ಸನಾತನ ಸಂಸ್ಥೆಯ ವತಿಯಿಂದ ಭಾರತದಾದ್ಯಂತ ನಡೆಸಲಾದ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ನಿಮಿತ್ತ…
‘ಗುರುಕೃಪೆಯಿಂದ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ (ಸನಾತನದ ೭೫ ನೇ ಸಮಷ್ಟಿ ಸಂತರು) ಇವರ ಮಾರ್ಗದರ್ಶಕ್ಕನುಸಾರ ಕರ್ನಾಟಕ ರಾಜ್ಯದಲ್ಲಿ ೧.೯.೨೦೨೧ ರಿಂದ ೩೧.೧೦.೨೦೨೧ ಈ ಕಾಲಾವಧಿಯಲ್ಲಿ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ವನ್ನು ಹಮ್ಮಿಕೊಳ್ಳಲಾಯಿತು. ಹಿಂದಿನ ಲೇಖನದಲ್ಲಿ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನದಲ್ಲಿ ಗ್ರಂಥ ಅಭಿಯಾನದ ಪ್ರಸಾರವನ್ನು ‘ವಾಟ್ಸ್‌ಆಪ್’ ಮತ್ತು ಸಾಮಾಜಿಕ ಜಾಲತಾಣಗಳ (‘ಸೋಶಿಯಲ್ ಮೀಡಿಯಾ’) ಮೂಲಕ ಹೇಗೆ ಪ್ರಸಾರ ಮಾಡಲಾಯಿತು ? ಎಂಬ ಬಗ್ಗೆ ಕೊಡಲಾಗಿತ್ತು. ಈ ವಾರದ ಲೇಖನದಲ್ಲಿ ಗ್ರಂಥ ಅಭಿಯಾನದ ಪ್ರಸಾರದ ಸಂದರ್ಭದಲ್ಲಿ ಪೂ. ರಮಾನಂದ ಅಣ್ಣನವರು ತೆಗೆದುಕೊಳ್ಳುತ್ತಿದ್ದ ಭಾವಪ್ರಯೋಗದ ಮೂಲಕ ಸಾಧಕರಿಗೆ ಹೇಗೆ ಪ್ರೋತ್ಸಾಹ ಸಿಕ್ಕಿತು ಎಂಬುದನ್ನು ನೋಡೋಣ.
(ಭಾಗ – ೫)
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/52882.html |
೧. ಭಾವಸತ್ಸಂಗದ ಉದ್ದೇಶ
ಸಾಧಕರಿಗೆ ಚೈತನ್ಯ ಸಿಗಬೇಕು, ಪ್ರತಿದಿನ ಉತ್ಸಾಹವು ನಿರ್ಮಾಣವಾಗಲು ಸೇವೆಯು ಭಾವಪೂರ್ಣ ಮತ್ತು ಪರಿಪೂರ್ಣವಾಗಬೇಕು, ಸಾಧನೆಯಲ್ಲಿ ಯೋಗ್ಯ ದಿಶೆ ಪಡೆದು ಪ್ರಯತ್ನಿಸಲು ಸಾಧ್ಯವಾಗಬೇಕು ಹಾಗೆಯೇ ಸಾಧಕರಲ್ಲಿ ಗುಣವೃದ್ಧಿಯಾಗಬೇಕೆಂಬ ಉದ್ದೇಶದಿಂದ ಭಾವಸತ್ಸಂಗದ ನಿಯೋಜನೆ ನಡೆಯುತ್ತಿತ್ತು.
೨. ಭಾವಸತ್ಸಂಗದ ಸ್ವರೂಪ
೨ ಅ. ಭಾವಸತ್ಸಂಗದಲ್ಲಿ ಮಾಡಿಸುವ ಭಾವಪ್ರಯೋಗ : ಆರಂಭದಲ್ಲಿ ೩೦ ನಿಮಿಷಗಳ ಕಾಲ ಭಾವಪ್ರಯೋಗವನ್ನು ತೆಗೆದುಕೊಳ್ಳಲಾಯಿತು. ಮಾನಸವಾಗಿ ಪ.ಪೂ. ಗುರುದೇವರ (ಪರಾತ್ಪರ ಗುರು ಡಾ. ಆಠವಲೆ) ದರ್ಶನಕ್ಕಾಗಿ ರಾಮನಾಥಿ ಆಶ್ರಮಕ್ಕೆ ಹೋಗುವುದು, ಪ.ಪೂ. ಗುರುದೇವರ ಚರಣಗಳ ಪೂಜೆ ಮಾಡುವುದು, ಕೃಷ್ಣಲೋಕ, ಶಿವಲೋಕ, ವಿಷ್ಣುಲೋಕದ ಅನುಭವವನ್ನು ಪಡೆಯುವುದು ಈ ರೀತಿಯ ಮಾನಸವಾಗಿ ಭಾವದ ಪ್ರಯತ್ನ ಮಾಡಿಸಿಕೊಳ್ಳುವುದು. ಅನಂತರ ೧೫-೨೦ ನಿಮಿಷಗಳ ಕಾಲ ಸಾಧಕರಿಗೆ ‘ಹಿಂದಿನ ಸಲ ನೀಡಿದ ಧ್ಯೇಯಕ್ಕನುಸಾರ ಅವರ ಪ್ರಯತ್ನ ಹೇಗಾದವು ?’, ಆ ಬಗ್ಗೆ ಸಾಧಕರು ಅನುಭವ, ಅನುಭೂತಿಗಳನ್ನು ಹೇಳುವುದು. ಕೊನೆಯ ೧೦ ನಿಮಿಷಗಳು ಮುಂದಿನ ದಿನಗಳಲ್ಲಿ ಯಾವ ಧ್ಯೇಯವಿಟ್ಟು ಪ್ರಯತ್ನಿಸಬೇಕು ಈ ಬಗ್ಗೆ ಪೂ. ರಮಾನಂದ ಅಣ್ಣನವರು ಮಾರ್ಗದರ್ಶನ ಮಾಡುವುದು, ಈ ಸ್ವರೂಪದಲ್ಲಿ ಈ ಭಾವಪ್ರಯೋಗ ನಡೆಯುತ್ತದೆ.
೨ ಆ. ಒಂದೊಂದು ದಿನ ಗುಣದ ವಿವಿಧ ಧ್ಯೇಯ ನೀಡುವುದು : ಭಾವಸತ್ಸಂಗದಲ್ಲಿ ಸಾಧಕರಿಗೆ ಧ್ಯೇಯ ನೀಡುವಾಗ ಯಾವ ಗುಣಗಳ ಅಭಾವವಿದ್ದರೆ ನಮ್ಮ ಯಾವ ದೋಷ-ಅಹಂ ಕಾರ್ಯನಿರತವಾಗುತ್ತವೆ, ಅದರ ಪರಿಣಾಮವು ಹೇಗಾಗುತ್ತದೆ, ಇದಕ್ಕಾಗಿ ಏನು ಪ್ರಯತ್ನ ಮಾಡಬೇಕು, ಎಂಬ ಬಗ್ಗೆ ಸಾಧಕರಿಗೆ ಪೂ. ರಮಾನಂದ ಅಣ್ಣನವರು ಮಾರ್ಗದರ್ಶನ ಮಾಡುತ್ತಿದ್ದರು.
೨ ಇ. ಪ್ರತಿದಿನ ಒಂದೊಂದು ಜಿಲ್ಲೆಯ ೩-೪ ಸಾಧಕರು ಪ್ರಯತ್ನ ಹೇಳುವುದು : ಸತ್ಸಂಗದಲ್ಲಿ ಪ್ರಯತ್ನಗಳ ಬಗ್ಗೆ ಹೇಳುವಾಗ ಪ್ರತಿದಿನ ಒಂದು ಜಿಲ್ಲೆಯ ೩-೪ ಸಾಧಕರು ಪ್ರಯತ್ನವನ್ನು ಹೇಳಬೇಕು ಎಂದು ನಿರ್ಧರಿಸಲಾಗಿತ್ತು. ಪ್ರಯತ್ನಗಳನ್ನು ಹೇಳುವಾಗ ಭಾವಸತ್ಸಂಗದಲ್ಲಿ ಹೇಳಿದ ಧ್ಯೇಯಕ್ಕನುಸಾರ ಮಾಡಿದ ಪ್ರಯತ್ನ, ಅವರಿಗೆ ಬಂದ ಅನುಭೂತಿ ಅದೇ ರೀತಿ ವೈಶಿಷ್ಟ್ಯಪೂರ್ಣ ಪ್ರಯತ್ನವನ್ನು ಸಾಧಕರು ಹೇಳುತ್ತಿದ್ದರು. ಇದರಿಂದ ಉಳಿದ ಸಾಧಕರಿಗೆ ದಿಶೆ ಮತ್ತು ಸ್ಫೂರ್ತಿ ಸಿಗುತ್ತಿತ್ತು.
೩. ಭಾವಸತ್ಸಂಗದ ಧ್ಯೇಯವನ್ನು ನೀಡುವಾಗಿನ ಕೆಲವು ಉದಾಹಣೆಗಳು
ಭಾವಸತ್ಸಂಗದಲ್ಲಿ ಧ್ಯೇಯ ನೀಡುವಾಗ ಪೂ. ರಮಾನಂದ ಅಣ್ಣನವರು ಮಾಡುತ್ತಿದ್ದ ಮಾರ್ಗದರ್ಶನದ ಕೆಲವು ಉದಾಹರಣೆ ಕೆಳಗಿನಂತಿದೆ
೩ ಅ. ತಳಮಳ : ಅಧ್ಯಾತ್ಮದಲ್ಲಿ ತಳಮಳಕ್ಕೆ ಶೇ. ೮೦ ರಷ್ಟು ಮಹತ್ವವಿದೆ. ಸಾಧಕರು ಮತ್ತು ಶಿಷ್ಯರಲ್ಲಿ ಇರಬೇಕಾದ ಮಹತ್ವಪೂರ್ಣ ಗುಣವೆಂದರೆ ತಳಮಳ ! ಮನಸ್ಸಿನಲ್ಲಿ ತಳಮಳವಿದ್ದರೆ ಯಾವುದೇ ಕೃತಿಯನ್ನು ಮಾಡುವಾಗ ಒಳ್ಳೆಯ ರೀತಿಯಲ್ಲಿ ಮಾಡಲು ಏನು ಮಾಡಲಿ ಯಾರಿಗೆ ಕೇಳಲಿ ಎಂಬ ವಿಚಾರವು ಮನಸ್ಸಿನಲ್ಲಿ ಇರುತ್ತದೆ. ತಳಮಳ ಗುಣದ ಅಭಾವವಿದ್ದರೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಮೇಲೆ ಅದರ ಪರಿಣಾಮವಾಗುತ್ತಿರುತ್ತದೆ. ವ್ಯಷ್ಟಿ ಸಾಧನೆಯ ದೃಷ್ಟಿಯಿಂದ ಮುಂದೂಡುವಿಕೆ, ದುರ್ಲಕ್ಷ ಮಾಡುವುದು, ದೋಷ-ಅಹಂನ ತಖ್ತೆ ಬರೆಯದಿರುವುದು, ಸೂಚನೆಯನ್ನು ಕೊಡದಿರುವುದು, ನಾಮಜಪ-ಉಪಾಯ ಪೂರ್ಣ ಮಾಡದಿರುವುದು, ಏನಾದರೂ ಪ್ರಸಂಗ ಘಟಿಸಿದರೆ ಅದರಲ್ಲಿ ಸಿಲುಕುವುದು, ಏನು ಮಾಡುತ್ತಿರುವೆವೋ ಅಷ್ಟೇ ಸಾಕು ಎಂಬ ಅಲ್ಪಸಂತುಷ್ಟತೆ ಬರುವುದು, ಸಮಯದ ಸದುಪಯೋಗ ಮಾಡಿಕೊಳ್ಳದಿರುವುದು ಈ ರೀತಿಯಲ್ಲಿ ಆಗುತ್ತದೆ. ಅಲ್ಲದೇ ಈ ಗುಣದ ಅಭಾವದಿಂದ ಇಚ್ಛಾಶಕ್ತಿಯ ಭಾಗವು ಕಡಿಮೆ ಇರುತ್ತದೆ, ಸ್ವೇಚ್ಛೆ ಇರುತ್ತದೆ, ಕೇಳಿ ಕೇಳಿ ಮಾಡುವುದು ಆಗುವುದಿಲ್ಲ, ಆದ್ದರಿಂದ ಸಾಧನೆಯಲ್ಲಿ ಮುಂದೆ ಹೋಗಲು ದೊಡ್ಡ ಅಡಚಣೆ ನಿರ್ಮಾಣವಾಗುತ್ತದೆ. ತಳಮಳವಿಲ್ಲದಿದ್ದರೆ ಈಶ್ವರನ ಸಹಾಯ ಸಿಗುವುದು ಕಡಿಮೆಯಾಗುತ್ತದೆ. ಆದ್ದರಿಂದ ಪ್ರತಿದಿನ ಯಾವ ಯಾವ ಪ್ರಸಂಗಗಳಲ್ಲಿ ತಳಮಳದ ಅಭಾವವು ಗಮನಕ್ಕೆ ಬಂದಿತು, ಅದರಲ್ಲಿ ಯಾವ ದೋಷವು ಅಡ್ಡ ಬಂದಿತು, ಅದರ ಅಧ್ಯಯನ ಮಾಡಬೇಕು. ಅದನ್ನು ಬರೆದು ಆ ರೀತಿ ತತ್ಪರತೆಯಿಂದ ಯೋಗ್ಯ ಕೃತಿ ಮಾಡುವುದು ಮಹತ್ವದ್ದಾಗಿದೆ. ಯಾರಲ್ಲಿ ತಳಮಳವಿರುತ್ತದೋ ಅವರು ಸತತ ಉತ್ಸಾಹಿ ಇರುತ್ತಾರೆ ಮತ್ತು ಇತರರಲ್ಲಿಯೂ ಉತ್ಸಾಹವನ್ನು ತುಂಬುತ್ತಾರೆ. ಅವರು ಸ್ವತಃ ಆನಂದದಲ್ಲಿರುತ್ತಾರೆ ಮತ್ತು ಇತರರಿಗೂ ಆನಂದವನ್ನು ನೀಡುತ್ತಾರೆ, ಹಾಗೆಯೇ ಅವರ ಸಾಧನೆಗೆ ಪ್ರೇರಣೆಯನ್ನೂ ನೀಡುತ್ತಾರೆ. ಯಾರಲ್ಲಿ ತಳಮಳವಿರುತ್ತದೋ ಅವರಿಗೆ ಗುರುಕಾರ್ಯವು ನನ್ನದಾಗಿದೆ, ಪ್ರತಿಯೊಂದು ಜವಾಬ್ದಾರಿಯು ನನ್ನದಾಗಿದೆ, ಎಂದೆನಿಸುತ್ತದೆ ಮತ್ತು ಗುರುಕಾರ್ಯದ ಧ್ಯಾಸವು ನಿರ್ಮಾಣವಾಗುತ್ತದೆ ಮತ್ತು ಸಮಷ್ಟಿಗಾಗಿ ನಾನು ಹೇಗೆ ಸಮರ್ಪಿತನಾಗಲಿ ಎಂದೆನಿಸುತ್ತದೆ. ಆದ್ದರಿಂದ ನಾವೆಲ್ಲರೂ ನಮ್ಮ ಪ್ರತಿಯೊಂದು ಕೃತಿಗೆ ತಳಮಳವನ್ನು ಜೋಡಿಸಬೇಕು. ಹೀಗೆ ಮಾಡಿದರೆ ನಾವು ಯಾವುದೇ ಸೇವೆಯನ್ನು ಮಾಡಿದರೂ ಅದು ಗುರುದೇವರಿಗೆ ಅಪೇಕ್ಷಿತ ರೀತಿಯಲ್ಲಾಗುತ್ತದೆ. ಈ ತಳಮಳವು ಕೇವಲ ಒಂದೆರಡು ದಿನಗಳಿಗಾಗಿ ಅಲ್ಲ, ಆದರೆ ಸಾಧನೆಯನ್ನು ಮಾಡುವಾಗ ತಳಮಳವನ್ನು ಜೋಡಿಸಿಯೇ ಮಾಡಬೇಕು.
೩ ಆ. ಪರಿಶ್ರಮ : ಇಂದು ನಾವು ಸ್ವಸುಖಕ್ಕಾಗಿ ಎಷ್ಟೇ ಪರಿಶ್ರಮವನ್ನು ತೆಗೆದುಕೊಳ್ಳುವ ಪ್ರಸಂಗ ಬಂದರೂ ತೆಗೆದುಕೊಳ್ಳುತ್ತೇವೆ. ಸ್ವಾರ್ಥ, ಮಾಯೆ, ಕರ್ತೃತ್ವ ಮತ್ತು ಪ್ರತಿಷ್ಠೆಗಾಗಿ ಪರಿಶ್ರಮ ತೆಗೆದುಕೊಳ್ಳುತ್ತೇವೆ. ಆದರೆ ಸಾಧನೆಗಾಗಿ ನಾವು ಸ್ವಲ್ಪ ಪ್ರಯತ್ನ ಮಾಡಿದರೂ ನಮಗೆ ತಕ್ಷಣ ಅಲ್ಪಸಂತುಷ್ಟತೆ ಬರುತ್ತದೆ. ಇಲ್ಲಿ ಪರಿಶ್ರಮ ತೆಗೆದುಕೊಳ್ಳುವ ತಯಾರಿ ಇರುವುದಿಲ್ಲ. ಯಾರೋ ಹೇಳುತ್ತಾರೆ ಮತ್ತು ನಾವು ಮಾಡುತ್ತೇವೆ ಎಂಬ ಮಾನಸಿಕತೆ ಇರುತ್ತದೆ. ಪರಿಶ್ರಮವನ್ನು ಏಕೆ ತೆಗೆದುಕೊಳ್ಳುವುದಿಲ್ಲ, ಎಂದು ಅಭ್ಯಾಸ ಮಾಡಿದರೆ ಅದರ ಹಿಂದೆ ಬಹಳಷ್ಟು ದೋಷಗಳು ಮತ್ತು ಅಹಂನ ಲಕ್ಷಣಗಳು ಕಾರ್ಯನಿರತವಾಗಿರುತ್ತವೆ. ಸ್ವಕೋಶದಲ್ಲಿರುವುದು, ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು, ಪ್ರತಿಷ್ಠೆ, ಅಪೇಕ್ಷೆ, ಆಲಸ್ಯ, ದುರ್ಲಕ್ಷ ಮಾಡುವುದು, ನಾನು ಇಷ್ಟಾದರೂ ಮಾಡುತ್ತಿರುವೆನಲ್ಲಾ ಅಷ್ಟು ಸಾಕು ಎಂದೆನಿಸುವುದು, ತಮಗೆ ಯಾವುದೇ ತೊಂದರೆಯಾಗಬಾರದೆಂಬ ವಿಚಾರವಿರುವುದು, ಪರಿಸ್ಥಿತಿಗೆ ದೋಷ ನೀಡುವುದು, ಸಂಘರ್ಷದಿಂದ ಪಲಾಯನಗೈಯುವುದು ಈ ರೀತಿಯ ದೋಷಗಳು ಮತ್ತು ಅಹಂ ಕಾರ್ಯನಿರತವಾಗಿರುತ್ತದೆ.
ಇವೆಲ್ಲ ದೋಷಗಳು ಮತ್ತು ಅಹಂನ ಲಕ್ಷಣಗಳು ಸಾಧನೆಯಲ್ಲಿ ಮುಂದೆ ಹೋಗಲು ಅಪಾಯಕಾರಿಯಾಗಿರುತ್ತವೆ. ನಾವು ಸಂಪೂರ್ಣ ಕ್ಷಮತೆಯನ್ನು ಅರ್ಪಿಸಿ ಮಾಡಿದರೆ ಕ್ಷಮತೆ ವೃದ್ಧಿಯಾಗುತ್ತದೆ, ಪ್ರತಿಯೊಂದು ಸ್ಥಳದಲ್ಲಿ ಕಡಿಮೆತನ ತೆಗೆದುಕೊಂಡು ಮಾಡುವುದು ಸಾಧ್ಯವಾಗುತ್ತದೆ, ತನ್ನನ್ನು ಮರೆತು ಇತರರ ವಿಚಾರ ಹೆಚ್ಚು ಮಾಡುವ ಪ್ರಯತ್ನವಾಗುತ್ತದೆ, ಗುರುಕಾರ್ಯವು ನನ್ನದಾಗಿದೆ ಈ ಭಾವದಿಂದ ಎಷ್ಟೇ ಕಷ್ಟವಾದರೂ ನಡೆಯುತ್ತದೆ, ಎಂಬ ವಿಚಾರವಿರುತ್ತದೆ. ಕೇಳಿ ಕೇಳಿ ಮಾಡುವುದು, ಸಮಯಕ್ಕೆ ಸರಿಯಾಗಿ ವರದಿ ನೀಡುವುದು, ಮನಮುಕ್ತತೆ, ಪರಿಪೂರ್ಣ ಸೇವೆಯನ್ನು ಮಾಡುವುದು, ಸ್ವೀಕರಿಸುವುದು ಈ ಗುಣಗಳಲ್ಲಿ ವೃದ್ಧಿಯಾಗುತ್ತದೆ. ಈ ಎಲ್ಲವುಗಳಿಂದಾಗಿ ಈಶ್ವರನ ಸಹಾಯ ಸಿಗುತ್ತದೆ ಮತ್ತು ಶ್ರದ್ಧೆಯು ಹೆಚ್ಚಾಗಲು ಸಹಾಯವಾಗುತ್ತದೆ. ಇದರ ಒಂದು ಆದರ್ಶ ಉದಾಹರಣೆಯೆಂದರೆ ನಮ್ಮ ಪ.ಪೂ. ಗುರುದೇವರಿದ್ದಾರೆ. ಅವರೊಬ್ಬರೆ ಇದ್ದರೂ, ಎಲ್ಲ ಸ್ಥಳಗಳಿಗೆ ಹೋಗಿ, ಹಗಲುರಾತ್ರಿ ಪರಿಶ್ರಮ ತೆಗೆದುಕೊಂಡು, ಕಷ್ಟ ಸಹಿಸಿ ಅವರು ಸನಾತನ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ನಮಗೆ ಇಷ್ಟು ಪರಿಶ್ರಮ ತೆಗೆದುಕೊಳ್ಳುವ ಆವಶ್ಯಕತೆ ಇಲ್ಲ, ಸ್ವಲ್ಪ ಪರಿಶ್ರಮ ತೆಗೆದುಕೊಂಡರೂ ನಮ್ಮ ಸಾಧನೆ ಮತ್ತು ಗುರುಕಾರ್ಯವು ಉತ್ತಮವಾಗಿ ಆಗುತ್ತದೆ. ‘ಎಷ್ಟೇ ಕಠಿಣ ಪ್ರಾರಬ್ಧವಿದ್ದರೂ, ಅದು ಗುರುಕೃಪೆಯಿಂದ ನಾಶವಾಗುತ್ತದೆ’, ಆದ್ದರಿಂದ ನಾವು ಸ್ವಲ್ಪ ಪರಿಶ್ರಮಪಟ್ಟರೂ ನಮ್ಮ ಮೇಲೆ ಗುರುಕೃಪೆಯ ಅಖಂಡ ಸುರಿಮಳೆಯಾಗುತ್ತಿರುತ್ತದೆ.
– ಶ್ರೀ. ಕಾಶಿನಾಥ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೯), ಸೌ. ಮಂಜುಳಾ ರಮಾನಂದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೫) ಮತ್ತು ಶ್ರೀ. ವಿಜಯ ರೇವಣಕರ (ಆಧ್ಯಾತ್ಮಿಕ ಮಟ್ಟ ಶೇ. ೬೫). (ಅಕ್ಟೋಬರ್ ೨೦೨೧)