ಶಾಂತಿಯ ಹುಡುಕಾಟಕ್ಕಾಗಿ ಯೋಗ್ಯ ಸಾಧನೆಯನ್ನು ಮಾಡಬೇಕಾಗುತ್ತದೆ, ಎನ್ನುವುದನ್ನು ಕೊರಿಯಾ ಜನರು ಅರಿತುಕೊಳ್ಳಬೇಕು!
ಸಿಯೋಲ (ದಕ್ಷಿಣ ಕೊರಿಯಾ) – ಕೊರೊನಾ ಮಹಾಮಾರಿಯ ದೀರ್ಘ ಕಾಲಾವಧಿಯ ಕಾರಣದಿಂದ ಮತ್ತು ಕೆಲಸದ ಒತ್ತಡದಿಂದ ದಕ್ಷಿಣ ಕೊರಿಯಾದ ನಾಗರಿಕರು ಬಹಳ ಬೇಸತ್ತಿದ್ದಾರೆ. ಒಂದು ಸಮೀಕ್ಷೆಯನುಸಾರ ಅಲ್ಲಿಯ ಶೇ. ೭೩ ರಷ್ಟು ಜನಸಂಖ್ಯೆ ತಾವು ಒತ್ತಡದಲ್ಲಿರುವುದಾಗಿ ಒಪ್ಪಿಕೊಳ್ಳುತ್ತಾರೆ. ಔದ್ಯೋಗಿಕ ಕ್ಷೇತ್ರದಲ್ಲಿರುವ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣವನ್ನು ನೋಡಿದರೆ ದಕ್ಷಿಣ ಕೊರಿಯಾ ಜಗತ್ತಿನಲ್ಲಿ ಮುಂಚೂಣಿಯಲ್ಲಿದೆ. ಇಂತಹ ಸಮಯದಲ್ಲಿ ಜನರು ಹಣವನ್ನು ವ್ಯಯಿಸಿ ಶಾಂತಿಯನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಈ ಸಮಸ್ಯೆಗೆ ಅವರು ‘ಹಿಟ್ಟಿಂಗ್ ಮಂಗ್ ಎಂದು ಹೆಸರನ್ನಿಟ್ಟಿದ್ದಾರೆ.
‘Hitting mung’: In stressed-out South Korea, people are paying to stare at clouds and trees https://t.co/VzrRXGke80
— The Washington Post (@washingtonpost) November 26, 2021
೧. ‘ಹೀಟಿಂಗ್ ಮಂಗ್’ ಈ ಸಂಸ್ಕೃತಿಯಲ್ಲಿ ಲೇಖನಿ, ಕಾಗದ ಇತ್ಯಾದಿ ಯಾವುದೂ ಇಟ್ಟುಕೊಳ್ಳುವುದಿಲ್ಲ. ಇದರಲ್ಲಿ ಸಮುದ್ರ ಅಥವಾ ನದಿಯ ದಡದಲ್ಲಿರುವ ಉಪಹಾರಗೃಹದಲ್ಲಿ ಕುಳಿತು ನಿಸರ್ಗವನ್ನು ವೀಕ್ಷಿಸುತ್ತ ಕುಳಿತುಕೊಳ್ಳುತ್ತಾರೆ. ಈ ಸ್ಥಳದಲ್ಲಿ ಶಾಂತಿಯ ಕಠೋರ ನಿಯಮಗಳಿರುತ್ತವೆ. ಅನೇಕ ಚಲನಚಿತ್ರಗೃಹಗಳಲ್ಲಿ ೪೦ ನಿಮಿಷಗಳ ಚಲನಚಿತ್ರವನ್ನು ತೋರಿಸಲಾಗುತ್ತದೆ.
೨. ಗಂಗವೊನ ರಾಜ್ಯದಲ್ಲಿ ಹ್ಯಾಪ್ಪಿಟರಿ ಫೌಂಡೇಶನ್ ಒಂದು ಕಾರಾಗೃಹವನ್ನು ನಿರ್ಮಿಸಿದೆ. ಅಲ್ಲಿ ಜನರು ಲೇಖನಿ ಮತ್ತು ಕಾಗದಗಳಿಲ್ಲದೇ ೪೮ ಗಂಟೆಗಳ ಕಾಲ ಕಳೆಯಬಹುದು. ಈ ಸಂಸ್ಥೆಯ ವಕ್ತಾರರಾದ ವೂ ಸುಂಗ ಹೂನ್ ಮಾತನಾಡುತ್ತಾ ಹೇಳಿದರು. ಇಲ್ಲಿ ಜನರು ತಮ್ಮನ್ನು ತಾವೇ ಎದುರಿಸಿಕೊಳ್ಳಲು ಬರುತ್ತಾರೆ. ತಮಗೆ ಪ್ರಶ್ನೆಗಳನ್ನು ಕೇಳಿಕೊಂಡು ಆನಂದಿಸುತ್ತಾರೆ. ಯಾವುದೇ ಅಡೆತಡೆಗಳಿಲ್ಲದೇ ಏಕಾಂತದಲ್ಲಿ ಇರುವ ಅನುಭವ ಅವರಿಗೆ ಭವಿಷ್ಯವನ್ನು ಎದುರಿಸಲು ಶಕ್ತಿ ಕೊಡುತ್ತದೆ.
೩. ಒಂದು ಕಂಪನಿಯಲ್ಲಿ ಕೆಲಸ ಮಾಡುವ ೩೯ ವರ್ಷದ ಹಾನ್ ಯೆ ಜಂಗ್ ಹೇಳಿದರು, ಕಂಪನಿಗಳು ಸಂಘರ್ಷ ನಡೆಸುತ್ತಿವೆ. ಹಣಕ್ಕಾಗಿ ಪತಿ-ಪತ್ನಿಯರು ಚಿಂತಿಸುತ್ತಿದ್ದಾರೆ. ಪ್ರತಿಯೊಬ್ಬರು ನಿರಾಶೆಯ ಕಡಲಿನಲ್ಲಿ ಮುಳುಗಿದ್ದಾರೆ. ಜನರನ್ನು ನಿರಾಶೆಯ ಸುಳಿಯಿಂದ ಹೊರಗೆ ಬರಲು ‘ಹೀಟಿಂಗ ಮಂಗ್’ ಸಂಸ್ಕೃತಿ ಜನಪ್ರಿಯವಾಗುತ್ತಿದೆ. ಜನರು ಕುಟುಂಬದ ಶಾಂತಿಯ ಶೋಧನೆಯಲ್ಲಿದ್ದಾರೆ.