಆಡಳಿತ ಮಂಡಳಿಯು ಸಹ ಆಕೆಗೆ ಕಿರುಕುಳ ನೀಡಲು ಶುರು ಮಾಡಿತು.

೩. ನನ್ನನ್ನು ತರಗತಿಯಿಂದ ಹೊರಗೆ ಕಳುಹಿಸುವುದು. ಮಹಾವಿದ್ಯಾಲಯ ಪರಿಸರದಲ್ಲಿ ಪ್ರವೇಶಿಸಲು ನಿಷೇಧಿಸುವುದು. ಅದರ ನಂತರ ಏಪ್ರಿಲ್ ೧.೨೦೨೪ ರಂದು ವಸತಿಗೃಹದಿಂದ ಹೊರಹಾಕಲಾಯಿತು. ಅಭ್ಯಾಸ ಮಾಡುವುದು ಮತ್ತು ನಾನು ವಾರ್ಷಿಕ ಪರೀಕ್ಷೆಗೆ ಹಾಜರಾಗದಂತೆ ತಡೆಯುವ ಪ್ರಯತ್ನ ಮಾಡಲಾಯಿತು ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

೪. ವಿದ್ಯಾರ್ಥಿನಿ, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದಾಗ ಆಕೆಗೆ ಪರೀಕ್ಷೆಗೆ ಕೂರಲು ಅನುಮತಿ ನೀಡಲಾಯಿತು; ಆದರೆ ಆಕೆಗೆ ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುವ ಬೆದರಿಕೆ ಹಾಕಲಾಯಿತು.

೫. ಈಗ ಈ ಸಂಪೂರ್ಣ ಪ್ರಕರಣದ ಬಗ್ಗೆ ವಿದ್ಯಾರ್ಥಿನಿಯು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿ ಅವರಿಗೆ ಲಿಖಿತ ದೂರು ನೀಡಿದ್ದು ಸಂಬಂಧಿತರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾಳೆ.

ಹಿಂದೂ ಸಂಘಟನೆಗಳಿಂದ ಮಹಾವಿದ್ಯಾಲಯ ಮುಚ್ಚುವ ಆಗ್ರಹ

ವಿದ್ಯಾರ್ಥಿನಿಗೆ ಮಾನಸಿಕ ಕಿರುಕುಳದಿಂದ ಛತ್ತಿಸ್ಗಢದಲ್ಲಿನ ಭಾಜಪದ ನಾಯಕ ಮತ್ತು ಅಖಿಲ ಭಾರತೀಯ ಘರ್ ವಾಪಸಿ ಮುಖ್ಯಸ್ಥ ಪ್ರಬಲ ಪ್ರತಾಪ ಸಿಂಹ ಜುವೇದ ಅವರು ‘ಎಕ್ಸ್ ನಲ್ಲಿ ಪೋಸ್ಟ್ ಮಾಡುತ್ತಾ, ಶಿಕ್ಷಣದ ಹೆಸರಿನಲ್ಲಿ ಮತಾಂತರ ಸಹಿಸಲಾಗದು. ಹೋಲಿ ಕ್ರಾಸ್ ನರ್ಸಿಂಗ್ ಕಾಲೇಜಿನಲ್ಲಿ ಓರ್ವ ವಿದ್ಯಾರ್ಥಿನಿಗೆ ಕಿರುಕುಳ ನೀಡಲಾಗಿದ್ದು ಮತಾಂತರ ಗೊಳಿಸುವವರನ್ನು ಬಿಡಬಾರದು. ಸಂಬಂಧಿತ ಪ್ರಾಧ್ಯಾಪಕರ ಮೇಲೆ ಕಾನೂನು ಕ್ರಮ ಕೈಗೊಕೊಳ್ಳಬೇಕು ಮತ್ತು ಆ ಸಂಸ್ಥೆಯ ಅನುಮತಿ ರದ್ದು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಪ್ರಮುಖ ಕರ್ನಲ್ ಸಿಂಹ ಅವರು ಓರ್ವ ಬಡ ಹಿಂದೂ ಹುಡುಗಿಗೆ ಮತಾಂತರಗೊಳಿಸುವ ಆರೋಪದಡಿಯಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದು ಮತ್ತು ಮಹಾವಿದ್ಯಾಲಯ ಮುಚ್ಚಿಸುವಿನಂತೆ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಈ ದೇಶದಲ್ಲಿ ಕ್ರಿಸ್ತ ಮಿಷಿನರಿಗಳ ಮೇಲೆ ನಿಷೇಧ ಹೇರುವ ಸಮಯ ಬಂದಿದೆ, ಈಗಲೇ ಇವರ ಮೇಲೆ ನಿಷೇಧ ಹೇರದಿದ್ದರೆ ಮುಂದಿನ ಕೆಲವು ವರ್ಷದಲ್ಲಿ ಭಾರತದಲ್ಲಿ ಹಿಂದುಗಳದಲ್ಲ, ಇಸ್ಲಾಂ ಮತ್ತು ಕ್ರೈಸ್ತರ ಸರ್ಕಾರ ಇರುವುದು !