ಸನಾತನ ಸಂಸ್ಥೆಯ ವತಿಯಿಂದ ಭಾರತದಾದ್ಯಂತ ನಡೆಸಲಾದ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ನಿಮಿತ್ತ…
‘ಗುರುಕೃಪೆಯಿಂದ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ (ಸನಾತನದ ೭೫ ನೇ ಸಮಷ್ಟಿ ಸಂತರು) ಇವರ ಮಾರ್ಗದರ್ಶಕ್ಕನುಸಾರ ಕರ್ನಾಟಕ ರಾಜ್ಯದಲ್ಲಿ ೧.೯.೨೦೨೧ ರಿಂದ ೩೧.೧೦.೨೦೨೧ ಈ ಕಾಲಾವಧಿಯಲ್ಲಿ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ವನ್ನು ಹಮ್ಮಿಕೊಳ್ಳಲಾಯಿತು. ಹಿಂದಿನ ಲೇಖನದಲ್ಲಿ ಗ್ರಂಥ ಅಭಿಯಾನದ ಪ್ರಸಾರದ ಸಂದರ್ಭದಲ್ಲಿ ಪೂ. ರಮಾನಂದ ಅಣ್ಣನವರು ತೆಗೆದುಕೊಳ್ಳುತ್ತಿದ್ದ ಭಾವಪ್ರಯೋಗದ ಮೂಲಕ ಸಾಧಕರಿಗೆ ಹೇಗೆ ಪ್ರೋತ್ಸಾಹ ಸಿಕ್ಕಿತು ಎಂಬುದನ್ನು ನೋಡಿದೆವು. ಈ ವಾರದ ಲೇಖನದಲ್ಲಿ ಗ್ರಂಥ ಅಭಿಯಾನದ ಪ್ರಸಾರದ ಸಂದರ್ಭದಲ್ಲಿ ಪೂ. ರಮಾನಂದ ಅಣ್ಣನವರು ನೀಡುತ್ತಿದ್ದ ಧ್ಯೇಯದಿಂದ ಸಾಧಕರಿಗೆ ಆದ ಲಾಭ ಹಾಗೂ ಸೇವೆಯ ಫಲಶೃತಿ ಹೆಚ್ಚಾದ ಬಗ್ಗೆ ತಿಳಿದುಕೊಳ್ಳೋಣ.
(ಭಾಗ – ೬)
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/53304.html |
೩ ಇ. ಸುನಿಯೋಜನೆ
ನಮ್ಮಲ್ಲಿ ಕೆಲವರು ನೌಕರಿ ಮಾಡುತ್ತಾರೆ, ಕೆಲವರು ವ್ಯವಸಾಯ ಮಾಡುತ್ತಾರೆ, ಕೆಲವರು ಮನೆಯಲ್ಲಿರುತ್ತಾರೆ, ಕೆಲವರು ಪೂರ್ಣವೇಳೆ ಸಾಧನೆ ಮಾಡುತ್ತಾರೆ. ಹೀಗೆ ನಮ್ಮ ವೈಯಕ್ತಿಕ, ಮನೆ, ನೌಕರಿ, ವ್ಯವಸಾಯ, ವ್ಯಷ್ಟಿ ಮತ್ತು ಸಮಷ್ಟಿ ಇವುಗಳಲ್ಲಿ ಎಲ್ಲವನ್ನೂ ಒಳ್ಳೆಯ ರೀತಿಯಲ್ಲಿ ಸಮಯದ ನಿಯೋಜನೆ ಮಾಡಿ ಮಾಡಿದರೆ ಫಲಶೃತಿ ಚೆನ್ನಾಗಿ ಆಗುತ್ತದೆ.
೩ ಇ ೧. ಸುನಿಯೋಜನೆ ಮಾಡುವುದರಲ್ಲಿ ನಾವು ಹಿಂದೆ ಉಳಿಯುವುದರ ಕಾರಣವೇನು ? : ನಮ್ಮಲ್ಲಿರುವ ದೋಷ ಮತ್ತು ಅಹಂಗಳಿಂದಾಗಿ ಸಮಯದ ಮಹತ್ವ ಕಡಿಮೆಯಿರುತ್ತದೆ. ಅತೀ ಆತ್ಮವಿಶ್ವಾಸವಿರುತ್ತದೆ. ಆಲಸ್ಯ, ಮುಂದೂಡುವಿಕೆ, ನನಗೆ ಎಲ್ಲ ತಿಳಿಯುತ್ತದೆ ಎಂದು ವಿಚಾರ ಮಾಡುವುದು, ಇತರರ ಮೇಲೆ ಅವಲಂಬಿಸಿರುವುದು, ಕೇಳುವವೃತ್ತಿಯ ಅಭಾವ, ಚಿಂತನೆಯ ಅಭಾವ, ಗಾಂಭೀರ್ಯದ ಅಭಾವ, ಸ್ವೀಕರಿಸುವ ವೃತ್ತಿ ಕಡಿಮೆಯಿರುವುದು ಇತ್ಯಾದಿ ದೋಷ ಮತ್ತು ಅಹಂಗಳಿಂದಾಗಿ ನಿಯೋಜನೆ ಯೋಗ್ಯ ರೀತಿಯಲ್ಲಿ ಆಗುವುದಿಲ್ಲ. ಆದ್ದರಿಂದ ಯಾವ ಕೃತಿಯನ್ನು ಪ್ರಾಧಾನ್ಯತೆಯಿಂದ ಮಾಡಬೇಕೆಂಬುದನ್ನು ಮರೆಯುತ್ತೇವೆ ಹಾಗೂ ಅದರಿಂದ ಒತ್ತಡ ನಿರ್ಮಾಣವಾಗುತ್ತದೆ. ಇದರಿಂದ ತನ್ನ ವ್ಯಷ್ಟಿ ಸಾಧನೆ ಹಾಗೂ ಇತರರ ಮೇಲೆಯೂ ಪರಿಣಾಮವಾಗುತ್ತದೆ.
೩ ಇ ೨. ಸಮಯದ ಮಹತ್ವ : ಪೃಥ್ವಿಯ ಮೇಲೆ ಎಲ್ಲವೂ ಸಿಗಬಹುದು; ಆದರೆ ಕಳೆದು ಹೋದ ಸಮಯ ಎಂದಿಗೂ ಪುನಃ ಸಿಗುವುದಿಲ್ಲ. ಆದ್ದರಿಂದ ಪ್ರತಿದಿನ ನಾನು ಎಲ್ಲೆಲ್ಲಿ ನಿಯೋಜನೆಯನ್ನು ಸರಿಯಾಗಿ ಮಾಡುವುದಿಲ್ಲ, ಎಲ್ಲಿ ತಪ್ಪುಗಳಾಗುತ್ತವೆ, ಅವೆಲ್ಲ ತಪ್ಪುಗಳು ಯಾವ ದೋಷ ಮತ್ತು ಅಹಂನಿಂದಾಗಿ ಆಗುತ್ತವೆ, ಈ ತಪ್ಪಿನಿಂದಾಗಿ ಏನು ಪರಿಣಾಮವಾಯಿತು, ಇದರಿಂದ ನನ್ನ ಸಾಧನೆ ಮತ್ತು ಗುರುಕಾರ್ಯದ ಮೇಲೆ ಏನು ಪರಿಣಾಮವಾಗುತ್ತಿದೆ, ಎಂದು ಚಿಂತನೆ ಮಾಡಿ ಅವುಗಳನ್ನು ಬರೆದುಕೊಂಡು ಯೋಗ್ಯವಾದ ನಿಯೋಜನೆಯನ್ನು ಮಾಡಲು ಪ್ರಯತ್ನಿಸಬೇಕು.
೩ ಇ ೩. ಆಯೋಜನೆ ಹೇಗೆ ಮಾಡಬೇಕು ? : ನಿಯೋಜನೆ ಮಾಡುವಾಗ ವೈಯಕ್ತಿಕ ಕೃತಿಗಳ ನಿಯೋಜನೆಯನ್ನು ಅಂದರೆ ಬೆಳಿಗ್ಗೆ ಎಷ್ಟು ಗಂಟೆಗೆ ಏಳುವುದು, ಸ್ನಾನ ಮಾಡುವುದು, ತಿಂಡಿ ತಿನ್ನುವುದು, ಬಟ್ಟೆ ತೊಳೆಯುವುದು ಇತ್ಯಾದಿ ಪ್ರತಿಯೊಂದು ಕೃತಿಯ ನಿಯೋಜನೆಯನ್ನು ಮಾಡಲಿಕ್ಕಿದೆ. ಅದೇ ರೀತಿ ವ್ಯಷ್ಟಿ ಸಾಧನೆಗೆ ಸಂಬಂಧಿಸಿದ ಉಪಾಯ, ನಾಮಜಪ, ಸ್ವಭಾವದೋಷಗಳ ಪಟ್ಟಿ ಬರೆಯುವುದು, ಸ್ವಯಂಸೂಚನೆ ಕೊಡುವುದು ಇತ್ಯಾದಿ ಕೃತಿಗಳನ್ನು ದಿನವಿಡೀ ಎಲ್ಲೆಲ್ಲಿ ಮಾಡಬೇಕೆಂದು ನಿಯೋಜನೆ ಮಾಡಬೇಕು.
೩ ಇ ೪. ಮನೆಯ ಕೆಲಸಗಳು ಮತ್ತು ನೌಕರಿಯ ಸಮಯದ ನಿಯೋಜನೆ ಮಾಡುವುದು : ಮನೆಗೆಲಸದ ವಿಷಯದಲ್ಲಿ ಮನೆಯ ಕೆಲಸ ಯಾವುದು, ಅದರಲ್ಲಿ ಯಾವುದನ್ನು ಪ್ರಾಧಾನ್ಯತೆಯಿಂದ ಮಾಡಬೇಕು, ಈ ಕೆಲಸವನ್ನು ಎಷ್ಟು ಸಮಯದೊಳಗೆ ಮುಗಿಸಬೇಕು, ಎಂಬುದರ ನಿಯೋಜನೆ ಮಾಡಬೇಕು, ನೌಕರಿಯ ಸಮಯದ ನಿಯೋಜನೆ ಮಾಡುವುದು, ಎಷ್ಟು ಗಂಟೆಗೆ ಹೊರಡುವುದು, ಅಲ್ಲಿಗೆ ಹೋಗಿ ಏನು ಮಾಡುವುದು ?, ಅಲ್ಲಿ ಎಲ್ಲೆಲ್ಲಿ ವ್ಯಷ್ಟಿ ಮಾಡಬಹುದು, ಸೇವೆ ಮಾಡಬಹುದು, ಎಂದು ವಿಚಾರ ಮಾಡಿ ಅದರ ನಿಯೋಜನೆ ಮಾಡುವುದು. ಸಮಷ್ಟಿಯಲ್ಲಿ ಗುರುದೇವರು ನಮಗೆ ಕೊಟ್ಟಿರುವ ಸಮಷ್ಟಿ ಸೇವೆಗಳು ಯೋಗ್ಯ ರೀತಿಯಲ್ಲಿ ಆಗುವಂತೆ ನಾನು ಎಷ್ಟು ಸಮಯವನ್ನು ಕೊಡಲು ಸಾಧ್ಯ, ಸಮಯದ ನಿಯೋಜನೆಯನ್ನು ಹೇಗೆ ಮಾಡಬಹುದು, ಯಾವ ಸೇವೆಗೆ ಎಷ್ಟು ಸಮಯ ಬೇಕು, ಇವುಗಳಲ್ಲಿ ಪ್ರಾಧಾನ್ಯತೆಯ ಸೇವೆ ಯಾವುದು ? ಇತ್ಯಾದಿ ಎಲ್ಲವನ್ನೂ ಅಭ್ಯಾಸ ಮಾಡಿ ನಮ್ಮ ಧ್ಯೇಯವನ್ನು ಎದುರಿಗಿಟ್ಟು ನಿಯೋಜನೆ ಮಾಡಿ ಸಮಷ್ಟಿ ಸಾಧನೆಯ ಫಲಶೃತಿಯನ್ನು ಹೆಚ್ಚಿಸಲು ಪ್ರಯತ್ನಿಸಬಹುದು. ಯಾವ ಸಾಧಕರು ಚೆನ್ನಾಗಿ ನಿಯೋಜನೆ ಮಾಡುತ್ತಾರೊ, ಸಮಯವನ್ನು ಸದುಪಯೋಗಿಸಿಕೊಂಡು ಪೂರ್ಣ ಫಲಶೃತಿಯನ್ನು ಪಡೆಯಲು ಪ್ರಯತ್ನಿಸುತ್ತಾರೋ, ಅವರ ಮೇಲೆ ಅಖಂಡ ಗುರುಕೃಪೆಯಾಗುತ್ತದೆ. ಅವರು ಈಶ್ವರನಿಗೆ ಪ್ರಿಯರಾಗುತ್ತಾರೆ ಹಾಗೂ ಅವರ ಆಧ್ಯಾತ್ಮಿಕ ಪ್ರಗತಿಯೂ ಶೀಘ್ರದಲ್ಲಿ ಆಗುತ್ತದೆ. ಈ ನಿಯೋಜನೆಯು ಇಂದು, ನಾಳೆಯಲ್ಲ, ನಿರಂತರ ಇದಕ್ಕಾಗಿ ಪ್ರಯತ್ನ ಮಾಡಲಿಕ್ಕಿದೆ.
ಇಲ್ಲಿ ಇಂತಹ ೩ ಧ್ಯೇಯಗಳನ್ನು ಕೊಡಲಾಗಿದೆ. (ಎರಡು ಧ್ಯೇಯವನ್ನು ಕಳೆದ ಸಂಚಿಕೆಯಲ್ಲಿ ಓದಿದ್ದೇವೆ) ಇದರ ಹಾಗೆಯೆ ಕರ್ತೃತ್ವ, ಸ್ವೀಕರಿಸುವ ವೃತ್ತಿ, ಪ್ರಾಮಾಣಿಕ, ಕೃತಜ್ಞತೆ, ಪರಿಪೂರ್ಣ ಸೇವೆ ಮಾಡುವುದು ಹೀಗೆ ವಿವಿಧ ಧ್ಯೇಯಗಳನ್ನು ನೀಡಲಾಗಿತ್ತು. ಈ ತರಹದ ಧ್ಯೇಯಗಳನ್ನು ಕೊಡುವುದರಿಂದ ಸಾಧಕರ ಪ್ರಯತ್ನ ಅಂತರ್ಮನಸ್ಸಿನಿಂದ ಆರಂಭವಾಯಿತು ಹಾಗೂ ಕೃತಿಯ ಸ್ತರದಲ್ಲಿ ಬದಲಾವಣೆಯು ಕಂಡುಬಂತು.
೪. ಭಾವಸತ್ಸಂಗದಿಂದ ಸಾಧಕರಿಗಾದ ಲಾಭ
ಈ ಭಾವಸತ್ಸಂಗದಲ್ಲಿ ಸಾಧಕರಿಗೆ ತಮ್ಮ ಅಸ್ತಿತ್ವವು ಮರೆತು ಅಖಂಡ ಈಶ್ವರನ ಅಸ್ತಿತ್ವದ ಅನುಭೂತಿ ಬರುತ್ತಿತ್ತು, ಚೈತನ್ಯದ ಅನುಭವವಾಗುತ್ತಿತ್ತು, ವಾತಾವರಣ ಶಾಂತವಾಗಿತ್ತು. ಭಾವಸತ್ಸಂಗದ ವಾತಾವರಣದಿಂದ ಸಾಧಕರ ಉತ್ಸಾಹ, ಸ್ಫೂರ್ತಿ ಹೆಚ್ಚಾಗುತ್ತಿತ್ತು. ಭಾವಸತ್ಸಂಗದ ಮೂಲಕ ಬುದ್ಧಿ, ಮನಸ್ಸು ಮತ್ತು ಶರೀರ ಈ ಮೂರೂ ಶುದ್ಧೀಕರಣವಾಗಿ ಸಾಧಕರಿಗೆ ಆನಂದ ಸಿಗಲು ಆರಂಭವಾಯಿತು. ಅನೇಕ ಸಾಧಕರಿಗೆ ಪ್ರತ್ಯಕ್ಷ ಗುರುದೇವರ ಅಸ್ತಿತ್ವದ ಅನುಭವವಾಗುತ್ತಿತ್ತು, ದೇವದೇವತೆಗಳ ದರ್ಶನವಾಗಿ ಭಾವದ ಸ್ಥಿತಿಯನ್ನು ಅನುಭವಿಸಲು ಸಾಧ್ಯವಾಗುತ್ತಿತ್ತು.
೫. ಧ್ಯೇಯ ನೀಡುವುದರಿಂದಾದ ಲಾಭ
ಧ್ಯೇಯವನ್ನು ನೀಡಿರುವುದರಿಂದ ಸೇವೆಯ ಜೊತೆಗೆ ಮನೆಯಲ್ಲಿ ನಿರ್ಮಾಣವಾಗಿರುವ ಕಠಿಣ ಪರಿಸ್ಥಿತಿಯನ್ನೂ ಸಾಧಕರು ಎದುರಿಸಲು ಸಾಧ್ಯವಾಯಿತು. ಅದೇ ರೀತಿ ಗ್ರಂಥಗಳ ವಿಷಯದಲ್ಲಿ ಸಮಾಜದಲ್ಲಿ ಮಾಹಿತಿಯನ್ನು ಹೇಳುವಾಗ ಯಾವುದೇ ಅಪೇಕ್ಷೆಯನ್ನಿಡದೆ ನಾವು ಕೇವಲ ಮಾಧ್ಯಮವಾಗಿದ್ದೇವೆ, ಎನ್ನುವ ಭಾವ ನಿರ್ಮಾಣವಾಯಿತು. ಯಾವುದೇ ಪ್ರಸಂಗ ಬಂದರೂ ಅದನ್ನು ಸ್ವೀಕರಿಸಲು ಸಾಧ್ಯವಾಗುತ್ತಿತ್ತು. ಭಾವಸತ್ಸಂಗದಲ್ಲಿ ಸಾಧಕರು ಅನುಭವಗಳನ್ನು ಹೇಳುವಾಗ ಅವರು ಅಖಂಡ ಕೃತಜ್ಞತಾಭಾವದಲ್ಲಿದ್ದರು. ಒಬ್ಬ ಸಾಧಕನು, ಭಾವಸತ್ಸಂಗದ ಧ್ಯೇಯವೆಂದರೆ, ಚಿನ್ನಕ್ಕೆ ಸಮಾನವಾಗಿದೆ ಎಂದು ಅನಿಸುತ್ತದೆ. ಅದಕ್ಕೆ ಶಬ್ದವೇ ಇಲ್ಲ, ಎಂದನು.
೬. ಧ್ಯೇಯದಿಂದ ಸಾಧಕರು ಮಾಡಿದ ಪ್ರಯತ್ನ
ಧ್ಯೇಯಕ್ಕನುಸಾರ ಸಾಧಕರು ಕೃತಿ ಮಾಡಲು ಪ್ರಯತ್ನಿಸುತ್ತಿದ್ದರು ಹಾಗೂ ಆನಂದವನ್ನು ಕೂಡ ಅನುಭವಿಸುತ್ತಿದ್ದರು. ದಿನವಿಡೀ ಭಾವದ ಸ್ಥಿತಿಯಲ್ಲಿರಲು ಸಾಧ್ಯವಾಗುತ್ತಿತ್ತು. ಅನೇಕ ಸೇವೆಗಳಿದ್ದರೂ ಯಾರಿಗೂ ಒತ್ತಡವಿರಲಿಲ್ಲ, ಪ್ರತೀ ಕ್ಷಣ ಧ್ಯೇಯದ ನೆನಪಾಗುತ್ತಿತ್ತು. ಯಾವುದೇ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ಸಿದ್ಧರಿದ್ದೇವೆ, ಎನ್ನುವ ಮಾನಸಿಕತೆ ನಿರ್ಮಾಣವಾಯಿತು. ಭಾವಸತ್ಸಂಗದಲ್ಲಿ ಹೇಳಿರುವ ಧ್ಯೇಯಕ್ಕನುಸಾರ ಪ್ರಯತ್ನಿಸುವುದರಿಂದ ದೋಷಗಳನ್ನು ಜಯಿಸಲು ಸಾಧ್ಯವಾಯಿತು. ಆತ್ಮವಿಶ್ವಾಸ ನಿರ್ಮಾಣವಾಯಿತು ಹಾಗೂ ಆಧ್ಯಾತ್ಮಿಕ ಬಲ ಸಿಕ್ಕಿತು. ಇವೆಲ್ಲ ಕಾರಣಗಳಿಂದ ಗ್ರಂಥ ಅಭಿಯಾನ ಸೇವೆಯ ವೇಗ ಹೆಚ್ಚಾಗಿ ಫಲಶೃತಿ ಹೆಚ್ಚಾಯಿತು. ಇಂತಹ ಭಾವಸತ್ಸಂಗವನ್ನು ಗುರುಪೂರ್ಣಿಮೆಯ ಸಮಯದಲ್ಲಿ ಜಾಹೀರಾತು ಸೇವೆ, ಅರ್ಪಣೆಯ ಸೇವೆ ಮತ್ತು ಇತರ ಸೇವೆಗಳಿರುವಾಗಲೂ ಮಾಡಲಾಗಿತ್ತು. ಈ ಭಾವಸತ್ಸಂಗದಿಂದಾಗಿ ಆ ಅವಧಿಯಲ್ಲಿ ಇವೆಲ್ಲ ಸೇವೆಗಳು ಸಮಯಮಿತಿಯೊಳಗೇ ಮುಗಿದು ದೊಡ್ಡ ಪ್ರಮಾಣದಲ್ಲಿ ಫಲಶೃತಿ ಸಿಕ್ಕಿತ್ತು.
ಯಾವುದೇ ಸೇವೆಯನ್ನು ‘ಯೋಗಃ ಕರ್ಮಸು ಕೌಶಲಮ್’ ಈ ತತ್ತ್ವಕ್ಕನುಸಾರ ಅಚ್ಚುಕಟ್ಟಾಗಿ ಕೌಶಲ್ಯದಿಂದ ಹೇಗೆ ಮಾಡಬಹುದು, ತಪ್ಪುರಹಿತ ಪರಿಪೂರ್ಣ ಹೇಗೆ ಮಾಡುವುದು, ಪ್ರತಿಯೊಂದು ಸೇವೆಯ ನಿಯೋಜನೆಯ ಮೂಲಕ್ಕೆ ಹೋಗಿ ಹಾಗೂ ವ್ಯಾಪಕ ದೃಷ್ಟಿಕೋನವನ್ನಿಟ್ಟು ಮಾಡಬೇಕು. ಪ್ರತಿಯೊಬ್ಬ ಸಾಧಕನನ್ನು ಈ ಸೇವೆಯ ಪ್ರವಾಹದಲ್ಲಿ ಹೇಗೆ ಜೋಡಿಸುವುದು, ಇಂತಹ ಪ್ರತಿಯೊಂದು ಸಣ್ಣ ಸಣ್ಣ ವಿಷಯದಲ್ಲಿ ಪರಿಪೂರ್ಣ ಆಯೋಜನೆಯನ್ನು ಹೇಗೆ ಮಾಡುವುದು. ಗುರುಗಳಿಗೆ ಅಪೇಕ್ಷೆಯಿರುವ ಹಾಗೆಯೇ ಪ್ರತಿಯೊಂದು ಕೃತಿಯನ್ನು ‘ಸತ್ಯಂ ಶಿವಂ ಸುಂದರಮ್’ ಹೇಗೆ ಮಾಡುವುದೆಂದು ಪ್ರಯತ್ನಿಸಲು ಸಾಧಕರಿಗೆ ಕಲಿಸಲಾಯಿತು. ಈ ಅಭಿಯಾನದ ಸೇವೆಯನ್ನು ಪ್ರಾರಂಭದಿಂದ ಅಂದರೆ ಪೂರ್ವ ತಯಾರಿಯಿಂದ ಪ್ರತಿಯೊಂದು ಸೇವೆಯ ನಿಯೋಜನೆಯನ್ನು ಸುನಿಯೋಜನೆ ಮತ್ತು ಸುವ್ಯವಸ್ಥಾಪನೆ ಈ ಧ್ಯೇಯದಿಂದ ಮಾಡಿರುವುದರಿಂದ ಪ್ರತಿಯೊಬ್ಬ ಸಾಧಕನಲ್ಲಿ ಸಂಘಭಾವ ನಿರ್ಮಾಣವಾಯಿತು. ಎಲ್ಲರೂ ಉತ್ಸಾಹ ಮತ್ತು ಪ್ರೇರಣೆಯಿಂದ ಭಾವದ ಸ್ತರದಲ್ಲಿ ಪ್ರಯತ್ನ ಮಾಡಿದರು. ಆದ್ದರಿಂದ ಎಲ್ಲರಿಗೂ ತುಂಬಾ ಆನಂದ ಸಿಕ್ಕಿತು. ಅಭಿಯಾನದ ವಿಷಯದಲ್ಲಿ ಅವರೊಂದಿಗೆ ಮಾತನಾಡುವಾಗ ಎಲ್ಲರಿಗೂ ಭಾವಜಾಗೃತಿಯಾಗುತ್ತಿತ್ತು. ಈ ಸೇವೆಯು ಒಂದು ದೈವೀ ನಿಯೋಜನೆಯಾಗಿದೆ, ಎಂದು ಅರಿವಾಯಿತು.
೭. ಗುರುಕಾರ್ಯ ಹಾಗೂ ಸಾಧಕರ ಸಾಧನೆ ಹೆಚ್ಚಾಗುವ ಬಗ್ಗೆ ಪೂ. ರಮಾನಂದ ಅಣ್ಣನವರಲ್ಲಿದ್ದ ತೀವ್ರ ತಳಮಳ
ಪೂ. ಅಣ್ಣನವರಲ್ಲಿರುವ ಭಾವ, ತಳಮಳ, ಪರಿಶ್ರಮದಿಂದ ಮಾಡುವುದು, ಗುರುಕಾರ್ಯ ವೃದ್ಧಿಯಾಗಬೇಕು ಹಾಗೂ ಸಾಧಕರ ಪ್ರಗತಿಯಾಗಬೇಕೆನ್ನುವ ಧ್ಯಾಸದಿಂದ ಅವರು ಹಗಲಿರುಳು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಒಂದೇ ಧ್ಯಾಸವಿರುತ್ತದೆ, ಅಂದರೆ ಎಲ್ಲ ಸಾಧಕರು ಗುರುಚರಣಗಳಿಗೆ ತಲುಪಬೇಕು. ಅದಕ್ಕಾಗಿ ಎಷ್ಟೇ ಕಠಿಣ ಪರಿಶ್ರಮ ಮಾಡಬೇಕಾದರೂ ಚಿಂತೆಯಿಲ್ಲ. ಜ್ಞಾನಶಕ್ತಿ ಪ್ರಸಾರ ಅಭಿಯಾನವು ಸಂಪೂರ್ಣ ಭಾರತದಲ್ಲಿ ನಡೆಯಬೇಕು ಎಂದು ಪೂ. ರಮಾನಂದಣ್ಣರವರಿಗೆ ಅನಿಸುತ್ತಿತ್ತು. ಈ ಅಭಿಯಾನವು ಭಾರತದಾದ್ಯಂತ ಆರಂಭವಾದಾಗ ಪೂ. ಅಣ್ಣನವರಿಗೆ ತುಂಬಾ ಆನಂದವಾಯಿತು, ಭಾವಜಾಗೃತಿಯಾಯಿತು. ಪದೇ ಪದೇ ಕೃತಜ್ಞತೆ ವ್ಯಕ್ತವಾಯಿತು, ಈಗ ಗುರುಗಳ ಜ್ಞಾನವು ಎಲ್ಲರಿಗೂ ಸಿಗುವುದು. ಸಾಧಕರ ಸಾಧನೆಯಾಗುವುದು, ಗುರುಕಾರ್ಯದ ವೃದ್ಧಿಯಾಗುವುದು, ಎನಿಸುತ್ತಿತ್ತು.
ಹೇ ಗುರುದೇವಾ, ಈ ಜ್ಞಾನಶಕ್ತಿ ಪ್ರಸಾರ ಅಭಿಯಾನ ಸೇವೆಯ ಪ್ರವಾಹದಲ್ಲಿ ನಮ್ಮೆಲ್ಲರನ್ನೂ ಜೋಡಿಸಿಕೊಂಡು ಭಾವಸಾಗರದಲ್ಲಿ ಮುಳುಗುವ ಅನುಭೂತಿಯನ್ನು ನೀವೇ ಕೊಟ್ಟಿದ್ದೀರಿ. ನಮ್ಮ ಕ್ಷಮತೆ ಇಲ್ಲದಿದ್ದರೂ, ನಾವು ಅಜ್ಞಾನಿ ಜೀವಗಳಾಗಿದ್ದರೂ ಈ ಸೇವೆಯನ್ನು ನೀವೇ ಕಲಿಸಿದಿರಿ. ಸಂತರ ಮೂಲಕ ಪ್ರತಿಯೊಂದು ಹಂತದಲ್ಲಿ ಹೇಗೆ ಪ್ರಯತ್ನಿಸಬೇಕು, ಎಂಬುದರ ದೃಷ್ಟಿಕೋನವನ್ನು ನೀವೇ ಕೊಟ್ಟಿದ್ದೀರಿ. ಇಂತಹ ಸಮಷ್ಟಿ ಸಂತರ ಮೂಲಕ ನೀವು ಈ ಕಾರ್ಯವನ್ನು ಮಾಡುತ್ತಿದ್ದೀರಿ ಎಂಬುದರ ಅನುಭೂತಿಯನ್ನೂ ನೀಡಿದ್ದೀರಿ. ಹೇ ಗುರುದೇವಾ, ಇಂತಹ ಸಮಷ್ಟಿ ಸಂತರನ್ನು ನೀವೇ ನಮಗೆ ಕೊಟ್ಟಿದ್ದೀರಿ, ಈ ವಿಷಯದಲ್ಲಿ ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರೂ ಕಡಿಮೆಯೇ ಆಗಿದೆ. ಇಷ್ಟು ದೊಡ್ಡ ಅಭಿಯಾನದ ನಿಯೋಜನೆ ಮಾಡಿ ನೀವೇ ನಮ್ಮಿಂದ ಇವೆಲ್ಲ ಪ್ರಯತ್ನವನ್ನು ಮಾಡಿಸಿಕೊಳ್ಳುತ್ತಿದ್ದೀರಿ. ನಿಮ್ಮ ಕೃಪೆಯಿಂದ ಎಲ್ಲವೂ ಆಗುತ್ತಿದೆ, ಈ ವಿಷಯದಲ್ಲಿ ನಿಮ್ಮ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳು.
ಹೇ ಗುರುದೇವಾ ನೀವು ನಮಗೆ ಏನೆಲ್ಲ ಕಲಿಸಿದ್ದೀರಿ, ಸಂತರ ಮೂಲಕ, ತಮ್ಮ ಸಂಕಲ್ಪದಿಂದ ಎಲ್ಲವನ್ನೂ ಮಾಡಿಸಿಕೊಂಡಿದ್ದೀರಿ, ಇದೆಲ್ಲವನ್ನೂ ಶಬ್ದರೂಪದಲ್ಲಿ ತಮ್ಮ ಚರಣಗಳಿಗೆ ಸಮರ್ಪಿಸುತ್ತಿದ್ದೇವೆ !
– ಶ್ರೀ. ಕಾಶಿನಾಥ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೯), ಸೌ. ಮಂಜುಳಾ ರಮಾನಂದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೫) ಮತ್ತು ಶ್ರೀ. ವಿಜಯ ರೇವಣಕರ (ಆಧ್ಯಾತ್ಮಿಕ ಮಟ್ಟ ಶೇ. ೬೫). (ಅಕ್ಟೋಬರ್ ೨೦೨೧) (ಮುಕ್ತಾಯ)