ಹಿಂದೂ ಮತ್ತು ಹಿಂದುತ್ವ ಒಂದೇ ಇದ್ದು ಮುಸ್ಲಿಂಪ್ರೇಮಿ ಕಾಂಗ್ರೆಸ್‌ನಿಂದ ಎರಡಕ್ಕೂ ವಿರೋಧ ! – ಹಿಂದೂ ಜನಜಾಗೃತಿ ಸಮಿತಿ

ಶ್ರೀ. ರಮೇಶ ಶಿಂದೆ

ಭಾರತ ಮತ್ತು ಭಾರತೀಯತೆ, ಮಾತೆ ಮತ್ತು ಮಾತೃತ್ವದ ಇವುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಹಾಗೆಯೇ ಹಿಂದೂ ಮತ್ತು ಹಿಂದುತ್ವದ ನಡುವೆ ಯಾವುದೇ ಭೇದ ಮಾಡಲು ಬರುವುದೇ ಇಲ್ಲ. ಆದ್ದರಿಂದ ರಾಹುಲ ಗಾಂಧಿ ಮತ್ತು ಸಲ್ಮಾನ ಖುರ್ಷಿದ್ ಅವರು ‘ಹಿಂದುಯಿಸಮ್ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವಿದೆ ಎಂದು ಎಷ್ಟೇ ಸ್ಪಷ್ಟೀಕರಣ ನೀಡಿದರೂ ಹಿಂದೂಗಳು ಅದಕ್ಕೆ ಮರುಳಾಗುವುದಿಲ್ಲ. ಕಾಂಗ್ರೆಸ್ ನಾಯಕರಿಗೆ ಹಿಂದೂ ಧರ್ಮದ ಮೇಲೆ ನಿಜವಾದ ಪ್ರೀತಿ ಇದ್ದರೆ, ಅದು ‘ಭಗವಾನ ಶ್ರೀರಾಮ ಮತ್ತು ಶ್ರೀಕೃಷ್ಣ ಕಾಲ್ಪನಿಕವಾಗಿವೆ, ‘ಕೇಸರಿ ಭಯೋತ್ಪಾದನೆಯಿಂದ ದೇಶಕ್ಕೆ ಅಪಾಯವಿದೆ, ಎಂದು ಹೇಳಿ ಹಿಂದೂ ಧರ್ಮವನ್ನು ಅವಮಾನಿಸುತ್ತಿರಲಿಲ್ಲ ! ಅದೇ ರೀತಿ ಕಾಶ್ಮೀರ ಮತ್ತು ಪಾಕಿಸ್ತಾನ-ಬಾಂಗ್ಲಾದೇಶಗಳಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳ ವಿರುದ್ಧವೂ ಅದು ಧ್ವನಿ ಎತ್ತುತ್ತಿತ್ತು; ಆದರೆ, ಇದ್ಯಾವುದನ್ನೂ ಮಾಡದೇ ಇದೀಗ ಚುನಾವಣೆಯ ಕಾರಣದಿಂದ ಹಿಂದೂ ಮತಗಳ ಮೇಲೆ ಕಣ್ಣಿಟ್ಟು ದೇವಸ್ಥಾನ-ಪ್ರವಾಸವನ್ನು ಆರಂಭಿಸಿದೆ. ಅದೇ ಕಾಂಗ್ರೆಸ್ಸಿನ ನಾಯಕರು ಹಿಂದೂಗಳನ್ನು ‘ಬೊಕೊ-ಹರಾಮ್ ಮತ್ತು ‘ಐಸಿಸ್ನ ಉಗ್ರರೊಂದಿಗೆ ಹೋಲಿಸಿ ಅವಮಾನಿಸುತ್ತಿದ್ದಾರೆ. ಇದಕ್ಕೆ ತೇಪೆಹಚ್ಚಲು ಹಿಂದುತ್ವ ಮತ್ತು ‘ಹಿಂದೂಯಿಸಮ್ ನಡುವೆ ವ್ಯತ್ಯಾಸವಿದೆ ಎನ್ನುತ್ತಿದ್ದಾರೆ. ಇದಕ್ಕೆ ಹಿಂದೂ ಸಮಾಜವು ಮರುಳಾಗುವುದಿಲ್ಲ, ಎಂಬುದನ್ನು ಕಾಂಗ್ರೆಸ್ ನಾಯಕರು ನೆನಪಿನಲ್ಲಿಡಬೇಕು. ಅವರಿಗೆ ನಿಜವಾಗಿಯೂ ಹಿಂದೂ ಧರ್ಮದ ಮೇಲೆ ಪ್ರೀತಿ ಇದ್ದರೆ, ಸಲ್ಮಾನ್ ಖುರ್ಷಿದ್ ಇವರು ತಮ್ಮ ಪುಸ್ತಕವನ್ನು ಹಿಂಪಡೆಯಲು ಮತ್ತು ಹಿಂದೂ ಸಮಾಜದ ಬಳಿ ಕ್ಷಮೆ ಕೇಳಲು ಹೇಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.