ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

(ಪರಾತ್ಪರ ಗುರು) ಡಾ. ಆಠವಲೆ

‘ಯಾವುದೇ ಘಟನೆ ಸಂಭವಿಸಿದಾಗ ವಿಜ್ಞಾನವು ಕೇವಲ ಅದರ ಹಿಂದಿನ ಭೌತಿಕ ಕಾರಣಗಳನ್ನು ಅಧ್ಯಯನ ಮಾಡುತ್ತದೆ, ಅದರ ಹಿಂದೆ ಕೆಲವು ಕಾರ್ಯಕಾರಣಭಾವ ಇರುತ್ತವೆ, ಎಂಬುದು ವಿಜ್ಞಾನಕ್ಕೆ ಇನ್ನೂ ತಿಳಿದಿಲ್ಲ, ಉದಾ. ಬಸ್ ಅಪಘಾತಕ್ಕೀಡಾಗಿ ೨೦ ಪ್ರಯಾಣಿಕರು ಸಾವನ್ನಪ್ಪಿದ್ದು ಒಬ್ಬ ಪ್ರಯಾಣಿಕನು ಬದುಕಿದನು. ಹೀಗಿರುವಾಗ ಈ ಘಟನೆಯಲ್ಲಿ ವೈಜ್ಞಾನಿಕ ದೃಷ್ಟಿಯಿಂದ ಅಪಘಾತದ ಕಾರಣಗಳು ‘ಹಾಳಾದ ರಸ್ತೆ, ಬಸ್ಸಿನಲ್ಲಿ ತಾಂತ್ರಿಕ ದೋಷ, ಚಾಲಕನ ದೋಷ ಮುಂತಾದವುಗಳಿಗೆ ಸೀಮಿತವಾಗಿರುತ್ತವೆ; ಆದರೆ ‘ಅದೇ ೨೦ ಜನರು ಒಟ್ಟಿಗೆ ಏಕೆ ಮೃತಪಟ್ಟರು ಮತ್ತು ಒಬ್ಬರೇ ಏಕೆ ಬದುಕುಳಿದರು ?’ ಎಂಬ ಪ್ರಶ್ನೆಗೆ ವಿಜ್ಞಾನವು ಉತ್ತರಿಸುವುದಿಲ್ಲ. ‘ಆ ೨೦ ಮಂದಿಗೆ ಮೃತ್ಯುಯೋಗವಿತ್ತು; ಹಾಗಾಗಿ ಅವರು ಬಸ್ ಅಪಘಾತದ ಮಾಧ್ಯಮದಿಂದ ಒಟ್ಟಿಗೆ ಮೃತಪಟ್ಟರು ಮತ್ತು ಬದುಕುಳಿದ ಒಬ್ಬನಿಗೆ ಮೃತ್ಯುಯೋಗ ಇರಲಿಲ್ಲ’, ಆದರೆ ‘ಕೇವಲ ಅಪಘಾತದಲ್ಲಿ ಭಾಗವಹಿಸುವುದು ಮಾತ್ರ ಅವನ ಪ್ರಾರಬ್ಧವಾಗಿತ್ತು ಎಂದು ವಿಜ್ಞಾನ ಯೋಚಿಸಲೂ ಸಾಧ್ಯವಿಲ್ಲ. ಆದ್ದರಿಂದ ವಿಜ್ಞಾನವು ಅದನ್ನು ಕಂಡುಹಿಡಿಯುವುದು ದೂರದ ಮಾತಾಯಿತು. ಇದರಿಂದ ‘ವಿಜ್ಞಾನವು ಇನ್ನೂ ಬಾಲ್ಯಾವಸ್ಥೆಯಲ್ಲಿದೆ, ಎಂಬುದರ ಕಲ್ಪನೆ ಬರುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ