ನಿಯತಕಾಲಿಕೆಯ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ ! |
‘ಸಾಧಕರಲ್ಲಿನ ಸ್ವಭಾವದೋಷಗಳು ಮತ್ತು ಅಹಂ (ನಾನು ಎಂಬ ಅರಿವು) ಇವುಗಳಿಂದ ಸೇವೆಯಲ್ಲಿ ಅವರಿಂದ ವ್ಯಾಕರಣದ ಮತ್ತು ಸಂಕಲನದಲ್ಲಿ ಸಣ್ಣಪುಟ್ಟ ತಪ್ಪುಗಳಾಗುತ್ತವೆ. ಆದುದರಿಂದ ಸಾಧಕರ ಸಾಧನೆಯು ಖರ್ಚಾಗುತ್ತದೆ. ಸೇವೆಯಲ್ಲಾಗುವ ತಪ್ಪುಗಳ ಅಧ್ಯಯನ ಮಾಡುವುದು, ಆದ ತಪ್ಪುಗಳು ಮರುಕಳಿಸಬಾರದೆಂದು ಉಪಾಯಯೋಜನೆಯನ್ನು ಮಾಡುವುದು, ತಪ್ಪುಗಳಿಗೆ ಯೋಗ್ಯ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದು (ತಪ್ಪುಗಳಿಂದ ಸಾಧಕರ ಸಾಧನೆಯು ಖರ್ಚಾಗುತ್ತದೆ; ಯೋಗ್ಯ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದರಿಂದ ತಪ್ಪುಗಳ ಸ್ವಲ್ಪ ಪ್ರಮಾಣದಲ್ಲಿಯಾದರೂ ಪರಿಹಾರವಾಗುತ್ತದೆ ಮತ್ತು ಸಾಧಕರ ಸಾಧನೆಯ ಉಳಿತಾಯವಾಗುತ್ತದೆ. ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಯಾವಾಗಲೂ ಯೋಗ್ಯ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಲು ಹೇಳುತ್ತಾರೆ.) ಇತ್ಯಾದಿ ವಿಷಯಗಳ ಸಂಸ್ಕಾರಗಳನ್ನು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಲ್ಲಿ ಮೂಡಿಸಿದ್ದಾರೆ. ೨೦.೫.೨೦೨೧ ರಿಂದ ಪರಾತ್ಪರ ಗುರು ಡಾಕ್ಟರರು ದೈನಿಕದಲ್ಲಿನ ತಪ್ಪುಗಳನ್ನು ಗಮನಕ್ಕೆ ತಂದುಕೊಡಲು ಪ್ರಾರಂಭಿಸಿದರು. ಅದರ ನಂತರ ದೈನಿಕಕ್ಕೆ ಸಂಬಂಧಿತ ಸೇವೆಯನ್ನು ಮಾಡುವ ಸಾಧಕರು ತಮ್ಮಿಂದಾಗುವ ತಪ್ಪುಗಳನ್ನು ಆಳವಾಗಿ ಚಿಂತನೆ ಮಾಡಿ ‘ಸಾಧನೆಯಲ್ಲಿ ನಾನು ಎಲ್ಲಿ ಕಡಿಮೆ ಬೀಳುತ್ತೇನೆ ?’, ಎಂಬುದನ್ನು ಗಮನದಲ್ಲಿರಿಸಿ ಅದಕ್ಕೆ ಉಪಾಯಯೋಜನೆಯನ್ನು ತೆಗೆದು ಗಾಂಭೀರ್ಯದಿಂದ ಪ್ರಯತ್ನಿಸಲು ಆರಂಭಿಸಿದರು. ಆದುದರಿಂದ ಕೆಲವು ತಿಂಗಳಲ್ಲಿಯೇ ಅವರಿಂದಾಗುವ ತಪ್ಪುಗಳ ಪ್ರಮಾಣವು ತುಂಬಾ ಕಡಿಮೆಯಾದವು. ದೈನಿಕ ‘ಸನಾತನ ಪ್ರಭಾತದಲ್ಲಿ ಸಾತ್ತ್ವಿಕತೆಯ ಮೇಲೆ ಯಾವ ಪರಿಣಾಮವಾಯಿತು ?’, ಎಂಬುದರ ವೈಜ್ಞಾನಿಕ ಅಧ್ಯಯನಕ್ಕಾಗಿ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವರ ಮತ್ತು ನಿಷ್ಕರ್ಷವನ್ನು ಮುಂದೆ ಕೊಡಲಾಗಿದೆ.
೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವರ
ಈ ಪರೀಕ್ಷಣೆಯಲ್ಲಿ ದೈನಿಕ ‘ಸನಾತನ ಪ್ರಭಾತ’ದ ಮೂರು ಸಂಚಿಕೆಗಳನ್ನು ‘ಯು.ಎ.ಎಸ್.’ ಉಪಕರಣದ ಮೂಲಕ ನಿರೀಕ್ಷಣೆಯನ್ನು ಮಾಡಲಾಯಿತು.
ಅ. ಕಡಿಮೆ ತಪ್ಪುಗಳಿರುವ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆ : ಜೂನ್ ೨೦೨೧ ರ ಎರಡನೇ ವಾರದಿಂದ ದೈನಿಕಕ್ಕೆ ಸಂಬಂಧಿತ ಸೇವೆಯನ್ನು ಮಾಡುವ ಸಾಧಕರು ತಪ್ಪುಗಳಾಗಬಾರದೆಂದು ಪ್ರಯತ್ನಿಸಿದರು. ಇದು ೧೬.೬.೨೦೨೧ ಈ ದಿನದ ಸಂಚಿಕೆ ಇದೆ. ಇದರಲ್ಲಿ ಆ ತಿಂಗಳಿನಲ್ಲಿನ ಇತರ ದಿನಗಳ ತುಲನೆಯಲ್ಲಿ ಪರಾತ್ಪರ ಗುರು ಡಾಕ್ಟರರು ಕಡಿಮೆ ತಪ್ಪುಗಳಿವೆ ಎಂದು ತಿಳಿಸಿದ್ದರು.
ಆ. ತಪ್ಪುಗಳು ಇಲ್ಲದಿರುವ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆ : ಅಕ್ಟೋಬರ್ ೨೦೨೧ ರಿಂದ ದೈನಿಕದಲ್ಲಿನ ತಪ್ಪುಗಳಾಗುವ ಪ್ರಮಾಣವು ಕಡಿಮೆಯಾಗುತ್ತ ಹೋಯಿತು. ಇದು ೨.೧೦. ೨೦೨೧ ಈ ದಿನದ ಸಂಚಿಕೆಯಾಗಿದೆ. ಇದರಲ್ಲಿ ಪರಾತ್ಪರ ಗುರು ಡಾಕ್ಟರರು ಒಂದೇ ಒಂದು ತಪ್ಪನ್ನು ಹೇಳಲಿಲ್ಲ.
೨. ಕಡಿಮೆ ತಪ್ಪುಗಳಿರುವ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಯಲ್ಲಿ ‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆ ಕಂಡುಬರುವುದು; ಆದರೆ ತಪ್ಪುಗಳು ಇಲ್ಲದಿರುವ ದೈನಿಕದಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇಲ್ಲದೇ ಅತ್ಯಧಿಕ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇರುವುದು
ಕಡಿಮೆ ತಪ್ಪುಗಳಿರುವ ದೈನಿಕ ‘ಸನಾತನ ಪ್ರಭಾತದ ಸಂಚಿಕೆಯಲ್ಲಿ ‘ಇನ್ಫ್ರಾರೆಡ್ ಈ ನಕಾರಾತ್ಮಕ ಊರ್ಜೆ ಮತ್ತು ಸಕಾರಾತ್ಮಕ ಊರ್ಜೆ ಕಂಡುಬಂದಿತು. ತಪ್ಪುಗಳು ಇಲ್ಲದಿರುವ ದೈನಿಕದಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇಲ್ಲದೇ ಅತ್ಯಧಿಕ ಸಕಾರಾತ್ಮಕ ಊರ್ಜೆ ಕಂಡು ಬಂದಿತು. ಇದು ಮುಂದೆ ಕೊಟ್ಟಿರುವ ಪಟ್ಟಿಯಿಂದ ಗಮನಕ್ಕೆ ಬರುತ್ತದೆ. (ಕೆಳಗೆ ನೀಡಿದ ಕೋಷ್ಟಕದಲ್ಲಿ ಅತ್ಯಧಿಕ ತಪ್ಪುಗಳಿರುವ ದೈನಿಕ ‘ಸನಾತನ ಪ್ರಭಾತದ ಸಂಚಿಕೆಯ ನಿರೀಕ್ಷಣೆಯನ್ನೂ ಕೊಟ್ಟಿದೆ.)
೩. ನಿಷ್ಕರ್ಷ
ದೈನಿಕ ‘ಸನಾತನ ಪ್ರಭಾತ’ದ ೨೪.೫.೨೦೨೧ ಈ ದಿನದ ಸಂಚಿಕೆಯಲ್ಲಿ ಅತ್ಯಧಿಕ ತಪ್ಪುಗಳಿದ್ದವು. ಈ ಸಂಚಿಕೆಯಲ್ಲಿ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆ ೮.೭೨ ಮೀಟರ್ ಮತ್ತು ಸಕಾರಾತ್ಮಕ ಊರ್ಜೆ ೬.೦೬ ಮೀಟರ್ ನಷ್ಟಿತ್ತು. ಅತ್ಯಧಿಕ ತಪ್ಪುಗಳಿರುವ ಸಂಚಿಕೆಗಿಂತ ಕಡಿಮೆ ತಪ್ಪುಗಳಿರುವ ದೈನಿಕ ‘ಸನಾತನ ಪ್ರಭಾತ’ದ (೧೬.೬.೨೦೨೧ ಈ ದಿನದ) ಸಂಚಿಕೆಯಲ್ಲಿ ನಕಾರಾತ್ಮಕ ಊರ್ಜೆಯ ಪ್ರಮಾಣವು ಕಡಿಮೆಯಾಗಿದ್ದು ಅದರಲ್ಲಿನ ಸಕಾರಾತ್ಮಕ ಊರ್ಜೆ ಸುಮಾರು ೮ ಮೀಟರ್ ಗಿಂತ ಹೆಚ್ಚಾಗಿದೆ.
ಕಡಿಮೆ ತಪ್ಪುಗಳಿರುವ ಸಂಚಿಕೆಗಿಂತ ತಪ್ಪುಗಳು ಇಲ್ಲದಿರುವ (೨.೧೦.೨೦೨೧) ಸಂಚಿಕೆಯಲ್ಲಿನ ಸಕಾರಾತ್ಮಕ ಊರ್ಜೆ ೨೬.೮೦ ಮೀಟರ್ ಗಿಂತ ಹೆಚ್ಚು ಇದೆ. ಇದರಿಂದ ‘ಸಾಧಕರು ತಮ್ಮಿಂದಾಗುವ ತಪ್ಪುಗಳ ಪ್ರಮಾಣವನ್ನು ಕಡಿಮೆ ಮಾಡಲು ತಳಮಳದಿಂದ ಮಾಡಿದ ಪ್ರಯತ್ನಗಳಿಂದ ದೈನಿಕ ‘ಸನಾತನ ಪ್ರಭಾತ’ದ ಸಾತ್ತ್ವಿಕತೆಯಲ್ಲಿ ಎಷ್ಟೊಂದು ಸಕಾರಾತ್ಮಕ ಪರಿಣಾಮವಾಯಿತು’, ಎಂಬುದು ಗಮನಕ್ಕೆ ಬರುತ್ತದೆ. ಒಟ್ಟಿನಲ್ಲಿ ‘ಯಾವುದೇ ಸೇವೆಯನ್ನು ತಪ್ಪುರಹಿತ ಮತ್ತು ಪರಿಪೂರ್ಣ ಮಾಡಿದರೆ, ಅದರಿಂದ ಸಾಧಕರ ಸಾಧನೆಯು ವೃದ್ಧಿಂಗತವಾಗುತ್ತದೆ’, ಇದೂ ಗಮನಕ್ಕೆ ಬಂದಿತು.
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೯.೧೦.೨೦೨೧)
ವಿ-ಅಂಚೆ ವಿಳಾಸ : [email protected]