ಭಾರತದಿಂದಲ್ಲ ಆಂತರಿಕ ಧಾರ್ಮಿಕ ಕಟ್ಟರವಾದಿಗಳಿಂದ ಪಾಕಿಸ್ತಾನಕ್ಕೆ ಅಪಾಯವಿದೆ ! – ಪಾಕಿಸ್ತಾನದ ಸಚಿವರ ನುಡಿಮುತ್ತು

ಪಾಕಿಸ್ತಾನಕ್ಕೆ ತಡವಾದರೂ ಪರವಾಗಿಲ್ಲ ಇದು ಗಮನಕ್ಕೆ ಬಂದಿದೆ; ಆದರೆ ಈ ಧಾರ್ಮಿಕ ಕಟ್ಟರವಾದಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ, ಇದು ಅಷ್ಟೇ ಸತ್ಯ ! -ಸಂಪಾದಕರು 

ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ

ಇಸ್ಲಾಮಾಬಾದ್ (ಪಾಕಿಸ್ತಾನ) – ನಮಗೆ ಭಾರತದಿಂದ ದಾಳಿಯಾಗುವ ಅಪಾಯವಿಲ್ಲ. ನಮ್ಮಲ್ಲಿ ವಿಶ್ವದ 6ನೇ ಅತಿ ದೊಡ್ಡ ಸೇನೆ ಇದೆ. ನಮ್ಮ ಬಳಿ ಅಣು ಬಾಂಬ್ ಇದೆ. ಭಾರತ ನಮ್ಮನ್ನು ಎದುರಿಸಲು ಸಾಧ್ಯವಿಲ್ಲ. ಯುರೋಪ್‍ನಿಂದ ನಮಗೆ ಯಾವುದೇ ಅಪಾಯವಿಲ್ಲ. ಇಂದು ನಾವು ಎಲ್ಲಕ್ಕಿಂತ ದೊಡ್ಡ ಅಪಾಯವನ್ನು ಎದುರಿಸುತ್ತಿದ್ದೇವೆ. ಅದು ನಮ್ಮೊಳಗಿದೆ ಅಂದರೆ ಪಾಕಿಸ್ತಾನದೊಳಗೇ ಇದೆ ಅದೆಂದರೆ ಧಾರ್ಮಿಕ ಕಟ್ಟರವಾದವಾಗಿದೆ, ಎಂದು ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.

ಫವಾದ ಚೌಧರಿ ತಮ್ಮ ಮಾತನ್ನು ಮುಂದುವರೆಸುತ್ತಾ, ದೇಶದ ಮದರಸಾದಲ್ಲಿನ ವಿದ್ಯಾರ್ಥಿಗಳಿಗಲ್ಲ, ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಧಾರ್ಮಿಕ ಕಟ್ಟರವಾದಿಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. 1980 ಮತ್ತು 90 ರ ದಶಕದಲ್ಲಿ ಯಾವ ಶಿಕ್ಷಕರನ್ನು ನೇಮಕ ಮಾಡಲಾಯಿತೋ ಅದೇ ಒಂದು ಷಡ್ಯಂತ್ರವಾಗಿತ್ತು. ‘ಈ ಮೂಲಕ ವಿದ್ಯಾರ್ಥಿಗಳಿಗೆ ಕಟ್ಟರವಾದಿಯನ್ನು ಕಲಿಸಲಾಗುವುದು’, ಎಂಬ ಪ್ರಯತ್ನವಾಗಿತ್ತು. ಸಾಮಾನ್ಯ ಶಾಲೆಗಳು ಮತ್ತು ಮಹಾವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳು ಕಟ್ಟರವಾದದ ಬಗ್ಗೆ ಚರ್ಚೆಯಲ್ಲಿರುವ ಘಟನೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಕಟ್ಟರವಾದವನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳು ಸಾಕಾಗುವುದಿಲ್ಲ. ಈ ಬಿಕ್ಕಟ್ಟನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಿದ್ಧರಿಲ್ಲ. ತೆಹರಿಕ್-ಎ-ಲಬ್ಬೈಕ್ ಈ ಸಂಘಟನೆಯೊಂದಿಗೆ ನಡೆದ ವಿವಾದದಿಂದಾಗಿ ಸರಕಾರಕ್ಕೆ ಒಂದು ಹೆಜ್ಜೆ ಹಿಂದಕ್ಕೆ ಸರಿಯಬೇಕಾಯಿತು. ಕಟ್ಟರವಾದವು ಒಂದು ‘ಟೈಮ್ ಬಾಂಬ್’ ಇದ್ದಂತೆ. ಇಸ್ಲಾಂ ಅಥವಾ ಇತರ ಯಾವುದೇ ಕಟ್ಟರವಾದದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.