ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಮಾಡುತ್ತಿದ್ದ ತಂದೆ (ಪ.ಪೂ. ಬಾಳಾಜಿ (ದಾದಾ) ಆಠವಲೆ) ಮತ್ತು ತಾಯಿ (ಪೂ. (ಸೌ.) ನಲಿನಿ ಆಠವಲೆ) ಇವರ ವಿವಿಧ ಸೇವೆಗಳು !

ತಾವು ಸ್ವತಃ ಭಗವಂತಸ್ವರೂಪರಾಗಿದ್ದರೂ ಕೃತಜ್ಞತಾಭಾವದಿಂದ, ಪರಿಪೂರ್ಣತೆಯಿಂದ ಮತ್ತು ಸಹಜಭಾವದಿಂದ ತಾಯಿ-ತಂದೆಯವರ ಸೇವೆಯನ್ನು ಮಾಡಿ ಸಮಾಜದೆದುರು ಉತ್ತಮ ಸೇವೆಯ ಆದರ್ಶವನ್ನಿಡುವ ಪರಾತ್ಪರ ಗುರು ಡಾ. ಆಠವಲೆ !

(ಪರಾತ್ಪರ ಗುರು) ಡಾ. ಆಠವಲೆ

‘೧೯೯೦ ರಲ್ಲಿ ಮುಂಬಯಿಯಲ್ಲಿ ಸನಾತನ ಸಂಸ್ಥೆಯ ಕಾರ್ಯವು ಆರಂಭವಾಯಿತು. ಅಂದಿನಿಂದ ನಾವು ಕೆಲವು ಸಾಧಕರು ಪ.ಪೂ. ಡಾಕ್ಟರರ ಮನೆಗೆ ಹೋಗಿ ಬಂದು ಸೇವೆ ಮಾಡತೊಡಗಿದೆವು. ಆ ಸಮಯದಲ್ಲಿ ಪ.ಪೂ. ಡಾಕ್ಟರರ ತಾಯಿ-ತಂದೆಯವರು ಅವರೊಂದಿಗೆ ವಾಸಿಸುತ್ತಿದ್ದರು. ನಾವೆಲ್ಲ ಸಾಧಕರು ಅವರನ್ನು ಪ.ಪೂ. ಡಾಕ್ಟರರು ಕರೆಯುತ್ತಿದ್ದ ಹಾಗೆ ‘ತಾಯಿ’ ಮತ್ತು ‘ದಾದಾ’ ಎಂದು ಸಂಬೋಧಿಸುತ್ತಿದ್ದೆವು. ಅವರಿಬ್ಬರೂ ಸಾಧಕರಾದ ನಮ್ಮೆಲ್ಲರನ್ನು ಬಹಳ ಪ್ರೀತಿಸುತ್ತಿದ್ದರು. ಅವರು ನಮ್ಮೊಂದಿಗೆ ತಮ್ಮದೇ ಕುಟುಂಬದ ಸದಸ್ಯರಂತೆ ವ್ಯವಹರಿಸುತ್ತಿದ್ದರು. ಸದ್ಯ ಸಮಾಜದಲ್ಲಿ ವಯಸ್ಸಾದ ತಂದೆ-ತಾಯಿಗಳು ಮಕ್ಕಳಿಗೆ ಬೇಡವಾಗುತ್ತಾರೆ. ಕೆಲವು ಜನರು ‘ನಿರುಪಯೋಗಿ ಜನರು ಬೇಡ’ ಎಂದು ಬೇರೆ ಮನೆ ಮಾಡಿ ವಾಸಿಸುತ್ತಾರೆ ಮತ್ತು ಇನ್ನು ಕೆಲವರು ಅವರನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಬರುತ್ತಾರೆ. ಯಾವ ತಾಯಿ-ತಂದೆಯರು ನಮ್ಮಲ್ಲಿ ಒಳ್ಳೆಯ ಸಂಸ್ಕಾರಗಳನ್ನು ಮಾಡಿ ಸಮಾಜದಲ್ಲಿ ಕೀರ್ತಿ, ಯಶಸ್ಸು ದೊರಕಿಸಿಕೊಟ್ಟರೋ, ಅವರ ಬಗ್ಗೆ ಎಷ್ಟು ಈ ಕೃತಘ್ನತನ ? ‘ಇಂತಹ ಸಮಾಜಕ್ಕೆ ಯೋಗ್ಯ ದೃಷ್ಟಿಕೋನ ಸಿಗಬೇಕು, ಎಂಬುದಕ್ಕಾಗಿ ಪ್ರತ್ಯಕ್ಷ ಭಗವಂತನು (ಪರಾತ್ಪರ ಗುರು ಡಾ. ಆಠವಲೆಯವರು) ತಮ್ಮ ತಾಯಿ-ತಂದೆಯರ ಸೇವೆಯನ್ನು ಹೇಗೆ ಮಾಡಿದರು ?’, ಎಂಬುದು ಮುಂದಿನ ಉದಾಹರಣೆಗಳಿಂದ ಗಮನಕ್ಕೆ ಬರುತ್ತದೆ ಮತ್ತು ‘ದೇವರ ಪ್ರತಿಯೊಂದು ಕೃತಿಯು ಎಷ್ಟು ಪರಿಪೂರ್ಣವಿರುತ್ತದೆ ?’, ಎಂದು ಸಹ ಕಲಿಯಲು ಸಿಗುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರ ತಂದೆ ಪ.ಪೂ. ಬಾಳಾಜಿ ಆಠವಲೆ ಮತ್ತು ತಾಯಿ ಪೂ. (ಸೌ.) ನಲಿನಿ ಆಠವಲೆ

ಸೇವೆಯನ್ನು ಮಾಡುವಾಗ ಪ್ರತಿಯೊಂದು ಕೃತಿಗೆ ಭಕ್ತಿಮಾರ್ಗಕ್ಕನುಸಾರ ಭಾವದ ಮತ್ತು ಕರ್ಮ ಯೋಗಕ್ಕನುಸಾರ ಪರಿಪೂರ್ಣತೆಯನ್ನು ಜೋಡಿಸಿದರೆ ನಿಶ್ಚಿತವಾಗಿಯೂ ಆ ಕೃತಿಯು ಆಧ್ಯಾತ್ಮಿಕ ಸ್ತರದಲ್ಲಾಗುತ್ತದೆ; ಹೀಗಿರುವಾಗ ‘ಆ ಕೃತಿಯನ್ನು ಸಂತರಿಗಾಗಿ ಮಾಡಿದ್ದರೂ ಅಥವಾ ತಾಯಿ-ತಂದೆಯರಿಗಾಗಿ ಮಾಡಿದ್ದರೂ ಅದರ ಆಧ್ಯಾತ್ಮಿಕ ಲಾಭ ಸಿಕ್ಕಿಯೇ ಸಿಗುತ್ತದೆ !’ ಪ.ಪೂ. ಡಾಕ್ಟರರ ಕೃತಿಗಳಿಂದ ಇಂತಹ ಸರ್ವವ್ಯಾಪಕ ಸಮಷ್ಟಿಯ ದೃಷ್ಟಿಕೋನವು ಸಿಗುತ್ತದೆ. ಪ.ಪೂ. ಡಾಕ್ಟರರು ಮಾಡಿದ ತಮ್ಮ ತಾಯಿ-ತಂದೆಯ ಸೇವೆಯಿಂದ ಸಮಷ್ಟಿಗೆ ಬಹಳಷ್ಟು ಕಲಿಯಲು ಸಿಗುತ್ತದೆ. ಈ ಲೇಖನದಲ್ಲಿ ಪರಾತ್ಪರ ಗುರು ಡಾಕ್ಟರರ ಕಿರಿಯ ಸಹೋದರ ಡಾ. ವಿಲಾಸ ಆಠವಲೆಯವರು ‘ಪರಾತ್ಪರ ಗುರು ಡಾಕ್ಟರರು ತಾಯಿ-ತಂದೆಯ ಸೇವೆಯನ್ನು ಹೇಗೆ ಮಾಡಿದರು ?’ ಎಂಬ ಬಗ್ಗೆ ಹೇಳಿದ ಅಂಶಗಳನ್ನು ಮತ್ತು ಪರಾತ್ಪರ ಗುರು ಡಾಕ್ಟರರ ತಂದೆ-ತಾಯಿಯ ಸೇವೆಯಲ್ಲಿ ನಾನು ಅನುಭವಿಸಿದ ಅಂಶಗಳನ್ನು ಕೆಳಗೆ ನೀಡಿದ್ದೇನೆ.

‘ಸೇವೆಯನ್ನು ಮಾಡುವಾಗ ಪ್ರತಿಯೊಂದು ಕೃತಿಗೆ ಭಕ್ತಿಮಾರ್ಗಕ್ಕನುಸಾರ ಭಾವವನ್ನು ಮತ್ತು ಕರ್ಮಯೋಗಕ್ಕನುಸಾರ ಪರಿಪೂರ್ಣತೆಯನ್ನು ಜೋಡಿಸಿ ಆಧ್ಯಾತ್ಮಿಕ ಸ್ತರದಲ್ಲಿ ಸೇವೆಯನ್ನು ಹೇಗೆ ಮಾಡಬೇಕು ?’ ಎಂಬುದು ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ತಮ್ಮ ತಂದೆ-ತಾಯಿಯರ ಸೇವೆಯಿಂದ ಕಲಿಯಲು ಸಿಗುತ್ತದೆ. ಈ  ಹಿಂದಿನ ಸಂಚಿಕೆಯಲ್ಲಿ (೨೩/೧೦ ರಲ್ಲಿ) ನಾವು ‘ಪರಾತ್ಪರ ಗುರು ಡಾ. ಆಠವಲೆಯವರು ಅವರ ತಂದೆ-ತಾಯಿಯರ ಸೇವೆಯನ್ನು ಹೇಗೆ ಮಾಡಿದರು ?’, ಎಂಬುದರ ಬಗ್ಗೆ ಡಾ. ವಿಲಾಸ ಆಠವಲೆ (ಪರಾತ್ಪರ ಗುರು ಡಾ. ಆಠವಲೆಯವರ ಕಿರಿಯ ಸಹೋದರ) ಇವರು ಹೇಳಿದ ಅಂಶಗಳನ್ನು ನೋಡಿದೆವು.  ನಾವು ಈ ವಾರದ ಸಂಚಿಕೆಯಲ್ಲಿ ಮುಂಬೈಯ ಸೇವಾಕೇಂದ್ರದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಇದ್ದು ಸೇವೆಯನ್ನು ಮಾಡಿದ ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಶ್ರೀ. ದಿನೇಶ ಶಿಂದೆ ಇವರು ‘ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ತಂದೆ-ತಾಯಿಯ ಸೇವೆಯನ್ನು ಎಷ್ಟು ಪರಿಪೂರ್ಣವಾಗಿ ಮಾಡಿದರು ?’, ಇದರ ಬಗ್ಗೆ ಅವರು ಅನುಭವಿಸಿದ ಅಂಶಗಳನ್ನು ನೋಡೋಣ.

ಶ್ರೀ. ದಿನೇಶ ಶಿಂದೆ

ಸದ್ಯದ ಯುಗವು ‘ಬಳಸಿರಿ ಮತ್ತು ಎಸೆಯಿರಿ (Use & Throw)‘ ಈ ತತ್ತ್ವಕ್ಕನುಸಾರ ನಡೆಯುತ್ತದೆ. ‘ಮಕ್ಕಳನ್ನು ಶಿಶುವಿಹಾರದಲ್ಲಿ (ಮಕ್ಕಳ ಆರೈಕೆ ಕೇಂದ್ರದಲ್ಲಿ) ಮತ್ತು ತಂದೆ-ತಾಯಿಯರನ್ನು ವೃದ್ಧಾಶ್ರಮದಲ್ಲಿ ಇಡುವ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವಿರುವ ಪೀಳಿಗೆಯು ಈಗ ತಂದೆ-ತಾಯಿಯ ಕಡೆಗೆ ‘ಉಪಯುಕ್ತತೆ’ಯ ದೃಷ್ಟಿಯಿಂದ ನೋಡುತ್ತಿದೆ. ‘ವೃದ್ಧ ತಾಯಿ-ತಂದೆಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದು’, ಈ ಪದ್ಧತಿಯು ಆರಂಭವಾದ ನಂತರ ಸಮಾಜದಿಂದ ತಾಯಿ-ತಂದೆಯ ಬಗ್ಗೆ ಗೌರವ ಮತ್ತು ಮಾನಸನ್ಮಾದ ಅಪೇಕ್ಷೆಯಂತೂ ದೂರದ ಮಾತಾಯಿತು, ಮಕ್ಕಳು ಅವರ ಆಸ್ತಿಪಾಸ್ತಿಯ ಮೇಲೆ ಕಣ್ಣಿಟ್ಟು ಅವರಿಗೆ ಜೀವನವನ್ನೇ ಅಸಹನೀಯಗೊಳಿಸುತ್ತಿರುವುದು ನಮಗೆ ಕಂಡುಬರುತ್ತದೆ ಪರಾತ್ಪರ ಗುರು ಡಾ. ಆಠವಲೆಯವರಂತೆ ಸಂತ-ಸೇವೆಯೆಂದು ತಿಳಿದು ತಂದೆ-ತಾಯಿಯರ ಸೇವೆಯನ್ನು ಮಾಡುವ ಮಕ್ಕಳು ತುಂಬಾ ವಿರಳ ! ಕೆಳಗಿನ ಅಂಶಗಳಿಂದ ‘ವೃದ್ಧರ ಸೇವೆಯನ್ನು ಮಾಡುವಾಗ ಹೇಗೆ ಭಾವವನ್ನಿಡಬೇಕು ? ಯಾವ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು ? ಪ್ರೇಮದಿಂದ ಮತ್ತು ಪರಿಪೂರ್ಣ ಸೇವೆಯನ್ನು ಹೇಗೆ ಮಾಡಬೇಕು ?’, ಎಂಬುದು ಸಮಾಜಕ್ಕೆ ಕಲಿಯಲು ಸಿಗುವುದು. ಸಾಧಕರು ಸಂತರ ಮತ್ತು ವೃದ್ಧರ ಸೇವೆಯನ್ನು ಇದೇ ರೀತಿ ಸೇವಾಭಾವದಿಂದ ಮಾಡಿದರೆ ಶೀಘ್ರವಾಗಿ ಅವರ ಆಧ್ಯಾತ್ಮಿಕ ಉನ್ನತಿಯಾಗುವುದು, ಇದು ಖಚಿತ ! 

(ಭಾಗ ೨)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/53721.html

೧. ಪ.ಪೂ. ಡಾಕ್ಟರರು ಪ್ರತಿದಿನ ಬೆಳಗ್ಗೆ ಬೇಗನೆ ಎದ್ದು ತಂದೆ-ತಾಯಿಯರಿಗಾಗಿ ಸ್ನಾನದ ಸಿದ್ಧತೆ ಮಾಡುವುದು

ಪೂ. (ಸೌ.) ತಾಯಿ ಮತ್ತು ಪ.ಪೂ. ದಾದಾ ಇಬ್ಬರೂ ಮುಂಜಾನೆ ೫.೩೦ ಕ್ಕೆ ಏಳುತ್ತಿದ್ದರು. ಮೊದಲು ಪ.ಪೂ. ದಾದಾ ಏಳುತ್ತಿದ್ದರು ಮತ್ತು ನಂತರ ಪೂ. (ಸೌ.) ತಾಯಿ ಏಳುತ್ತಿದ್ದರು. ಪ.ಪೂ. ದಾದಾ ವಯೋವೃದ್ಧರಾಗಿದ್ದ ಕಾರಣ ಅವರಿಗೆ ಪ್ರತಿಯೊಂದು ಕೃತಿಯನ್ನು ಮಾಡಲು ಇನ್ನೊಬ್ಬರ ಸಹಾಯ ಬೇಕಾಗುತ್ತಿತ್ತು. ಪ.ಪೂ. ದಾದಾ ಎದ್ದ ನಂತರ ಪ.ಪೂ. ಡಾಕ್ಟರರು ಅವರಿಗೆ ಚಹಾ ಮಾಡಿಕೊಡುತ್ತಿದ್ದರು. ಪ.ಪೂ. ದಾದಾ ಚಹಾ ಕುಡಿಯುವಷ್ಟರಲ್ಲಿ ಪ.ಪೂ. ಡಾಕ್ಟರರು ಶೌಚಾಲಯದ ಬಾಗಿಲನ್ನು ತೆರೆದಿಡುತ್ತಿದ್ದರು ಮತ್ತು ಒಳಗಿನ ನೀರಿನ ಬಕೆಟು ಖಾಲಿ ಇದ್ದರೆ ಅದನ್ನು ತುಂಬಿಸಿಡುತ್ತಿದ್ದರು. ನಂತರ ಪ.ಪೂ. ಡಾಕ್ಟರರು ಪ.ಪೂ. ದಾದಾರ ಸ್ನಾನದ ಸಿದ್ಧತೆಯನ್ನು ಮಾಡುತ್ತಿದ್ದರು. ಪ.ಪೂ. ದಾದಾರಿಗೆ ಸ್ನಾನವನ್ನು ಮಾಡುವಾಗ ಯಾವುದೇ ರೀತಿಯ ಅಡಚಣೆ ಬರಬಾರದು, ಎಂದು ಸ್ನಾನದ ಸಿದ್ಧತೆಯನ್ನು ಮಾಡುವಾಗಲೂ ಪರಿಪೂರ್ಣ ಮತ್ತು ಸಣ್ಣ-ಪುಟ್ಟ ವಿಷಯಗಳ ವಿಚಾರವನ್ನು ಮಾಡಿ ಅವರು ಮಾಡುತ್ತಿದ್ದರು, ಇದು ಅವರ ಮುಂದಿನ ಕೃತಿಗಳಿಂದ ನಮ್ಮ ಗಮನಕ್ಕೆ ಬರುತ್ತದೆ.

ಅ. ‘ಸ್ನಾನಗೃಹದ ಹಾಸುಗಲ್ಲುಗಳ ಮೇಲೆ ನೀರು/ಸಾಬೂನಿನ ನೀರು ಬಿದ್ದಿಲ್ಲವಲ್ಲ ?’ ಎಂದು ಖಚಿತಪಡಿಸಿಕೊಳ್ಳುತ್ತಿದ್ದರು ಅವರು. ‘ಸ್ನಾನಗೃಹದಲ್ಲಿ ಕಾಲುಜಾರಿ ತಂದೆ-ತಾಯಿ ಬೀಳಬಾರದು’, ಎಂದು ಅವರು ಪ್ರತಿದಿನ ಈ ರೀತಿ ಕಾಳಜಿಯನ್ನು ವಹಿಸುತ್ತಿದ್ದರು.

ಆ. ‘ಸ್ನಾನವನ್ನು ಮಾಡುವಾಗ ಅವರಿಗೆ ಏನಾದರೂ ಅಡಚಣೆಗಳು ಬಂದರೆ ಅಥವಾ ಏನಾದರೂ ಸಹಾಯ ಬೇಕಾಗಿದ್ದರೆ, ಅವರಿಗೆ ಸಹಾಯ ಮಾಡಲು ಆಗಬೇಕೆಂದು ಪ.ಪೂ. ಡಾಕ್ಟರರು ಅವರಿಗೆ ಸ್ನಾನಗೃಹದ ಬಾಗಿಲಿಗೆ ಒಳಗಿನಿಂದ ಚಿಲಕವನ್ನು ಹಾಕುವುದು ಬೇಡ, ಬಾಗಿಲನ್ನು ಮಾತ್ರ ಮುಚ್ಚಿ ಎಂದು ಹೇಳುತ್ತಿದ್ದರು.

ಇ. ‘ಕೆಳಗೆ ನೆಲದ ಮೇಲೆ ಕುಳಿತುಕೊಂಡು ಸ್ನಾನವನ್ನು ಮಾಡಲು ಮತ್ತು ನಂತರ ಎದ್ದು ನಿಲ್ಲಲು ಅಡಚಣೆ ಬರಬಹುದು’, ಎಂಬುದನ್ನು ಗಮನದಲ್ಲಿರಿಸಿ ‘ಸ್ನಾನವಾದ ನಂತರ ಅವರಿಗೆ ಸಹಜವಾಗಿ ಏಳಲು ಸಾಧ್ಯವಾಗಬೇಕು’, ಎಂದು ಪ.ಪೂ. ಡಾಕ್ಟರರು ಅವರಿಗೆ ಸ್ನಾನಗೃಹದಲ್ಲಿ ಕುಳಿತುಕೊಳ್ಳಲು ಚಿಕ್ಕ ‘ಸ್ಟೂಲ’ನ್ನು ಇಟ್ಟಿದ್ದರು.

ಈ. ಋತುಮಾನಕ್ಕನುಸಾರ ಅವರಿಗೆ ‘ಸ್ನಾನದ ನೀರು ಬಹಳ ಬಿಸಿಬೇಕೋ ಅಥವಾ ಉಗುರುಬೆಚ್ಚಗಿರಬೇಕು ?’, ಎಂಬುದನ್ನು ಕೇಳಿಕೊಂಡು ಅದರಂತೆ ಪ.ಪೂ. ಡಾಕ್ಟರರು ಅವರಿಗಾಗಿ ಸ್ನಾನದ ನೀರನ್ನು ತೆಗೆದಿಡುತ್ತಿದ್ದರು.

ಉ. ಸ್ನಾನವನ್ನು ಮಾಡುವಾಗ ‘ಅವರಿಗೆ ಕುಳಿತಿರುವ ಜಾಗದಿಂದ ಸಹಜವಾಗಿ ಮೈಮೇಲೆ ನೀರನ್ನು ಹಾಕಿಕೊಳ್ಳಲು ಬರಬೇಕು’, ಈ ರೀತಿ ಬಕೇಟನ್ನು ಅವರ ಹತ್ತಿರ ಇಡುತ್ತಿದ್ದರು.

ಊ. ಬಕೇಟನಿಂದ ನೀರನ್ನು ತೆಗೆಯುವಾಗ ದೊಡ್ಡ ಮಗ್ ಅನ್ನು ಇಟ್ಟರೆ ‘ಅದನ್ನು ಎತ್ತುವಾಗ ಪ.ಪೂ. ದಾದಾರಿಗೆ ತೊಂದರೆಯಾಗಬಹುದು’, ಎಂದು ವಿಚಾರ ಮಾಡಿ ‘ಅವರಿಗೆ ನೀರಿನಿಂದ ತುಂಬಿದ ಮಗ್ ಸಹಜವಾಗಿ ಎತ್ತಲು ಬರಬೇಕು ಮತ್ತು ಮೈಮೇಲೆ ನೀರು ಹಾಕಿಕೊಳ್ಳುವಾಗ ಅವರ ಕೈಗೆ ನೋವಾಗಬಾರದು’, ಎಂದು ಪ.ಪೂ. ಡಾಕ್ಟರರು ಸ್ನಾನಗೃಹದಲ್ಲಿ ಚಿಕ್ಕ ಮಗ್ ಇಟ್ಟಿದ್ದರು ಮತ್ತು ಇತರ ಸಾಧಕರಿಗಾಗಿ ದೊಡ್ಡ ಮಗ್ ಇಟ್ಟಿದ್ದರು.

ಎ. ಪ.ಪೂ. ದಾದಾರಿಗೆ ಮೈಗೆ ಹಚ್ಚುವ ಸಾಬೂನು ಸಹ ಕುಳಿತ ಜಾಗದಿಂದ ಸಹಜವಾಗಿ ತೆಗೆದುಕೊಳ್ಳಲು ಬರಬೇಕು, ಎಂದು ಹತ್ತಿರದ ಗೋಡೆಯ ಮೇಲೆ ಅಷ್ಟೇ ಎತ್ತರದಲ್ಲಿ ಸೋಪಕೇಸ್‌ಅನ್ನು ಅಳವಡಿಸಿದ್ದರು.

ಐ. ಪ.ಪೂ. ಡಾಕ್ಟರರು ಪ.ಪೂ. ದಾದಾರವರ ಮೈಯನ್ನು ಒರೆಸುವ ಬೈರಾಸನ್ನು ಗೋಡೆಯ ಮೇಲಿನ ಗೂಟಕ್ಕೆ ಸಿಕ್ಕಿಸಿಡುತ್ತಿದ್ದರು. ಆಗ ಅವರು ‘ಅದರ ಇನ್ನೊಂದು ತುದಿಯನ್ನು ಕುಳಿತ ಜಾಗದಿಂದಲೇ ಪ.ಪೂ. ದಾದಾರಿಗೆ ಸಹಜವಾಗಿ ಕೈಗೆಟಕುವಂತೆ ಸಿಕ್ಕಿಸಿಡುತ್ತಿದ್ದರು. ಇದರಿಂದ ಪ.ಪೂ. ದಾದಾರಿಗೆ ಅದನ್ನು ಸಹಜವಾಗಿ ಎಳೆದುಕೊಳ್ಳಲು ಆಗುತ್ತಿತ್ತು.

ಓ. ಪೂ. (ಸೌ.) ತಾಯಿ ಮತ್ತು ಪ.ಪೂ. ದಾದಾ ಇವರ ಸ್ನಾನವಾದ ನಂತರ ಪ.ಪೂ. ಡಾಕ್ಟರರು ಅವರ ಬಟ್ಟೆಗಳನ್ನು ಒಗೆಯಲು ಬಕೇಟ್‌ನಲ್ಲಿ ನೆನೆಸಿಡುತ್ತಿದ್ದರು.

ಔ. ಪೂ. (ಸೌ.) ತಾಯಿ ಅಥವಾ ಪ.ಪೂ. ದಾದಾ ಸ್ನಾನವನ್ನು ಮಾಡಲು ಹೋದ ನಂತರ ಅವರು ಸ್ನಾನವನ್ನು ಮಾಡಿ ಬರುವವರೆಗೆ ನಡುವಿನ ಸಮಯದಲ್ಲಿ ಪ.ಪೂ. ಡಾಕ್ಟರರು ಅವರ ಮಂಚದ ಮೇಲಿನ ಹಾಸಿಗೆಯನ್ನು ಸರಿಪಡಿಸುತ್ತಿದ್ದರು ಮತ್ತು ಮಂಚದ ಮೇಲಿನ ಇತರ ಸಾಹಿತ್ಯಗಳನ್ನು ವ್ಯವಸ್ಥಿತವಾಗಿ ಜೋಡಿಸಿಡುತ್ತಿದ್ದರು. ಅದೇ ಸಮಯದಲ್ಲಿ ಬೆಳಗ್ಗೆ ೭ ಗಂಟೆಗೆ ಸೇವೆಗೆ ಬರುವ ಸಾಧಕರಿಗಾಗಿ ಗ್ರಂಥಗಳ ಸೇವೆಯನ್ನು ತೆಗೆದಿಡುತ್ತಿದ್ದರು. ಸಾಧಕರಿಗಾಗಿ ಚಹಾದ ಪಾತ್ರೆ, ಶೀತಕಪಾಟಿನಲ್ಲಿ ಇಟ್ಟಿರುವ ಹಾಲು ಮತ್ತು ತಿಂಡಿಯನ್ನು ತೆಗೆದಿಡುತ್ತಿದ್ದರು. ಇದೆಲ್ಲ ಆದನಂತರ ಅವರು ತಮ್ಮ ತಯಾರಿಗಾಗಿ ಹೋಗುತ್ತಿದ್ದರು. ಈ ರೀತಿ ಪ.ಪೂ. ಡಾಕ್ಟರರ ಪ್ರತಿದಿನದ ಬೆಳಗಿನ ಸಮಯವು ತಂದೆ-ತಾಯಿಯರ ಸೇವೆಯನ್ನು ಮಾಡುವುದರಲ್ಲಿ ಮತ್ತು ಸಾಧಕರಿಗಾಗಿ ಸೇವೆಯನ್ನು ತೆಗೆದಿಡಲು ಹೋಗುತ್ತಿತ್ತು. ಅವರು ಈ ರೀತಿ ಅನೇಕ ವರ್ಷಗಳ ವರೆಗೆ ಬೇಸರಪಡದೇ ಮತ್ತು ಅದರಲ್ಲಿ ಒಂದು ದಿನವೂ ಬಿಡದೇ ನಿರಂತರವಾಗಿ ಮಾಡುತ್ತಿದ್ದರು.

೨. ತಂದೆ-ತಾಯಿಗೆ ಚಹಾ ಕೊಡುವಾಗ ‘ಅವರ ಮೈಮೇಲೆ ಚಹಾ ಬೀಳಬಾರದು’, ಎಂದು ಎಚ್ಚರ ವಹಿಸುವುದು

ಪ.ಪೂ. ಡಾಕ್ಟರರು ಪ.ಪೂ. ದಾದಾರಿಗೆ ಅಥವಾ ಪೂ. (ಸೌ.) ತಾಯಿಗೆ ಚಹಾ ಕೊಡುವಾಗ ‘ಬಸಿಯಲ್ಲಿನ ಕಪ್‌ನ ಕಿವಿಯನ್ನು (ಹೆಂಡಲ್) ಅವರಿಗೆ ಸಹಜವಾಗಿ ಹಿಡಿಯಲು ಬರಬೇಕು’, ಎಂದು ಕಪ್‌ನ ಕಿವಿಯನ್ನು ಸರಿಯಾದ ದಿಶೆಯಲ್ಲಿ ಇಡುತ್ತಿದ್ದರು. ವಯಸ್ಸಿಗನುಸಾರ ಅವರ ಕೈಗಳು ನಡುಗುತ್ತಿದ್ದವು. ಇಂತಹ ಸಮಯದಲ್ಲಿ ‘ಕಪ್‌ನಲ್ಲಿನ ಚಹಾ ಅವರ ಮೈಮೇಲೆ ಬೀಳಬಾರದು’, ಎಂದು ಕಪ್  ಪೂರ್ಣ ತುಂಬಿಸದೇ ಸ್ವಲ್ಪ ಕಡಿಮೆಯೇ ತುಂಬುತ್ತಿದ್ದರು ಮತ್ತು ಅವರಿಗೆ ‘ಇನ್ನು ಚಹಾ ಬೇಕಿದ್ದರೆ ಕೇಳಿ’, ಎಂದು ಹೇಳುತ್ತಿದ್ದರು.

೩. ಪ್ರತಿದಿನ ಬೆಳಗ್ಗೆ ತಂದೆ-ತಾಯಿಗೆ ಓದಲು ದಿನಪತ್ರಿಕೆಯನ್ನು ಕೊಡುವುದು ಮತ್ತು ಅವರು ಆ ಕುರಿತು ಹೇಳಿದ ಬದಲಾವಣೆಗಳ ಬಗ್ಗೆ ವಿಚಾರ ಮಾಡುವುದು

ಪ.ಪೂ. ದಾದಾ ಮತ್ತು ಪೂ. (ಸೌ.) ತಾಯಿಯ ಸ್ನಾನದ ನಂತರ ಪ.ಪೂ. ಡಾಕ್ಟರರು ಅವರಿಗೆ ಓದಲು ದಿನಪತ್ರಿಕೆಯನ್ನು ತಂದುಕೊಡುತ್ತಿದ್ದರು. ಸನಾತನ ಸಂಸ್ಥೆಯ ದೈನಿಕ ಮತ್ತು ಸಾಪ್ತಾಹಿಕ ‘ಸನಾತನ ಪ್ರಭಾತ’ ಪ್ರಾರಂಭವಾದ ನಂತರ ಪೂ. ತಾಯಿ ಅವುಗಳನ್ನೂ ಓದುತ್ತಿದ್ದರು ಮತ್ತು ಅದರಲ್ಲಿ ಏನಾದರೂ ಬದಲಾವಣೆ ಮಾಡುವುದಿದ್ದರೆ ಪ.ಪೂ. ಡಾಕ್ಟರರಿಗೆ ಹಾಗೆ ಹೇಳುತ್ತಿದ್ದರು ಮತ್ತು ಪ.ಪೂ. ಡಾಕ್ಟರರು ಸಹ ಅವರು ಹೇಳಿದಂತೆ ಮಾಡುತ್ತಿದ್ದರು.

೪. ತಾಯಿಗೆ ಮಲಬದ್ಧತೆಯ ತೊಂದರೆಯಾದಾಗ ಪ.ಪೂ. ಡಾಕ್ಟರರು ತಮ್ಮ ಕೈಯಿಂದ ಅವರ ಮಲವನ್ನು ಹೊರಗೆ ತೆಗೆಯುವುದು ಮತ್ತು ಆಗ ಅವರಿಗೆ ‘ಹೇಸಿಗೆ ಅನಿಸುವುದಾಗಲಿ ಅಥವಾ ಮಲದ ವಾಸನೆ ಬರುತ್ತದೆ’, ಎಂಬಂತಹ ಪ್ರತಿಕ್ರಿಯೆಯಾಗಲಿ ಇಲ್ಲದಿರುವುದು, ಕೇವಲ ‘ತಾಯಿಗೆ ತೊಂದರೆಯಾಗಬಾರದು’, ಇಷ್ಟೇ ವಿಚಾರ ಇರುವುದು.

ಕೆಲವೊಂದು ಸಲ ಪೂ. (ಸೌ.) ತಾಯಿಯವರಿಗೆ ಮಲಬದ್ಧತೆಯಿಂದ ೩-೪ ದಿನ ಮಲವಿಸರ್ಜನೆ ಆಗುತ್ತಿರಲಿಲ್ಲ. ಆ ಸಮಯದಲ್ಲಿ ಅವರಿಗೆ ತುಂಬಾ ತೊಂದರೆಯಾಗುತ್ತಿತ್ತು; ಆದುದರಿಂದ ಪ.ಪೂ. ಡಾಕ್ಟರರು ಅವರಿಗೆ ‘ಎನಿಮಾ’ ಕೊಡುತ್ತಿದ್ದರು. ನಂತರ ಅವರಿಗೆ ಮಲವಿಸರ್ಜನೆ ಆಗುತ್ತಿತ್ತು. ಬಹಳಷ್ಟು ಸಲ ಮಲ ಗಟ್ಟಿಯಾಗಿರುವುದರಿಂದ ಅದು ಹೊರಗೆ ಬೀಳುತ್ತಿರಲಿಲ್ಲ. ಇಂತಹ ಸಮಯದಲ್ಲಿ ಪ.ಪೂ. ಡಾಕ್ಟರರು ಸ್ವತಃ ಅದನ್ನು ಕೈಯಿಂದ ಹೊರಗೆ ತೆಗೆಯುತ್ತಿದ್ದರು. ಆ ಸಮಯದಲ್ಲಿ ಅವರ ಮುಖದ ಮೇಲೆ ‘ಹೊಲಸು ಅನಿಸುವುದಾಗಲಿ ಅಥವಾ ಮಲದ ವಾಸನೆ ಬರುತ್ತಿದೆ’, ಎಂಬಂತಹ ಯಾವುದೇ ಪ್ರತಿಕ್ರಿಯೆ ಇರುತ್ತಿರಲಿಲ್ಲ. ಆಗ ಅವರು ಕೇವಲ ‘ತಾಯಿಗೆ ತೊಂದರೆಯಾಗಬಾರದು’, ಇಷ್ಟೇ ವಿಚಾರ ಮಾಡುತ್ತಿದ್ದರು.

೫. ಪೂ. (ಸೌ.) ತಾಯಿಗೆ ಆಹಾರದ  ಬಗ್ಗೆ (ಆರೋಗ್ಯಕ್ಕಾಗಿ ಏನು ತಿನ್ನಬೇಕು ಏನು ತಿನ್ನಬಾರದು ಎಂದು) ತಿಳಿಸಿದರೂ ಅವರು ಕೇಳದಿದ್ದಾಗ ಸಾಕ್ಷೀಭಾವದಿಂದ ನೋಡುವುದು ಮತ್ತು ಅವರಿಗೆ ತೊಂದರೆಯಾದರೆ ಪುನಃ ಅಷ್ಟೇ ಪ್ರೀತಿಯಿಂದ ಔಷಧಿಯನ್ನು ಕೊಡುವುದು

ವಯಸ್ಸಾಗಿರುವುದರಿಂದ ಪೂ. (ಸೌ.) ತಾಯಿಯವರ ಆರೋಗ್ಯದಲ್ಲಿ ಹೆಚ್ಚು-ಕಡಿಮೆಯಾಗುತ್ತಿತ್ತು. ಸ್ವಲ್ಪ ಹೆಚ್ಚು ತಿಂದರೆ ಕೆಲವೊಮ್ಮೆ ಅವರಿಗೆ ತುಂಬಾ ತೊಂದರೆಯಾಗುತ್ತಿತ್ತು. ಇಂತಹ ಸಮಯದಲ್ಲಿ ಪ.ಪೂ. ಡಾಕ್ಟರರು ಅವರಿಗೆ “ಹೆಚ್ಚು ತಿನ್ನಬೇಡ, ತೊಂದರೆಯಾಗುತ್ತದೆ”, ಎಂದು ಹೇಳುತ್ತಿದ್ದರು; ಆದರೂ ಅವರು ತಿಂದರೆ, ಆಗ ಪ.ಪೂ. ಡಾಕ್ಟರರು ಅವರಿಗೆ “ತಿನ್ನು; ಆದರೆ ಅದರ ತೊಂದರೆಗಳನ್ನು ನೀನೇ ಭೋಗಿಸಬೇಕಾಗುವುದು”, ಎಂದು ಹೇಳುತ್ತಿದ್ದರು. ನಂತರ ತಾಯಿಗಾಗುವ ತೊಂದರೆಗಳ ಕಡೆಗೆ ಅವರು ಸಾಕ್ಷೀಭಾವದಿಂದ ನೋಡುತ್ತಿದ್ದರು. ಕೆಲವೊಮ್ಮೆ ಅವರಿಗೆ ಹೆಚ್ಚು ತೊಂದರೆಯಾಗತೊಡಗಿದಾಗ ಪ.ಪೂ. ಡಾಕ್ಟರರು ಅಷ್ಟೇ ಪ್ರೀತಿಯಿಂದ ಅವರಿಗೆ ಔಷಧಿಯನ್ನು ಕೊಡುತ್ತಿದ್ದರು. ‘ನಾನು ಹೇಳಿದರೂ ಪೂ. (ಸೌ.) ತಾಯಿ ಕೇಳಲಿಲ್ಲ’, ಎಂಬುದನ್ನು ಅವರು ಮರೆತುಬಿಡುತ್ತಿದ್ದರು. ಅದರಿಂದ ಒಂದು ರೀತಿಯಲ್ಲಿ ಅವರು ‘ಸತತವಾಗಿ ವರ್ತಮಾನ ಕಾಲದಲ್ಲಿ ಹೇಗೆ ಇರಬೇಕು ?’, ಎಂಬುದನ್ನು ಸಾಧಕರಿಗೆ ಕಲಿಸುತ್ತಿದ್ದರು.

೬. ಅನೇಕ ಸೇವೆಗಳಲ್ಲಿ ನಿರತರಾಗಿದ್ದರೂ ತಂದೆ-ತಾಯಿಯರ ಸೇವೆಯನ್ನೂ ಅಷ್ಟೇ ಜವಾಬ್ದಾರಿಯಿಂದ ನಿಭಾಯಿಸುವುದು.

ಅ. ಪ.ಪೂ. ಡಾಕ್ಟರರು ಅಧ್ಯಾತ್ಮಪ್ರಸಾರದ ಅನೇಕ ಸೇವೆಗಳು ಮತ್ತು ಚಿಕಿತ್ಸಾಲಯದ ಸೇವೆಗಳಲ್ಲಿ ತೊಡಗಿದ್ದರಿಂದ ಬಿಡುವಿಲ್ಲದಿದ್ದರೂ ಸತತವಾಗಿ ತಂದೆ-ತಾಯಿಯರ ಸೇವೆಯ ಧ್ಯಾಸವಿಡುವುದು : ಪ.ಪೂ. ಡಾಕ್ಟರರು ಸೇವಾಕೇಂದ್ರದಲ್ಲಿ ಸೇವೆಗಾಗಿ ಬರುವ ಸಾಧಕರಿಗಾಗಿ ಸೇವೆಗಳನ್ನು ಆಯೋಜಿಸುವುದು, ಅವರಿಂದ ಸೇವೆಯನ್ನು ಮಾಡಿಸಿಕೊಳ್ಳುವುದು, ಸ್ವತಃ ಗ್ರಂಥ ಲೇಖನದ ಸೇವೆಯನ್ನು ಮಾಡುವುದು, ಪ್ರಸಾರದಲ್ಲಿನ ಸಾಧಕರೊಂದಿಗೆ ಸಮನ್ವಯ ಇಟ್ಟುಕೊಳ್ಳುವುದು, ಅವರ ಅಡಚಣೆಗಳನ್ನು ಪರಿಹರಿಸುವುದು ಇತ್ಯಾದಿ ಸೇವೆಗಳು ಸತತವಾಗಿ ತೊಡಗಿದ್ದರಿಂದ ಬಿಡುವಿರಲಿಲ್ಲ. ಆದರೂ ಅವರು ಮರೆಯದೇ ಬೆಳಗ್ಗೆ ಸರಿಯಾಗಿ ೧೧ ಗಂಟೆಗೆ ತಂದೆ-ತಾಯಿಯವರಿಗೆ ಊಟವನ್ನು ಕೊಡುತ್ತಿದ್ದರು. ಅವರ ಚಿಕಿತ್ಸಾಲಯವು ಮಧ್ಯಾಹ್ನ ೩ ರಿಂದ ೭ ರ ಸಮಯದಲ್ಲಿ ನಡೆಯುತ್ತಿತ್ತು. ರೋಗಿಗಳ ತಪಾಸಣೆ ಮಾಡುತ್ತಿರುವಾಗಲೂ ಅವರು ಸರಿಯಾಗಿ ೪ ಗಂಟೆಗೆ ತಂದೆ-ತಾಯಿಗೆ ಚಹಾ ಕೊಡಲು ಹೋಗುತ್ತಿದ್ದರು. ಅವರಿಗೆ ಚಹಾ ಕೊಟ್ಟ ನಂತರ ಅವರು ಮುಂದಿನ ರೋಗಿಗಳ ತಪಾಸಣೆಯನ್ನು ಮಾಡುತ್ತಿದ್ದರು. ಕೆಲವೊಮ್ಮೆ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರೆ ಚಿಕಿತ್ಸಾಲಯದ ಕೆಲಸ ಮುಗಿಯಲು ರಾತ್ರಿ ೮ ಗಂಟೆ ಆಗುತ್ತಿತ್ತು. ಇಂತಹ ಸಮಯದಲ್ಲಿಯೂ ಅವರು ನಡುವೆ ಎದ್ದು ಹೋಗಿ ತಂದೆ-ತಾಯಿಗೆ ಊಟವನ್ನು ಕೊಟ್ಟು ಬರುತ್ತಿದ್ದರು.

೬ ಆ. ಸೇವೆಯಲ್ಲಿ ಮಗ್ನರಾಗಿದ್ದ ಕಾರಣ ‘ತಂದೆ-ತಾಯಿಯ ಸೇವೆ ಮರೆಯುವುದು ಅಥವಾ ಆಗಲಿಲ್ಲ, ಹೀಗೆ ಒಂದು ದಿನವೂ ಆಗದಿರುವುದು’ : ಸೇವೆಯಲ್ಲಿ ಇಷ್ಟೊಂದು ನಿರತರಾಗಿದ್ದರೂ ಪ.ಪೂ. ಡಾಕ್ಟರರು ‘ತಂದೆ-ತಾಯಿಯ ಸೇವೆಯನ್ನು ಮಾಡಲು ಮರೆತಂತಹ ಒಂದೇ ಒಂದು ದಿನವಿಲ್ಲ. ‘ಅವರಿಗೆ ಸಮಯಕ್ಕೆ ಸರಿಯಾಗಿ ಊಟವನ್ನು ಕೊಡಲು ಮರೆತು ಹೋಗಬಾರದು’, ಎಂಬುದಕ್ಕಾಗಿ ‘ಕಾಗದದ ಮೇಲೆ ಬರೆದಿಡುವುದು ಅಥವಾ ಗಡಿಯಾರದಲ್ಲಿ ಅಲಾರಾಮ್ ಹಚ್ಚಿಡುವುದು’, ಹೀಗೆ ಅವರು ಎಂದಿಗೂ ಮಾಡಲಿಲ್ಲ. ಚಿಕಿತ್ಸಾಲಯದಲ್ಲಿ ಸೇವೆಯನ್ನು ಮಾಡುತ್ತಿರುವಾಗಲೂ ಪ.ಪೂ. ಡಾಕ್ಟರರಿಗೆ ರೋಗಿಗಳು ಅಥವಾ ಅವರ ಸಂಬಂಧಿಕರರು ಹೇಳುತ್ತಿದ್ದ ಎಲ್ಲ ಅಂಶಗಳನ್ನು ಗಮನಕೊಟ್ಟು ಕೇಳಬೇಕಾಗುತ್ತಿತ್ತು, ಆದರೂ ಅವರ ತಂದೆ-ತಾಯಿಯವರ ಸೇವೆಯ ಸಮಯವನ್ನು ಎಂದಿಗೂ ಮರೆಯುತ್ತಿರಲಿಲ್ಲ.

– ಶ್ರೀ. ದಿನೇಶ ಶಿಂದೆ, ಸನಾತನ ಆಶ್ರಮ (ಆಧ್ಯಾತ್ಮಿಕ ಮಟ್ಟ ೬೨), ರಾಮನಾಥಿ, ಗೋವಾ. (೩೦.೮.೨೦೨೦)

(ಮುಂದುವರಿಯುವುದು)