ಹಿಂದೂ ಸಂಘಟನೆ ಮತ್ತು ಧರ್ಮಾಧಿಷ್ಠಿತ ಹಿಂದೂರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ‘ರಾಷ್ಟ್ರಾದ್ಯಂತ ಮತಾಂತರ ನಿಷೇಧ ಕಾನೂನು ತರಬೇಕು !’ ಈ ವಿಷಯದ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ |
‘ಸನಾತನ ಧರ್ಮವು ಮಹಾನ ಧರ್ಮವಾಗಿದೆ ಮತ್ತು ಈ ಜಗತ್ತಿನಲ್ಲಿ ಅದಕ್ಕೆ ಪರ್ಯಾಯವಿಲ್ಲ. ಕ್ರೈಸ್ತ ಮಿಶನರಿಗಳು ಮತ್ತು ಮುಸಲ್ಮಾನರು ಮತಾಂತರದ ಮೂಲಕ ನಮ್ಮ ಧರ್ಮದ ಮೇಲೆ ದಾಳಿ ಮಾಡುತ್ತಿದ್ದಾರೆ. ನಮ್ಮ ವೈಚಾರಿಕತೆ, ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಚೇತನವನ್ನು ನಾಶ ಮಾಡಲು ಇತರ ಧರ್ಮಗಳು ಸಕ್ರಿಯವಾಗಿವೆ. ಅವರು ನಮ್ಮ ಸಂಸ್ಕೃತಿ, ವೈಜ್ಞಾನಿಕ ಸಂಪತ್ತು, ಭೌತಿಕ ಶಕ್ತಿಯ ಮೇಲೆ ತಮ್ಮ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಕೇವಲ ಮತಾಂತರಕ್ಕೆ ಸೀಮಿತವಾಗಿರದೇ, ಇಡೀ ಭಾರತವನ್ನೇ ತನ್ನ ಅಧೀನಕ್ಕೆ ತೆಗೆದುಕೊಳ್ಳುವ ಷಡ್ಯಂತ್ರವಾಗಿದೆ. ನಮ್ಮ ಪೂರ್ವಜರು ತುಂಬಾ ಧರ್ಮನಿಷ್ಠರಾಗಿದ್ದರು. ಎಷ್ಟೇ ದಾಳಿಯಾದರೂ ಅವರು ಮತಾಂತರವಾಗಲಿಲ್ಲ. ಹಿಂದೂಗಳು ಈ ಆದರ್ಶವನ್ನು ಅನುಸರಿಸಿ ಧರ್ಮಶಿಕ್ಷಣವನ್ನು ಪಡೆಯಬೇಕು. ಈ ಮತಾಂತರದ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ ಆರಂಭವಾಗಬೇಕು, ಅದೇ ರೀತಿ ಈ ದೇಶವನ್ನು ಸುರಕ್ಷಿತವಾಗಿಡಲು ಸರಕಾರವು ಮತಾಂತರದ ವಿರುದ್ಧ ರಾಷ್ಟ್ರೀಯ ಕಾನೂನನ್ನು ತರಬೇಕು ಮತ್ತು ಯಾವುದೇ ರೀತಿಯ ಮತಾಂತರವನ್ನು ಕಾನೂನುಬಾಹಿರ ಎಂದು ಘೋಷಿಸಬೇಕು’, ಎಂದು ಇಂದೋರ್‌ನ ಶ್ರೀ ಅಖಂಡಾನಂದ ಆದಿವಾಸಿ ಗುರುಕುಲ ಆಶ್ರಮದ ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ಶ್ರೀ ಪ್ರಣವಾನಂದ ಸರಸ್ವತಿಜಿ ಮಹಾರಾಜರು ಒತ್ತಾಯಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ದೇಶಾದ್ಯಂತ ಮತಾಂತರ ನಿಷೇಧ ಕಾನೂನನ್ನು ತರಬೇಕು !’ ಈ ವಿಷಯದ ಕುರಿತು ಆಯೋಜಿಸಲಾಗಿದ್ದ ವಿಶೇಷ ಆನ್‌ಲೈನ್ ಚರ್ಚೆಯಲ್ಲಿ ಮಾತನಾಡುತ್ತಿದ್ದರು.
ಈ ಸಂವಾದದಲ್ಲಿ ಧಾರವಾಡದ ಶ್ರೀಕ್ಷೇತ್ರ ದ್ವಾರಾಪುರದ ಶ್ರೀ ಪರಮಾತ್ಮಾ ಮಹಾಸಂಸ್ಥಾನದ ಶ್ರೀಗುರು ಪರಮಾತ್ಮಾಜಿ ಮಹಾರಾಜರು, ‘ಅಖಿಲ ಭಾರತೀಯ ಘರವಾಪಸಿ ಸಂಘಟಣೆಯ ಮುಖ್ಯಸ್ಥರು ಮತ್ತು ಛತ್ತೀಸಗಡದ ಭಾಜಪದ ಪ್ರದೇಶಸಚಿವ ಪ್ರಬಲ ಪ್ರತಾಪ ಸಿಂಹ ಜುದೇವ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರೂ ತಮ್ಮ ವಿಚಾರವನ್ನು ವ್ಯಕ್ತಪಡಿಸಿದರು. ಸಮಿತಿಯ ಶ್ರೀ. ವೈಭವ ಆಫಳೆಯವರು ಈ ಕಾರ್ಯಕ್ರಮದ ನಿರೂಪಣೆ ಮಾಡಿದರು. ೨ ಸಾವಿರದ ೩೦೦ ಜನರು ಈ ಕಾರ್ಯಕ್ರಮದ ಲಾಭ ಪಡೆದರು.
ಮತಾಂತರವು ಭಾರತವನ್ನು ವಿಭಜನೆಯ ದಿಶೆಯತ್ತ ಕೊಂಡೊಯ್ಯುತ್ತಿದ್ದರಿಂದ ಅದನ್ನು ತಡೆಯಲು ಹಿಂದೂ ಧರ್ಮದ ಪ್ರಸಾರ ಮಾಡುವುದು ಆವಶ್ಯಕ ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಕರ್ನಾಟಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಾಗದಂತೆ ಕ್ರೈಸ್ತ ಮಿಶನರಿಗಳು ಪ್ರಯತ್ನಿಸುತ್ತಿದ್ದಾರೆ ಹಾಗೂ ಮತಾಂತರ ನಿಷೇಧ ಕಾನೂನನ್ನು ಜಾರಿಗೊಳಿಸಲು ಹಿಂದುತ್ವ ನಿಷ್ಠ ಸಂಘಟನೆಗಳು ಒತ್ತಾಯಿಸುತ್ತಿವೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ; ಇಡೀ ದೇಶದಾದ್ಯಂತ ಮತಾಂತರ ನಿಷೇಧ ತರಬೇಕು, ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ವಿವಿಧ ಹಿಂದುತ್ವನಿಷ್ಠ ಸಂಘಟನೆಯೊಂದಿಗೆ ಕಾರ್ಯ ಮಾಡುತ್ತಿದೆ. ಮತಾಂತರವು ನಮ್ಮ ದೇಶವನ್ನು ವಿಭಜನೆಯತ್ತ ಕೊಂಡೊಯ್ಯುತ್ತದೆ, ಎಂಬುದನ್ನು ಗಮನದಲ್ಲಿಡಬೇಕು. ಎಲ್ಲೆಲ್ಲಿ ಮತಾಂತರಕ್ಕೆ ಪ್ರಯತ್ನ ನಡೆಯುತ್ತಿದೆಯೋ, ಆ ಸ್ಥಳಗಳಲ್ಲಿ ಸಾಂವಿಧಾನಿಕ ರೀತಿಯಲ್ಲಿ ವಿರೋಧಿಸಲು ಹಿಂದೂಗಳು ಮುಂದಾಗಬೇಕು. ಹಿಂದೂಗಳು ಧರ್ಮಶಿಕ್ಷಣ ಪಡೆಯಬೇಕು.
ದೇವಸ್ಥಾನಗಳಿಂದ ಹಿಂದೂಗಳಿಗೆ ನಮ್ಮ ಧರ್ಮದ ತತ್ತ್ವ ಮತ್ತು ಮೂಲಭೂತ ಜ್ಞಾನವನ್ನು ನೀಡಬೇಕು ! – ಪರಮಾತ್ಮಾಜಿ ಮಹಾರಾಜರು, ಶ್ರೀಕ್ಷೇತ್ರ ದ್ವಾರಾಪುರದ ಶ್ರೀ ಪರಮಾತ್ಮಾ ಮಹಾಸಂಸ್ಥಾನದ ಶ್ರೀಗುರುಗಳು, ಧಾರವಾಡ
ಭಾರತದಲ್ಲಿ ಪ್ರತಿದಿನ ೨೫೦೦ ರಿಂದ ೩೦೦೦ ಹಿಂದೂಗಳು ಮತಾಂತರವಾಗುತ್ತಿದ್ದಾರೆ. ಇದನ್ನು ತಡೆಯಲು ಕಾನೂನು ರೂಪಿಸಬೇಕು. ಹಿಂದೂ ಧರ್ಮದ ಮೇಲಿನ ಈ ದಾಳಿಯನ್ನು ತಡೆಯಲು ಹಿಂದೂ ಬಾಂಧವರು ಮುಂದೆ ಬಂದು ಸರಕಾರದ ಮೇಲೆ ಒತ್ತಡ ಹೇರಬೇಕು. ಇತ್ತೀಚೆಗೆ ದೂರಚಿತ್ರವಾಹಿನಿಯ ವಿವಿಧ ಕಾರ್ಯಕ್ರಮಗಳ ಮೂಲಕ ಹಿಂದೂ ಧರ್ಮವನ್ನು ಕಡೆಗಣಿಸಲಾಗುತ್ತಿದೆ. ಈ ಬಗ್ಗೆ ಹಿಂದೂಗಳು ಜಾಗೃತರಾಗಬೇಕು. ಅಲ್ಲಲ್ಲಿ ದೇವಸ್ಥಾನಗಳಿಂದ ಹಿಂದೂಗಳಿಗೆ ತಮ್ಮ ಧರ್ಮದ ತತ್ತ್ವಗಳು ಮತ್ತು ಮೂಲಭೂತ ಜ್ಞಾನವನ್ನು ಕಲಿಸಬೇಕು.
ಮತಾಂತರವು ಭೀಕರ ಸಂಚಾಗಿದ್ದು ಕ್ರೈಸ್ತ ಮಿಶನರಿಗಳು ಸೇವೆಯ ಹೆಸರಿನಲ್ಲಿ ಹಿಂದೂಗಳಿಗೆ ಮೋಸ ಮಾಡುತ್ತಿದ್ದಾರೆ ! – ಪ್ರಬಲ ಪ್ರತಾಪ ಸಿಂಗ್ ಜುದೇವ್, ‘ಅಖಿಲ ಭಾರತೀಯ ಘರವಾಪಸಿ ಸಂಘಟನೆಯ ಮುಖ್ಯಸ್ಥ ಹಾಗೂ ಬಿಜೆಪಿಯ ಛತ್ತೀಸಗಡ ರಾಜ್ಯ ಸಚಿವ
‘ಮತಾಂತರ ಒಂದು ಭೀಕರ ಪಿತೂರಿಯಾಗಿದ್ದು, ಕ್ರೈಸ್ತ ಮಿಶನರಿಗಳು ಸೇವೆಯ ಹೆಸರಿನಲ್ಲಿ ವ್ಯವಹಾರವನ್ನು ಮಾಡುತ್ತಿದ್ದಾರೆ ಹಾಗೂ ಹಿಂದೂಗಳನ್ನು ವಂಚಿಸುತ್ತಿದ್ದಾರೆ. ದೇಶವಿರೋಧಿ ಶಕ್ತಿಗಳು ಈ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿವೆ. ಹಿಂದೂಗಳು ಅದರಲ್ಲಿಯೂ ವಿಶೇಷವಾಗಿ ಯುವಕರು ಇವೆಲ್ಲವನ್ನು ಕೊನೆಗಾಣಿಸಲು ಮುಂದಾಗಬೇಕು’. ನಮ್ಮ ‘ಅಖಿಲ ಭಾರತೀಯ ಘರವಾಪಸಿ ಸಂಘಟನೆಯ ಮಾಧ್ಯಮದಿಂದ ಮತಾಂತರಗೊಂಡ ಹಿಂದೂಗಳನ್ನು ಪುನಃ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಲಾಗುತ್ತಿದೆ’ ಮತ್ತು ನಾವು ಈ ಕಾರ್ಯವನ್ನು ಮುಂದುವರಿಸುತ್ತೇವೆ.