80 ಕೋಟಿ ಭಾರತೀಯರು ಉಚಿತ ಪಡಿತರವನ್ನು ಪಡೆಯುತ್ತಾರೆ, ಇದರರ್ಥ 80 ಕೋಟಿ ಭಾರತೀಯರು ಬಡವರಾಗಿದ್ದಾರೆ ! – ನಾರಾಯಣ ಮೂರ್ತಿ

‘ಇನ್ಫೋಸಿಸ್’ ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ದಾವೆ

ಕೋಲಕಾತಾ (ಬಂಗಾಳ) – ನಾವು ನಮ್ಮ ಆಕಾಂಕ್ಷೆಗಳನ್ನು ಎತ್ತರಕ್ಕೇರಿಸಬೇಕಾಗಬಹುದು; ಏಕೆಂದರೆ 80 ಕೋಟಿ ಭಾರತೀಯರಿಗೆ ಉಚಿತ ಪಡಿತರ ಸಿಗುತ್ತದೆ, ಇದರರ್ಥ 80 ಕೋಟಿ ಭಾರತೀಯರು ಬಡವರಾಗಿದ್ದಾರೆ. ನಾವು ಕಷ್ಟಪಟ್ಟು ಕೆಲಸ ಮಾಡುವ ಸ್ಥಿತಿಯಲ್ಲಿಲ್ಲದಿದ್ದರೆ, ಯಾರು ಕಷ್ಟ ಪಡುತ್ತಾರೆ ? ಯುವಕರು ಅರಿತು ಕೊಳ್ಳ ಬೇಕಾಗಿರುವುದೇನೆಂದರೆ ಭಾರತವನ್ನು ಮೊದಲ ಸ್ಥಾನದಲ್ಲಿ ತರುವುದಿದ್ದರೆ ನಾವು ಕಠಿಣ ಪರಿಶ್ರಮ ಮಾಡಬೇಕಾಗುವುದು ಎಂದು ‘ಇನ್ಫೋಸಿಸ್’ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಕರೆ ನೀಡಿದರು. ಅವರು ಇಲ್ಲಿ ‘ಇಂಡಿಯನ್ ಚೇಂಬರ ಆಫ್ ಕಾಮರ್ಸ’ನ ಶತಮಾನೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಳೆದ ವರ್ಷವೂ ಮೂರ್ತಿಯವರು ವಾರದಲ್ಲಿ 70 ಗಂಟೆ ಕೆಲಸ ಮಾಡುವಂತೆ ಯುವಕರಿಗೆ ಸಲಹೆ ನೀಡಿದ್ದರು.

ನಾರಾಯಣ ಮೂರ್ತಿಯವರು ಮಂಡಿಸಿದ ಸೂತ್ರಗಳು

1. ‘ಇನ್ಫೋಸಿಸ್’ನಲ್ಲಿ ನಾನು ಒಮ್ಮೆ ಹೇಳಿದ್ದೆ, ‘ನಮ್ಮ ಸ್ವಂತ ಸಂಸ್ಥೆಯನ್ನು ಅತ್ಯುತ್ತಮ ಜಾಗತಿಕ ಸಂಸ್ಥೆಗಳೊಂದಿಗೆ ಹೋಲಿಸಬೇಕು. ಒಮ್ಮೆ ನಾವು ಅದನ್ನು ಮಾಡಿದರೆ, ಆಗ ಭಾರತೀಯರಿಗೆ ಬಹಳಷ್ಟು ಮಾಡುವುದಿದೆಯೆಂದು ಅರಿವಾಗುತ್ತದೆ.’

2. ಭಾರತದ ಸಧ್ಯದ ಕೆಲಸಕ್ಕಾಗಿ ಜಗತ್ತು ಗೌರವಿಸುತ್ತದೆ. ನಿಮ್ಮ ಕೆಲಸದಿಂದ ಜಗತ್ತು ನಿಮ್ಮನ್ನು ಗುರುತಿಸುತ್ತಿದೆ ಮತ್ತು ನಿಮ್ಮನ್ನು ಗೌರವಿಸುತ್ತದೆ. ಈ ಗೌರವದಿಂದ ನಿಮ್ಮ ಶಕ್ತಿ ಹೆಚ್ಚಾಗುತ್ತದೆ.

3. ನನಗೆ 70ರ ದಶಕದ ಆರಂಭದಲ್ಲಿ ಪ್ಯಾರಿಸ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು; ಆದರೆ ನಾನು ಗೊಂಧಲವಾಗಿದ್ದೆ. ಪಾಶ್ಚಿಮಾತ್ಯ ದೇಶಗಳು ‘ಭಾರತ ಎಷ್ಟು ಕೊಳಕು ಮತ್ತು ಭ್ರಷ್ಟ ದೇಶ’ ಎಂದು ಮಾತನಾಡುತ್ತಿದ್ದರು. ನನ್ನ ದೇಶದಲ್ಲಿ ಬಡತನವಿತ್ತು, ರಸ್ತೆಗಳಲ್ಲಿ ಗುಂಡಿಗಳಿದ್ದವು. ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರತಿಯೊಬ್ಬರೂ ಶ್ರೀಮಂತರೇ ಆಗಿದ್ದಾರೆ. ರೈಲುಗಳು ಸಮಯಕ್ಕೆ ಸರಿಯಾಗಿ ಓಡುತ್ತವೆ. ಅವರ ಹೇಳಿಕೆ ತಪ್ಪಲ್ಲವೆಂದು ನಾನು ಯೋಚಿಸಿದೆ.

4. ನಾನು ಫ್ರೆಂಚ್ ಕಮ್ಯುನಿಸ್ಟ್ ಪಕ್ಷದ ನಾಯಕನನ್ನು ಭೇಟಿಯಾದೆ ಮತ್ತು ಅವರು ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು; ಆದರೆ ನನಗೆ ಸಮಾಧಾನವಾಗಲಿಲ್ಲ. ದೇಶವು ಉದ್ಯೋಗವನ್ನು ಸೃಷ್ಟಿಸಿದಾಗ ಮಾತ್ರ ಬಡತನದ ವಿರುದ್ಧ ಹೋರಾಡಲು ಸಾಧ್ಯ ಎಂದು ನಾನು ಅರಿತುಕೊಂಡೆ. ಇದರಿಂದ ನಿಯೋಜಿತ ಆದಾಯ ಒದಗಿಸುತ್ತದೆ. ಉದ್ಯೋಗ ನಿರ್ಮಿಸುವಲ್ಲಿ ಸರಕಾರದ ಪಾತ್ರವಿಲ್ಲ. ಉದ್ಯಮಿಗಳು ರಾಷ್ಟ್ರವನ್ನು ನಿರ್ಮಿಸುತ್ತಾರೆ, ಏಕೆಂದರೆ ಅವರು ಉದ್ಯೋಗವನ್ನು ಸೃಷ್ಟಿಸುತ್ತಾರೆ ಎನ್ನುವುದನ್ನು ನಾನು ಅರಿತುಕೊಂಡೆನು. ಅವರು ತಮ್ಮ ಹೂಡಿಕೆದಾರರಿಗೆ ಸಂಪತ್ತನ್ನು ಸೃಷ್ಟಿಸುತ್ತಾರೆ ಮತ್ತು ತೆರಿಗೆಗಳನ್ನು ಪಾವತಿಸುತ್ತಾರೆ.

5. ಒಂದು ದೇಶವು ಬಂಡವಾಳಶಾಹಿಯನ್ನು ಅಳವಡಿಸಿಕೊಂಡರೆ, ಅದು ಉತ್ತಮ ರಸ್ತೆಗಳು, ಉತ್ತಮ ಕಾರುಗಳು ಮತ್ತು ಉತ್ತಮ ಮೂಲಸೌಕರ್ಯಗಳನ್ನು ನಿರ್ಮಿಸುತ್ತದೆ. ಆ ಕಾಲಾವಧಿಯಲ್ಲಿ ಭಾರತದಂತಹ ಬಡ ರಾಷ್ಟ್ರದಲ್ಲಿ ಬಂಡವಾಳಶಾಹಿಗಳು ಬೇರು ಬಿಟ್ಟಿರಲಿಲ್ಲ.