‘ಭಾರತನಿಷ್ಠೆ’ ಇದು ಎಲ್ಲಾ ಪಕ್ಷಗಳ ಕೇಂದ್ರಬಿಂದುವಾಗಿರಬೇಕು !

‘ಭಾರತ ಹಾಗೂ ಭಾರತನಿಷ್ಠೆ ಇದನ್ನು ಎಲ್ಲಾ ಪಕ್ಷಗಳು ಪವಿತ್ರವಾದ ಕೇಂದ್ರಬಿಂದುವೆಂದು ಪರಿಗಣಿಸಬೇಕಾಗಿತ್ತು. ಭಾರತ ಮಾತೆಯ ರಕ್ತಸಿಕ್ತವಾದ ಕೈಯನ್ನು ಯಾವುದೇ ಪ್ರಲೋಭನೆಗಾಗಿ ಯಾರು ಕೈಯಲ್ಲಿ ತೆಗೆದುಕೊಳ್ಳಬಾರದಾಗಿತ್ತು. ಆದರೆ ವಾಸ್ತವಿಕತೆಯಲ್ಲಿ ಬೇರೆಯೇ ನಡೆಯಿತು. ದೇಶಹಿತಕ್ಕಿಂತ ಪುನಃ ಪಕ್ಷಹಿತಕ್ಕೆ ಮಹತ್ವವನ್ನು ನೀಡಲಾಯಿತು. ಅಧಿಕಾರದ ಲಲಾಸೆಯಿಂದ ಮತ್ತೊಮ್ಮೆ ತತ್ತ್ವಗಳನ್ನು ಬಲಿನೀಡಲಾಯಿತು. ಮುಸಲ್ಮಾನರನ್ನು ಓಲೈಸುವ ಹಳೆ ನೀತಿಯು ಪುನಃ ಹೊಸ ಭಯಾನಕ ರೂಪದಲ್ಲಿ ಹೊರಹೊಮ್ಮುತ್ತಿದೆ. ಅನೇಕ ಪಕ್ಷಗಳಲ್ಲಿ ಹಂಚಿ ಹೋಗಿರುವ ಬಹುಸಂಖ್ಯಾತರು ಸಂಘಟಿತ ಅಲ್ಪಸಂಖ್ಯಾತರನ್ನು ಪೂಜಿಸಲಾರಂಭಿಸಿದರು. ಅಧಿಕಾರದ ತಕ್ಕಡಿಯನ್ನು ಅವರು ತೂಗಲಾರಂಭಿಸಿದರು. ಜಯಾಪಜಯದ ಭಾರವನ್ನು ಅವರು ತಿರುಗಿಸಲಾರಂಭಿಸಿದರು’.

(ಸಾಪ್ತಾಹಿಕ ರಾಷ್ಟ್ರಪರ್ವ, ೫.೪.೨೦೧೦ – ಆಧಾರ : ವಾಘನಖೆ – ಪು.ಭಾ. ಭಾವೆ ಜನ್ಮಶತಾಬ್ದೀ ವರ್ಷ ೨೦೦೯-೨೦೧೦)