ಪಂಢಾರಪುರಕ್ಕೆ ಆದಿ ಶಂಕರಾಚಾರ್ಯರು ‘ಮಹಾಯೋಗಪೀಠ’ ಎಂದು ಹೇಳುವುದರ ಕಾರಣ

ತೀರ್ಥಕ್ಷೇತ್ರವು ಒಂದು ಯೋಗಪೀಠವಾಗಿರುತ್ತದೆ ಅಥವಾ ಒಂದು ಶಕ್ತಿಪೀಠವಾಗಿರುತ್ತದೆ; ಆದರೆ ಆದಿ ಶಂಕರಾಚಾರ್ಯರು ಪಂಢರಾಪುರಕ್ಕೆ ಮಹಾಯೋಗಪೀಠ ಎಂದು ಹೇಳಿದ್ದಾರೆ. ತೀರ್ಥಕ್ಷೇತ್ರಕ್ಕೆ ಭಕ್ತರು ದೇವರ ಅಥವಾ ಶಕ್ತಿಪೀಠವಾಗಿದ್ದರೆ ದೇವಿಯ ದರ್ಶನಕ್ಕಾಗಿ ಹೋಗುತ್ತಾರೆ. ಆದರೆ ಪಂಢರಾಪುರದಲ್ಲಿ ಪಾಂಡುರಂಗನು ಭಕ್ತ ಪುಂಡಲಿಕನ ದಾರಿಯನ್ನು ಕಾಯುತ್ತಾ ನಿಂತಿದ್ದಾನೆ. ಪರಮೇಶ್ವರನು ಭಕ್ತನ ದಾರಿಯನ್ನು ಕಾಯುತ್ತಿದ್ದಾನೆ, ಆದುದರಿಂದ ಇದು ಮಹಾಯೋಗಪೀಠವಾಗಿದೆ. ಪಂಢರಾಪುರದಲ್ಲಿನ ಶ್ರೀ ವಿಠ್ಠಲನ ಮೂರ್ತಿಯಲ್ಲಿ ಸಗುಣ ಮತ್ತು ನಿರ್ಗುಣ ಈ ಎರಡೂ ರೂಪಗಳ ಉತ್ಕೃಷ್ಟ ಸಂಯೋಗವಿದೆ.

– ಶ್ರೀ. ಮುಕುಂದ ಭಗವಾನ ಪೂಜಾರಿ, ಪಂಢರಾಪುರ (ಶ್ರೀ ವಿಠ್ಠಲನ ೭ ಸೇವಕರಲ್ಲಿ ಶ್ರೀ ವಿಠ್ಠಲನ ಪೂಜೆಯನ್ನು ಮಾಡುವ ಓರ್ವ ಸೇವಕರು)