ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಸುವರ್ಣಾವಕಾಶ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ವೈಜ್ಞಾನಿಕ ಭಾಷೆಯಲ್ಲಿ ಆಧ್ಯಾತ್ಮಿಕ ಸಂಶೋಧನೆ ಮಾಡುವ ಏಕಮೇವಾದ್ವಿತೀಯ ಮತ್ತು ಐತಿಹಾಸಿಕ ಕಾರ್ಯವನ್ನು ಮಾಡುತ್ತಿದೆ. ಈ ವಿಶ್ವವಿದ್ಯಾಲಯದ ಕೆಲವು ಸಾಧಕರು ಸಂತರ ಮಾರ್ಗದರ್ಶನದಲ್ಲಿ ವಿವಿಧ ಕಡೆಗಳಲ್ಲಿ ಪ್ರಯಾಣ ಮಾಡಿ ಭಾರತೀಯ ಸಂಸ್ಕೃತಿಯ ಅಮೂಲ್ಯವಾದ ಕೊಡುಗೆಗಳನ್ನು ಸಂಗ್ರಹಿಸುತ್ತಿದ್ದಾರೆ. ಅದೇ ರೀತಿ ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿನ ವೈಶಿಷ್ಟ್ಯಪೂರ್ಣ ಘಟನೆಗಳನ್ನೂ ಸಹ ಛಾಯಾಚಿತ್ರೀಕರಣ ಮಾಡಲಾಗುತ್ತಿದೆ. ಈ ಛಾಯಾಚಿತ್ರೀಕರಣವನ್ನು ವಿವಿಧ ಉಪಕರಣಗಳ ಸಹಾಯದಿಂದ ಮಾಡಲಾಗುತ್ತಿರುವುದರಿಂದ ಮುಂದಿನ ಅನೇಕ ಪೀಳಿಗೆಗಳಿಗೆ ಈ ಸಂಗ್ರಹವು ಲಭ್ಯವಾಗಲಿದೆ.
ಇದುವರೆಗೆ ಈ ಸಂಶೋಧನೆಯ ಕಾರ್ಯಕ್ಕಾಗಿ ಹಿತಚಿಂತಕರು ಲಭ್ಯ ಮಾಡಿಕೊಟ್ಟ ಉಪಕರಣಗಳನ್ನು ಬಳಸಲಾಯಿತು. ಆದುದರಿಂದ ಭಾರೀ ಮಟ್ಟದಲ್ಲಿ ಸಂಗ್ರಹ ಮಾಡಲು ಸಾಧ್ಯವಾಯಿತು. ಇನ್ನು ಮುಂದೆಯೂ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಚಿತ್ರೀಕರಣ ಮತ್ತು ಛಾಯಾಚಿತ್ರಗಳನ್ನು ತೆಗೆದರೆ ಅದು ಮುಂದಿನ ಕಾಲಕ್ಕೆ ಹೆಚ್ಚು ಉಪಯುಕ್ತವಾಗಬಲ್ಲದು ! ಆ ದೃಷ್ಟಿಯಿಂದ ಮುಂದಿನ ಹೊಸ ಉಪಕರಣಗಳ ಅವಶ್ಯಕತೆ ಇದೆ.

ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಈ ಕೋಷ್ಟಕದಲ್ಲಿ ಕೊಟ್ಟಂತೆ ಉಪಕರಣಗಳನ್ನು ಅರ್ಪಣೆಯ ಸ್ವರೂಪದಲ್ಲಿ ಕೊಡಬಯಸುವರೋ ಅಥವಾ ಅವುಗಳನ್ನು ಖರೀದಿಸಲು ಹಣರೂಪದಲ್ಲಿ ಯಥಾಶಕ್ತಿ ಸಹಾಯ ಮಾಡ ಬಯಸುವರೋ, ಅವರು ಮುಂದಿನ ಸಂಖ್ಯೆಗೆ ಸಂಪರ್ಕಿಸಬೇಕು.
ಹೆಸರು ಮತ್ತು ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ – 7058885610
ವಿ-ಅಂಚೆ ವಿಳಾಸ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ 24/B, ರಾಮನಾಥಿ, ಬಾಂದೀವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧
ಇದಕ್ಕಾಗಿ ಡಿಡಿ ಕಳಿಸುವುದಾದರೆ ಅದನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ಈ ಹೆಸರಿನಲ್ಲಿ ತೆಗೆಯಬೇಕು.
– (ಪೂ.) ಶ್ರೀ. ಪೃಥ್ವಿರಾಜ ಹಜಾರೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ. (೩.೮.೨೦೨೧)
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
‘ವಾಟ್ಸಾಪ್’ ನಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸುವ ಮೂಲಕ ಮೊಬೈಲ್ ನಲ್ಲಿರುವ ಮಾಹಿತಿಯನ್ನು ಕದಿಯುವುದರಿಂದ ನಾಗರಿಕರು ಎಚ್ಚರದಿಂದಿರಬೇಕು!
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !