ಸನಾತನದ ಸಾಧಕ ಎಂದು ಹೇಳಿಕೊಂಡು ಆರ್ಥಿಕ ವಂಚನೆ ಮಾಡುವ ಸುಳ್ಯದ ಶಿವಾನಂದ ಪ್ರಭು ಇವರಿಂದ ಎಚ್ಚರದಿಂದಿರಿ !

ಸನಾತನದ ಸಾಧಕರು, ಹಿಚಿಂತಕರು, ಧರ್ಮಪ್ರೇಮಿಗಳು ಹಾಗೂ ಸನಾತನ ಪ್ರಭಾತ ವಾಚಕರಿಗೆ ಸೂಚನೆ

ಶಿವಾನಂದ ಪ್ರಭು

ಸನಾತನದ ಸಾಧಕ ಎಂದು ಹೇಳಿ ಓರ್ವ ವ್ಯಕ್ತಿಯು ಅನೇಕರಿಗೆ ಆರ್ಥಿಕವಾಗಿ ವಂಚಿಸಿರುವುದು ಗಮನಕ್ಕೆ ಬಂದಿದೆ. ಆತ ಸುಳ್ಯದವನಾಗಿದ್ದು ತನ್ನ ಹೆಸರು ಶಿವಾನಂದ ಪ್ರಭು ಎಂದು ಹೇಳಿ ವಂಚನೆ ಮಾಡಿದ್ದಾನೆಂದು ಮೋಸ ಹೋದ ವ್ಯಕ್ತಿಯಿಂದ ತಿಳಿದುಬಂದಿದೆ. ಈ ವ್ಯಕ್ತಿಯ ವಿರುದ್ಧ ಪೊಲೀಸರಲ್ಲಿ ದೂರನ್ನೂ ದಾಖಲಿಸಲಾಗಿದ್ದು ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ. ಈ ರೀತಿಯಲ್ಲಿ ಸನಾತನ ಸಂಸ್ಥೆಯ ಹೆಸರನ್ನು ದುರುಪಯೋಗಿಸಿಕೊಂಡು ಶಿವಾನಂದ ಪ್ರಭು ಜನಸಾಮಾನ್ಯರಿಗೆ ಮೋಸ ಮಾಡಿರುವ ಕೆಲವು ಘಟನೆಗಳನ್ನು ಸಾಧಕರು ಮತ್ತು ಹಿತಚಿಂತಕರು ನಮಗೆ ತಿಳಿಸಿದರು. ಆ ಘಟನೆಗಳು ಕೆಳಗಿನಂತಿವೆ.

೧. ಶಿವಾನಂದ ಪ್ರಭು ಈತನು ಸನಾತನದ ಸಂಪರ್ಕದಲ್ಲಿರುವ ಓರ್ವ ನ್ಯಾಯವಾದಿಯ ಕಕ್ಷಿದಾರನನ್ನು ವಾಹನದ ವ್ಯವಹಾರದ ಬಗ್ಗೆ ಭೇಟಿಯಾಗಿದ್ದನು. ವಾಹನದ ವ್ಯವಹಾರ ಮಾಡಲು ಆತ ಕಕ್ಷಿದಾರನಿಂದ ೩೦ ಲಕ್ಷ ರೂಪಾಯಿ ತೆಗೆದುಕೊಂಡನು; ಆದರೆ ಪ್ರತ್ಯಕ್ಷ ಭೇಟಿ ಮಾಡಿದಾಗ ಆತ ಕಕ್ಷಿದಾರನಿಗೆ ಒಂದು ವಾಹನ ಮತ್ತು ನಕಲಿ ‘ಆರ್.ಸಿ.’ ಪುಸ್ತಕವನ್ನು ತೋರಿಸಿ ಮೋಸ ಮಾಡಿದ. ಈ ವ್ಯವಹಾರವನ್ನು ಆತ ‘ಟ್ಯಾಕ್ಸಿ ಸಂಘದ ಅಧ್ಯಕ್ಷ’ನಾಗಿದ್ದೇನೆ ಎಂದು ಹೇಳಿ ಮಾಡಿದ್ದ. ಕಕ್ಷಿದಾರರು ಆ ಬಗ್ಗೆ ವಿಚಾರಿಸಿದಾಗ `ಶಿವಾನಂದ’ ಹೆಸರಿನ ಬೇರೊಬ್ಬ ವ್ಯಕ್ತಿಯು `ಟ್ಯಾಕ್ಸಿ ಸಂಘ’ದ ಅಧ್ಯಕ್ಷನಾಗಿರುವುದು ತಿಳಿಯಿತು.

೨. ಶಿವಾನಂದ ಪ್ರಭು ‘ತಾನೊಬ್ಬ ವಿದ್ಯುತ್ ಇಲಾಖೆಯಲ್ಲಿ ಜ್ಯೂನಿಯರ್ ಇಂಜಿನಿಯರ್ ಆಗಿದ್ದೇನೆ. ತಮಗೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಒಬ್ಬ ವ್ಯಕ್ತಿಯಿಂದ ೫ ಲಕ್ಷ ಹಣ ಪಡೆದು ಮೋಸ ಮಾಡಿದ್ದಾನೆ.

೩. ಶಿವಾನಂದ ಪ್ರಭು ಸನಾತನದ ಒಬ್ಬ ಸಾಧಕರಿಗೆ ‘ಸೆಕಂಡ್ ಹ್ಯಾಂಡ್’ ವಾಹನ ಕೊಡಿಸುವೆ ಎಂದು ಹೇಳಿ ಸಾಧಕರಿಂದ ೬೦ ಸಾವಿರ ಹಣವನ್ನು ತೆಗೆದುಕೊಂಡು ವಾಹನವನ್ನು ನೀಡಿದನು. ಆದರೆ ೭- ೮ ತಿಂಗಳಾದರೂ ವಾಹನವನ್ನು ಸಾಧಕನ ಹೆಸರಿಗೆ ಮಾಡಲಿಲ್ಲ. ಅನಂತರ `ವಾಹನದ ನೋಂದಣಿ ಮತ್ತು ದುರಸ್ತಿ ಇದೆ ಮಾಡಿಕೊಡುತ್ತೇನೆ’ ಎಂದು ಹೇಳಿ ಇನ್ನೂ ೩೪ ಸಾವಿರ ರೂಪಾಯಿ ಪಡೆದು ವಾಹನ  ೩-೪ ತಿಂಗಳಾದರೂ ಸಾಧಕನ ಹೆಸರಿನಲ್ಲಿ ಮಾಡಲಿಲ್ಲ ಹಣ ಸಹ ಕೊಡಲಿಲ್ಲ. ದೂರವಾಣಿ ಸಹ ತೆಗೆಯಲಿಲ್ಲ. ಆದ್ದರಿಂದ ಸಾಧಕನು ವಾಹನ ಬೇಡ ಹಣ ಮರಳಿ ಕೊಡುವಂತೆ ಹೇಳಿದರೂ ಆತ ಪೂರ್ಣ ಹಣ ನೀಡಲಿಲ್ಲ.

೪. ‘ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ (ಎಂಆರ್‍ಪಿಎಲ್)’ ಈ ಸಂಸ್ಥೆಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ವ್ಯಕ್ತಿಯೊಬ್ಬನಿಂದ ೭ ರಿಂದ  ೮ ಲಕ್ಷ ರೂಪಾಯಿ ಪಡೆದಿದ್ದನು. ಆತನ ಬಳಿ ನಕಲಿ `ಲೆಟರ್‍ಹೆಡ್‍ಗಳು’, ‘ಅಪಾಯಿಂಟ್‍ಮೆಂಟ್ ಲೆಟರ್‍ಗಳು’ (ಕೆಲಸ ಸಿಕ್ಕಿರುವುದು ಹೇಳುವ ಪತ್ರ) ಮತ್ತು ಐಡಿ ಕಾರ್ಡ್‍ಗಳು ಇದ್ದವು.

ಕೆಲವು ವರ್ಷಗಳ ಹಿಂದೆ ಶಿವಾನಂದ ಪ್ರಭು ಹೆಸರಿನ ವ್ಯಕ್ತಿಯು ಸನಾತನದ ಸಂಪರ್ಕದಲ್ಲಿದ್ದನು; ಆಗಲೂ ಒಂದು ಪ್ರಸಂಗದಲ್ಲಿ ಅವನಲ್ಲಿನ ಅಪ್ರಾಮಾಣಿಕತೆ, ಸುಳ್ಳು ಹೇಳುವುದು, ಸಭ್ಯನಂತೆ ತೋರಿಕೆ ಮಾಡುವುದು, ನಮ್ರತೆಯ ನಾಟಕವಾಡಿ ಮೋಸ ಮಾಡುವುದು ಇತ್ಯಾದಿ ಅಯೋಗ್ಯ ವರ್ತನೆಗಳು ಗಮನಕ್ಕೆ ಬಂದ ನಂತರ ೪-೫ ವರ್ಷಗಳಿಂದ ಆತನನ್ನು ಸಂಸ್ಥೆಯ ಕಾರ್ಯದಲ್ಲಿ ಸಹಭಾಗಿ ಮಾಡಿಕೊಳ್ಳಲಿಲ್ಲ.

ಸನಾತನಕ್ಕೂ ಮತ್ತು ತನ್ನನ್ನು ಶಿವಾನಂದ ಪ್ರಭು ಎಂದು ಗುರುತಿಸಿಕೊಂಡು ಆರ್ಥಿಕವಾಗಿ ವಂಚನೆ ಮಾಡುವ ವ್ಯಕ್ತಿಯೊಂದಿಗೂ ಯಾವುದೇ ಸಂಬಂಧವಿಲ್ಲ. ಸನಾತನದ ಹೆಸರು ಹೇಳಿಕೊಂಡು ಯಾರಾದರೂ ಆರ್ಥಿಕವಾಗಿ ವ್ಯವಹಾರ ಮಾಡುತ್ತಿದ್ದಲ್ಲಿ, ನಾಗರಿಕರು ಎಚ್ಚರ ವಹಿಸಬೇಕು, ಅದೇ ರೀತಿ ಬಾಕಿಯವರಿಗೆ ಮೋಸ ಮಾಡಿದ್ದಲ್ಲಿ ಆತನ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಬೇಕು ಹಾಗೂ ಈ ಬಗ್ಗೆ ನಮಗೂ ತಿಳಿಸಿರಿ.

– ಶ್ರೀ. ವೀರೆಂದ್ರ ಮರಾಠೆ, ವ್ಯವಸ್ಥಾಪನಾ ವಿಶ್ವಸ್ಥರು, ಸನಾತನ ಸಂಸ್ಥೆ.

ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ – 7058885610

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, `ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ, ಪಿನ್ -403401